ಗಿನ್ನಿಸ್ ವಿಶ್ವ ದಾಖಲೆ ಪುಟ ಸೇರಿದ ಪ್ರಧಾನಿ ಮೋದಿ ಅಂತಾರಾಷ್ಟ್ರೀಯ ಯೋಗದಿನಾಚರಣೆ!

By Suvarna News  |  First Published Jun 21, 2023, 7:21 PM IST

ವಿಶ್ವಸಂಸ್ಥೆ ಆವರಣದಲ್ಲಿ ಪ್ರಧಾನಿ ಮೋದಿ ಜೊತೆ 180 ರಾಷ್ಟ್ರದ ಗಣ್ಯರು, ವಿಶ್ವಸಂಸ್ಥೆ ಪ್ರತಿನಿಧಿಗಳು, ರಾಯಭಾರಿಗಳು,ಅನಿವಾಸಿ ಭಾರತೀಯರು ಸೇರಿದಂತೆ ಹಲವರು ಪಾಲ್ಗೊಂಡಿದ್ದಾರೆ. ಈ ಮೂಲಕ ಗರಿಷ್ಠ ರಾಷ್ಟ್ರದ ಜನ ಒಂದೇ ವೇದಿಕೆಯಲ್ಲಿ ಯೋಗಾಭ್ಯಾಸ ಮಾಡಿದ ಗಿನ್ನಿಸ್ ದಾಖಲೆ ಸೃಷ್ಟಿಯಾಗಿದೆ.


ನ್ಯೂಯಾರ್ಕ್(ಜೂ.21): ಪ್ರಧಾನಿ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಯೋಗದಿನಾಚರಣೆಯನ್ನು ವಿಶ್ವಸಂಸ್ಥೆ ಆವರಣದಲ್ಲಿ ಆಚರಿಸಿದ್ದಾರೆ. ಬೃಹತ್ ಕಾರ್ಯಕ್ರಮದಲ್ಲಿ ಮೋದಿ ಯೋಗಭ್ಯಾಸ ಮಾಡಿ ಎಲ್ಲರ ಗಮನಸೆಳೆದಿದ್ದಾರೆ. ಈ ಯೋಗದಿನಾಚರಣೆಯಲ್ಲಿ ನ್ಯೂಯಾರ್ಕ್ ಮೇಯರ್, ವಿಶ್ವಸಂಸ್ಥೆ ಅಧಿಕಾರಿಗಳು, 180 ರಾಷ್ಟ್ರದ ಗಣ್ಯರು, ಅನಿವಾಸಿ ಭಾರತೀಯರು ಸೇರಿದಂತೆ ಹಲವರು ಪಾಲ್ಗೊಂಡಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಗಿನ್ನಿಸ್ ದಾಖಲೆ ಪುಟ ಸೇರಿದೆ. ವಿವಿಧ ದೇಶಗಳ ಜನರು ಒಂದೇ ಸಮಯದಲ್ಲಿ ಒಂದೇ ಕಡೆ ಒಟ್ಟಾಗಿ ಯೋಗ ಮಾಡುವ ಮೂಲಕ ಗಿನ್ನೆಸ್ ವಿಶ್ವ ದಾಖಲೆಯನ್ನು ನಿರ್ಮಾಣಗೊಂಡಿದೆ.

180 ರಾಷ್ಟ್ರದ ಪ್ರತಿನಿಧಿಗಳು, ನ್ಯೂಯಾರ್ಕ್ ಮೇಯರ್ ಸೇರಿದಂತೆ ಅಧಿಕಾರಿಗಳು, ವಿಶ್ವಸಂಸ್ಥೆ ಪ್ರತಿನಿಧಿಗಳು, ಅನಿವಾಸಿ ಭಾರತೀಯರು, ಇತರ ದೇಶಗಳ ಗಣ್ಯರು ಸೇರಿದಂತೆ ಹಲವು ಈ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ಈ ಮೂಲಕ ಒಂದೇ ವೇದಿಕೆಯಲ್ಲಿ, ಒಂದೇ ಸಮಯದಲ್ಲಿ ಗರಿಷ್ಠ ದೇಶದ ಜನರು ಒಟ್ಟಿಗೆ ಯೋಗಾಭ್ಯಾಸ ಮಾಡುವ ಮೂಲಕ ಗಿನ್ನಿಸ್ ದಾಖಲೆ ನಿರ್ಮಾಣಗೊಂಡಿದೆ.

Tap to resize

Latest Videos

ವಿಶ್ವಸಂಸ್ಥೆಯಲ್ಲಿ ಪ್ರಧಾನಿ ಮೋದಿ ಯೋಗ, ಮೊಳಗಿತು ಓಂಕಾರ; 180 ರಾಷ್ಟ್ರದ ಗಣ್ಯರು ಭಾಗಿ!

ವಿಶ್ವಸಂಸ್ಥೆಯಲ್ಲಿ ಇದೇ ಮೊದಲ ಬಾರಿಗೆ ಯೋಗಾಭ್ಯಾಸದ ಜೊತೆಗೆ ಓಂಕಾರವೂ ಮೊಳಗಿದೆ. ಹಲವು ವಿಶೇಷತೆಗಳು ಈ ಬಾರಿಯ ಯೋಗದಿನಾಚರಣೆಯಲ್ಲಿತ್ತು. ಅಂತಾರಾಷ್ಟ್ರೀಯ ಯೋಗದಿನಾಚರಣೆ ಅರ್ಥಪೂರ್ಣವಾಗಿ ಆಚರಿಸಲಾಗಿದೆ. ಯೋಗಾಭ್ಯಾಸಕ್ಕೂ ಮೊದಲು ಪ್ರಧಾನಿ ಮೋದಿ ಭಾಷಣ ಮಾಡಿದ್ದಾರೆ. ಈ ವೇಳೆ ಯೋಗ ಎಲ್ಲರಿಗೂ ಮುಕ್ತವಾಗಿದೆ. ಯೋಗ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವನ್ನೂ ನೀಡುತ್ತದೆ. ಇಷ್ಟೇ ಅಲ್ಲ ಎಲ್ಲರನ್ನೂ ಒಗ್ಗೂಡಿಸುತ್ತದೆ ಎಂದು ಮೋದಿ ಹೇಳಿದ್ದಾರೆ.

ವಿಶ್ವಸಂಸ್ಥೆ ಆವರಣದಲ್ಲಿ ಅಂತಾರಾಷ್ಟ್ರೀಯ ಯೋಗದಿನಾಚರಣೆಯಲ್ಲಿ ಮೋದಿ ಪಾಲ್ಗೊಂಡಿದ್ದರೆ, ಭಾರತದಲ್ಲೂ ಯೋಗ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಾಗಿದೆ. ಅದರಲ್ಲೂ ನೌಕಾಪಡೆ ಒಶಿಯನ್ ರಿಂಗ್ ಆಫ್ ಯೋಗ ದಿನಾಚರಿಸಿದೆ. ವ​ಸು​ಧೈವ ಕುಟುಂಬ​ಕಂ’ (ವಿಶ್ವ ಒಂದೇ ಕುಟುಂಬ​) ಎಂಬುದೇ ಯೋಗ ದಿನಾ​ಚ​ರಣೆಯ ಮೂಲ ಧ್ಯೇಯ​ವಾ​ಗಿದೆ. ಈ ಸಲ ವಿ​ಶ್ವದ ವಿವಿಧ ಬಂದ​ರು​ಗ​ಳಲ್ಲಿ ಲಂಗರು ಹಾಕಿ​ರುವ 9 ನೌಕಾ​ಪಡೆ ಹಡ​ಗಿ​ನಲ್ಲಿ ‘ಓ​ಷ್ಯ​ನ್‌ ರಿಂಗ್‌ ಆಫ್‌ ಯೋಗ’ ಎಂಬ ವಿಶೇಷ ಪ್ರದ​ರ್ಶನ ಆಯೋಜಿಲಾಗಿತ್ತು. ‘ಯೋಗ ಭಾರ​ತ​ಮಾ​ಲಾ’ ಪ್ರದ​ರ್ಶ​ನ​ದಲ್ಲಿ ಭಾರ​ತದ ಮೂರೂ ಸೇನಾ​ಪಡೆ ಪಾಲ್ಗೊ​ಂಡಿತ್ತು. ‘ಯೋಗ ಸಾಗ​ರ​ಮಾ​ಲಾ’ ಅಡಿ ಐಎ​ನ್‌​ಎಸ್‌ ವಿಕ್ರಾಂತ್‌ ಯುದ್ಧ​ನೌ​ಕೆ​ಯಲ್ಲಿ ಯೋಗಾಭ್ಯಾಸ ಮಾಡಲಾಗಿದೆ. ಉತ್ತರ ಧ್ರುವ ಹಾಗೂ ದಕ್ಷಿಣ ಧ್ರುವ​ದಲ್ಲೂ ಯೋಗ ದಿನ ನಡೆ​ದಿದೆ. ಎಲ್ಲಾ ಗ್ರಾಮ​ಗ​ಳ ಶಾಲೆ, ಆಸ್ಪತ್ರೆ, ಅಂಗ​ನ​ವಾಡಿ ಕೇಂದ್ರ​ಗ​ಳಲ್ಲಿ ಈ ಬಾರಿ ಯೋಗ ಪ್ರದರ್ಶನ ನಡೆಸಲಾಗಿದೆ.

ಯೋಗಕ್ಕೆ ಕಾಪಿರೈಟ್ಸ್, ಪೇಟೆಂಟ್ ಇಲ್ಲ, ಎಲ್ಲರಿಗೂ ಮುಕ್ತ; ನ್ಯೂಯಾರ್ಕ್ ಯೋಗದಿನಾಚರಣೆಯಲ್ಲಿ ಮೋದಿ ಭಾಷಣ!

ಇಂದು ಬೆಳಗ್ಗೆ ಪ್ರಧಾನಿ ಮೋದಿ ಭಾರತೀಯರಿಗೆ ವಿಡಿಯೋ ಮೂಲಕ ಯೋಗದಿನಾಚರಣೆ ಸಂದೇಶ ರವಾನಿಸಿದ್ದರು. ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪ್ರತಿ ಆವೃತ್ತಿಯಲ್ಲಿ ಪಾಲ್ಗೊಂಡಾಗಲೂ, ಯೋಗ ದಿನದ ಹಿಂದಿನ ಸಂದರ್ಭಗಳಿಗಿಂತ ಭಿನ್ನವಾಗಿ, ವಿವಿಧ ಬದ್ಧತೆಗಳ ಕಾರಣದಿಂದಾಗಿ ಪ್ರಸ್ತುತ, ಇದೇ ಕಾರಣಕ್ಕಾಗಿ ಅಮೆರಿಕ ಪ್ರವಾಸದಲ್ಲಿದ್ದೇನೆ ಎಂದರು. ಯೋಗಾಭ್ಯಾಸದ ಮೂಲಕ ಯಾರೇ ಆಗಲಿ, ಆರೋಗ್ಯ, ಚೈತನ್ಯ ಮತ್ತು ಶಕ್ತಿ ಪಡೆದುಕೊಳ್ಳುತ್ತಾರೆ. ಹಲವು ವರ್ಷಗಳಿಂದ ನಿಯಮಿತವಾಗಿ ಈ ಅಭ್ಯಾಸದಲ್ಲಿ ತೊಡಗಿಸಿಕೊಂಡವರು ಅದರ ಶಕ್ತಿ, ಚೈತನ್ಯವನ್ನು ಅನುಭವಿಸುತ್ತಾರೆ. ವ್ಯಕ್ತಿ ಹಾಗೂ ಕುಟುಂಬದ ಮಟ್ಟದಲ್ಲಿ ಉತ್ತಮ ಆರೋಗ್ಯದ ಪ್ರಾಮುಖ್ಯತೆ ಬಹಳ ಮುಖ್ಯ. ಯೋಗವು ಆರೋಗ್ಯಕರ ಮತ್ತು ಶಕ್ತಿಯುತ ಸಮಾಜ ಸೃಷ್ಟಿಸುತ್ತದೆ, ಅಲ್ಲಿ ಸಾಮೂಹಿಕ ಶಕ್ತಿ ಹೆಚ್ಚು. ಸ್ವಾವಲಂಬಿ ರಾಷ್ಟ್ರ ನಿರ್ಮಿಸಲು ಸಹಾಯ ಮಾಡಿದ ಸ್ವಚ್ಛ ಭಾರತ ಮತ್ತು ಸ್ಟಾರ್ಟಪ್ ಇಂಡಿಯಾದಂತಹ ಅಭಿಯಾನಗಳು ದೇಶದ ಸಾಂಸ್ಕೃತಿಕ ಗುರುತು ಮರುಸ್ಥಾಪಿಸಲು ನಮ್ಮ ಯುವಜನರು ಈ ಶಕ್ತಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಇಂದು ದೇಶದ ಮನಸ್ಸುಗಳು ಬದಲಾಗಿದ್ದು, ಜನರಲ್ಲಿ ಮತ್ತು ಅವರ ಬದುಕಿನಲ್ಲಿ ಬದಲಾವಣೆಗೆ ಕಾರಣವಾಗುತ್ತಿದೆ ಎಂದು ಮೋದಿ ಹೇಳಿದ್ದರು.

click me!