ಸೆನೆಗಲ್: ಪುಟ್ಟ ಗ್ರಾಮಸಭೆಯಿಂದ ಆರಂಭವಾಗಿ ವಿಧಾನಸಭೆ, ರಾಜ್ಯಸಭೆ ಲೋಕಸಭೆ ಕಲಾಪದಲ್ಲೂ ನಮ್ಮ ಜನಪ್ರತಿನಿಧಿಗಳು ಜನರ ಸಮಸ್ಯೆಯ ಚರ್ಚೆ ವೇಳೆ ದೊಡ್ಡದಾಗಿ ಗಲಾಟೆ ಎಬ್ಬಿಸುವುದು ಸಾಮಾನ್ಯ ಎನಿಸಿದೆ. ಪ್ರತಿಪಕ್ಷ ಹಾಗೂ ಆಡಳಿತ ಪಕ್ಷದ ಜನಪ್ರತಿನಿಧಿಗಳ ಈ ಸಮರದಿಂದಾಗಿ ಕೋಟ್ಯಾಂತರ ರೂಪಾಯಿ ಜನ ಸಾಮಾನ್ಯರ ತೆರಿಗೆ ಹಣದಲ್ಲಿ ನಡೆಯುವಂತಹ ಲೋಕಸಭಾ ಕಲಾಪಗಳು, ವಿಧಾನಸಭಾ ಕಲಾಪಗಳು ವ್ಯರ್ಥವಾಗಿ ಹೋಗುತ್ತವೆ. ಜೊತೆಗೆ ಜನಪ್ರತಿನಿಧಿಗಳು ಕೂಡ ತಮ್ಮ ತಾವು ಜನಪ್ರತಿನಿಧಿಗಳು ಸಾವಿರಾರು ಜನರಿಗೆ ನಾವು ಮಾದರಿಯಾಗಿರಬೇಕು ನಮ್ಮನ್ನು ಇಡೀ ದೇಶವೇ ಗಮನಿಸುತ್ತಿರುತ್ತದೆ ಎಂದು ಮರೆತು ಪರಸ್ಪರ ಕೆಸರೆರಚಾಟದಲ್ಲಿ ತೊಡಗುತ್ತಾರೆ. ಕೆಲವೊಮ್ಮೆ ಇವು ವಿಕೋಪಕ್ಕೆ ಹೋಗಿದ್ದು ಇದೆ. ಅದೇ ರೀತಿ ಈಗ ವಿದೇಶವೊಂದರ ಸಂಸತ್‌ನಲ್ಲಿ ಜನಪ್ರತಿನಿಧಿಗಳ ಜಗಳ ಸಂಸತ್‌ನ್ನು ಗಬ್ಬೆಬ್ಬಿಸಿದೆ. ಜನಪ್ರತಿನಿಧಿಗಳು ಸಂಸತ್‌ನಲ್ಲೇ ಹೊಡೆದಾಡಿಕೊಳ್ಳುತ್ತಿರುವ ವಿಡಿಯೋದ ತುಣಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸೆನೆಗಲ್ ದೇಶದ ಮಾರ್ಯಾದೆಯನ್ನು ಜಾಗತಿಕ ಮಟ್ಟದಲ್ಲಿ ತೆಗೆದು ಹಾಕಿದೆ.
ಸಾಮಾನ್ಯವಾಗಿ ನಾವು ಭಾವಿಸುವುದು ನಮ್ಮ ಸಂಸದರು ಮಾತ್ರ ಹೀಗೆ ಕಿತ್ತಾಡುವುದು, ನಮ್ಮ ಸಂಸತ್‌ನಲ್ಲೇ ಇಂತಹ ಗಲಾಟೆಗಳು ನಡೆಯುವುದು, ದೂರದ ಬೆಟ್ಟ ನುಣ್ಣನೆ ಎಂಬಂತೆ ವಿದೇಶಗಳಲ್ಲಿ ಜನಪ್ರತಿನಿಧಿಗಳು ಭಾರಿ ಘನತೆಯಿಂದ ವರ್ತಿಸುತ್ತಾರೆ ಎಂದು ನಾವು ಭಾವಿಸುತ್ತೇವೆ. ಆದರೆ ಅದು ನಿಜವಲ್ಲ. ಅದಕ್ಕೆ ಈ ವಿಡಿಯೋವೇ ಸಾಕ್ಷಿ. ಅವರು ಕೂಡ ನಮ್ಮ ಜನಪ್ರತಿನಿಧಿಗಳಿಗಿಂತ ಒಂದು ಪಟ್ಟು ಹೆಚ್ಚೆ ಗಬ್ಬು ಗಬ್ಬಾಗಿ ವರ್ತಿಸುತ್ತಾರೆ ಎಂಬುದು ಈ ವಿಡಿಯೋದಿಂದ ಸಾಬೀತಾಗಿದೆ.
ಅಲ್ಲಿನ ಸಂಸದರೊಬ್ಬರು ಬಜೆಟ್ ಅಧಿವೇಶನದ (budget session) ನಂತರ ಸಂಸತ್‌ನ ಕಲಾಪದ ವೇಳೆ ಮಹಿಳಾ ಸಂಸದರೊಬ್ಬರ ಕೆನ್ನೆಗೆ ಬಾರಿಸಿದ್ದಾರೆ. ಇದು ಸಂಸತ್‌ನ ಬಿಸಿ ಏರಿಸಿದ್ದು, ಆಡಳಿತ ಹಾಗೂ ಪ್ರತಿಪಕ್ಷಗಳ ಸದಸ್ಯರು ಪರಸ್ಪರ ಹೊಯೈ ಕೈಗೆ ಇಳಿದಿದ್ದಾರೆ. ತನ್ನ ಕೆನ್ನೆಗೆ ಬಾರಿಸಿದ ಸಂಸದನ ಮೇಲೆ ಮಹಿಳೆ ಸಂಸದೆ ಅಲ್ಲಿದ ಛೇರೊಂದನ್ನು ಎತ್ತಿ ಬಿಸಾಕಿದ್ದಾಳೆ.
Viral Video: ಯುಪಿಯ ಕಾಸ್ಗಂಜ್‌ನಲ್ಲಿ ಕೋರ್ಟ್‌ನಲ್ಲೇ ಮಹಿಳಾ ವಕೀಲರ ಕಿತ್ತಾಟ: ಕೇಸ್ ದಾಖಲು
ಆಡಳಿತ ಪಕ್ಷ ಬೆನ್ನೊ ಬೊಕ್ಕ್ ಯಕ್ಕರ್‌ನ ( Benno Bokk Yakaar) ಮಹಿಳಾ ಸಂಸದೆ ಕಪಾಳಮೋಕ್ಷಕ್ಕೊಳಗಾದವರು. ವಿರೋಧ ಪಕ್ಷದ ಸದಸ್ಯ ಮಸ್ಸಟ ಸಂಬ್ (Massata Samb) ಸೀದಾ ಹೋಗಿ ಆಡಳಿತ ಪಕ್ಷದ ಸಂಸದೆ ಅಮಿ ಎನ್‌ಡಿಯೆ ಗ್ನಿಬೆ (Amy Ndiaye Gniby) ಅವರ ಕೆನ್ನೆಗೆ ಬಾರಿಸಿದ್ದಾರೆ. ಈ ವೇಳೆ ಸಿಟ್ಟಿಗೆದ್ದ ಗ್ನಿಬೆ ಆತನ ಮೇಲೆ ಚೇರ್ ಎಸೆದು ಆಕ್ರೋಶ ಹೊರಹಾಕಿದ್ದಾರೆ. ಈ ವೇಳೆ ಉಳಿದ ಸಂಸದರು ಅವರಿಬ್ಬರ ಜಗಳವನ್ನು ಶಾಂತಗೊಳಿಸಲು ಯತ್ನಿಸುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆ ಆಗಿದೆ. ಈ ಕಿತ್ತಾಟದ ನಂತರ ಕಲಾಪವನ್ನು ಮುಂದೂಡಲಾಗಿತ್ತು. ಈ ಕಿತ್ತಾಟ ಏಕೆ ನಡೆದಿದೆ ಎಂದು ತಿಳಿದು ಬಂದಿಲ್ಲ. ಆದರೆ ಈ ಜನ ನಾಯಕರ ಕಿತ್ತಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ.
ವಿಜಯಪುರದಲ್ಲಿ ಕೈ-ಕಮಲ ನಾಯಕರ ಕಿತ್ತಾಟ, ಎಲ್ಲವೂ ಮುಗಿದಿಲ್ಲ ಎಂಬ ಸೂಚನೆ ಕೊಟ್ಟ ವಿಜುಗೌಡ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ