ಟೊಂಗಾ: ಸಮುದ್ರದೊಳಗಿನ ಜ್ವಾಲಾಮುಖಿಯೊಂದು ಸ್ಫೋಟಗೊಂಡು ಬೃಹತ್ ಅಲೆಗಳು ಎದ್ದ ಪರಿಣಾಮ ಪೆಸಿಫಿಕ್ ದ್ವೀಪ ರಾಷ್ಟ್ರ(Pacific Island nation) ಟೊಂಗಾ ನ್ಯೂಜಿಲೆಂಡ್ ಹಾಗೂ ಅಮೆರಿಕಾದ( US) ಕೆಲವು ಪ್ರದೇಶಗಳಲ್ಲಿ ಸುನಾಮಿ ಎಚ್ಚರಿಕೆ ನೀಡಲಾಗಿದೆ. ಸಮುದ್ರದೊಳಗಿನ ಜ್ವಾಲಾಮುಖಿ ಸ್ಫೋಟದಿಂದ ಉಂಟಾದ ಬೃಹತ್ ಅಲೆಗಳು ಟೊಂಗಾಗೆ ಅಪ್ಪಳಿಸಿದ ವೀಡಿಯೊಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಈ ವೀಡಿಯೊಗಳು ಟೊಂಗಾದ ರಾಜಧಾನಿಯಾದ ನುಕು'ಅಲೋಫಾದ ( Nuku’alofa) ಮೇಲೆ ಬೀಳುವ ಎತ್ತರದ ಅಲೆಗಳ ದೃಶ್ಯವನ್ನು ತೋರಿಸಿದವು, ಶನಿವಾರದಂದು (ಜ.15) ನೀರೊಳಗಿನ ಜ್ವಾಲಾಮುಖಿ ಸ್ಫೋಟಗೊಂಡಿದ್ದು, ಜೊತೆಗೆ ಈ ಪ್ರದೇಶವು ಭಾರೀ ಮಳೆ, ಗುಡುಗು ಮತ್ತು ಮಿಂಚುಗಳಿಗೆ ಸಾಕ್ಷಿಯಾಯಿತು.
ಈ ವೇಳೆ ಸಮುದ್ರದಿಂದ ದಟ್ಟವಾದ ಹೊಗೆ ಎದ್ದಂತಾಗಿದ್ದು, ಇದು ಕ್ಷಣದಲ್ಲೇ ಆಕಾಶವನ್ನು ಕಪ್ಪಾಗಿಸಿತು ಮತ್ತು ಸಮುದ್ರದಲ್ಲಿ ಎದ್ದ ಶಕ್ತಿಶಾಲಿ ಅಲೆಗಳು ಸಮೀಪದ ಹಳ್ಳಿಗಳಿಗೆ ಬಂದು ಬಡಿದವು. ಮೊಣಕಾಲು ಆಳದ ನೀರಿನಿಂದ ಇಲ್ಲಿನ ಸಮುದ್ರ ಸಮೀಪದ ಬೀದಿಗಳು ಆವೃತವಾದವು. ಜ್ವಾಲಾಮುಖಿ ಸ್ಫೋಟದಿಂದಾಗಿ ಉದ್ಬವಿಸಿದ ಬೂದಿ, ಹಬೆ ಮತ್ತು ಅನಿಲ(ಗ್ಯಾಸ್)ವನ್ನು 20 ಕಿಲೋಮೀಟರ್‌ಗಳಷ್ಟು ದೂರದವರೆಗೆ ಗಾಳಿಯಲ್ಲಿ ತಳ್ಳುವ ಸ್ಫೋಟದ ಕ್ಷಣವನ್ನು ಉಪಗ್ರಹವೊಂದು ಸೆರೆಹಿಡಿದಿದೆ. ಸ್ಥಳೀಯ ಮಾಧ್ಯಮವೊಂದು , ಈ ಸ್ಫೋಟವು ಕಳೆದ ವರ್ಷ ಡಿಸೆಂಬರ್ 20 ರಂದು ಸಂಭವಿಸಿದ ಸ್ಫೋಟಕ್ಕಿಂತ ಏಳು ಪಟ್ಟು ಹೆಚ್ಚು ಶಕ್ತಿಶಾಲಿಯಾಗಿತ್ತು ಎಂದು ಹೇಳಿದೆ.
ಟೊಂಗಾದ ಹವಾಮಾನ ಇಲಾಖೆ ಸಂಜೆ 5.30 ರ ನಂತರ ಇಡೀ ಟೊಂಗಾಕ್ಕೆ ಸುನಾಮಿ ಎಚ್ಚರಿಕೆ ನೀಡಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಅಲ್ಲಿ ಫೋನ್ ಸಂಪರ್ಕಗಳು ಸ್ಥಗಿತಗೊಂಡಿವೆ. ಸಂಜೆ 5:20 ರಿಂದ 5:28 ರ ನಡುವೆ ಸಂಭವಿಸಿದ ಈ ಸ್ಫೋಟದಿಂದಾಗಿ ಕಿಟಕಿ ಬಾಗಿಲುಗಳು ಜೋರಾಗಿ ಅಲುಗಾಡಿದವು, ಮನೆಗಳು ಕೂಡ ಅಲುಗಾಡಿದ ಅನುಭವವಾಯಿತು ಗಾಳಿಯಲ್ಲಿ ಬೂದಿಯು ಆವರಿಸಿದಂತೆ ಆಯಿತು ಎಂದು ಸ್ಥಳೀಯರ ಹೇಳಿಕೆಯನ್ನು ಆಧರಿಸಿ ಮಾಧ್ಯಮಗಳು ವರದಿ ಮಾಡಿವೆ.
voMಸಂಗೀತ ಕೇಳುತ್ತಿದ್ದವರ ಮೇಲೆರಗಿಬಂದ ಸುನಾಮಿ..ವಿಡಿಯೋ..ನಮ್ಮದೇನು ಕತೆ?
ನ್ಯೂಜಿಲೆಂಡ್ ಹೆರಾಲ್ಡ್ (New Zealand Herald)ಪ್ರಕಾರ, ನುಕುವಾಲೋಫಾದಾದ್ಯಂತ ಸೈರನ್ ಮೊಳಗಿಸಿ ಎಚ್ಚರಿಕೆ ನೀಡಲಾಗಿದೆ. ಎತ್ತರದ ಪ್ರದೇಶಕ್ಕೆ ತೆರಳುವಂತೆ ಜನರಿಗೆ ಪೊಲೀಸರು ಹೇಳುತ್ತಿದ್ದಾರೆ. ಜ್ವಾಲಾಮುಖಿ ಸ್ಫೋಟದಿಂದ ಎದ್ದ ಸಂಭವನೀಯ ಸುನಾಮಿ ಅಲೆಗಳ ಭಯದಿಂದ ಜನರನ್ನು ಎತ್ತರದ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ಅಲ್ಲದೇ ಗಾಳಿಯ ಜೊತೆ ಬೂದಿ ಆವರಿಸಿಕೊಂಡಿದ್ದು, ಟೊಂಗ ದ್ವೀಪದ ಅಲ್ಲಲ್ಲಿ ಬೂದಿ ಬಂದು ಬೀಳುತ್ತಿದೆ. ಈ ಬೂದಿ ಮೋಡಗಳನ್ನು ಕೂಡ ಆವರಿಸುತ್ತಿದೆ ಎಂದು ಮಧ್ಯಮಗಳು ವರದಿ ಮಾಡಿದೆ.
ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾವಿನ್ನೂ ಆಘಾತದಲ್ಲಿದ್ದೇವೆ ನಮ್ಮ ಮನೆಗೆ ನೀರು ಬಂದಿತ್ತು. ಆದರೆ ಕುಟುಂಬ ಸುರಕ್ಷಿತವಾಗಿದ್ದರೂ ರಾತ್ರಿ ಇನ್ನೇನಾಗುವುದೋ ಎಂಬ ಚಿಂತೆಯಲ್ಲಿದ್ದೆವು. ಆಶಾದಾಯಕ ವಿಚಾರವೆಂದರೆ ನಾವು ಈಗ ಇದರಿಂದ ಹೊರಗಿದ್ದೇವೆ ಮತ್ತು ಈಗ ಯಾವುದೇ ಅಲೆಗಳಿಲ್ಲ. ಈಗ ನಮ್ಮ ಫೋನ್ ಹಾಗೂ ರೆಡಿಯೋ ಕಾರ್ಯಾಚರಿಸುತ್ತಿದೆ ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ.
2004ರ ಸುನಾಮಿ ಅಲೆಯಿಂದ ಪಾರಾಗಿದ್ದ ಅನಿಲ್ ಕುಂಬ್ಳೆ!
ನ್ಯೂಜಿಲೆಂಡ್‌ನಲ್ಲಿ 2,300km (1,400 ಮೈಲುಗಳು) ಗಿಂತ ಹೆಚ್ಚು ದೂರದಲ್ಲಿ, ಜ್ವಾಲಾಮುಖಿ ಸ್ಫೋಟದಿಂದ ಚಂಡಮಾರುತ ಹೆಚ್ಚಾಗುವ ಬಗ್ಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರು. ದೊಡ್ಡ ಜ್ವಾಲಾಮುಖಿ ಸ್ಫೋಟದ ನಂತರ ನ್ಯೂಜಿಲೆಂಡ್‌ನ ಕೆಲವು ಭಾಗಗಳಲ್ಲಿ ಹಾಗೂ ಸಮುದ್ರ ತೀರದಲ್ಲಿ ಬಲವಾದ ಹಾಗೂ ಅಸಾಮಾನ್ಯ ಪ್ರವಾಹಗಳನ್ನು ನಿರೀಕ್ಷಿಸಬಹುದು ಎಂದು ನ್ಯೂಜಿಲೆಂಡ್‌ನ ರಾಷ್ಟ್ರೀಯ ತುರ್ತು ನಿರ್ವಹಣಾ ಸಂಸ್ಥೆ ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ