
ಕಠ್ಮಂಡು(ಆ.23): ಚೀನಾದ ವಿಸ್ತರಣಾವಾದಕ್ಕೆ ನೇಪಾಳ ದಿನೇ ದಿನೇ ನಲುಗಲಾರಂಭಿಸಿದೆ. ನೇಪಾಳ ಪ್ರಧಾನಿ ಕೆಪಿ ಓಲಿಯ ಮೌನ ಸಮರ್ಥನೆಯಿಂದ ಚೀನಾ ಇಲ್ಲಿನ ಭೂಮಿಯನ್ನು ದಿನೇ ದಿನೇ ಕಬಳಿಸುತ್ತಿದೆ. ನೇಪಾಳದ ಕೃಷಿ ಸಚಿವಾಲಯದ ಸರ್ವೆಯೊಂದರ ಅನ್ವಯ ಚೀನಾ ನೇಪಾಳದ ಬರೋಬ್ಬರಿ 7 ಜಿಲ್ಲೆಗಳಲ್ಲಿ ಭೂಮಿಯನ್ನು ಅಕ್ರಮವಾಗಿ ನುಂಗಿ ಹಾಕಿದೆ.
ಆದರೆ ಆಂತರಿಕ ಮೂಲಗಳು ಮಾತ್ರ ಕೃಷಿ ಸಚಿವಾಲಯದ ನೀಡಿರುವ ವರದಿಯಲ್ಲಿ ಉಲ್ಲೇಖವಾಗಿರುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನೇಪಾಳದಲ್ಲಿ ಚೀನಾ ಭೂಮಿಯನ್ನು ಅತಿಕ್ರಮಣ ಮಾಡಿದೆ ಎಂದು ಹೇಳಿವೆ
ಗಡಿ ಖ್ಯಾತೆ ಬಳಿಕ ಮೊದಲ ಬಾರಿಗೆ ಭಾರತ-ನೇಪಾಳ ಉನ್ನತ ಮಟ್ಟದ ಸಭೆ!
ದೋಲಖಾ, ಗೂರ್ಖಾ, ಡಾರ್ಚುಲಾ, ಹಮ್ಲಾ, ಸಿಂಧುಪಾಲ್ಚೌಕ್, ಸಂಖುವಸಭ ಮತ್ತು ರಸುವಾ ಚೀನಾದ ಅಕ್ರಮವಾಗಿ ಅತಿಕ್ರಮಿಸಿರುವ ನೇಪಾಳದ ಏಳು ಜಿಲ್ಲೆಗಳಾಗಿದೆ. ನೇಪಾಳದ ದೋಲಾಖದಲ್ಲಿ ಚೀನಾ ತನ್ನ ಅಂತಾರಾಷ್ಟ್ರೀಯ ಗಡಿಯನ್ನು 1,500 ಮೀಟರ್ ನಷ್ಟು ಒತ್ತುವರಿ ಮಾಡಿದೆ.
ಮಾನವಹಕ್ಕುಗಳ ಆಯೋಗವೂ ಕೂಡಾ ಚೀನಾದ ಈ ಅಕ್ರಮವನ್ನು ಉಲ್ಲೇಖಿಸಿದೆ. ಡಾರ್ಚುಲಾದ ಜಿಯುಜಿಯು ಗ್ರಾಮದ ಒಂದು ಭಾಗವನ್ನೇ ಚೀನಾ ಆಕ್ರಮಿಸಿದದೆ. ಈ ಭಾಗದಲ್ಲಿ ಈ ವರೆಗೂ ನೇಪಾಳದ ಹಲವಾರು ಮನೆಗಳನ್ನು ಚೀನಾ ವಶಕ್ಕೆ ತೆಗೆದುಕೊಂಡಿದ್ದು ಚೀನಾದ ಪ್ರಾಂತ್ಯಕ್ಕೆ ಸೇರಿಸಿಕೊಂಡಿದೆ ಎಂದಿದ್ದಾರೆ.
ಭಾರತೀಯರು ನೇಪಾಳ ಪ್ರವೇಶಕ್ಕೆ ID ಕಾರ್ಡ್ ಕಡ್ಡಾಯ; ಹೊಸ ನೀತಿ ಪ್ರಕಟಿಸಿದ ಪ್ರಧಾನಿ ಶರ್ಮಾ!
ನೇಪಾಳದ ಕಮ್ಯುನಿಸ್ಟ್ ಪಕ್ಷ ಚೀನಾದ ಕಮ್ಯುನಿಸ್ಟ್ ಪಕ್ಷದ ವಿಸ್ತರಣಾವಾದದ ಅಜೆಂಡಾವನ್ನು ಮರೆಮಾಚಲು ಯತ್ನಿಸುತ್ತಿದೆ. ಹೀಗಾಗಿ ಚೀನಾ ಅತಿಕ್ರಮಣ ಮಾಡಿದರೂ ನೇಪಾಳದ ಪ್ರಧಾನಿ ಓಲಿ ಮೌನಕ್ಕೆ ಶರಣಾಗಿದ್ದಾರೆ ಎಂದೂ ಮಾಧ್ಯಮ ವರದಿಗಳು ಪ್ರಕಟಿಸಿವೆ. ಇನ್ನು ಚೀನಾ-ನೇಪಾಳದ ರಾಜಕೀಯ ತಜ್ಞರು ಈ ಬಗ್ಗೆ ಪ್ರತಿಕ್ರಿಯಿಸುತ್ತಾ ಸಿಸಿಪಿಗೆ ಸಿಟ್ಟಿಗೆ ಬಲಿಯಾಗಬಹುದೆಂಬ ಕಾರಣದಿಂದ ಚೀನಾದ ವಿಸ್ತರಣಾವಾದ ಸ್ಪಷ್ಟವಾಗಿ ಕಾಣುತ್ತಿದ್ದರೂ ನೇಪಾಳದ ಪ್ರಧಾನ ಮಂತ್ರಿ ಕೆಪಿ ಒಲಿ ನೇತೃತ್ವದ ಸರ್ಕಾರ ಮಾತನಾಡದೇ ಮೌನಕ್ಕೆ ಶರಣಾಗಿದೆ ಎಂದು ವಿಶ್ಲೇಷಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ