
ವಾಷಿಂಗ್ಟನ್(ಆ.23): ಅಮೆರಿಕ ಚುನಾವಣೆಯ ನಡುವೆ ಡೊನಾಲ್ಡ್ ಟ್ರಂಪ್ ಹಿರಿಯ ಸಹೋದರಿ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಮಾಧ್ಯಮಗಳಲ್ಲಿ ಬಂದ ವರದಿಯನ್ವಯ ಆಡಿಯೋ ಒಂದು ಲೀಕ್ ಆಗಿದ್ದು ಇದರಲ್ಲಿ ಟ್ರಂಪ್ ಅಕ್ಕ ಮರ್ಯಾನೆ ಟ್ರಂಪ್ ಬೇರಿ (83) ತನ್ನ ತಮ್ಮನಿಗೆ ಯಾವುದೇ ಸಿದ್ಧಾಂತವಿಲ್ಲ. ಡೊನಾಲ್ಡ್ ಟ್ರಂಪ್‌ನ್ನು ನೀವು ನಂಬಲು ಸಾಧ್ಯವಿಲ್ಲ, ಅವರು ತಮ್ಮ ಆಡಳಿತ ಅವಧಿಯಲ್ಲಿ ಕೇವಲ ಸುಳ್ಳು ಹೇಳಿದ್ದಾರೆ ಎಂದು ಹೇಳಿದ್ದಾರೆ. ಈ ಆಡಿಯೋ ಲೀಕ್ ಆದಾಗಿನಿಂದ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಹುಟ್ಟಿಕೊಂಡಿದೆ.
ಗಡಿ ವಿಚಾರದಲ್ಲಿ ಭಾರತ ಪರ ನಿಲ್ಲುವೆ: ಬೈಡನ್!
ತಮ್ಮನನ್ನೇ ಟೀಕಿಸಿದ ಅಕ್ಕ
ಮರ್ಯಾನೆ ತನ್ನ ತಮ್ಮ ಟ್ರಂಪ್ ಮೋಸ ಮಾಡಿರುವ ವಿಚಾರಕ್ಕೆ ಭಾರೀ ಟೀಕಿಸುತ್ತಾ ಪ್ರವಾಸಿಗರ ವಿಚಾರದಲ್ಲಿ ಅವರು ಜಾರಿಗೊಳಿಸಿರುವ ನೀತಿ ನಿಯಮಗಳು ನಿರ್ದಾಕ್ಷಿಣ್ಯವಾಗಿವೆ. ಇದರಿಂದ ಸಾವಿರಾರು ಮಂದಿ ಮಕ್ಕಳು ತಮ್ಮ ಕುಟುಂಬದಿಂದ ದೂರವಾಗಿದ್ದು, ಅವರು ಕೇಂದ್ರದ ಬಂಧನದಲ್ಲಿದ್ದಾರೆ. ಡೊನಾಲ್ಡ್ ಟ್ರಂಪ್ ಓರ್ವ ನಿರ್ದಯಿ ವ್ಯಕ್ತಿ ಎಂದೂ ದೂರಿದ್ದಾರೆ. ಡೊನಾಲ್ಟ್ ಟ್ರಂಪ್ ಅವರ ಅಕ್ಕನ ಈ ಸೀಕ್ರೆಟ್ ಆಡಿಯೋವನ್ನು ವಾಷಿಂಗ್ಟನ್ ಪೋಸ್ಟ್ ಪತ್ರಿಕೆ ಬಹಿರಂಗಗೊಳಿಸಿದೆ ಎಂದು ಹೇಳಲಾಗಿದೆ. ಅಲ್ಲದೇ ಮರ್ಯಾನೆ ತನ್ನ ತಮ್ಮನ ಬುದ್ಧಿವಂತಿಕೆ ವಿಚಾರದಲ್ಲೂ ಸವಾಲೆಸೆದಿದ್ದಾರೆ.
ಡೊನಾಲ್ಡ್ ಟ್ರಂಪ್ ಕಿರಿಯ ಸಹೋದರ ರಾಬರ್ಟ್ ನಿಧನ!
ಸಿದ್ಧಾಂತವಿಲ್ಲದ ವ್ಯಕ್ತಿ
ಇದಕ್ಕೂ ಮುನ್ನ ಟ್ರಂಪ್ ಕುಟುಂಬದ ಯಾಔಒಬ್ಬ ಸದಸ್ಯನೂ ಸಾರ್ವಜನಿಕವಾಗಿ ಅಧ್ಯಕ್ಷನಾಗಲೀ ಅಥವಾ ಅವರು ಜಾರಿಗೊಳಿಸಿದ ನೀತಿಯನ್ನಾಗಲೀ ಟೀಕಿಸಿರಲಿಲ್ಲ. ಇನ್ನು ಟ್ರಂಪ್ ಶ್ವೇತ ಭವನದಲ್ಲಿ ತನ್ನ ತಮ್ಮನ ಅಂತಿಮ ಸಂಸ್ಕಾರ ಆಯೋಜಿಸಿದ್ದ ಒಂದು ದಿನದ ಬಳಿಕ ಈ ಆಡಿಯೋ ಲೀಕ್ ಆಗಿದೆ. ಈ ಸಮಯದಲ್ಲಿ ಮರ್ಯಾನೆ ಭಾಗಿಯಾಗಿರಲಿಲ್ಲ ಎಂಬುವದು ಉಲ್ಲೇಖನೀಯ. ಹೀಗಾಗಿ ತಮ್ಮ-ಅಕ್ಕನ ಸಂಬಂಧದ ವಿಚಾರವಾಗಿ ಮತ್ತಷ್ಟು ಅನುಮಾನಗಳು ಎದ್ದಿದ್ದವು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ