ಟ್ವೀಟರ್‌ ಸ್ಥಳೀಯ ನಿಯಮ ಪಾ​ಲಿ​ಸ​ಬೇ​ಕು: ಎಲಾನ್‌ ಮಸ್ಕ್‌

By Kannadaprabha NewsFirst Published Jun 22, 2023, 6:53 AM IST
Highlights

ಸಾಮಾಜಿಕ ಜಾಲತಾಣಗಳು ಬೇರೆ ಬೇರೆ ದೇಶಗಳಲ್ಲಿ ಕಾರ್ಯನಿರ್ವಹಿಸುವಾಗ ಸ್ಥಳೀಯ ನಿಯಮಗಳನ್ನು ಪಾಲಿಸದೇ ಬೇರೆ ದಾರಿ ಇಲ್ಲ. ಇಲ್ಲದೇ ಹೋದಲ್ಲಿ ಅವು ಮುಚ್ಚಬೇಕಾದ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಎಂದು ಟ್ವೀಟರ್‌ ಸಂಸ್ಥೆಯ ಮುಖ್ಯಸ್ಥ ಎಲಾನ್‌ ಮಸ್ಕ್ ಹೇಳಿದ್ದಾರೆ.

ನ್ಯೂಯಾರ್ಕ್: ಸಾಮಾಜಿಕ ಜಾಲತಾಣಗಳು ಬೇರೆ ಬೇರೆ ದೇಶಗಳಲ್ಲಿ ಕಾರ್ಯನಿರ್ವಹಿಸುವಾಗ ಸ್ಥಳೀಯ ನಿಯಮಗಳನ್ನು ಪಾಲಿಸದೇ ಬೇರೆ ದಾರಿ ಇಲ್ಲ. ಇಲ್ಲದೇ ಹೋದಲ್ಲಿ ಅವು ಮುಚ್ಚಬೇಕಾದ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಎಂದು ಟ್ವೀಟರ್‌ ಸಂಸ್ಥೆಯ ಮುಖ್ಯಸ್ಥ ಎಲಾನ್‌ ಮಸ್ಕ್ ಹೇಳಿದ್ದಾರೆ. ಈ ಮೂಲಕ ಭಾರತದಲ್ಲಿ ನಿಯಮ ಪಾಲನೆಗೆ ನಿರಾಕರಿಸಿದ್ದ ಕಂಪನಿಯ ಹಿಂದಿನ ಸಿಇಒ ಜಾಕ್‌ ಡೋರ್ಸಿ ನಿಲುವನ್ನು ತಳ್ಳಿಹಾಕಿದ್ದಾರೆ.

2 ವರ್ಷಗಳ ಹಿಂದೆ ದೆಹಲಿಯಲ್ಲಿ ನಡೆದ ರೈತರ ಪ್ರತಿಭಟನೆ ವೇಳೆ ಕೆಲ ಆಕ್ಷೇಪಾರ್ಹ ಸಂಗತಿಗಳನ್ನು ಟ್ವಿಟ್ಟರ್‌ನಿಂದ ತೆಗೆದುಹಾಕುವಂತೆ ಭಾರತ ಸರ್ಕಾರ ಸೂಚಿಸಿತ್ತು. ಇಲ್ಲದೇ ಹೋದಲ್ಲಿ ಕಂಪನಿ ಮುಚ್ಚಿಸುವುದಾಗಿ ಬೆದರಿಕೆಯನ್ನೂ ಹಾಕಲಾಗಿತ್ತು ಎಂಬ ಟ್ವೀಟರ್‌ ಸಂಸ್ಥೆಯ ಮಾಜಿ ಸಿಇಒ ಜಾಕ್‌ ಡೋರ್ಸಿ(Jack Dorsey) ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿದ್ದರು. ಈ ಬಗ್ಗೆ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವ​ರನ್ನು ಭೇಟಿ ಆದ ಮಸ್ಕ್‌ಗೆ ಭಾರ​ತೀಯ ಪತ್ರ​ಕ​ರ್ತರು (Indian Journalist) ಪ್ರಶ್ನಿ​ಸಿ​ದಾಗ ಪ್ರತಿಕ್ರಿಯಿಸಿದ ಮಸ್ಕ್, ಸ್ಥಳೀಯ ಸರ್ಕಾರಗಳ ಕಾನೂನನ್ನು ಪಾಲಿಸದೇ ಟ್ವೀಟರ್‌ಗೆ ಬೇರೆ ದಾರಿ ಇಲ್ಲ. ಒಂದು ವೇಳೆ ನಾವು ಆಯಾ ದೇಶಗಳ ನಿಯಮಗಳನ್ನು ಪಾಲಿಸದೇ ಹೋದಲ್ಲಿ, ನಾವು ಬಾಗಿಲು ಹಾಕಬೇಕಾಗುತ್ತದೆ. ಹೀಗಾಗಿ ಸ್ಥಳೀಯ ಕಾನೂನು (Local Law) ಗೌರವಿಸುವುದು ನಾವು ಮಾಡಬಹುದಾದ ಅತ್ಯುತ್ತಮ ಕೆಲಸ. ಇದಕ್ಕಿಂತ ನಮಗೆ ಹೆಚ್ಚೇನೂ ಮಾಡಲಾಗದು. ಪ್ರತಿಯೊಂದು ದೇಶದಲ್ಲೂ ವಿಭಿನ್ನ ಕಾಯ್ದೆ ಮತ್ತು ನಿಯಂತ್ರಣಗಳು ಇರುತ್ತವೆ. ಹೀಗಾಗಿ ನಾವು ಕಾನೂನಿನ ಮಿತಿಯಲ್ಲಿ ಎಷ್ಟು ಗರಿಷ್ಠ ವಾಕ್‌ ಸ್ವಾತಂತ್ರ್ಯ (Freedom Of Speech) ನೀಡಬಹುದೋ ಅಷ್ಟನ್ನು ನೀಡಲು ಪ್ರಯತ್ನಿಸುತ್ತೇವೆ. ಅಮೆರಿಕ ಕಾನೂನನ್ನು ಇಡೀ ಭೂಮಿಗೆ ಅನ್ವಯಿಸಲು ಆಗದು ಎಂದ​ರು.

Latest Videos

ಟ್ವಿಟರ್‌ನ ಟ್ರ್ಯಾಕ್‌ರೆಕಾರ್ಡ್‌ ಸಂಶಯಾಸ್ಪದ, ಎಷ್ಟು ಮುಖ್ಯವಾಗುತ್ತದೆ ಜಾಕ್‌ ಡೋರ್ಸೆ ಅಭಿಪ್ರಾಯ?

ಟೆಸ್ಲಾ ಶೀಘ್ರ ಭಾರತಕ್ಕೆ: ಎಲಾನ್‌ ಮಸ್ಕ್

ಆದಷ್ಟುಶೀಘ್ರ ಟೆಸ್ಲಾ ಕಂಪನಿ ಭಾರತವನ್ನು ಪ್ರವೇಶ ಮಾಡಲಿದೆ ಎಂದು ಟೆಸ್ಲಾ ಕಾರು (Tesla car) ಉತ್ಪಾದನಾ ಕಂಪನಿ ಮುಖ್ಯಸ್ಥ ಎಲಾನ್‌ ಮಸ್ಕ್ ಹೇಳಿದ್ದಾರೆ.  ಮಂಗಳವಾರ ಇಲ್ಲಿ ಪ್ರಧಾನಿ ನರೇಂದ್ರ ಮೋದಿ ಜೊತೆಗಿನ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಸ್ಕ್‌ರನ್ನು ಭಾರತ ಪ್ರವೇಶಿಸಲಿದೆಯೇ ಎಂಬ ಬಗ್ಗೆ ಕೇಳಿದಾಗ ಮುಂದಿನ ವರ್ಷ ನಾನು ಭಾರತಕ್ಕೆ ಭೇಟಿ ನೀಡಲಿದ್ದೇನೆ. ಆದಷ್ಟು ಶೀಘ್ರ ಟೆಸ್ಲಾ ಭಾರತ ಪ್ರವೇಶ ಮಾಡಲಿದೆ ಎಂಬ ವಿಶ್ವಾಸ ನನಗಿದೆ ಮತ್ತು ಎಷ್ಟು ಶೀಘ್ರ ಸಾಧ್ಯವೋ ಅಷ್ಟುಬೇಗ ನಾವು ಇದಕ್ಕಾಗಿ ಪ್ರಯತ್ನಿಸಲಿದ್ದೇವೆ. ಆದರೆ ಈಗಲೇ ಈ ಕುರಿತು ನಾನು ಘೋಷಣೆ ಮಾಡಲು ಸಾಧ್ಯವಿಲ್ಲ, ಆದರೆ ಭಾರತದಲ್ಲಿ ನಾವು ಗಮನಾರ್ಹ ಪ್ರಮಾಣದಲ್ಲಿ ಹೂಡಿಕೆ ಮಾಡಲಿದ್ದೇವೆ ಎಂದು ಹೇಳಿದರು.

Jack Dorsey ಅವಧಿಯಲ್ಲಿ ಅಮೆರಿಕಾಗೆ ಬೆಣ್ಣೆ ಭಾರತಕ್ಕೆ ಸುಣ್ಣ ನೀಡ್ತಿದ್ದ ಟ್ವಿಟ್ಟರ್: ಏನಿದು ವಿವಾದ?

click me!