
ಕರಾಚಿ: ಪಾಕಿಸ್ತಾನದ ಬಲೋಚಿಸ್ತಾನ ಪ್ರಾಂತ್ಯದಲ್ಲಿ ಆತ್ಮಾಹುತಿ ಬಾಂಬರ್ ಓರ್ವ ಪೊಲೀಸ್ ಟ್ರಕ್‌ಗೆ ತನ್ನ ಬೈಕ್ ಡಿಕ್ಕಿ ಹೊಡೆಸಿದ ಪರಿಣಾಮ ಸ್ಪೋಟ ಸಂಭವಿಸಿ, ಟ್ರಕ್‌ನಲ್ಲಿದ್ದ 9 ಪೊಲೀಸರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಪಾಕಿಸ್ತಾನದ ಬಲೋಚಿಸ್ತಾನದ (Balochistan) ಸಿಬಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಸುಸೈಡ್ ಬಾಂಬರ್ ಓರ್ವ, ತಾನು ಚಲಾಯಿಸುತ್ತಿದ್ದ ಬೈಕ್‌ನ್ನು ಉದ್ದೇಶಪೂರ್ವಕವಾಗಿ ಪೊಲೀಸರು ಪ್ರಯಾಣಿಸುತ್ತಿದ್ದ ಟ್ರಕ್‌ಗೆ (police truck) ಡಿಕ್ಕಿ ಹೊಡೆಸಿದ ಪರಿಣಾಮ ಈ ಸ್ಫೋಟ ( explosion) ಸಂಭವಿಸಿದೆ ಎಂದು ಸುದ್ದಿಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ಈ ಬಗ್ಗೆ ಅಲ್ಲಿನ ವಕ್ತಾರ ಮೆಹಮೂದ್ ಖಾನ್ ನೋಟಿಜೈ ಪ್ರತಿಕ್ರಿಯಿಸಿದ್ದು, ಬಲೋಚ್ ಪ್ರಾಂತ್ಯದ ರಾಜಧಾನಿ ಖ್ವೆಟ್ಟಾದಿಂದ (Quetta) 160 ಕಿಲೋ ಮೀಟರ್ ದೂರದಲ್ಲಿರು ಸಿಬಿ ಪ್ರದೇಶದಲ್ಲಿ ಈ ದಾಳಿ ನಡೆದಿದೆ ಎಂದು ಮಾಹಿತಿ ನೀಡಿದರು.
ಪ್ರಧಾನಿ ಮೋದಿ ಪಾಟ್ನಾ ರ‍್ಯಾಲಿ ಬಾಂಬ್ ಸ್ಫೋಟ ಪ್ರಕರಣ, ನಾಲ್ವರು ಆರೋಪಿಗಳ ಬಂಧಿಸಿದ NIA!
ಈ ದುರಂತದಲ್ಲಿ ಕನಿಷ್ಠ 7 ಪೊಲೀಸರು ಗಾಯಗೊಂಡಿದ್ದಾರೆ. ಪೊಲೀಸ್ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆದಿದೆ. ಆದರೆ ಈ ದಾಳಿಯ ಹೊಣೆಯನ್ನು ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ. ಈ ಪ್ರದೇಶದ ಮೂಲ ಜನಾಂಗವಾದ ಬಲೋಚ್ ಗೆರಿಲ್ಲಾ ಪಡೆ (Ethnic Baloch guerrillas) ಸರ್ಕಾರದ ಜೊತೆ ದಶಕದಿಂದಲೂ ಹೋರಾಟ ನಡೆಸುತ್ತಿದ್ದು, ಬಲೋಚಿಸ್ತಾನ ಪ್ರಾಂತ್ಯದ ನೈಸರ್ಗಿಕ ಸಂಪತ್ತಾದ ಇಂಧನ ಹಾಗೂ ಖನಿಜ ಸಂಪತ್ತನ್ನು ಸರ್ಕಾರ ಬಳಸಿಕೊಳ್ಳುತ್ತಿದೆ ಎಂದು ಈ ಗೆರಿಲ್ಲಾ ಸಮುದಾಯ ಆರೋಪಿಸುತ್ತಿದೆ.
ಪಾಕಿಸ್ತಾನದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಪ್ರಬಲ ಬಾಂಬ್ ಸ್ಫೋಟ
ಕಳೆದ ಜನವರಿಯಲ್ಲಷ್ಟೇ ಪಾಕಿಸ್ತಾನದ ಪೇಶಾವರದಲ್ಲಿ ಬಾಂಬ್ ಸ್ಫೋಟ ಸಂಭವಿಸಿತ್ತು. ಮಸೀದಿಯೊಳಗೆ ಪ್ರಾರ್ಥನೆ ಮಾಡುತ್ತಿದ್ದ ಸಂದರ್ಭದಲ್ಲಿ ಸ್ಫೋಟ ಸಂಭವಿಸಿದ್ದು, ಸ್ಫೋಟದ ತೀವ್ರತೆಗೆ ಮಸೀದಿಯ ಒಂದು ಭಾಗದ ಗೋಡೆ ಕುಸಿದಿತ್ತು. ಮಧ್ಯಾಹ್ನ 12 30ಕ್ಕೆ ನಡೆಯುವ ಪ್ರಾರ್ಥನೆ ವೇಳೆ ಈ ಅವಘಡ ಸಂಭವಿಸಿತ್ತು. ಈ ಅವಘಡದಲ್ಲಿ 12ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.
ಗಣರಾಜ್ಯೋತ್ಸವ ಸಂಭ್ರಮಕ್ಕೂ ಮುನ್ನ ಮಣಿಪುರದಲ್ಲಿ ಬಾಂಬ್ ಸ್ಫೋಟ, ಹಲವರಿಗೆ ಗಾಯ!
ಅಫ್ಘಾನಿಸ್ತಾನದಲ್ಲಿ ಬಾಂಬ್ ಸ್ಫೋಟ: ಏಳು ಮಂದಿ ಬಲಿ
ಕಳೆದ ಡಿಸೆಂಬರ್‌ನಲ್ಲಿ ಅಫ್ಘಾನಿಸ್ತಾನದಲ್ಲಿ ಸರ್ಕಾರಿ ಬಸ್‌ನಲ್ಲಿ ಬಾಂಬ್ ಸ್ಫೋಟಿಸಿದ ಪರಿಣಾಮ ಆರು ಸರ್ಕಾರಿ ಉದ್ಯೋಗಿಗಳು ಸೇರಿ ಏಳು ಜನ ಮೃತಪಟ್ಟಿದ್ದರು. ಸರ್ಕಾರಿ ನೌಕರರನ್ನು ಸಾಗಿಸುತ್ತಿದ್ದ ಬಸ್‌ನಲ್ಲಿ ಸ್ಫೋಟ ಸಂಭವಿಸಿದ ಪರಿಣಾಮ ಈ ದುರಂತ ಸಂಭವಿಸಿದೆ. ಅಫ್ಘಾನಿಸ್ತಾನದ ಉತ್ತರ ಬಾಲ್ಖ್ ಪ್ರಾಂತ್ಯದ ರಾಜಧಾನಿಯಾದ ಮಜರ್-ಇ-ಶರೀಫ್‌ನಲ್ಲಿ ಈ ಅವಘಡ ಸಂಭವಿಸಿತ್ತು. ಇದೊಂದು ರಸ್ತೆ ಬದಿ ಹುದುಗಿಸಿದ ನೆಲಬಾಂಬು ಆಗಿದ್ದು, ಬಸ್ ಆ ಮಾರ್ಗದಲ್ಲಿ ಸಂಚರಿಸುತ್ತಿದ್ದಾಗ ಸ್ಫೋಟಗೊಂಡಿದೆ. ಈ ಬಸ್ ಹಿರಾಟನ್ ಗಡಿ ಪಟ್ಟಣದ ಪೆಟ್ರೋಲಿಯಂ ನಿರ್ದೇಶನಾಲಯದ ನೌಕರರನ್ನು ಕರೆದೊಯ್ಯುತ್ತಿತ್ತು. ಈ ಅವಘಡದಲ್ಲಿ ಏಳು ಜನ ಮೃತಪಟ್ಟಿದ್ದಾರೆ ಆರಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪ್ರಾಂತೀಯ ಪೊಲೀಸ್ ವಕ್ತಾರ ಮೊಹಮ್ಮದ್ ಆಸಿಫ್ ವಜಿರಿ (Mohammad Asif Waziri) ತಿಳಿಸಿದ್ದರು. ಈ ಸ್ಫೋಟ ಸಂಭವಿಸಿದ ವೇಳೆ ಈ ಸರ್ಕಾರಿ ನೌಕರರು ಬಸ್‌ನಲ್ಲಿ ತಮ್ಮ ಕಚೇರಿಗೆ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ. ಈ ಸ್ಫೋಟದ ಹೊಣೆಯನ್ನು ಯಾವುದೇ ಉಗ್ರ ಸಂಘಟನೆಗಳು ಹೊತ್ತುಕೊಂಡಿರಲಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ