ಬರಿ ಒಳ ಉಡುಪಿನಲ್ಲೇ ಜೈಲಿನಿಂದ ಪರಾರಿಯಾದ ಕೈದಿ

Published : Mar 27, 2022, 03:47 PM IST
ಬರಿ ಒಳ ಉಡುಪಿನಲ್ಲೇ ಜೈಲಿನಿಂದ ಪರಾರಿಯಾದ ಕೈದಿ

ಸಾರಾಂಶ

ಇಂಗ್ಲೆಂಡ್‌ನಲ್ಲೊಂದು ವಿಚಿತ್ರ ಘಟನೆ ಒಳ ಉಡುಪಿನಲ್ಲೇ ಪರಾರಿಯಾದ ಕೈದಿ ಕೈದಿ ಪೋಟೊ ಟ್ವಿಟ್ ಮಾಡಿದ ಪೊಲೀಸರು  

ಇಂಗ್ಲೆಂಡ್(ಮಾ.27): ಕೈದಿಯೊಬ್ಬ ಕೇವಲ ಒಳ ಉಡುಪು ಹಾಗೂ ಸಾಕ್ಸ್‌ ಧರಿಸಿ ಜೈಲಿನಿಂದ ಪರಾರಿಯಾದ ಘಟನೆ ಇಂಗ್ಲೆಂಡ್‌ನಲ್ಲಿ ನಡೆದಿದೆ. 32 ವರ್ಷದ ಕೈಲ್ ಡ್ಯಾರೆನ್ ಎಗ್ಲಿಂಗ್ಟನ್ (Kyle Darren Eglington) ಎಂಬ ಕೈದಿ ಜೈಲಿನ ಭದ್ರತಾ ಅಧಿಕಾರಿಗಳ ಮೇಲೆ ಹಲ್ಲೆ ಮಾಡಿ ಜೈಲಿನಿಂದ ಕೋರ್ಟ್‌ಗೆ ಆರೋಪಿಗಳನ್ನು ಕರೆದೊಯ್ಯುವ ವಾಹನದಿಂದ ಜಿಗಿದು ಪರಾರಿಯಾಗಿದ್ದಾನೆ ಎಂದು ಡೊರ್‌ಸೆಟ್ (Dorset) ಪೊಲೀಸರು ಹೇಳಿದ್ದಾರೆ. 

ಪೊಲೀಸರು ಆತನ ಚಿತ್ರವನ್ನು ಟ್ವೀಟ್ ಮಾಡಿದ್ದು,  ಜನರು ಅವನನ್ನು ನೋಡಿದರೆ ಪೊಲೀಸರಿಗೆ ವರದಿ ಮಾಡುವಂತೆ ಕೇಳಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಟ್ವಿಟ್ ವೈರಲ್ ಆಗಿದೆ. ಕೈದಿ 32 ವರ್ಷದ ಕೈಲ್ ಡ್ಯಾರೆನ್ ಎಗ್ಲಿಂಗ್ಟನ್, ಭದ್ರತಾ ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದ ನಂತರ ಪೂಲ್‌ನಲ್ಲಿರುವ ನ್ಯಾಯಾಲಯದ ಕೈದಿಗಳ ಸಾಗಣೆ ವ್ಯಾನ್‌ನಿಂದ ಇಳಿದು ಓಡಿಹೋಗಿದ್ದಾನೆ. ನಾಪತ್ತೆಯಾಗಿದ್ದ ಕೈದಿ ಎಗ್ಲಿಂಗ್ಟನ್‌ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದು, ಆತನನ್ನು ಬಂಧಿಸಲು ತೀವ್ರ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 

ಪೊಲೀಸ್‌ ವಾಹನದಿಂದ ಹಾರಿ ಎಸ್ಕೇಪ್‌ ಆದ ಕೈದಿ ... ವಿಡಿಯೋ ವೈರಲ್‌

ಅವರು ವ್ಯಾನ್‌ನಿಂದ ಓಡಿಹೋದಾಗ, ಎಗ್ಲಿಂಗ್‌ಟನ್ ಕೇವಲ ಒಳ ಉಡುಪು ಮತ್ತು ಸಾಕ್ಸ್‌ಗಳನ್ನು ಧರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಬಿಳಿ ಬಣ್ಣ ಹೊಂದಿರುವ ಆರೋಪಿ 5 ಅಡಿ 11 ಇಂಚು ಎತ್ತರ ಇದ್ದಾನೆ. ಮಧ್ಯಮ ಗಾತ್ರವನ್ನು ಹೊಂದಿದ್ದು, ಗಾಢ ಕಂದು ಬಣ್ಣದ ಕೂದಲು ಮತ್ತು ಗಡ್ಡವನ್ನು ಹೊಂದಿದ್ದಾನೆ. ಗುರುವಾರ ಬೋರ್ನ್‌ಮೌತ್‌ನಲ್ಲಿ(Bournemouth) ನಡೆದ ಘಟನೆಗೆ ಸಂಬಂಧಿಸಿದಂತೆ, ದರೋಡೆ ಆರೋಪದ ನಂತರ ಎಗ್ಲಿಂಗ್‌ಟನ್‌ನನ್ನು ಬಂಧನದಲ್ಲಿರಿಸಲಾಗಿತ್ತು. ಮರುದಿನ ಆತನನ್ನು ಪೂಲೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸುವ ವೇಳೆ ಆತ ಪರಾರಿಯಾಗಿದ್ದಾನೆ.

ಸಬ್‌ಜೈಲ್ ಮುಖ್ಯದ್ವಾರದಿಂದಲೇ ಕೈದಿ ಪರಾರಿ: ಜೈಲಿನ ಮುಖ್ಯ ವೀಕ್ಷಕನ ಮೇಲೆ ಬಿತ್ತು ಕೇಸ್
ಪೊಲೀಸರು ರಾಷ್ಟ್ರೀಯ ಪೊಲೀಸ್ ಏರ್ ಸರ್ವೀಸ್ ಹೆಲಿಕಾಪ್ಟರ್ ಮತ್ತು ಬ್ರಿಟಿಷ್ ಸಾರಿಗೆ ಪೊಲೀಸರ ನೆರವಿನೊಂದಿಗೆ ಆತ ಪರಾರಿಯಾದ ಪ್ರದೇಶದಲ್ಲಿ ಹುಡುಕುತ್ತಿದ್ದಾರೆ. ಡಾರ್ಸೆಟ್ ಪೊಲೀಸ್‌ ಸೂಪರಿಟೆಂಡೆಂಟ್ ಹೀದರ್ ಡಿಕ್ಸೆ(Heather Dixey) ಮಾತನಾಡಿ, ಈ ಪ್ರದೇಶದಲ್ಲಿ ಒಬ್ಬ ವ್ಯಕ್ತಿಯನ್ನು ಕೇವಲ ಒಳಉಡುಪು ಮತ್ತು ಸಾಕ್ಸ್‌ನಲ್ಲಿ ನೋಡಿದ ಯಾರಾದರೂ ಅಥವಾ ಮೇಲೆ ನೀಡಲಾದ ವಿವರಣೆಗೆ ಹೊಂದಿಕೆಯಾಗುವ ಮತ್ತು ಸಂಶಯಾಸ್ಪದವಾಗಿ ತೋರುವ ಯಾರಾದರು ಕಂಡಲ್ಲಿ ನಮಗೆ ವರದಿ ಮಾಡಲು ನಾನು ಒತ್ತಾಯಿಸುತ್ತೇನೆ ಎಂದು ಹೇಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. 

ಕೆಲ ದಿನಗಳ ಹಿಂದೆ ಜೈಲಿನಿಂದ ತಪ್ಪಿಸಿಕೊಂಡು ಮತ್ತೆ ಪೊಲೀಸರ ಕೈಗೆ ಸಿಕ್ಕಿಬಿದ್ದ ಕಳ್ಳನೋರ್ವ ಜೈಲಿನಿಂದ ತಪ್ಪಿಸಿಕೊಂಡು ಹೋಗಿದ್ದು ಹೇಗೆ ಎಂಬುದನ್ನು ಪ್ರತ್ಯಕ್ಷಿಕವಾಗಿ ಪೊಲೀಸರಿಗೆ ತೋರಿಸಿದ್ದು, ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಮಹಾರಾಷ್ಟ್ರದ (Maharastra) ಪಿಂಪ್ರಿ(Pimpri) ಚಿಂಚ್‌ವಾಡ್‌ನ (chinchavad) ಚಕನ್ (chakan) ಪೊಲೀಸ್ ಠಾಣೆಯ ಲಾಕ್‌ಅಪ್‌ನಿಂದ  ಕೈದಿಯೊಬ್ಬರು ತಪ್ಪಿಸಿಕೊಂಡಿದ್ದು, ಗೇಟ್‌ಗೆ ಬೀಗ ಹಾಕಿದ್ದರೂ ಆತ ಲಾಕ್‌ಅಪ್‌ನಿಂದ ಪರಾರಿಯಾಗಿದ್ದು ಹೇಗೆ ಎಂಬುದು ಪೊಲೀಸರಿಗೆ ಅಚ್ಚರಿ ಮೂಡಿಸಿತ್ತು. ಇದಾಗಿ ಸ್ವಲ್ಪ ಸಮಯದಲ್ಲೇ ಪೊಲೀಸರು ಮತ್ತೆ ಆರೋಪಿಯನ್ನು ಹಿಡಿದು ಠಾಣೆಗೆ ಕರೆತಂದಿದ್ದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುರುಷರ ಕೊರತೆ: ಈ ದೇಶದಲ್ಲಿ ಗಂಡನ ಬಾಡಿಗೆಗೆ ಪಡೆಯುತ್ತಾರೆ ಹೆಣ್ಣು ಮಕ್ಕಳು
ಅಸ್ವಸ್ಥ ಖಲೀದಾ ಜಿಯಾ ಹೆಚ್ಚಿನ ಚಿಕಿತ್ಸೆಗೆ ನಾಳೆ ಲಂಡನ್‌ಗೆ