ಪತ್ನಿಗೆ ಇರಿದು ಕೊಂದು 224 ತುಂಡು ಮಾಡಿ ನದಿಗೆ ಎಸೆದ ಸೈಕೋ ಗಂಡ

Published : Apr 08, 2024, 09:23 AM IST
ಪತ್ನಿಗೆ ಇರಿದು ಕೊಂದು 224 ತುಂಡು ಮಾಡಿ ನದಿಗೆ ಎಸೆದ ಸೈಕೋ ಗಂಡ

ಸಾರಾಂಶ

ಇತ್ತೀಚೆಗೆ ಭಾರತದ ಕೆಲವು ಕಡೆ ಯುವತಿಯರ ದೇಹಗಳನ್ನು ನೂರಾರು ತುಂಡು ಮಾಡಿ ಬಿಸಾಕಿದ ಘಟನೆಗಳು ನಡೆದಿದ್ದವು. ಇಂಥ ಘಟನೆ ಈಗ ಬ್ರಿಟನ್‌ನಲ್ಲೂ ಸಂಭವಿಸಿದೆ. ದ್ವೇಷಕ್ಕಾಗಿ ಪತಿಯೇ ತನ್ನ ಮನೆಯ ಬೆಡ್‌ರೂಂನಲ್ಲಿ ಪತ್ನಿಯನ್ನು ಇರಿದು ಸಾಯಿಸಿದ್ದಲ್ಲದೆ, ಆಕೆಯ ದೇಹವನ್ನು 200ಕ್ಕೂ ಹೆಚ್ಚು ತುಂಡು ಮಾಡಿ ನದಿಗೆಸೆದಿದ್ದಾನೆ.

ಲಂಡನ್‌: ಇತ್ತೀಚೆಗೆ ಭಾರತದ ಕೆಲವು ಕಡೆ ಯುವತಿಯರ ದೇಹಗಳನ್ನು ನೂರಾರು ತುಂಡು ಮಾಡಿ ಬಿಸಾಕಿದ ಘಟನೆಗಳು ನಡೆದಿದ್ದವು. ಇಂಥ ಘಟನೆ ಈಗ ಬ್ರಿಟನ್‌ನಲ್ಲೂ ಸಂಭವಿಸಿದೆ. ದ್ವೇಷಕ್ಕಾಗಿ ಪತಿಯೇ ತನ್ನ ಮನೆಯ ಬೆಡ್‌ರೂಂನಲ್ಲಿ ಪತ್ನಿಯನ್ನು ಇರಿದು ಸಾಯಿಸಿದ್ದಲ್ಲದೆ, ಆಕೆಯ ದೇಹವನ್ನು 200ಕ್ಕೂ ಹೆಚ್ಚು ತುಂಡು ಮಾಡಿದ್ದ ಹಾಗೂ 1 ವಾರ ಕಾಲ ಅಡುಗೆಮನೆಯ ಎಸಿ ಕೊಠಡಿಯಲ್ಲಿ ಬಚ್ಚಿಟ್ಟಿದ್ದ ಘಟನೆ ಬ್ರಿಟನ್‌ನಲ್ಲಿ ಘಟಿಸಿದೆ. ಬೆಚ್ಚಿಬೀಳಿಸುವ ಈ ಕೃತ್ಯ ಎಸಗಿದ್ದ ದುರುಳ ಪತಿಗೆ ಈಗ ತಪ್ಪೊಪ್ಪಿಕೊಂಡಿದ್ದು, ಇಂದು  ಶಿಕ್ಷೆ ಪ್ರಕಟವಾಗಲಿದೆ.

ಮೆಟ್ಸನ್‌ (28) ಎಂಬಾತ ತನ್ನ ಪತ್ನಿ ಬ್ರಾಮ್ಲಿ (26) ಎಂಬಾಕೆಯನ್ನು ಮಾರ್ಚ್‌ 2023ರಲ್ಲಿ ಅಮಾನುಷವಾಗಿ ಕೊಲೆ ಮಾಡಿ ತನ್ನ ಕಿಚನ್‌ನಲ್ಲಿ ತುಂಡು ತುಂಡು ಮಾಡಿ ಪ್ಲಾಸ್ಟಿಕ್‌ ಕವರ್‌ಗಳಲ್ಲಿ ಹಾಕಿ ಬಚ್ಚಿಟ್ಟಿದ್ದ. ಒಂದು ವಾರದ ಬಳಿಕ ಗೆಳೆಯನಿಗೆ 50 ಯೂರೋ (₹4,517) ಹಣ ನೀಡಿ ವೈಥಾಂ ನದಿಯಲ್ಲಿ ಬಿಸಾಡಿದ್ದ. ಮರುದಿನವೇ ಅಲ್ಲಿಂದ 224 ದೇಹದ ತುಂಡುಗಳನ್ನು ಪತ್ತೆಹಚ್ಚಲಾಗಿತ್ತು. ಒಂದು ವರ್ಷದಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಲೇ ಬಂದಿದ್ದ ಆರೋಪಿ ಕೊನೆಗೂ ಶುಕ್ರವಾರ ತಪ್ಪೊಪ್ಪಿಕೊಂಡಿದ್ದು, ಸೋಮವಾರ ಆತನಿಗೆ ಶಿಕ್ಷೆ ಪ್ರಕಟವಾಗಲಿದೆ.

ಹೆಂಡ್ತಿ ತಂಗಿಯನ್ನು ಮುಟ್ತಿದ್ದ ಅಪ್ರಾಪ್ತ ಬಾಲಕನ ಕೊಂದು ಬಾಡಿ ಪೀಸ್‌ ಪೀಸ್‌ ಮಾಡಿದ ಆಟೋ ಡ್ರೈವರ್!

ಪ್ರಕರಣದ ಹಿನ್ನೆಲೆ:

ಈತ ಮೊದಲಿಗೆ ತನ್ನ ಪತ್ನಿಗೆ ಪ್ರಿಯವಾಗಿದ್ದ ಸಾಕುನಾಯಿ, ಬೆಕ್ಕು, ಮೊಲ ಮುಂತಾದವುಗಳನ್ನು ವಾಷಿಂಗ್‌ ಮಷಿನ್‌, ಫ್ರಿಡ್ಜ್‌ ಮುಂತಾದವುಗಳಿಗೆ ಹಾಕಿ ಕ್ರೌರ್ಯ ಮೆರೆದಿದ್ದ. ಇದರಿಂದ ಆಕ್ರೋಶಗೊಂಡಿದ್ದ ಪತ್ನಿ ತನ್ನ ಸಾಕುಮೊಲಗಳ ಜೊತೆ ಓಡಿಹೋಗಿ ಪೊಲೀಸರಿಗೆ ದೂರನ್ನೂ ಸಹ ನೀಡಿದ್ದಳು. ಅಲ್ಲದೆ 16 ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ದಂಪತಿಗೆ ಕೊಲೆ ಸಂಭವಿಸುವ ಕೆಲ ದಿನಗಳ ಹಿಂದೆ ಯಾವುದೋ ಕಾರಣಕ್ಕೆ ಮನಸ್ತಾಪವಿತ್ತು ಎಂದು ಆಕೆಯ ಪೋಷಕರು ಕೋರ್ಟ್‌ ವಿಚಾರಣೆಯ ವೇಳೆ ತಿಳಿಸಿದ್ದರು.

ಪತ್ನಿಯ ಮೂಗು ಕತ್ತರಿಸಿ, ಕಿಸೆಯಲ್ಲಿ ಇಟ್ಕೊಂಡು ಪರಾರಿಯಾದ ಗಂಡ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೋದಿ ಅವಧಿಯಲ್ಲಿ ವಾಕ್‌ ಸ್ವಾತಂತ್ರ್ಯಕ್ಕೆ ಕಡಿವಾಣ : ಸಲ್ಮಾನ್‌ ರಶ್ದಿ ಆರೋಪ
ಆಸೀಸ್‌ನಲ್ಲಿ ಮಕ್ಕಳಿಗೆ ಜಾಲತಾಣ ಬಳಕೆ ನಿಷೇಧ : ನಾಳೆಯಿಂದ ಜಾರಿ