ಸೊಟ್ಟ ಮೂಗು ನೆಟ್ಟಗಾಗ್ತಿದ್ದಂಗೆ, ಡಿವೋರ್ಸ್​ ಕೊಟ್ಟು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳೋ ಪಾಠ ಮಾಡ್ತಿದ್ದಾಳೆ ಈ ಮಹಿಳೆ!

Published : Apr 07, 2025, 01:32 PM ISTUpdated : Apr 07, 2025, 02:21 PM IST
 ಸೊಟ್ಟ ಮೂಗು ನೆಟ್ಟಗಾಗ್ತಿದ್ದಂಗೆ, ಡಿವೋರ್ಸ್​ ಕೊಟ್ಟು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳೋ ಪಾಠ ಮಾಡ್ತಿದ್ದಾಳೆ ಈ ಮಹಿಳೆ!

ಸಾರಾಂಶ

ಅಮೆರಿಕದ ಡೆವಿನ್ ಐಕೆನ್ ಎಂಬ ಮಹಿಳೆ, ಪತಿಯಿಂದ ಮೂಗಿನ ಶಸ್ತ್ರಚಿಕಿತ್ಸೆಗಾಗಿ 9 ಲಕ್ಷ ರೂಪಾಯಿ ಪಡೆದು, ನಂತರ ವಿಚ್ಛೇದನ ನೀಡಿದ್ದಾರೆ. ಬಾಲ್ಯದಲ್ಲಿ ಮೂಗಿನಿಂದ ಉಂಟಾದ ಅವಮಾನದಿಂದ ಖಿನ್ನತೆಗೆ ಒಳಗಾಗಿದ್ದೆ ಎಂದಿದ್ದಾರೆ. ಶಸ್ತ್ರಚಿಕಿತ್ಸೆಯ ನಂತರ ಆತ್ಮವಿಶ್ವಾಸ ಹೆಚ್ಚಾಗಿದೆ ಎಂದು ಹೇಳಿಕೊಂಡಿದ್ದಾರೆ. ಏಳು ವರ್ಷಗಳ ದಾಂಪತ್ಯ ಜೀವನವು ವಿಷಪೂರಿತವಾಗಿತ್ತು ಎಂದು ಆಕೆ ಹೇಳಿದ್ದು, ಇದೀಗ ಸಂತೋಷದಿಂದ ಜೀವನ ಸಾಗಿಸುತ್ತಿರುವುದಾಗಿ ತಿಳಿಸಿದ್ದಾರೆ.

ಪತಿಯಿಂದ ಪರಿಹಾರಕ್ಕಾಗಿ ಮದುವೆ ಮಾಡಿಕೊಂಡು, ವಿಚ್ಛೇದನ ಪಡೆದುಕೊಳ್ಳುವುದನ್ನೇ ಕಾಯಕ ಮಾಡಿಕೊಂಡಿರುವ ಮಹಿಳೆಯರ ಬಗ್ಗೆ ಕೇಳಿರಬಹುದು. ಗಂಡನ ದುಡ್ಡಿನಿಂದಲೇ ಶಿಕ್ಷಣ, ಉದ್ಯೋಗ ಪಡೆದು ಕೊನೆಗೆ ಒಂದು ಹಂತಕ್ಕೆ ಬಂದ ಮೇಲೆ ಇನ್ಯಾರನ್ನೋ ಕಟ್ಟಿಕೊಂಡು ಹೋಗುವ ಮಹಿಳೆಯರ ಬಗ್ಗೆಯೂ ಕೇಳಿರಬಹುದು. ಅದಕ್ಕಿಂತ ಸ್ವಲ್ಪ ಭಿನ್ನವಾಗಿರುವ ಸ್ಟೋರಿ ಇದು. ಸೊಟ್ಟ ಮೂಗನ್ನು ನೆಟ್ಟಗೆ ಮಾಡಲು ಪತಿಯಿಂದಲೇ 9 ಲಕ್ಷ ರೂಪಾಯಿ ಪಡೆದು, ಕೊನೆಗೆ ಆತನಿಗೆ ಕೈಕೊಟ್ಟು ಡಿವೋರ್ಸ್​ ಕೊಟ್ಟಿರುವ ಘಟನೆ ಇದು. ಫಿಲಡೆಲ್ಫಿಯಾದ 30 ವರ್ಷದ ಡೆವಿನ್ ಐಕೆನ್ ಎಂಬಾಕೆಯ ಸ್ಟೋರಿ ಇದು. ಸೊಟ್ಟ ಮೂತಿಯನ್ನು ಸರಿ ಮಾಡಿಸಿಕೊಳ್ಳಲು ಪತಿಯಿಂದ  9 ಲಕ್ಷ ಪಡೆದು ಈಗ ಡಿವೋರ್ಸ್​ ಕೊಟ್ಟಿದ್ದಾಳೆ. ಪತಿರಾಯ ಈಗ ಸೋಷಿಯಲ್​ ಮೀಡಿಯಾದ ಎದುರಿಗೆ ಬಂದು ತನಗಾಗಿರುವ ಅನ್ಯಾಯವನ್ನು ಹೇಳಿಕೊಳ್ಳುತ್ತಿದ್ದಾನೆ. 

ಕಳೆದ ಏಳು ವರ್ಷಗಳಿಂದ ನಾನು ಅವನ ಜೊತೆ ತುಂಬಾ ನೋವಿನ ಜೀವನ ನಡೆಸುತ್ತಿದ್ದೆ. ಇದು ಟಾಕ್ಸಿಕ್​ ರಿಲೇಷನ್​ ಆಗಿತ್ತು. ಆದ್ದರಿಂದ ನಾನು ನನ್ನ ಜೀವನದಲ್ಲಿ ಬದಲಾವಣೆ ತರಲು ದೊಡ್ಡ ಹೆಜ್ಜೆ ಇಟ್ಟೆ, ಅದೀಗ ಯಶಸ್ವಿಯಾಗಿದೆ. ಈ ಸಂಬಂಧದಿಂದ ಹೊರಕ್ಕೆ ಬಂದು ಖುಷಿಯಿಂದ ಜೀವಿಸುತ್ತಿದ್ದೇನೆ, ಇದು ಎಲ್ಲರಿಗೂ ಮಾದರಿಯಾಗಬೇಕು ಎಂದಿದ್ದಾಳೆ ಡೆವಿನ್ ಐಕೆನ್.  ನವೆಂಬರ್ 2024 ರಲ್ಲಿ ಮೂಗಿನ ಶಸ್ತ್ರಚಿಕಿತ್ಸೆ (ರೈನೋಪ್ಲ್ಯಾಸ್ಟಿ) ಮಾಡಿಸಿಕೊಂಡೆ. ಇದಕ್ಕೆ ಸುಮಾರು $11,000 (ಸುಮಾರು ರೂ. 9 ಲಕ್ಷ) ವೆಚ್ಚ ಎಂದು ತಿಳಿಯಿತು. ಆದ್ದರಿಂದ ಪತಿಯ ಬಳಿ ಹಣ ಕೇಳಿದೆ. ಆತ ಕೊಟ್ಟ.  ಶಸ್ತ್ರಚಿಕಿತ್ಸೆ ಬಳಿಕ ಮೂಗು ಸುಂದರವಾಗಿದೆ. ನನ್ನ ಮೂಗಿನ ಆಕಾರ ಬದಲಾಗಿರುವುದರಿಂದ ನಾನೀಗ ಸುಂದರಿಯಾಗಿ ಕಾಣಿಸುತ್ತಿದ್ದೇನೆ. ಇದು ನನ್ನ ಆತ್ಮವಿಶ್ವಾಸವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿದೆ.  ಈ ಶಸ್ತ್ರಚಿಕಿತ್ಸೆಯು ಮೂಗಿನ ಬಗ್ಗೆ ನನಗೆ ಇದ್ದ  ಅತಿದೊಡ್ಡ ಅಭದ್ರತೆಯನ್ನು ಹೋಗಲಾಡಿಸಲು ಸಹಾಯ ಮಾಡಿದೆ. ಆದ್ದರಿಂದ  ಏಳು ವರ್ಷಗಳ ಅತೃಪ್ತ ದಾಂಪತ್ಯವನ್ನು ಕೊನೆಗೊಳಿಸಲು ಧೈರ್ಯ ನೀಡಿದೆ ಎಂದಿದ್ದಾಳೆ!

ಅಮೆಜಾನ್​ನಿಂದ ಏನೇನೋ ಆರ್ಡರ್​ ಮಾಡಿದ ಕಿತಾಪತಿ ಆಫ್ರಿಕನ್​ ಗಿಳಿ! ಮಹಿಳೆ ಸುಸ್ತೋ ಸುಸ್ತು- ಏನಾಯ್ತು ನೋಡಿ
 

ಶಸ್ತ್ರಚಿಕಿತ್ಸೆಯ ನಂತರ, ಐಕೆನ್ ತನ್ನ ಆತ್ಮವಿಶ್ವಾಸ ಎಂದಿಗಿಂತಲೂ ಹೆಚ್ಚಾಗಿತ್ತು ಎಂದು ಹೇಳಿಕೊಂಡಿದ್ದಾಳೆ. ಇದನ್ನು ಹೆಮ್ಮೆಯಿಂದ ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿದ್ದಾಳೆ. ತಮ್ಮ ಮೂಗಿನ ಮೂಲ ರೂಪ ಮತ್ತು ಆಪರೇಷನ್​ ಬಳಿಕದ ಚಿತ್ರವನ್ನು ಹಂಚಿಕೊಂಡು, ಹೇಗೆ ಪತಿಯಿಂದ ದುಡ್ಡು ಪಡೆದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದ್ದೇನೆ ಎಂದು ಹೆಮ್ಮೆಯಿಂದ ಬರೆದುಕೊಂಡಿದ್ದಾಳೆ!  ಅದು ಕೆಲವೇ ಕ್ಷಣಗಳಲ್ಲಿ ವೈರಲ್ ಆಯಿತು. ಅವರ ವೀಡಿಯೊವನ್ನು ಟಿಕ್‌ಟಾಕ್‌ನಲ್ಲಿ 4.5 ಮಿಲಿಯನ್‌ಗಿಂತಲೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. "ನಾನು ಈಗ ತುಂಬಾ ಸಂತೋಷವಾಗಿದ್ದೇನೆ ಮತ್ತು ನನ್ನ ಉಳಿದ ಜೀವನವನ್ನು ಸಂತೋಷದಿಂದ ಬದುಕಬಲ್ಲೆ ಎಂದು ನನಗೆ ತಿಳಿದಿದೆ" ಎಂದು ಐಕೆನ್ ಹೇಳಿದ್ದು, ಕುತೂಹಲ ಎಂದರೆ, ಈಕೆಗೆ ಲಕ್ಷಾಂತರ ಮಂದಿ ಶುಭಾಶಯ ಕೋರಿದ್ದಾರೆ. 

ಇದೇ ಸಂದರ್ಭದಲ್ಲಿ ಬಾಲ್ಯದಿಂದಲೂ ತಾವು ಹೇಗೆ ಮೂಗಿನ ಸಮಸ್ಯೆ ಎದುರಿಸುತ್ತಿದ್ದೆ ಎಂದು ಬರೆದುಕೊಂಡಿದ್ದಾರೆ ಡೆವಿನ್ ಐಕೆನ್. ನನ್ನ  ಜೀವನ ಯಾವಾಗಲೂ ಸುಲಭವಾಗಿರಲಿಲ್ಲ. ಪ್ರಾಥಮಿಕ ಶಾಲೆಯಲ್ಲಿ, ನನ್ನ ಎದ್ದು ಕಾಣುವ ಮೂಗಿಗೆ ಸಹಪಾಠಿಗಳು ಅವನನ್ನು ಗೇಲಿ ಮಾಡುತ್ತಿದ್ದರು.  ಕೀಟಲೆ ಮಾಡಲಾಯಿತು ಮತ್ತು ಅಪಹಾಸ್ಯ ಮಾಡುತ್ತಿದ್ದರು. ಇದು ನನ್ನ ಆತ್ಮವಿಶ್ವಾಸದ ಮೇಲೆ ಪರಿಣಾಮ ಬೀರಿತು ಮತ್ತು ಖಿನ್ನತೆಗೆ ಕಾರಣವಾಯಿತು. ಈ ಕಾರಣದಿಂದಾಗಿ,  23 ನೇ ವಯಸ್ಸಿನಲ್ಲಿ ನನ್ನನ್ನು ಇದ್ದ ರೀತಿಯಲ್ಲಿಯೇ ಒಪ್ಪಿಕೊಳ್ಳುವ ಯಾರಾದರೂ ಸಿಗುತ್ತಾರೋ ಹುಡುಕಿದೆ.  ನಂತರ ಪತಿ ಸಿಕ್ಕರು. ಅವರು ನನ್ನ ಈ ಮೂಗನ್ನು ಒಪ್ಪಿಕೊಂಡರು. ಅದರಿಂದ ನನಗೆ ಖುಷಿಯಾಯಿತು. ಆದರೆ ಮದುವೆಯಾದ ಮೇಲೆ ಭಿನ್ನಾಭಿಪ್ರಾಯ ಶುರುವಾಯಿತು. ಆದರೂ ಏಳು ವರ್ಷ ಅವರ ಜೊತೆಗೆ ಇದ್ದೆ. ನಂತರ ಆಪರೇಷನ್​ಗೆ ದುಡ್ಡು ಪಡೆದು ಮೂಗಿನ ಶಸ್ತ್ರಚಿಕಿತ್ಸೆ ಬಳಿಕ ಡಿವೋರ್ಸ್​  ಕೊಟ್ಟೆ ಎಂದಿದ್ದಾಳೆ.  ಈಗ ನನ್ನ ಹೊಸ ಮೂಗು ಮತ್ತು ಸ್ವಾತಂತ್ರ್ಯದೊಂದಿಗೆ ಜೀವನವನ್ನು ನಡೆಸುತ್ತಿದ್ದೇನೆ. ಬೇರೆಯವರ ಜೊತೆ  ಡೇಟಿಂಗ್ ಮಾಡುತ್ತಿದ್ದು, ಸಂಪೂರ್ಣವಾಗಿ ಸಂತೋಷವಾಗಿದ್ದೇನೆ ಎಂದಿದ್ದಾಳೆ. ಇತ್ತ ಹಣ ಕೊಟ್ಟ ಮಾಜಿ ಪತಿ ಮಾತ್ರ ಸುಸ್ತಾಗಿದ್ದಾನೆ!

ಬಾಸ್​ ರಜೆ ಕೊಡ್ತಿಲ್ವಾ? ಹೀಗೆ ಮಾಡಿ ನೋಡಿ ಎಂದು ಟಿಪ್ಸ್​ ಕೊಟ್ಟು ಪೇಚಿಗೆ ಸಿಲುಕಿದ ಯುವತಿ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!