
ರಿಯಾದ್: ಸೌದಿ ಅರೇಬಿಯಾ ರಾಜಧಾನಿ ರಿಯಾದ್‌ನಲ್ಲಿ ಮುಂದಿನ 5 ವರ್ಷಗಳ ಕಾಲ ಯಾವುದೇ ವಾಣಿಜ್ಯ ಅಥವಾ ವಸತಿ ಪ್ರದೇಶಗಳ ಬಾಡಿಗೆಯನ್ನು ಹೆಚ್ಚಳ ಮಾಡುವಂತಿಲ್ಲ ಎಂದು ದೊರೆ ಆದೇಶಿಸಿದ್ದಾರೆ. ಕೊರೋನಾ ಸಾಂಕ್ರಾಮಿಕದ ಬಳಿಕ ದೇಶದಲ್ಲಿ, ಅದರಲ್ಲೂ ರಾಜಧಾನಿ ರಿಯಾದ್‌ನಲ್ಲಿ ಬಾಡಿಗೆ ಪ್ರಮಾಣ ಭಾರೀ ಏರಿಕೆ ಕಂಡಿತ್ತು. ದೇಶವು ಹೊಸ ಹೊಸ ಅಭಿವೃದ್ಧಿ ಯೋಜನೆ ಜಾರಿಗೆ ಹೆಜ್ಜೆ ಹಾಕಿರುವಾಗಲೇ ಬಾಡಿಗೆ ಮೊತ್ತ ಭಾರೀ ಏರಿಕೆಯಾಗಿತ್ತು. ಹೀಗಾಗಿ ಬಾಡಿಗೆಯಲ್ಲಿ ಸಮತೋಲನ, ಪಾರದರ್ಶಕತೆ ಮತ್ತು ನ್ಯಾಯಸಮ್ಮತ ಮಾರುಕಟ್ಟೆ ಕಲ್ಪಿಸುವ ನಿಟ್ಟಿನಲ್ಲಿ ದರ ಏರಿಕೆಗೆ ಬ್ರೇಕ್ ಹಾಕಲಾಗಿದೆ.
ಹೀಗಾಗಿ ಈ ಬೆಳವಣಿಗೆ ದರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮುಂದಿನ 5 ವರ್ಷ ಬಾಡಿಗೆ ಏರಿಸುವಂತಿಲ್ಲ. ಒಂದು ವೇಳೆ ಏರಿಕೆ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಬಾಡಿಗೆ ದಾರರಿಗೆ ಒಂದು ವರ್ಷದ ಬಾಡಿಗೆಯ ದಂಡ ಮತ್ತು ಹೆಚ್ಚುವರಿ ಪರಿಹಾರ ನೀಡಬೇಕಾಗುತ್ತದೆ. ಇನ್ನು ಈ ಅಕ್ರಮ ಬಯಲಿಗೆಳೆಯುವವರಿಗೆ ದಂಡದ ಶೇ.20ರಷ್ಟು ಪಾವತಿಯಾಗಲಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಸದ್ಯ ರಿಯಾದ್‌ನಲ್ಲಿ ಜಾರಿಯಾಗಿರುವ ಕಾನೂನು ಶೀಘ್ರವೇ ದೇಶವ್ಯಾಪಿ ವಿಸ್ತರಣೆಯಾಗಲಿದೆ.
ನಮ್ಮ ಅಣ್ವಸ್ತ್ರ ಇನ್ನು ಸೌದಿಗೂ ಲಭ್ಯ : ಪಾಕ್
ಇಸ್ಲಾಮಾಬಾದ್: ಸೌದಿ ಅರೇಬಿಯಾದೊಂದಿಗೆ ಆಗಿರುವ ರಕ್ಷಣಾ ಒಪ್ಪಂದದ ಅಡಿಯಲ್ಲಿ ತನ್ನ ದೇಶದ ಪರಮಾಣು ಸಾಮರ್ಥ್ಯಗಳು ಸೌದಿಗೂ ಲಭ್ಯವಾಗಲಿದೆ ಎಂದು ಪಾಕಿಸ್ತಾನ ಘೋಷಿಸಿದೆ.
ಈ ಮೂಲಕ, ಅಣ್ವಸ್ತ್ರ ಹೊಂದಿರುವ ಏಕೈಕ ಇಸ್ಲಾಮಿಕ್ ದೇಶ ತಾನೊಬ್ಬನೇ ಎಂದು ಪರೋಕ್ಷವಾಗಿ ಕೊಚ್ಚಿಕೊಂಡಿದೆ.ಈ ಕುರಿತು ಮಾಧ್ಯಮದವರಲ್ಲಿ ಮಾತನಾಡಿದ ಪಾಕ್ ರಕ್ಷಣಾ ಸಚಿವ ಖ್ವಾಜಾ ಆಸೀಫ್, ‘ಪಾಕಿಸ್ತಾನವು ಅಣ್ವಸ್ತ್ರವನ್ನು ಬಹಳ ಹಿಂದೆಯೇ ಸಿದ್ಧಿಸಿ ಕೊಂಡಿತ್ತು. ಜತೆಗೆ ಆಗಿನಿಂದಲೇ ಸೇನೆಗೂ ಅದರ ತರಬೇತಿ ಕೊಡಲಾಗುತ್ತಿದೆ. ಈಗ ಆಗಿರುವ ಒಪ್ಪಂದದ ಅಡಿ ಇವುಗಳು (ಅಣ್ವಸ್ತ್ರ) ಸೌದಿಗೂ ದೊರೆಯಲಿವೆ’ ಎಂದು ಹೇಳಿದ್ದಾರೆ. ಜತೆಗೆ, ‘ಪಾಕ್ ಅಥವಾ ಸೌದಿ ಮೇಲೆ ಯಾವ ಕಡೆಯಿಂದ ದಾಳಿ ನಡೆದರೂ ಇಬ್ಬರೂ ಒಟ್ಟಿಗೆ ಅದನ್ನು ತಡೆದು ಪ್ರತಿದಾಳಿ ಮಾಡುತ್ತೇವೆ’ ಎಂದು ಹೇಳಿದರು. ಈ ಮೂಲಕ, ಸೌದಿಯ ಮೇಲೆ ಯಾರಾದರೂ ದಾಳಿ ಮಾಡಿದರೆ, ಅವರ ರಕ್ಷಣೆಗೆ ತಾವು ಅಣ್ವಸ್ತ್ರ ಒದಗಿಸುವುದಾಗಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ