ಇರಾನ್‌ನಲ್ಲಿ ಹಿಜಾಬ್ ವಿರೋಧಿ ಪ್ರತಿಭಟನೆಗಳು ವ್ಯಾಪಕವಾದ ಬೆನ್ನಲ್ಲೇ, ಮಹಿಳೆಯರಲ್ಲಿ ಹಿಜಾಬ್ ಸಂಸ್ಕೃತಿ ಪಾಲನೆ ಮತ್ತು ಇಸ್ಲಾಮಿಕ್ ಆಚರಣೆ ಪಾಲನೆ ಉಸ್ತುವಾರಿಗೆ ರಚನೆಗೊಂಡಿದ್ದ ನೈತಿಕ ಪೊಲೀಸ್ ಪಡೆಯನ್ನು ರದ್ದುಪಡಿಸಲಾಗಿದೆ.
ತೆಹ್ರಾನ್: ಇರಾನ್‌ನಲ್ಲಿ ಹಿಜಾಬ್ ವಿರೋಧಿ ಪ್ರತಿಭಟನೆಗಳು ವ್ಯಾಪಕವಾದ ಬೆನ್ನಲ್ಲೇ, ಮಹಿಳೆಯರಲ್ಲಿ ಹಿಜಾಬ್ ಸಂಸ್ಕೃತಿ ಪಾಲನೆ ಮತ್ತು ಇಸ್ಲಾಮಿಕ್ ಆಚರಣೆ ಪಾಲನೆ ಉಸ್ತುವಾರಿಗೆ ರಚನೆಗೊಂಡಿದ್ದ ನೈತಿಕ ಪೊಲೀಸ್ ಪಡೆಯನ್ನು ರದ್ದುಪಡಿಸಲಾಗಿದೆ. 2006ರಲ್ಲಿ ಅಂದಿನ ಇರಾನ್‌ನ ಕಟ್ಟರ್ ಇಸ್ಲಾಂ ಮೂಲಭೂತವಾದಿ ಅಧ್ಯಕ್ಷ ಮೊಹಮ್ಮದ್ ಅಹಮದಿನೇಜಾದ್ ಈ ಪಡೆಯನ್ನು ರಚಿಸಿದ್ದರು. ಹಿಜಾಬ್ ಧರಿಸಿಲ್ಲ ಎಂಬ ಕಾರಣಕ್ಕೆ ಕಳೆದ ಸೆಪ್ಟೆಂಬರ್‌ನಲ್ಲಿ ಮೆಹ್ಸಾ ಅಮಿನಿ ಎಂಬ ಯುವತಿಯನ್ನು ನೈತಿಕ ಪೊಲೀಸ್ ಪಡೆ ಬಂಧಿಸಿತ್ತು. ಬಳಿಕ ಅವರ ವಶದಲ್ಲೇ ಆಕೆ ಸೆ.16ರಂದು ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಳು.
ಇದಾದ ಬಳಿಕ ಹಿಜಾಬ್ ವಿರೋಧಿಸಿ ಇರಾನ್‌ನಾದ್ಯಂತ ಭಾರೀ ಪ್ರತಿಭಟನೆಗಳು (protest) ಆರಂಭವಾಗಿ, ಇರಾನ್‌ನ (Iran) ಆಡಳಿತ ಭಾರೀ ಮುಖಭಂಗಕ್ಕೆ ಒಳಗಾಗಿತ್ತು. ಜಾಗತಿಕ ಮಟ್ಟದಲ್ಲೂ ಟೀಕೆಗೆ ಒಳಗಾಗಿತ್ತು. ಅದರ ಬೆನ್ನಲ್ಲೇ ಇದೀಗ ನೈತಿಕ ಪೊಲೀಸ್ ಪಡೆ (moral police force) ರದ್ದುಗೊಳಿಸಲಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಟಾರ್ನಿ ಜನರಲ್ ಮೊಹಮ್ಮದ್ ಜಫರ್ ಮೊಂಟಾಝೇರಿ (Attorney General Mohammad Zafar Montazeri), ನ್ಯಾಯಾಂಗಕ್ಕೂ ನೈತಿಕ ಪೊಲೀಸ್ ಪಡೆಗೂ ಯಾವುದೇ ನಂಟಿಲ್ಲ ಮತ್ತು ಅದನ್ನು ರದ್ದುಪಡಿಸಲಾಗಿದೆ ಎಂದು ಹೇಳಿದ್ದಾರೆ. ಇರಾನ್‌ನಲ್ಲಿ 1979ರಿಂದಲೇ ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯರು ಹಿಜಾಬ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
FIFA World Cup 2022:ದೇಶಿ ತಂಡದ ಸೋಲನ್ನು ಸಂಭ್ರಮಿಸಿದ ಇರಾನಿಯರು, ಓರ್ವನ ಹತ್ಯೆ
FIFA World Cup ಇರಾನ್ ವಿರುದ್ದ ಇಂಗ್ಲೆಂಡ್ ಸೂಪರ್ 6, ಇಂಗ್ಲೆಂಡ್ ಅಬ್ಬರಕ್ಕೆ ಇರಾನ್ ತಬ್ಬಿಬ್ಬು
ಫಿಫಾ ವಿಶ್ವಕಪ್‌ನಲ್ಲಿ ಮತ್ತೊಂದು ವಿವಾದ, ರಾಷ್ಟ್ರಗೀತೆ ಹಾಡಲು ನಿರಾಕರಿಸಿದ ಇರಾನ್!
Iran Crisis: ಹಿಜಾಬ್ ವಿರೋಧಿಸಿದ್ದಕ್ಕೆ ಮರಣದಂಡನೆ: ಇನ್ನೂ 15ಸಾವಿರ ಜನಕ್ಕೆ ಗಲ್ಲು?