ಚೀನಾ ರಕ್ಷಣಾ ಬಜೆಟ್ 18 ಲಕ್ಷ ಕೋಟಿಗೆ ಏರಿಕೆಯಾಗಿದ್ದು, ಭಾರತಕ್ಕಿಂತ 3 ಪಟ್ಟು ಹೆಚ್ಚು ರಕ್ಷಣಾ ಬಜೆಟ್ ಎಂದು ತಿಳಿದುಬಂದಿದೆ. ಗಡಿಯಲ್ಲಿ ಹೆಚ್ಚು ಸೇನೆ ನಿಯೋಜನೆಗೆ ಈ ನಿರ್ಧಾರ ಎಂದು ತಿಳಿದುಬಂದಿದೆ.
ಬೀಜಿಂಗ್ (ಫೆಬ್ರವರಿ 6, 2023): ಬೀಜಿಂಗ್: ಭಾರತ- ಚೀನಾ ಗಡಿ ಸಂಘರ್ಷ ಉದ್ವಿಗ್ನ ಪರಿಸ್ಥಿತಿಯಲ್ಲಿರುವ ಬೆನ್ನಲ್ಲೇ ಸತತ 8ನೇ ವರ್ಷವೂ ಚೀನಾ ತನ್ನ ರಕ್ಷಣಾ ಬಜೆಟ್ ಅನ್ನು ಹೆಚ್ಚಿಸಿದೆ. ಪ್ರಸಕ್ತ ವರ್ಷ ಚೀನಾ ತನ್ನ ರಕ್ಷಣಾ ಬಜೆಟ್ ಪ್ರಮಾಣವನ್ನು 18 ಲಕ್ಷ ಕೋಟಿ ರೂ. ಗಳಿಗೆ ನಿಗದಿ ಮಾಡಿದೆ. ಇದು ಕಳೆದ ವರ್ಷಕ್ಕಿಂತ ಶೇ.7.2 ರಷ್ಟು ಅಧಿಕ. ಜೊತೆಗೆ 5.94 ಲಕ್ಷ ಕೋಟಿ ರೂ.ಗಳ ಭಾರತೀಯ ರಕ್ಷಣಾ ಬಜೆಟ್‌ಗಿಂತ 3 ಪಟ್ಟು ಹೆಚ್ಚಾಗಿದ್ದು, ಪ್ರಪಂಚದಲ್ಲಿ ಅತಿ ಹೆಚ್ಚು ರಕ್ಷಣಾ ಬಜೆಟ್ ಹೊಂದಿರುವ ದೇಶಗಳ ಪೈಕಿ ಮೊದಲ ಸ್ಥಾನದಲ್ಲಿ ಅಮೆರಿಕವನ್ನು ಹೊರತುಪಡಿಸಿ ಚೀನಾ ಎರಡನೇ ಸ್ಥಾನದಲ್ಲಿದೆ.
ಬಜೆಟ್ (Budget) ವೇಳೆ ಭಾರತ ಚೀನಾ (China) ಗಡಿಯ ಪೂರ್ವ ಲಡಾಖ್ (Ladakh) ಪ್ರದೇಶದ ಹೆಸರೆತ್ತದೆ ಗಡಿಗಳಲ್ಲಿ ಹೆಚ್ಚು ಸಶಸ್ತ್ರ ಪಡೆಗಳನ್ನು ನಿಯೋಜಿಸುವಂತೆ ಸೇನೆಗೆ (Army) ಸೂಚಿಸಲಾಗಿದೆ. ಚೀನಾ ಅಧ್ಯಕ್ಷ (China President) ಕ್ಸಿ ಜಿನ್‌ಪಿಂಗ್ (Xi Jinping) ರಾಷ್ಟ್ರದ ಸಮಗ್ರ ಮಿಲಿಟರಿಯ (Military) ಅಧ್ಯಕ್ಷ ಸ್ಥಾನವನ್ನೂ ಹೊಂದಿದ್ದಾರೆ. ಜಾಗತಿಕ ಪ್ರಭಾವಕ್ಕಾಗಿ ಸದಾ ವಿಶ್ವದ ದೊಡ್ಡಣ್ಣ ಅಮೆರಿಕದೊಂದಿಗೆ (United States of America) ಪೈಪೋಟಿ ನಡೆಸುವ ಚೀನಾ, ಜಿಂಗ್‌ಪಿನ್ ಅಧ್ಯಕ್ಷತೆಯಲ್ಲಿ ಮುಂದಿನ ಕೆಲ ವರ್ಷಗಳಲ್ಲಿ ಅಮೆರಿಕ ಸೇನೆಗೆ ಸಮನಾಗಿ ಆಧುನಿಕ ಸೇನಾ ಶಸ್ತ್ರಾಸ್ತ್ರ ಹೊಂದಲಿದೆ ಎನ್ನಲಾಗಿದೆ.
ಇದನ್ನು ಓದಿ: 5.94 ಲಕ್ಷ ಕೋಟಿ ರೂ ರಕ್ಷಣಾ ಬಜೆಟ್: ಚೀನಾ, ಪಾಕ್ ಉಪಟಳ ಹೆಚ್ಚಳದಿಂದ ಅನುದಾನ ಹೆಚ್ಚಳ
ಪ್ರಪಂಚದಲ್ಲಿ ಅತಿ ಹೆಚ್ಚು ರಕ್ಷಣಾ ವೆಚ್ಚ ಮಾಡುವ ದೇಶಗಳ ಪೈಕಿ ಅಮೆರಿಕ 1, ಚೀನಾ 2, ಭಾರತ 3, ಲಂಡನ್ 4, ಹಾಗೂ ರಷ್ಯಾ 5 ನೇ ಸ್ಥಾನದಲ್ಲಿವೆ.
ಅತಿ ಹೆಚ್ಚು ಮಿಲಿಟರಿ ವೆಚ್ಚ ಹೊಂದಿದ ಟಾಪ್ 5 ದೇಶಗಳು
ಅಮೆರಿಕ - 61 ಲಕ್ಷ ಕೋಟಿ ರೂ.
ಚೀನಾ - 8 ಲಕ್ಷ ಕೋಟಿ ರೂ.
ರಷ್ಯಾ - 6.77 ಲಕ್ಷ ಕೋಟಿ ರೂ.
ಭಾರತ - 5.94 ಲಕ್ಷ ಕೋಟಿ ರೂ.
ಜರ್ಮನಿ - 5.2 ಲಕ್ಷ ಕೋಟಿ ರೂ.
ಇದನ್ನೂ ಓದಿ: ಕೇಂದ್ರ ಬಜೆಟ್ 2023-24: ರಕ್ಷಣಾ ವಲಯಕ್ಕೆ ಹೆಚ್ಚಿದ ಕೊಡುಗೆ; ಆಧುನೀಕರಣಕ್ಕೆ ಒತ್ತು..!