ಸ್ಪೇನ್(ಮಾ.27): ಹೆರಿಗೆ ಸಮಯ ಹತ್ತಿರ ಬರುತ್ತಿದ್ದಂತೆ ವಾಟರ್ ಬ್ರೇಕ್ ಅಥವಾ ನಿರೊಡೆಯುವ ಪ್ರಕ್ರಿಯೆ ಸಾಮಾನ್ಯವಾದುದು. ಮಗು ಗರ್ಭದಿಂದ ಹೊರಡಲು ಶುರುವಾದಂತೆ ಗರ್ಭದ ನೀರು ಹೊರ ಬರಲು ಆರಂಭವಾಗುತ್ತದೆ. ಆದರೆ ಸ್ಪೇನ್‌ನ ಪೂರ್ವ ವೇಲೆನ್ಸಿಯಾದಲ್ಲಿನ ಆಸ್ಪತ್ರೆಯಲ್ಲಿ ನೀರೊಡೆಯದೆಯೇ ಮಗು ಜನಿಸಿದೆ. ಮಾರ್ಚ್ 23 ರಂದು ಸ್ಪೇನ್‌ನ (Spain) ಪೂರ್ವ ವೇಲೆನ್ಸಿಯಾದಲ್ಲಿನ ಆಸ್ಪತ್ರೆಯಲ್ಲಿ ಆಮ್ನಿಯೋಟಿಕ್ ಚೀಲದೊಂದಿಗೆ ಸಿಸೇರಿಯನ್ ಮೂಲಕ ಅವಳಿ ಹೆಣ್ಣು ಮಗು ಜನಿಸಿತು.
ಈ ಅವಳಿ ಹೆಣ್ಣುಮಕ್ಕಳ ಜನನದ ಬೆರಗುಗೊಳಿಸುವ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಇದು 80,000 ಜನರಲ್ಲಿ ಒಬ್ಬರಿಗೆ ಸಂಭವಿಸುವ ಅಪರೂಪದ ಘಟನೆ ಎಂದು ಹೇಳಲಾಗುತ್ತದೆ. ಈ ಅಪರೂಪದ ಜನ್ಮವನ್ನು 'ಮುಸುಕಿನ ಜನನ' (veiled birth) ಎಂದು ಕರೆಯಲಾಗುತ್ತದೆ ಆದರೆ ಇದನ್ನು 'ಮತ್ಸ್ಯಕನ್ಯೆ (mermaid) ಅಥವಾ 'ಎನ್ ಕಾಲ್' (en caul) ಜನನ ಎಂದೂ ಕರೆಯಲಾಗುತ್ತದೆ. ಒಡೆಯದ ಆಮ್ನಿಯೋಟಿಕ್ ಚೀಲದೊಳಗೆ ಮಗು ಹೊರಬಂದಾಗ ಇದು ಸಂಭವಿಸುತ್ತದೆ, ಆಮ್ನಿಯೋಟಿಕ್ ಚೀಲ ಸಾಮಾನ್ಯವಾಗಿ ಮಹಿಳೆ ಹೆರಿಗೆಗೆ ಹೋದಾಗ ಛಿದ್ರವಾಗುತ್ತದೆ.
Hoy en el hospital de Vinaròs hemos tenido una cesárea velada (2 gemela) y aquí podéis ver el entusiasmo de los participantes
Porque hay días que hacen que recordemos porque estamos en esto. Lo comparto con permiso, claro pic.twitter.com/YG0OR164Og
Las fotos preciosas, ¿no os parece? La primera cesárea velada que he visto y me ha encantado, y no os digo nada a los estudiantes (aunque reconozco que la de los gritos soy yo). Pasa aproximadamente una vez cada 80000 partos y hoy nuestros estudiantes han tenido un día de 10. pic.twitter.com/FSQiUdqJnQ
— AnaTeijelo (@AnaTeijelo)ಆಮ್ನಿಯೋಟಿಕ್ ಚೀಲವು (amniotic sac) ಗರ್ಭದಲ್ಲಿದ್ದು ಭ್ರೂಣವು (embryo) ಬೆಳವಣಿಗೆಯಾಗುವ ಚೀಲವಾಗಿದೆ. ಇದು ತೆಳ್ಳಗಿನ ಆದರೆ ಕಠಿಣವಾದ ಪಾರದರ್ಶಕ ಜೋಡಿ ಪೊರೆಗಳಾಗಿದ್ದು, ಇದು ಜನನಕ್ಕೆ ಸ್ವಲ್ಪ ಸಮಯದ ಮೊದಲು ಅಭಿವೃದ್ಧಿ ಹೊಂದುತ್ತಿರುವ ಭ್ರೂಣವನ್ನು ಹೊಂದಿರುತ್ತದೆ ನೀರು ಒಡೆದಾಗ, ಆಮ್ನಿಯೋಟಿಕ್ ಚೀಲ ಛಿದ್ರವಾಗುತ್ತದೆ ಎಂದರ್ಥ. ಆದರೆ ಸ್ಪೇನ್‌ನ ಈ ಅವಳಿ ಮಕ್ಕಳ ಹುಟ್ಟಿನ ಪ್ರಕರಣದಲ್ಲಿ ನೀರು ಹಾಗೇ ಉಳಿದಿದೆ.
ಸ್ತ್ರೀರೋಗತಜ್ಞ ( gynecologist) ಮತ್ತು ಪ್ರಸೂತಿ ತಜ್ಞ ಅನಾ ಟೀಜೆಲೊ (Ana Teijelo) ನೇತೃತ್ವದ ವೈದ್ಯಕೀಯ ತಂಡ ಸಿಸೇರಿಯನ್ ಮೂಲಕ ಮಾಡಲಾದ ಈ ಮಕ್ಕಳ ಜನನದ ಪ್ರಕ್ರಿಯೆಯನ್ನು ನಡೆಸಿದೆ. ಈ ರೀತಿಯ ಘಟನೆಯೂ ತನ್ನ ವೃತ್ತಿಜೀವನದಲ್ಲಿ ತಾನು ನೋಡಿದ ಮೊದಲ ಸಿಸೇರಿಯನ್ ಪ್ರಕರಣ ಎಂದು ಟೀಜೆಲೊ ಹೇಳಿದ್ದಾರೆ.
ವಿಶ್ವದ ಈ ಮೂಲೆಯಲ್ಲಾಯ್ತು 'ಹನುಮಂತ'ನ ಜನನ, ಮಗುವನ್ನು ನೋಡಿ ಎಲ್ಲರಿಗೂ ಅಚ್ಚರಿ!
ಎನ್ ಕಾಲ್ ಹೆರಿಗೆಗಳು ಅಪರೂಪ ಮತ್ತು ಸಾಮಾನ್ಯವಾಗಿ ಸಿಸೇರಿಯನ್ ಸಮಯದಲ್ಲಿ ಸಂಭವಿಸುತ್ತದೆ. ಹೆಚ್ಚಾಗಿ ಅವಳಿ ಜನನಗಳಲ್ಲಿ ಈ ರೀತಿ ಸಂಭವಿಸುತ್ತದೆ. ಜೊತೆಗೆ ಯೋನಿ (vaginal births) ಮೂಲಕ ಜನಿಸುವಾಗಲೂ ಸಹ ಸಂಭವಿಸುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಪ್ರತಿ 80,000 ಹೆರಿಗೆಗಳಲ್ಲಿ ಇದು ಒಮ್ಮೆ ಸಂಭವಿಸುತ್ತದೆ. ಈ ಅವಳಿಗಳು ಜನಿಸಿದಾಗ ಅವಳಿ ಮಕ್ಕಳು ತುಂಬಾ ಚೆನ್ನಾಗಿದ್ದರು ಎಂದು ಅವರು ಹೇಳಿದ್ದಾರೆ.
ಎಡಗಾಲಿನಲ್ಲಿ ಮಾತ್ರ ಒಂಭತ್ತು ಬೆರಳುಳ್ಳ ಮಗು ಜನನ