
ನ್ಯೂಯಾರ್ಕ್: ಭಾರತದ ವಿರುದ್ಧ ತೆರಿಗೆ ಸಮರ ಸಾರಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿನ್ನೆ ಅಮೆರಿಕಾಗೆ ಬಂದ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರನ್ನು ತಮ್ಮ ಓವಲ್ ಕಚೇರಿಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಈ ವೇಳೆ ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್, ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಕೂಡ ಭಾಗವಹಿಸಿದ್ದರು. ತಮ್ಮ ಭೇಟಿಗೂ ಮೊದಲು ಈ ಪಾಕಿಸ್ತಾನಿ ನಾಯಕರನ್ನು ಟ್ರಂಪ್ ಶ್ರೇಷ್ಠ ನಾಯಕರು ಎಂದು ಕರೆದಿದ್ದಾರೆ. ಇದು ಅಮೆರಿಕ ಹಾಗೂ ಪಾಕಿಸ್ತಾನ ನಡುವಣ ಸಂಬಂಧ ಗಟ್ಟಿಗೊಳ್ಳುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಭಾರತದ ಜೊತೆ ಮುನಿಸಿಕೊಂಡಿರುವ ಟ್ರಂಪ್ ಭಾರತದ ಶತ್ರು ರಾಷ್ಟ್ರಗಳ ಜೊತೆ ಸ್ನೇಹ ವೃದ್ಧಿಸುತ್ತಿದ್ದಾರೆ.
ನಮ್ಮಲ್ಲಿಗೆ ಮಹಾನ್ ನಾಯಕರು ಬರುತ್ತಿದ್ದಾರೆ. ಅವರು ಪಾಕಿಸ್ತಾನದ ಪ್ರಧಾನಿ ಹಾಗೂ ಫೀಲ್ಡ್ ಮಾರ್ಷಲ್, ಫೀಲ್ಡ್ ಮಾರ್ಷಲ್ ತುಂಬಾ ಒಳ್ಳೆಯ ವ್ಯಕ್ತಿ, ಮತ್ತು ಪಾಕಿಸ್ತಾನದ ಪ್ರಧಾನಿ ಇಬ್ಬರೂ ಕೂಡ, ಅವರಿಗ ಕೋಣೆಯಲ್ಲಿ ಇರಬಹುದು ಎಂದು ಟ್ರಂಪ್ ವರದಿಗಾರರ ಜೊತೆ ಮಾತನಾಡುತ್ತಾ ಹೇಳಿದ್ದಾರೆ. ಅಮೆರಿಕ ಮತ್ತು ಪಾಕಿಸ್ತಾನ ನಡುವಿನ ವ್ಯಾಪಾರ ಒಪ್ಪಂದದ ನಂತರ ಈ ಸಭೆ ನಡೆದಿದೆ. ಮಂಗಳವಾರ ನ್ಯೂಯಾರ್ಕ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಟ್ರಂಪ್ ಮತ್ತು ಷರೀಫ್ ಅವರು ಭೇಟಿಯಾದ ಸ್ವಲ್ಪ ಸಮಯದ ನಂತರ ಈ ಸಭೆ ನಡೆದಿದೆ. ಆ ಸಮಯದಲ್ಲಿ ಅಮೆರಿಕದ ಅಧ್ಯಕ್ಷ ಟ್ರಂಪ್, ಅರಬ್ ರಾಷ್ಟ್ರಗಳು ಮತ್ತು ಈಜಿಪ್ಟ್, ಇಂಡೋನೇಷ್ಯಾ, ಪಾಕಿಸ್ತಾನ, ಕತಾರ್, ಸೌದಿ ಅರೇಬಿಯಾ ಮತ್ತು ಟರ್ಕಿ ಸೇರಿದಂತೆ ಇತರ? ನಾಯಕರೊಂದಿಗೆ ಬಹುಪಕ್ಷೀಯ ಸಭೆ ನಡೆಸಿದರು.
ಇದಾದ ನಂತರ ಸಂಜೆ 4.52 ರ ಸುಮಾರಿಗೆ ಷರೀಫ್ ಅವರು ಶ್ವೇತಭವನಕ್ಕೆ ಆಗಮಿಸಿದರು. ಶ್ವೇತಭವನದ ಹಿರಿಯ ಆಡಳಿತ ಅಧಿಕಾರಿಗಳು ಅವರನ್ನು ಸ್ವಾಗತಿಸಿದರು. ಷರೀಫ್ ಮತ್ತು ಮುನೀರ್ ಶ್ವೇತಭವನಕ್ಕೆ ಆಗಮಿಸುವ ವೇಳೆ ಟ್ರಂಪ್ ಹಲವಾರು ಕಾರ್ಯಕಾರಿ ಆದೇಶಗಳಿಗೆ ಸಹಿ ಹಾಕಿದರು ಮತ್ತು ವರದಿಗಾರರೊಂದಿಗೆ ಮಾತನಾಡುತ್ತಿದ್ದರು.
ಶ್ವೇತಭವನದ ವರದಿ ಪ್ರಕಾರ, ಪಾಕಿಸ್ತಾನ ಪ್ರಧಾನಿಯ ವಾಹನ ಪಡೆ ಸಂಜೆ 6.18 ರ ಸುಮಾರಿಗೆ ಶ್ವೇತಭವನದಿಂದ ಹೊರಡುತ್ತಿರುವುದು ಕಂಡು ಬಂದಿದೆ. ಟ್ರಂಪ್ ಅವರನ್ನು ಭೇಟಿ ಮಾಡಲು ಪಾಕಿಸ್ತಾನದ ಇಬ್ಬರು ನಾಯಕರು ಸುಮಾರು ಒಂದು ಗಂಟೆ ಕಾಯಬೇಕಾಯಿತು ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.
ಅಮೆರಿಕಾ ಪಾಕಿಸ್ತಾನವನ್ನೂ ಮೊದಲಿನಿಂದಲೂ ದಕ್ಷಿಣ ಏಷ್ಯಾದ ಭದ್ರತಾ ಪಾಲುದಾರ ಎಂದು ಗುರುತಿಸಿತ್ತು. ಆದರೆ ಕಾಲಾಂತರದಲ್ಲಿ ಪಾಕಿಸ್ತಾನವೂ ಭಯೋತ್ಪಾದನೆಗೆ ಬೆಂಬಲಿಸುವುದಕ್ಕೆ ಬಹಿರಂಗ ಸಾಕ್ಷ್ಯ ಹೆಚ್ಚಾಗುತ್ತಿದ್ದಂತೆ ಈ ಸಂಬಂಧದಲ್ಲಿ ಬಿರುಕು ಕಂಡು ಬಂದಿತು. ಅದರಲ್ಲೂ ಒಸಮಾ ಬಿನ್ ಲಾಡೆನ್ ಪಾಕಿಸ್ತಾನದ ಅಬೊಟಾಬಾದ್‌ನಲ್ಲಿ ನೆಲೆಸಿದ್ದನ್ನು ಅಮೆರಿಕಾದ ಭದ್ರತಾ ಪಡೆಗಳು ಪತ್ತೆ ಮಾಡಿದ ನಂತರ ಈ ಸಂಬಂಧಗಳು ಮತ್ತಷ್ಟು ಹಳಸಿದ್ದವು. ಇಸ್ಲಾಮಾಬಾದ್ ವಾಷಿಂಗ್ಟನ್‌ಗೆ ಸುಳ್ಳು ಮತ್ತು ವಂಚನೆಯನ್ನು ಹೊರತುಪಡಿಸಿ ಬೇರೇನನ್ನೂ ನೀಡಿಲ್ಲ ಎಂದು 2018 ರಲ್ಲಿ ಟ್ರಂಪ್ ಸ್ವತಃ ಹೇಳಿಕೊಂಡಿದ್ದರು.
ಟ್ರಂಪ್‌ನಿಂದ ಶತ್ರುವಿನ ಶತ್ರು ಮಿತ್ರ ನಡೆ…
ನಾವು ಪಾಕಿಸ್ತಾನಕ್ಕೆ ಕೋಟ್ಯಂತರ ಡಾಲರ್‌ಗಳನ್ನು ಪಾವತಿಸುತ್ತಿದ್ದೇವೆ, ಅದೇ ಸಮಯದಲ್ಲಿ ಅವರು ನಾವು ಹೋರಾಡುತ್ತಿರುವ ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದ್ದಾರೆ... ಪಾಕಿಸ್ತಾನವು ನಾಗರಿಕತೆ, ಸುವ್ಯವಸ್ಥೆ ಮತ್ತು ಶಾಂತಿಗೆ ತನ್ನ ಬದ್ಧತೆಯನ್ನು ಪ್ರದರ್ಶಿಸುವ ಸಮಯ ಇದು ಎಂದು ಅವರು ಹೇಳಿದ್ದರು. ಆದರೆ ಬದಲಾದ ಕಾಲಮಾನದಲ್ಲಿ ಅಮೆರಿಕಾದ ಸಂಬಂಧ ಭಾರತದ ಜೊತೆ ಹಳಸಿದ್ದು, ಶತ್ರುವಿನ ಶತ್ರು ಮಿತ್ರ ಎಂಬ ನೀತಿಯನ್ನು ಡೊನಾಲ್ಡ್ ಟ್ರಂಪ್ ಫಾಲೋ ಮಾಡ್ತಿರುವಂತೆ ಕಾಣ್ತಿದೆ.
ಇದನ್ನೂ ಓದಿ: ಭಾರತದಿಂದ ಆಮದಾಗುವ ಔಷಧಿಗಳಿಗೆ ಶೇ.100 ತೆರಿಗೆ ವಿಧಿಸಿದ ಟ್ರಂಪ್: ದೇಶದ ಫಾರ್ಮಾ ಕಂಪನಿಗಳಿಗೆ ಸಂಕಷ್ಟ
ಇದನ್ನೂ ಓದಿ: ನೋವೆಂದು ಬಂದವನ ಸ್ಕ್ಯಾನ್ ಮಾಡಿದ ವೈದ್ಯರಿಗೆ ಶಾಕ್: ಒಳಗಿತ್ತು 29 ಚಮಚ, 19 ಬ್ರಶ್, 2 ಪೆನ್
ಇದನ್ನೂ ಓದಿ: ಪ್ಲೇಹೋಮ್‌ನಲ್ಲಿ 3 ವರ್ಷದ ಕಂದನ ಮೇಲೆ ಶಿಕ್ಷಕಿಯ ಹಲ್ಲೆ: ವೀಡಿಯೋ ವೈರಲ್ ಬಳಿಕ ಪೋಷಕರ ಗಮನಕ್ಕೆ ಘಟನೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ