Texas hostage case ಪಾಕ್ ಸುಂದರಿಗೆ 86 ವರ್ಷ ಜೈಲು ಶಿಕ್ಷೆ, ಈಕೆಯ ಬಿಡುಗಡೆಗಾಗಿ ಅಮೆರಿಕ ಚರ್ಚ್ ಮೇಲೆ ಉಗ್ರರ ದಾಳಿ!

Published : Jan 16, 2022, 06:46 PM IST
Texas hostage case ಪಾಕ್ ಸುಂದರಿಗೆ 86 ವರ್ಷ ಜೈಲು ಶಿಕ್ಷೆ, ಈಕೆಯ ಬಿಡುಗಡೆಗಾಗಿ ಅಮೆರಿಕ ಚರ್ಚ್ ಮೇಲೆ ಉಗ್ರರ ದಾಳಿ!

ಸಾರಾಂಶ

ಅಮೆರಿಕಗ ಟೆಕ್ಸಾಸ್‌ನ ಯಹೂದಿ ಪ್ರಾರ್ಥನಾ ಮಂದಿರದ ಮೇಲೆ ಉಗ್ರರ ದಾಳಿ ಧರ್ಮಗುರು ಸೇರಿ ನಾಲ್ವರನ್ನು ಒತ್ತೆಯಾಳಾಗಿಟ್ಟುಕೊಂಡ ಉಗ್ರರು ಅಮೆರಿಕ ಜೈಲಿನಲ್ಲಿರುವ ಅಫಿಯಾ ಸಿದ್ದಿಕಿ ಬಿಡುಗಡೆಗೆ ಉಗ್ರರ ಬೇಡಿಕೆ ಅಫಿಯಾ ಸಿದ್ದಿಕಿ ಹಿಂದಿದೆ 86 ವರ್ಷದ ಜೈಲು ಶಿಕ್ಷೆ ಪ್ರಕರಣ

ಟೆಕ್ಸಾಸ್(ಜ.16): ಭಯೋತ್ಪಾದನೆ ಕರಾಳ ರೂಪ ಇದೀಗ ಅಮೆರಿಕಾಗೆ(America) ಪದೆ ಪದೇ ಘಾಸಿಯನ್ನುಂಟು ಮಾಡುತ್ತಿದೆ. 2001ರಲ್ಲಿ ನಡೆದ ವಿಶ್ವ ವಾಣಿಜ್ಯ ಅವಳಿ(September 11 attacks) ಕಟ್ಟಡ ಮೇಲಿನ ಭಯೋತ್ಪಾದಕ ದಾಳಿ ಬಳಿಕ ಅಮೆರಿಕ ಕೆಲ ಭಯೋತ್ಪಾದ ದಾಳಿ ಎದುರಿಸಿದೆ. ಇದೀಗ ಟೆಕ್ಸಾಸ್(Texas) ನಗರದಲ್ಲಿನ ಯಹೂದಿ ಪ್ರಾರ್ಥನಾ ಮಂದಿರದ ಮೇಲೆ ಉಗ್ರರು ದಾಳಿ ನಡೆಸಿ ಧರ್ಮಗುರು ಸೇರಿದಂತೆ ನಾಲ್ವರನ್ನು ಉಗ್ರರು ಒತ್ತೆಯಾಳಾಗಿಟ್ಟುಕೊಂಡಿದ್ದಾರೆ(hostage). ಈ ನಾಲ್ವರನ್ನು ಬಂಧನದಿಂದ ಮುಕ್ತಗೊಳಿಸಬೇಕಾದರೆ ಅತೀ ದೊಡ್ಡ ಬೇಡಿಕೆಯನ್ನು ಉಗ್ರರು ಅಮೆರಿಕ ಮುಂದಿಟ್ಟಿದ್ದಾರೆ. ಅಮೆರಿಕ ಜೈಲಿನಲ್ಲಿರುವ ಸುಂದರಿ ಅಫಿಯಾ ಸಿದ್ಧಿಕ್ ಬಿಡುಗಡೆ ಮಾಡುವಂತೆ ಉಗ್ರರು ಬೇಡಿಕೆ ಇಟ್ಟ ಘಟನೆ ನಡೆದಿದೆ. ಇದರಿಂದ ಅಫಿಯಾ ಸಿದ್ದಿಕ್ ಪ್ರಕರಣ ಮತ್ತೆ ಸದ್ದು ಮಾಡಿದೆ.

ಟೆಕ್ಸಾಸ್ ಪ್ರಾರ್ಥನಾ ಮಂದಿರದ ಮೇಲೆ ದಾಳಿ ಮಾಡಿದ ಉಗ್ರರು ನಾಲ್ವರನ್ನು ಒತ್ತೆಯಾಳಾಗಿಟ್ಟುಕೊಂಡು ಆಫಿಯಾ ಸಿದ್ದಿಕ್(Aafia Siddiqui) ಬಿಡುಗಡೆ ಮಾಡುವಂತೆ ಬೇಡಿಕೆ ಇಟ್ಟಿದ್ದಾರೆ. ಆದರೆ ಅಮೆರಿಕಾ ಭದ್ರತಾ ಪಡೆ ಸತತ 10 ಗಂಟೆಗಳ ಕಾಲ ಹೋರಾಟ ನಡೆಸಿ ಒತ್ತೆಯಾಳಾಗಿದ್ದ ನಾಲ್ವರನ್ನು ಯಾವುದೇ ಅಪಾಯ ಸಂಭವಿಸದಂತೆ ಬಂಧ ಮುಕ್ತಗೊಳಿಸಿದ್ದಾರೆ. ಇತ್ತ ಉಗ್ರರನ್ನು ಭದ್ರತಾ ಪಡೆಗಳು ಹತ್ಯೆ ಮಾಡಿದೆ. ಈ ಪ್ರಕರಣ ಸುಖಾಂತ್ಯ ಕಂಡರೂ ಇದೀಗ ಅಮೆರಿಕದ ತಲೆನೋವು ಹೆಚ್ಚಾಗಿದೆ. ಕಾರಣ ಅಫಿಯಾ ಸಿದ್ಧಿಕಿ ಬಿಡುಗಡೆಗೆ ಈ ರೀತಿಯ ದಾಳಿ ನಡೆಯುವ ಸಾಧ್ಯತೆ ಹೆಚ್ಚಿದೆ ಎಂದು ಅಮೆರಿಕ ಇಂಟೆಲಿಜೆನ್ಸ್ ರಿಪೋರ್ಟ್ ಮಾಡಿದೆ. 

LOC ಬಳಿ ಅಕ್ರಮವಾಗಿ ಒಳನುಗ್ಗಲು ಯತ್ನಿಸಿದ ಪಾಕ್‌ ಯೋಧನ ಹತ್ಯೆ

ಯಾರು ಈ ಅಫಿಯಾ ಸಿದ್ದಿಕಿ?
ಅಫಿಯಾ ಸಿದ್ದಿಕಿ ಮೂಲ ಪಾಕಿಸ್ತಾನ(Pakistan). 18 ವರ್ಷವಿದ್ದಾಗ ಅಫಿಯಾ ಸಹೋದರ ನೆರವಿನಿಂದ ನೇರವಾಗಿ ಅಮೆರಿಕಾಗ ತೆರಳಿದ್ದಾಳೆ. ಬಳಿಕ ಬೊಸ್ಟನ್‌ನ ಪ್ರತಿಷ್ಠಿತ MIT ಕಾಲೆಜಿನಲ್ಲಿ ಶಿಕ್ಷಣ ಪಡೆದಿದ್ದಾಳೆ. ನರ ವಿಜ್ಞಾನದಲ್ಲಿ  PhD ಪಡೆದಿದ್ದಾಳೆ(neuroscience). 29ರ ಹರೆಯಲ್ಲಿ ನರ ವಿಜ್ಞಾನಿಯಾಗಿ ಅಮೆರಿಕದಲ್ಲಿ ಗುರುತಿಸಿಕೊಂಡಿದ್ದಾಳೆ. ಆದರೆ 2008ರಲ್ಲಿ ಅಮೆರಿಕ ಇದೇ ನರ ವಿಜ್ಞಾನಿ ಅಫಿಯಾ ಸಿದ್ದಿಕಿಯನ್ನು ಆಫ್ಘಾನಿಸ್ತಾನದಲ್ಲಿ ಬಂಧಿಸಿತ್ತು. 2010ರಲ್ಲಿ ಅಫಿಯಾಳನ್ನು ಜೈಲಿಗಟ್ಟಿದೆ. ಸದ್ಯ ಅಫಿಯಾ ಸಿದ್ದಿಕಿ ವಯಸ್ಸು 49. 

ಏನಿದು ಪ್ರಕರಣ?
2008ರಲ್ಲಿ ಅಮೆರಿಕದ ಸೈನಿಕರ(America Soldier) ಮೇಲೆ ಗುಂಡಿನ ಸುರಿಮಳೆಗೈದ ಅಫಿಯಾ ಸಿದ್ಧಿಕಿಯನ್ನು ಬಂಧಿಸಲಾಗಿದೆ. ಆಫ್ಘಾನಿಸ್ತಾನದಲ್ಲಿದ್ದ ಅಫಿಯಾ ಸಿದ್ದಿಕಿ ಮೇಲೆ ಅಮೆರಿಕಾ ಸೇನೆ ಹದ್ದಿನ ಕಣ್ಣಿಟ್ಟಿತ್ತು. ಕಾರಣ ಈಕೆ ಉಗ್ರ ಸಂಘಟನೆ ಜೊತೆ ನೇರ ಸಂಪರ್ಕ ಹೊಂದಿದ್ದಳು. ಇಷ್ಟೇ ಅಲ್ಲ 2001ರಲ್ಲಿ ಅಮೆರಿಕದ ಅವಳಿ ಕಟ್ಟಡ ಹಾಗೂ ಪೆಂಟಗಾನ್ ಮೇಲೆ ನಡೆದ ದಾಳಿ ಹಿಂದಿನ ಮಾಸ್ಟರ್ ಮೈಂಡ್ ಇದೇ ಅಫಿಯಾ ಸಿದ್ದಿಕಿ. ಹೀಗಾಗಿ ಅಮೆರಿಕ ಸೇನೆ ಅಫ್ಘಾನಿಸ್ತಾನದಲ್ಲಿ ಈಕೆಯನ್ನು ಹಿಂಬಾಲಿಸಿತ್ತು. ಈಕೆ ತಂಗಿದ್ದ ಕೊಠಡಿ ಮೇಲೆ ದಾಳಿ ಮಾಡಿದಾಗ ಪಿಸ್ತೂಲಿನಿಂದ ಅಮೆರಿಕ ಸೈನಿಕರ ಮೇಲೆ ಗುಂಡು ಹಾರಿಸಿದ್ದಳು. ಆದರೆ ಸೈನಿಕರು ಈಕೆಯನ್ನು ಬಂಧಿಸಿತ್ತು.

PM Modi vs Pakistan 2024ರ ಚುನಾವಣೆಯಲ್ಲಿ ಮೋದಿ ಸೋಲಬೇಕು, ಭಾರತ ಕುಟುಕಿದ ಬಾಲಿವುಡ್ ಸಾಕಿ ಸಲಹಿದ ಪಾಕ್ ನಟ

ವಿಚಾರಣೆಯಲ್ಲಿ ಅಫಿಯಾ ಸಿದ್ಧಿಕಿ ಅಲೈ ಖೈದಾ ಉಗ್ರ ಸಂಘಟನೆ ಜೊತೆ ಸೇರಿ ಅಮೆರಿಕ ಅವಳಿ ಕಟ್ಟಡ, ಪೆಂಟಗಾನ್ ಮೇಲೆ ದಾಳಿಗೆ ಸಂಚು ರೂಪಿಸಿ, ಎಲ್ಲಾ ಮಾಹಿತಿಯನ್ನು ಉಗ್ರರಿಗೆ ನೀಡಿರುವುದು ಬೆಳಕಿಗೆ ಬಂದಿದೆ. ಅಮೆರಿಕದಲ್ಲಿ ಓದಿದ ಅಫಿಯಾಗೆ ಬಹುತೇಕ ಪ್ರದೇಶಗಳ ಮಾಹಿತಿ ಸ್ಪಷ್ಟವಾಗಿ ತಿಳಿದಿತ್ತು. ಈಕೆಯ ಕೊಠಡಿಯಿಂದ ಬಾಂಬ್ ಟಿಪ್ಪಣಿ, ಅಮೆರಿಕದ ಪ್ರಮುಖ ಸ್ಥಳಗಳು ಹಾಗೂ ಎಲ್ಲಿ ಬಾಂಬ್ ಬ್ಲಾಸ್ಟ್ ಮಾಡಬಹುದು ಅನ್ನೋದನ್ನು ಮಾರ್ಕಿಂಗ್ ಮಾಡಿದ ಟಿಪ್ಪಣಿಗಳು ವಶಪಡಿಸಿಕೊಳ್ಳಲಾಗಿತ್ತು.

ಅಫಿಯಾ ಸಿದ್ದಿಕಿ ಬಿಡುಗಡೆಗೆ ಪಾಕಿಸ್ತಾನ ಅವಿರತ ಪ್ರಯತ್ನ ಮಾಡಿತ್ತು. ಅಫಿಯಾ ಸಿದ್ದಿಕಿಗೆ ಪಾಕಿಸ್ತಾನ ಸರ್ಕಾರದ ನೆರವಿನಿಂದ ವಕೀಲರನ್ನು ಏರ್ಪಾಟು ಮಾಡಲಾಯಿತು. 2008ರಿಂದ 2010ರ ವರೆಗೆ ವಿಚಾರಣೆ ನಡೆದಿತ್ತು. ಪಾಕಿಸ್ತಾನ ಸರ್ಕಾರ ಮಾಸ್ಟರ್ ಪ್ಲಾನ್ ರೆಡಿ ಮಾಡಿತ್ತು.  ಅಫಿಯಾ ಸಿದ್ಧಿಕಿ ಬಿಡುಗಡೆಗಾಗಿ ಆಕೆಯ ವಕೀಲರ ಬಳಿ ಆಕೆ ಮಾನಸಿಕ ಅಸ್ವಸ್ಥೆ ಎಂದು ಬಿಂಬಿಸಲು ಸೂಚಿಸಿತ್ತು. ಆದರೆ ಈ ನಾಟಕ ಕೋರ್ಟ್‌ನಲ್ಲಿ ಕಳಚಿ ಬಿದ್ದಿತ್ತು. ಕಾರಣ ಸ್ವತಃ ಆಫಿಯಾ ಸಿದ್ದಿಕ್ ತಾನು ಮಾನಸಿಕ ಅಸ್ವಸ್ಥೆಯಲ್ಲ, ಚೆನ್ನಾಗಿದ್ದೇನೆ, ಪ್ರಕರಣ ಎದುರಿಸುತ್ತೇನೆ ಎಂದು ಹೇಳಿಕೆ ನೀಡಿದ್ದಳು. ಸಾಕ್ಷ್ಯಾಧಾರಗಳ ಆಧಾರದಲ್ಲಿ ಅಮರಿಕ ಕೋರ್ಟ್ 2010ರಲ್ಲಿ ಅಫಿಯಾ ಸಿದ್ದಿಕಿಗೆ 86 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. 

ಭಾರತದ ಕರಾವಳಿಗೆ ನುಗ್ಗಿದ್ದ ಪಾಕ್‌ ಹಡಗು, 10 ಮಂದಿ ವಶಕ್ಕೆ

ಅಮೆರಿಕ ಕೋರ್ಟ್ ತೀರ್ಪು ಪಾಕಿಸ್ತಾನದಲ್ಲಿ ಭಾರಿ ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು. ಅಮೆರಿಕ ವಿರುದ್ಧ ಪ್ರತಿಭಟನೆ, ದಂಗೆಗಳು ಆರಂಭಗೊಂಡಿತ್ತು. ಅಫಿಯಾ ಸಿದ್ದಿಕಿ ಪರ ಪಾಕಿಸ್ತಾನ ಜನ ಹಾಗೂ ಹಲವು ಉಗ್ರ ಸಂಘಟನೆಗಳು ಪಾಕಿಸ್ತಾನ ಸರ್ಕಾರದ ಮೇಲೆ ಒತ್ತಡ ಹೇರಲು ಆರಂಭಿಸಿತು.  ಹೀಗಾಗಿ ಅಂದಿನ ಪ್ರಧಾನಿ ಯೂಸುಫ್ ರಾಜಾ ಗಿಲಾನಿ ಅಫಿಯಾ ಸಿದ್ದಿಕಿ ಪಾಕಿಸ್ತಾನದ ಮಗಳು ಎಂದು ಹೇಳಿಕೆ ಬಿಡುಗಡೆ ಮಾಡಿತು. ಆದರೆ ಈ ಹೇಳಿಕೆ ವಿಶ್ವ ಮಟ್ಟದಲ್ಲಿ ಪಾಕಿಸ್ತಾನ ಮಾನವನ್ನು, ಅಸಲಿ ಮುಖವನ್ನು ಮತ್ತೊಮ್ಮೆ ಬಟಾಬಯಲು ಮಾಡಿತು. ಈಕೆಯ ಬಿಡುಗಡೆಗೆ ಪಾಕಿಸ್ತಾನ ಸತತ ಪ್ರಯತ್ನ ಮಾಡುತ್ತಿದೆ ಎಂದು ಬಹಿರಂಗ ಹೇಳಿಕೆ ಕೂಡ ಗಿಲಾನಿ ನೀಡಿದ್ದರು. ಇದರಿಂದ ಪಾಕಿಸ್ತಾನ ಬಹಿರಂಗವಾಗಿ ಭಯೋತ್ಪಾದಕ್ಕೆ ಕುಮ್ಮಕ್ಕುನೀಡುತ್ತಿದೆ ಅನ್ನೋದು ವಿಶ್ವ ಮಟ್ಟದಲ್ಲಿ ಜಗಜ್ಜಾಹೀರಾಗಿತ್ತು.

ಟೆಕ್ಸಾಸ್ ಜೈಲಿನಲ್ಲಿರುವ ಈಕೆಯ ಬಿಡುಗಡೆಗೆ ಪಾಕಿಸ್ತಾನ ಈಗಲೂ ಪ್ರಯತ್ನ ಮಾಡುತ್ತಲೇ ಇದೆ. ಆದರೆ ಸಾಧ್ಯವಾಗಿಲ್ಲ. ಹೀಗಾಗಿ ಇದೀಗ ಉಗ್ರರು ಆಕೆಯ ಬಿಡುಗಡೆಗೆ ಉಗ್ರವಾದ ಮೂಲಕ ಮಾತ್ರ ಸಾಧ್ಯ ಎಂದು ಅಮೆರಿಕ ಟೆಕ್ಸಾಸ್ ಮೇಲೆ ದಾಳಿ ನಡೆಸಿದ್ದಾರೆ. ಇದೀಗ ಇಂತಹ ದಾಳಿಗಳು ಮತ್ತೆ ಎದುರಾಗುವ ಸಾಧ್ಯತೆಗಳು ಗೋಚರಿಸಿದೆ. ಹೀಗಾಗಿ ಅಮರಿಕ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ
sculptor makeup: ಹುಡುಗರೇ ಆಹಾ ಚೂಪಾದ ಮೂಗು ಎಂಥಾ ಬ್ಯೂಟಿ ಅಂತ ಮರುಳಾಗದಿರಿ ಜೋಕೆ..!