ಕ್ಯಾಲಿಫೋರ್ನಿಯಾದ ಚೈನೀಸ್ ನ್ಯೂ ಇಯರ್ ಪಾರ್ಟಿಯಲ್ಲಿ ಗುಂಡಿನ ದಾಳಿ: 10 ಜನರು ಬಲಿ

By Anusha KbFirst Published Jan 22, 2023, 10:32 PM IST
Highlights

ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಡೆದ ಚೈನೀಸ್ ಹೊಸ ವರ್ಷದ ಪಾರ್ಟಿಯಲ್ಲಿ ಗುಂಡಿನ ದಾಳಿ ನಡೆದಿದ್ದು, ಈ ಅವಘಡದಲ್ಲಿ  10 ಜನ ಪ್ರಾಣ ಕಳೆದುಕೊಂಡಿದ್ದು,  ಕನಿಷ್ಠ 10 ಜನ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಕ್ಯಾಲಿಫೋರ್ನಿಯಾ: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಡೆದ ಚೈನೀಸ್ ಹೊಸ ವರ್ಷದ ಪಾರ್ಟಿಯಲ್ಲಿ ಗುಂಡಿನ ದಾಳಿ ನಡೆದಿದ್ದು, ಈ ಅವಘಡದಲ್ಲಿ  10 ಜನ ಪ್ರಾಣ ಕಳೆದುಕೊಂಡಿದ್ದು,  ಕನಿಷ್ಠ 10 ಜನ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.  ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿರುವ ಏಷ್ಯಾ ನಗರದಲ್ಲಿ ಈ  ಸಾಮೂಹಿಕ ಗುಂಡಿನ ದಾಳಿಯಲ್ಲಿ ಹತ್ತು ಜನರು ಸಾವನ್ನಪ್ಪಿ ಕನಿಷ್ಠ 10 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಲೂನಾರ್ ಹೊಸ ವರ್ಷದ ಸಂಭ್ರಮದಲ್ಲಿ ಸ್ಥಳೀಯ ಸಮುದಾಯವೂ ತೊಡಗಿದ್ದಾಗ ಮಾಂಟೆರಿ ಪಾರ್ಕ್‌ನ ನೃತ್ಯ ಮಾಡುವ ಸ್ಥಳದಲ್ಲಿ ಬಂದೂಕುಧಾರಿ ದುಷ್ಕರ್ಮಿ ಗುಂಡು ಹಾರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಎರಡು ದಿನಗಳ ಈ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ 10 ಸಾವಿರಕ್ಕೂ ಹೆಚ್ಚು ಜನ ಭಾಗಿಯಾಗಿದ್ದರು. ಇದು ದಕ್ಷಿಣ ಕ್ಯಾಲಿಫೋರ್ನಿಯಾದ ಒಂದು ದೊಡ್ಡ ಸಮಾರಂಭವಾಗಿದೆ. ಘಟನೆ ನಡೆದ ಮಾಂಟೆರಿ ಪಾರ್ಕ್(Monterey Park)ಪ್ರದೇಶದಲ್ಲಿ ಸುಮಾರು 61,000 ಜನರು ವಾಸವಿದ್ದು, ಅವರಲ್ಲಿ ಹೆಚ್ಚಿನವರು ಏಷ್ಯನ್ ಅಥವಾ ಏಷ್ಯನ್ ಮೂಲದ ಅಮೆರಿಕನರಾಗಿದ್ದಾರೆ.   ಅಮೆರಿಕಾದಲ್ಲಿ(United States)ಬಂದೂಕಿನ ಹಿಂಸಾಚಾರ ದೊಡ್ಡ ಮಟ್ಟದ ಸಮಸ್ಯೆಯಾಗಿದೆ. ಗನ್ ವಯಲೆನ್ಸ್ ಆರ್ಕೈವ್ ವೆಬ್‌ಸೈಟ್‌ನ ಪ್ರಕಾರ, ಕಳೆದ ವರ್ಷ 647 ಸಾಮೂಹಿಕ ಗುಂಡಿನ ದಾಳಿಗಳು ಅಮೆರಿಕಾದಲ್ಲಿ ನಡೆದಿದೆ.

ಸಕಲೇಶಪುರ: ಮೀನು ಹಿಡಿಯುತ್ತಿದ್ದವರ ಮೇಲೆ ಗುಂಡಿನ ದಾಳಿ, ಓರ್ವನ ಸಾವು

ಶನಿವಾರ ರಾತ್ರಿ 10:20 ರ ಸುಮಾರಿಗೆ ಗುಂಡಿನ ದಾಳಿ ನಂತರ ತುರ್ತು ಕರೆಗಳು  ಬಂದಿದ್ದು, ಇದಕ್ಕೆ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ  ಎಂದು ಲಾಸ್ ಏಂಜಲೀಸ್ ಕೌಂಟಿ ಶೆರಿಫ್ ಇಲಾಖೆಯ ಕ್ಯಾಪ್ಟನ್ ಆಂಡ್ರ್ಯೂ ಮೇಯರ್ಸ್ ಅವರು ಹೇಳಿದ್ದಾರೆ. ಘಟನೆಯ ಬಳಿಕ ತುರ್ತು ಸಿಬ್ಬಂದಿ ಗಾಯಾಳುಗಳನ್ನು ಸ್ಟ್ರೇಚರ್‌ನಲ್ಲಿ ಮಲಗಿಸಿ ಆಂಬುಲೆನ್ಸ್‌ನತ್ತ ಕರೆದೊಯ್ಯುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಕಂಡು ಬಂದಿದೆ. 

ತಮ್ಮ ರೆಸ್ಟೋರೆಂಟ್‌ನತ್ತ ಮೂರು ಜನ ಓಡಿ ಬಂದು ಬಾಗಿಲು ಲಾಕ್ ಮಾಡುವಂತೆ ಹೇಳಿದರು ಎಂದು ಘಟನಾ ಸ್ಥಳದಲ್ಲಿ ಸೀಫುಡ್ ಬಾರ್ಬೆಕ್ಯೂ ರೆಸ್ಟೋರೆಂಟ್ ಹೊಂದಿರುವ ಸೀಯುಂಗ್ ವೊನ್ ಚೋಯ್ ಅವರು ಹೇಳಿದ್ದಾರೆ. ಇವರ ಜಾಗದಲ್ಲಿ ಆಶ್ರಯ ಪಡೆದ ಜನರು ಈ ಪ್ರದೇಶದಲ್ಲಿ ಮೆಷಿನ್ ಗನ್ (machine gun) ಹೊಂದಿರುವ ವ್ಯಕ್ತಿಯೊಬ್ಬರು ಇದ್ದಾರೆ ಎಂದು ಹೇಳಿದರು ಎಂದು ಪತ್ರಿಕೆ ಮಾಲೀಕರನ್ನು ಉಲ್ಲೇಖಿಸಿ ಲಾಸ್ ಏಂಜಲೀಸ್ ಟೈಮ್ಸ್ ವರದಿ ಮಾಡಿದೆ. 

ಶಾಲೆಯಲ್ಲಿ ಬಾಲಕನಿಂದ ಗುಂಡಿನ ದಾಳಿ: ಮಕ್ಕಳ ರಕ್ಷಿಸಿ ಹೀರೋ ಆದ ಶಿಕ್ಷಕಿ

ಇಂದು ರಾತ್ರಿ ನಮ್ಮ ನೆರೆಯ ನಗರವಾದ ಮಾಂಟೆರಿ ಪಾರ್ಕ್‌ನಲ್ಲಿ ಸಾಮೂಹಿಕ ಗುಂಡಿನ ದಾಳಿಯಲ್ಲಿ (mass shooting) ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ನಮ್ಮ ಸಂತಾಪಗಳು. ಎಂದು ಲಾಸ್ ಏಂಜಲೀಸ್ ಸಿಟಿ ಕಂಟ್ರೋಲರ್ ಕೆನ್ನೆತ್ ಮೆಜಿಯಾ ಟ್ವೀಟ್‌ ಮಾಡಿದ್ದಾರೆ.  
 

click me!