ಅಂತಾರಾಷ್ಟ್ರೀಯ ಯೋಗದಿನಾಚರಣೆ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ವಿಶ್ವಸಂಸ್ಥೆ ಆವರಣದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಯೋಗ ಮಾಡಿದ್ದಾರೆ. ಮೋದಿ ಜೊತೆ 180 ರಾಷ್ಟ್ರದ ಪ್ರತಿನಿಧಿಗಳು, ವಿಶ್ವಸಂಸ್ಥೆ ಅಧಿಕಾರಿಗಳು, ನ್ಯೂಯಾರ್ಕ್ ಮೇಯರ್ ಸೇರಿದಂತೆ ಹಲವು ಗಣ್ಯರು ಯೋಗಭ್ಯಾಸ ಮಾಡಿದ್ದಾರೆ.
ನ್ಯೂಯಾರ್ಕ್(ಜೂ.21): ವಿಶ್ವಸಂಸ್ಥೆಯಲ್ಲಿ ಇದೇ ಮೊದಲ ಬಾರಿಗೆ ಓಂಕಾರ ಮೊಳಗಿದೆ. ಇದೇ ಮೊದಲ ಬಾರಿ ಪ್ರಧಾನಿ ನರೇಂದ್ರ ಮೋದಿ ವಿಶ್ವಸಂಸ್ಥೆಯಲ್ಲಿ ಯೋಗಭ್ಯಾಸ ಮಾಡಿದ್ದಾರೆ. ವಿಶ್ವಸಂಸ್ಥೆ ಆವರಣದಲ್ಲಿ ಆಯೋಯಿಸಿದ್ದ 9ನೇ ವರ್ಷದ ಅಂತಾರಾಷ್ಟ್ರೀಯ ಯೋಗದಿನಾಚರಣೆಯಲ್ಲಿ ಮೋದಿ ಯೋಗ ಮಾಡಿದ್ದಾರೆ. ಪ್ರಧಾನಿ ಮೋದಿ ಜೊತೆಗೆ 180 ರಾಷ್ಟ್ರದ ಪ್ರತಿನಿಧಿಗಳು, ವಿಶ್ವಸಂಸ್ಥೆ ಅಧಿಕಾರಿಗಳು, ನ್ಯೂಯಾರ್ಕ್ ಮೇಯರ್, ಅನಿವಾಸಿ ಭಾರತೀಯರು ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.
ಪ್ರಣಾಯಾಮ ಸೇರಿದಂತೆ ಹಲವು ಯೋಗಾಸನಗಳನ್ನು ಮಾಡುವ ಮೂಲಕ ಮೋದಿ ವಿಶ್ವ ಯೋಗದಿನಾಚರಣೆ ಆಚರಿಸಿದ್ದಾರೆ. ಯೋಗಭ್ಯಾಸಕ್ಕೂ ಮೊದಲು ಮೋದಿ, ವಸುಧೈವ ಕುಟುಂಬಕಂ ಸಂದೇಶ ಸಾರಿದ್ದರು. ನೆರೆದಿದ್ದ ಗಣ್ಯರನ್ನುದ್ದೇಶಿ ಮಾಡಿದ ಭಾಷಣದಲ್ಲಿ ಮೋದಿ, ಯೋಗ ಎಂದರೆ ಒಗ್ಗಟ್ಟು, ಯೋಗ ಎಂದರೆ ಆರೋಗ್ಯ, ಯೋಗ ಎಂದರೆ ಉಲ್ಲಾಸ ಎಂದು ಮೋದಿ ಹೇಳಿದ್ದಾರೆ.
ಯೋಗಕ್ಕೆ ಕಾಪಿರೈಟ್ಸ್, ಪೇಟೆಂಟ್ ಇಲ್ಲ, ಎಲ್ಲರಿಗೂ ಮುಕ್ತ; ನ್ಯೂಯಾರ್ಕ್ ಯೋಗದಿನಾಚರಣೆಯಲ್ಲಿ ಮೋದಿ ಭಾಷಣ!
ಯೋಗ ಪ್ರಸ್ತಾಪ ಮುಂದಿಟ್ಟಾಗ ಇಡೀ ವಿಶ್ವವೇ ಜೊತೆಯಾಗಿ ಭಾರತವನ್ನು ಬೆಂಬಲಿಸಿದೆ. 2015ರಲ್ಲಿ ಯೋಗದಿನಾಚರಣೆ ಪ್ರಯುಕ್ತ ಸ್ಮಾರಕ ನಿರ್ಮಾಣ ಮಾಡಿದೆ. ಇದೀಗ ವಿಶ್ವಸಂಸ್ಥೆ 9ನೇ ಅಂತಾರಾಷ್ಟ್ರೀಯ ಯೋಗದಿನಾಚರಣೆ ಎಲ್ಲಾ ವ್ಯವಸ್ಥೆ ಮಾಡಿರುವುದು ಸಂತಸ ತಂದಿದೆ. ಕಳೆದ ವರ್ಷ ಎಲ್ಲಾ ರಾಷ್ಟ್ರಗಳು ಭಾರತ ಮುಂದಿಟ್ಟ ಸಿರಿಧಾನ್ಯ ವರ್ಷಾಚರಣೆಯನ್ನು ಬೆಂಬಲಿಸಿದೆ ಎಂದು ಮೋದಿ ಹೇಳಿದ್ದಾರೆ.
ಉತ್ತಮ ಆರೋಗ್ಯ, ಪರಿಸರ ಪೂರಕ ವಾತಾವರಣ ನಿರ್ಮಾಣ ಮಾಡುವುದೇ ಭಾರತದ ಗುರಿ. ಯೋಗ ಭಾರತದಿಂದ ಬಂದಿದೆ. ಇದು ಅತ್ಯಂತ ಪುರಾತನ ಸಂಪ್ರದಾಯ. ನಮ್ಮ ಪ್ರಾಚೀನ ಸಂಪ್ರದಾಯ, ಜೀವಂತ ಉದಾಹರಣೆಯಾಗಿದೆ. ಯೋಗಕ್ಕೆ ಯಾವುದೇ ಹಕ್ಕುಸ್ವಾಮ್ಯವಿಲ್ಲ, ಯಾವುದೇ ಚಾರ್ಜ್ ಇಲ್ಲ. ಯೋಗವನ್ನು ಎಲ್ಲರೂ ಅಳವಡಿಸಬಹುದು ಎಂದು ಮೋದಿ ಹೇಳಿದ್ದಾರೆ.
ಪೇಜಾವರ ಶ್ರೀಗಳಿಂದ ಕಠಿಣ ಯೋಗ: ಇತರ ಮಠಾಧೀಶರಿಂದಲೂ ಯೋಗ ದಿನಾಚರಣೆ
ಯೋಗದ ಮೂಲಕ ಒಬ್ಬರು ಆರೋಗ್ಯ, ಚೈತನ್ಯ ಮತ್ತು ಶಕ್ತಿಯನ್ನು ಪಡೆದುಕೊಳ್ಳುತ್ತಾರೆ ಮತ್ತು ವರ್ಷಗಳಿಂದ ಈ ಅಭ್ಯಾಸದಲ್ಲಿ ತೊಡಗಿಕೊಂಡವರು ಅದರ ಶಕ್ತಿಯನ್ನು ಅನುಭವಿಸುತ್ತಾರೆ ಎಂದು ಯೋಗ ಗ್ರಂಥಗಳನ್ನು ಉಲ್ಲೇಖಿಸಿ ಪ್ರಧಾನಮಂತ್ರಿಯವರು ಹೇಳಿದರು. ವ್ಯಕ್ತಿಗಳು ಮತ್ತು ಕುಟುಂಬಗಳ ಹಂತದ ಉತ್ತಮ ಆರೋಗ್ಯದ ಮಹತ್ವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, “ಯೋಗ ಆರೋಗ್ಯಪೂರ್ಣ ಮತ್ತು ಶಕ್ತಿಯುತ ಸಮಾಜ ನಿರ್ಮಿಸಲಿದ್ದು, ಅಲ್ಲಿ ಸಾಮೂಹಿಕ ಶಕ್ತಿ ಹೆಚ್ಚಾಗಿರುತ್ತದೆ” ಎಂದರು. ಸ್ವಚ್ಛ ಭಾರತ ಮತ್ತು ಭಾರತದ ನವೋದ್ಯಮ ಅಭಿಯಾನ ಕುರಿತು ಮಾತನಾಡಿದ ಪ್ರಧಾನಮಂತ್ರಿಯವರು, ಇದರಿಂದ ಸ್ವಾವಲಂಬಿ ಭಾರತ ನಿರ್ಮಾಣ ಮಾಡಲು ಸಾಧ್ಯವಾಗಿದೆ ಮತ್ತು ದೇಶದ ಸಂಸ್ಕೃತಿಯ ಅಸ್ಮಿತೆಯನ್ನು ಪುನರ್ ಸ್ಥಾಪಿಸಲಾಗಿದೆ ಹಾಗೂ ಈ ವಲಯಕ್ಕೆ ದೇಶ ಮತ್ತು ಯುವ ಸಮೂಹ ಅನನ್ಯ ಕಸುವು ತುಂಬಿದೆ. “ಇಂದು ದೇಶದ ಜನರ ಮನಸ್ಥಿತಿ ಬದಲಾಗಿದ್ದು, ಜನ ಮತ್ತು ಅವರ ಬದುಕನ್ನು ಬದಲಾವಣೆಯತ್ತ ಕೊಂಡೊಯ್ಯಲು ಕೊಡುಗೆ ನೀಡಿದೆ” ಎಂದರು.