ನೇಪಾಳ ಸರ್ಕಾರ ಪತನ; ವಿಶ್ವಾಸಮತ ಯಾಚನೆಯಲ್ಲಿ ಪ್ರಧಾನಿ ಕೆಪಿ ಶರ್ಮಾಗೆ ಸೋಲು!

By Suvarna NewsFirst Published May 10, 2021, 7:12 PM IST
Highlights
  • ಕೊರೋನಾ ವೈರಸ್ ಕಾಟದ ನಡವೆ ನೇಪಾಳ ಸರ್ಕಾರ ಪತನ
  • ವಿಶ್ವಾಸಮತ ಯಾಚನೆಯಲ್ಲಿ ಪ್ರಧಾನಿ ಕೆಪಿ ಶರ್ಮಾಗೆ ಸೋಲು
  • ರಾಜೀನಾಮೆ ಸಲ್ಲಿಸಿದ ಪ್ರಧಾನಿ 

ಕಾಠ್ಮಂಡು(ಮೇ.10):  ನೇಪಾಳದಲ್ಲಿ ಕೊರೋನಾ ಆತಂಕ ಒಂದೆಡೆಯಾದರೆ, ಮತ್ತೊಂದಡೆ ರಾಜಕೀಯ ಚದುರಂಗದಾಟದಲ್ಲಿ ಬಹುದೊಡ್ಡ ಹಿನ್ನಡೆಯಾಗಿದೆ. ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ ವಿಶ್ವಾಸ ಮತ ಯಾಚನೆಯಲ್ಲಿ ಸೋಲು ಕಂಡಿದ್ದಾರೆ. ಪರಿಣಾಣ ಕೆಪಿ ಶರ್ಮಾ ಸರ್ಕಾರ ಪತನಗೊಂಡಿದೆ.

ರಾಮನ ಕುರಿತ ಓಲಿ ಹೇಳಿಕೆಗೆ ನೇಪಾಳದಲ್ಲೇ ತೀವ್ರ ಟೀಕೆ!.

ಕೆಪಿ ಶರ್ಮಾ ಅವರ ಸಿಪಿಎನ್-ಯುಎಂಎಲ್ ಹಾಗೂ ಪುಷ್ಪಕಮಲ್ ದಹಾಲ್ ಹಾಗೂ ಸಿಪಿಎನ್ ಮಾವೋವಾದಿ ಮೈತ್ರಿಕೂಟ ಸರ್ಕಾರ ರಚಿಸಿತ್ತು. ಆದರೆ ಪ್ರಚಂಡ ಪಕ್ಷ ಬೆಂಬಲ ಹಿಂಪಡೆದ ಕಾರಣ ಪ್ರಧಾನಿ ಕೆಪಿ ಶರ್ಮಾ  ಒಲಿ ಸಂಕಷ್ಟಕ್ಕೆ ಸಿಲುಕಿದ್ದರು. ಬಹುಮತ ಕಳೆದುಕೊಂಡ ಕಾರಣ, ಕೆಪಿ ಶರ್ಮಾ ವಿಶ್ವಾಸಮತ ಯಾಚನೆಗೆ ಮುಂದಾಗಿದ್ದರು. ಆದರೆ ಈ ಪ್ರಹಸನದಲ್ಲಿ ಕೆಪಿ ಶರ್ಮಾ ಸೋಲು ಕಂಡಿದ್ದಾರೆ

ಹುಟ್ಟಿ ಬೆಳದ ಮನೆಯಲ್ಲೇ ಮಲಗಿದ್ದ ನೇಪಾಳಿಗರು, ಬೆಳಗೆದ್ದಾಗ ಚೀನಾ ಪ್ರಜೆಗಳಾಗಿದ್ದರು!

69 ವರ್ಷದ ಪ್ರಧಾನಿ ಕೆಪಿ ಶರ್ಮಾ ಒಲಿ ವಿಶ್ವಾಸಮತ ಯಾಚನೆಯಲ್ಲಿ 93 ಮತಗಳನ್ನು ಪಡೆದಿದ್ದಾರೆ. ಸಂಸತ್ತಿನ 275 ಸದಸ್ಯರ ಪೈಕಿ ವಿಶ್ವಾಸ ಮತ ಗೆಲ್ಲಲು 136 ಮತ ಪಡೆಯಬೇಕಿತ್ತು. ಆದರೆ 124 ಸದಸ್ಯರು ಒಲಿ ವಿರುದ್ಧ ಮತ ಹಾಕಿದ್ದಾರೆ. ಇದೀಗ ಕೆಪಿ ಶರ್ಮಾ ಒಲಿ ರಾಜೀನಾಮೆ ಪತ್ರ ರವಾನಿಸಿದ್ದಾರೆ.

ನೇಪಾಳ ಪ್ರಧಾನಿ ಒಲಿ, ಚೀನಾಗೆ ಹೆಚ್ಚಿನ ಬೆಂಬಲ ನೀಡುತ್ತಿದ್ದಾರೆ. ನೇಪಾಳದಲ್ಲಿ ಚೀನಾ ಪ್ರಾಬಲ್ಯ ಹೆಚ್ಚುತ್ತಿದೆ ಎಂದು ಕಳೆದ ವರ್ಷದಿಂದ ಮೈತ್ರಿ ಪಕ್ಷಗಳು ವಿರೋಧ ವ್ಯಕ್ತಪಡಿಸುತ್ತಲೇ ಇತ್ತು. ಇನ್ನು ಭಾರತದ ಜೊತೆಗಿನ ಸಂಬಂಧ ಕುರಿತು ಒಲಿ ವಿರುದ್ಧ ಮೈತ್ರಿ ಪಕ್ಷಗಳೇ ತಿರುಗಿಬಿದ್ದಿತ್ತು. 

click me!