ಉದ್ಯಮಿ ಬೆರ್ನಾರ್ಡ್ ಅರ್ನಾಲ್ 18.50 ಲಕ್ಷ ಕೋಟಿ ರು.ನೊಂದಿಗೆ ಮೊದಲ ಸ್ಥಾನದಲ್ಲಿ ಮತ್ತು ಜೆಫ್ ಬೆಜೋಸ್ 17.18 ಲಕ್ಷ ಕೋಟಿ ರು.ಯೊಂದಿಗೆ 2ನೇ ಸ್ಥಾನದಲ್ಲಿದ್ದಾರೆ. ಮುಕೇಶ್ ಅಂಬಾನಿ 9.29 ಲಕ್ಷ ಕೋಟಿ ರು. ಆಸ್ತಿಯೊಂದಿಗೆ 11ನೇ ಸ್ಥಾನದಲ್ಲಿದ್ದಾರೆ.
ವಾಷಿಂಗ್ಟನ್(ಏ.07): ಫೇಸ್ಟುಕ್, ವಾಟ್ಸಾಪ್ ಮೊದಲಾದ ಸಂಸ್ಥೆಗಳ ಮಾಲೀಕ ಮಾರ್ಕ್ ಜುಕರ್‌ಬರ್ಗ್, ವಿಶ್ವದ 3ನೇ ಅತ್ಯಂತ ಶ್ರೀಮಂತನಾಗಿ ಹೊರಹೊಮ್ಮಿದ್ದಾರೆ.
ಬ್ಲೂಂಬರ್ಗ್ ಪ್ರಕಟಿಸಿರುವ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 16.18 ಲಕ್ಷ ಕೋಟಿ ರು. ಸಂಪತ್ತಿನೊಂದಿಗೆ ಜುಕರ್ ಬರ್ಗ್ ಮೂರನೇ ಸ್ಥಾನಕ್ಕೆ ಏರಿದ್ದರೆ 14.98 ಲಕ್ಷ ಕೋಟಿ ರು.ಆಸ್ತಿಯೊಂದಿಗೆ 3ನೇ ಸ್ಥಾನದಲ್ಲಿದ್ದ ಮಸ್ಕ್ 4ನೇ ಸ್ಥಾನಕ್ಕೆ ಜಾರಿದ್ದಾರೆ.
ದೇಶದ ಶೇ.1ರಷ್ಟು ಸಿರಿವಂತರ ಬಳಿ ಶೇ.40ರಷ್ಟು ಸಂಪತ್ತು: ವರದಿಯಲ್ಲೇನಿದೆ?
ಉಳಿದಂತೆ ಉದ್ಯಮಿ ಬೆರ್ನಾರ್ಡ್ ಅರ್ನಾಲ್ 18.50 ಲಕ್ಷ ಕೋಟಿ ರು.ನೊಂದಿಗೆ ಮೊದಲ ಸ್ಥಾನದಲ್ಲಿ ಮತ್ತು ಜೆಫ್ ಬೆಜೋಸ್ 17.18 ಲಕ್ಷ ಕೋಟಿ ರು.ಯೊಂದಿಗೆ 2ನೇ ಸ್ಥಾನದಲ್ಲಿದ್ದಾರೆ. ಮುಕೇಶ್ ಅಂಬಾನಿ 9.29 ಲಕ್ಷ ಕೋಟಿ ರು. ಆಸ್ತಿಯೊಂದಿಗೆ 11ನೇ ಸ್ಥಾನದಲ್ಲಿದ್ದಾರೆ.