
ನ್ಯೂಯಾರ್ಕ್(ಮೇ.09); ಅಮೆರಿಕ ಶ್ವೇತಭವನದ ಸೆಲೆಬ್ರೆಟಿಯಾಗಿದ್ದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಮುದ್ದಿನ ಸಾಕು ನಾಯಿ ಸಾವನ್ನಪ್ಪಿದೆ. 12 ವರ್ಷಗಳಿಂದ ಒಬಾಮಾ ಆತ್ಮೀಯ ಗೆಳೆಯನಾಗಿದ್ದ, ಪ್ರೀತಿಯ ನಾಯಿ ಕಳೆದುಕೊಂಡ ನೋವನ್ನು ಒಬಾಮಾ ತೋಡಿಕೊಂಡಿದ್ದಾರೆ.
ಬಾಲ್ಯದಲ್ಲಿ ರಾಮಾಯಣ, ಮಹಾಭಾರತ ಕೇಳಿದ್ದೇನೆ, ಭಾರತಕ್ಕಿದೆ ವಿಶೇಷ ಸ್ಥಾನ: ಒಬಾಮಾ
ಬರಾಕ್ ಒಬಾಮಾ ಅಮೇರಿಕ ಅಧ್ಯಕ್ಷರಾಗಿ ಆಯ್ಕೆಯಾದಾಗ ಒಬಾಮ ನಾಯಿ ಕೂಡ ಸೆಲೆಬ್ರೆಟಿಯಾಗಿತ್ತು. ಇದರ ಹೆಸರು ಬೋ. ಪೋರ್ಚುಗೀಸ್ ಮೂಲದ ನಾಯಿ ಇದಾಗಿದ್ದು, ಒಬಾಮಾ ಪ್ರೀತಿಯ, ಮುದ್ದಿನ ಸಾಕುನಾಯಿ ಇದಾಗಿತ್ತು. ಆದರೆ ಕೆಳೆದ ಕೆಲ ತಿಂಗಳುಗಳಿಂದ ಬೋ ಕ್ಯಾನ್ಸರ್‌ನಿಂದ ಬಳಲುತ್ತಿತ್ತು.
ಮುದ್ದಿನ ನಾಯಿ ಉಳಿಸಿಕೊಳ್ಳಲು ಒಬಾಮ ಸತತ ಚಿಕಿತ್ಸೆ ನೀಡಿದ್ದರು. ಈ ಕುರಿತು ಟ್ವಿಟರ್ ಮೂಲಕ ಒಬಮಾ ನೋವಿನ ಸುದ್ದಿಯನ್ನು ಖಚಿತ ಪಡಿಸಿದ್ದಾರೆ.
ನಮ್ಮ ಕುಟುಂಬ ಇಂದು ನಿಜವಾದ ಸ್ನೇಹಿತ, ನಿಷ್ಠಾವಂತ ಒಡನಾಡಿಯನ್ನು ಕಳೆದುಕೊಂಡಿದೆ. ಒಂದು ದಶಕಕ್ಕೂ ಹೆಚ್ಚು ಕಾಲ ನಮ್ಮ ಜೊತೆ ಒಡನಾಡಿಯಾಗಿದ್ದ, ನಮ್ಮ ಜೀವನದ ಭಾಗವಾಗಿದ್ದ ಬೋ ಅನುಪಸ್ಥಿತಿ ಕಾಡುತ್ತಿದೆ. ಬೋ ಸನಿಹವಿದ್ದರೆ ನಮ್ಮ ಪ್ರತಿ ದಿನ ಉತ್ತಮವಾಗಿರುತ್ತದೆ. ನಮ್ಮ ನೋವು ನಲಿವುಗಳಲ್ಲಿ ಪಾಲುದಾರನಾಗಿದ್ದ ಬೋ ನಮ್ಮನ್ನು ಅಗಲಿದ್ದಾರೆ ಎಂದು ಒಬಾಮ ಟ್ವೀಟ್ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ