ಲವರ್ ಜೊತೆ ಮದುವೆಗೆ ವಿರೋಧ: 13 ಜನರ ಇಡೀ ಕುಟುಂಬಕ್ಕೆ ವಿಷವಿಕ್ಕಿ ಕೊಂದ ಯುವತಿ

Published : Oct 07, 2024, 12:42 PM IST
ಲವರ್ ಜೊತೆ ಮದುವೆಗೆ ವಿರೋಧ: 13 ಜನರ ಇಡೀ ಕುಟುಂಬಕ್ಕೆ ವಿಷವಿಕ್ಕಿ ಕೊಂದ ಯುವತಿ

ಸಾರಾಂಶ

ಪ್ರೀತಿಸಿದ ಹುಡುಗನನ್ನು ಮದುವೆಯಾಗಲು ಬಿಡದಿದ್ದಕ್ಕೆ ಯುವತಿಯೊಬ್ಬಳು ತನ್ನ 13 ಮಂದಿಯ ಕುಟುಂಬಕ್ಕೆ ವಿಷ ಹಾಕಿ ಕೊಂದಿದ್ದಾಳೆ. ಸಿಂಧ್ ಪ್ರಾಂತ್ಯದಲ್ಲಿ ನಡೆದ ಈ ಘಟನೆಯಲ್ಲಿ 3 ರಿಂದ 20 ವರ್ಷದೊಳಗಿನ ಮಕ್ಕಳೂ ಸೇರಿದ್ದಾರೆ. ಯುವತಿ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಲಾಗಿದೆ.

ತಾನು ಪ್ರೀತಿಸಿದ ಹುಡುಗನನ್ನು ಮದುವೆಯಾಗಲು ಬಿಡಲಿಲ್ಲ ಎಂದು ಯುವತಿಯೊಬ್ಬಳು 13 ಜನರಿದ್ದ ತನ್ನ ಇಡೀ ಕೂಡು ಕುಟುಂಬಕ್ಕೆ ವಿಷವುಣಿಸಿ ಕೊಂದ ಆಘಾತಕಾರಿ ಘಟನೆ ಪಾಕಿಸ್ತಾನದ ಸಿಂಧ್‌ ಪ್ರಾಂತ್ಯದಲ್ಲಿ ನಡೆದಿದೆ. ಈಕೆಯ ವಿಷಪಾಶಕ್ಕೆ ಸಿಲುಕಿ ಸಾವನ್ನಪ್ಪಿದ್ದವರಲ್ಲಿ 3ರಿಂದ 20 ವರ್ಷ ಪ್ರಾಯದೊಳಗಿನ ಮಕ್ಕಳು ಕೂಡ ಇದ್ದಾರೆ.  ಕಳೆದ ಆಗಸ್ಟ್‌ 19ರಂದು ಈಕೆಯೊಬ್ಬಳನ್ನು ಹೊರತುಪಡಿಸಿ ಈಕೆಯ ಇಡೀ ಕುಟುಂಬದವರು ಸಾವನ್ನಪ್ಪಿದ್ದರು. ಈ ಬಗ್ಗೆ ಅನುಮಾನ ಇದ್ದ ಹಿನ್ನೆಲೆಯಲ್ಲಿ ತನಿಖೆ ಮಾಡಿದಾಗ ಈಕೆಯೇ ಮನೆ ಮಂದಿಗೆ ವಿಷ ಉಣಿಸಿರುವುದು ಬೆಳಕಿಗೆ ಬಂದಿದೆ. 

ಆಗಸ್ಟ್ 19ರಂದು ಮನೆಯಲ್ಲಿ ಭೋಜನ ಸೇವಿಸಿದ ಮನೆ ಮಂದಿಯೆಲ್ಲರೂ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲೇ ಚಿಕಿತ್ಸೆ ಫಲಕಾರಿಯಾಗದೇ ಕುಟುಂಬದ 13 ಜನರು ಕೂಡ ಸಾವನ್ನಪ್ಪಿದ್ದಾರೆ. ಮೃತರ ಮರಣೋತ್ತರ ಪರೀಕ್ಷೆ ನಡೆಸಿದಾಗ ಅವರು ವಿಷಾಹಾರದಿಂದ ಸಾವನ್ನಪ್ಪಿರುವುದು ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಈಗ ಪೊಲೀಸರು ಯುವತಿ ಹಾಗೂ ಆಕೆಯ ಪ್ರಿಯಕರನನ್ನು ಬಂಧಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಇನಾಯತ್ ಷಾ ಹೇಳಿದ್ದಾರೆ. 

ಬೋರ್ಡ್ ಮೇಲೆ ಪಾದರಸ ಚೆಲ್ಲಿ ಪ್ರತಿಸ್ಪರ್ಧಿಗೆ ವಿಷಪ್ರಾಸನ ಮಾಡಿದ ಚೆಸ್ ಪ್ಲೇಯರ್: ವೀಡಿಯೋ

ಪಾಕಿಸ್ತಾನದ ಸಿಂಧ್‌ ಪ್ರಾಂತ್ಯದ ಕೈರ್‌ಪುರ್ ಸಮೀಪದ ಹಬಿಬತ್ ಖಾನ್ ಬ್ರೋಹಿ ಎಂಬ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ತನ್ನ ಇಷ್ಟದ ಹುಡುಗನನ್ನು ಮದುವೆಯಾಗಲು ಬಿಡಲಿಲ್ಲ ಎಂದು ಸಿಟ್ಟಿಗೆದ್ದ ಯುವತಿ, ಚಪಾತಿ ಹಿಟ್ಟಿನಲ್ಲಿ ವಿಷ ಬೆರೆಸಿ ಮನೆ ಮಂದಿಗೆಲ್ಲಾ ಉಣ ಬಡಿಸಿದ್ದಾಳೆ. ತನ್ನ ಪ್ರಿಯಕರನ ಮಾತಿನಿಂದ ಪ್ರೇರಣೆಗೊಳಗಾಗಿ ಯುವತಿ ಈ ಕೃತ್ಯವೆಸಗಿದ್ದು, ನಿನ್ನೆ ಈಕೆ ಹಾಗೂ ಈಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ. 

ಇವರಿಬ್ಬರ ಮದುವೆಗೆ ಎರಡೂ ಮನೆಯವರಿಂದ ವಿರೋಧವಿತ್ತು ಎನ್ನಲಾಗಿದೆ. ಹೀಗಾಗಿ ಯುವಕ ಆಕೆಗೆ ಮನೆ ಮಂದಿಗೆಲ್ಲಾ ವಿಷ ನೀಡಿ ಸಾಯಿಸುವಂತೆ ಸಲಹೆ ನೀಡಿದ್ದಾನೆ. ಆತನ ಮಾತು ಕೇಳಿ ಯುವತಿ ತನ್ನವರು ಎಂಬ ಯಾವುದೇ ಮಮಕಾರವಿಲ್ಲದೇ ಮನೆಯ ಪುಟ್ಟ ಮಕ್ಕಳ ಸಮೇತ ಇಡೀ ಮನೆ ಮಂದಿಗೆ ವಿಷ ಹಾಕಿ ಕತೆ ಮುಗಿಸಿದ್ದಾಳೆ. ಹೀಗೆ ಹಿಟ್ಟಿಗೆ ವಿಷ ಬೆರೆಸಿ ಮನೆ ಮಂದಿಯ ಕತೆ ಮುಗಿಸಿದ ಯುವತಿ ಹಾಗೂ ಪ್ರಿಯಕರನನ್ನು ಶಾಯಿಸ್ತಾ ಹಾಗೂ ಆಮೀರ್‌ ಭಕ್ಷ್‌ ಎಂದು ಗುರುತಿಸಲಾಗಿದೆ. 
ವಿಷವುಣಿಸಿ ಮೋಸ್ಟ್ ವಾಂಟೆಡ್ ಉಗ್ರ ದಾವುಡ್ ಇಬ್ರಾಹಿಂ ಹತ್ಯೆ, ಸುದ್ದಿ ಖಚಿತಪಡಿಸಿದ ಪಾಕ್ ಮಾಧ್ಯಮ!

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಟ್ರಂಪ್‌ ತೆರಿಗೆ ಶಾಕ್‌ಗೆ ಚೀನಾ ದಾಖಲೆಯ ತಿರುಗೇಟು
ಮೋದಿ ರೀತಿ ರೈತರಿಗೆ ಟ್ರಂಪ್‌ ಹಣ ವರ್ಗಾವಣೆ