ಅಮೆರಿಕದ ವ್ಯಕ್ತಿಯೊಬ್ಬ ಫೈವ್ ಸ್ಟಾರ್ ಹೋಟೆಲ್‌ನಲ್ಲಿ ತಂಗಿದ್ದಾಗ ಆತನ ಖಾಸಗಿ ಭಾಗಕ್ಕೆ ಚೇಳು ಕಚ್ಚಿದ್ದು, ಇದರಿಂದ ಆತನ ಸಾಂಸರಿಕ ಜೀವನವೇ ಹಾಳಾಗಿದೆ ಎಂದು ಆರೋಪಿಸಿ ಹೋಟೆಲ್ ವಿರುದ್ಧ ದೂರು ದಾಖಲಿಸಿದ್ದಾರೆ.
ವಾಷಿಂಗಟನ್ ಡಿಸಿ: ಕೆಲವೊಮ್ಮ ಜೀವನದಲ್ಲಿ ಊಹೆಗೂ ಮೀರಿದ ಘಟನೆಗಳು ನಡೆಯುತ್ತವೆ. ನಂತರ ಅವುಗಳನ್ನು ಸಮರ್ಪಕವಾಗಿ ಎದುರಿಸಬೇಕಾಗುತ್ತದೆ. ಅಮೆರಿಕದ ವ್ಯಕ್ತಿಯೋರ್ವ ಫೈವ್ ಸ್ಟಾರ್ ಹೋಟೆಲ್‌ನಲ್ಲಿ ತಂಗಿದ್ದ ವೇಳೆ ಆತನ ಖಾಸಗಿ ಭಾಗಕ್ಕೆ ಚೇಳು ಕಚ್ಚಿದೆ. ಚೇಳು ಕಚ್ಚಿದ ಪರಿಣಾಮ ವ್ಯಕ್ತಿಯ ಸಾಂಸರಿಕ ಜೀವನವೇ ಹಾಳಾಗಿದೆ. ಈ ಹಿನ್ನೆಲೆ ಹೋಟೆಲ್ ವಿರುದ್ಧ ವ್ಯಕ್ತಿ ದೂರು ದಾಖಲಿಸಿದ್ದಾರೆ. ಮೈಕಲ್ ಫಾರ್ಚಿ ಎಂಬವರ ಖಾಸಗಿ ಭಾಗಕ್ಕೆ ಚೇಳು ಕಚ್ಚಿದೆ. ಡಿಸೆಂಬರ್ 2023ರಲ್ಲಿ ಅಮೆರಿಕಾದ ಲಾಸ್ ವೆಗಾಸ್‌ನಲ್ಲಿರುವ ವೆನೆಶಿಯನ್ ರೆಸಾರ್ಟ್‌ನಲ್ಲಿ ಉಳಿದುಕೊಂಡಿದ್ದರು. ರಾತ್ರಿ ಮಲಗಿದ್ದಾಗ ಇದ್ದಕ್ಕಿದಂತೆ ಖಾಸಗಿ ಭಾಗದಲ್ಲಿ ನೋವು ಶುರುವಾಗಿದೆ. ನಂತರ ನೋವು ದೇಹದ ಎಲ್ಲಾ ಭಾಗಕ್ಕೂ ನೋವು ಆವರಿಸಿದೆ. ಎದ್ದು ನೋಡಿದಾಗ ಚೇಳು ಅವರ ಮರ್ಮಾಂಗವನ್ನು ಕಚ್ಚುತ್ತಿತ್ತು. ಮೈಕೆಲ್ ದಾಖಲಿಸಿದ ದೂರಿನ ಪ್ರಕಾರ, ತೋಳು ಹಾಗೂ ತೊಡೆಯ ಸಂದಿನಲ್ಲಿ ಚೇಳು ಹಲವು ಬಾರಿ ಕಚ್ಚಿದೆ.
ಆಂಗ್ಲ ಮಾಧ್ಯಮ 8 News Now ಪ್ರಕಾರ, 62 ವರ್ಷದ ಮೈಕಲ್, ಲಾಸ್ ವೆಗಾಸ್‌ನಲ್ಲಿರುವ ವೆನೆಶಿಯನ್ ರೆಸಾರ್ಟ್ ಕೀಟ ಹಾಗೂ ಸೊಳ್ಳೆಗಳಿಂದ ತುಂಬಿದೆ. ಇದಕ್ಕಾಗಿ ರೆಸಾರ್ಟ್ ಯಾವುದೇ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳದ ಪರಿಣಾಮ ಚೇಳು ಕಚ್ಚಿದೆ. ಚೇಳು ಕಚ್ಚಿದ್ದರಿಂದ ಪೋಸ್ಟ್-ಟ್ರಾಮಾಟಿಕ್ ಸ್ಟ್ರೆಸ್ ಡಿಸಾರ್ಡರ್ (PTSD) ಮತ್ತು ಮಾನಸಿಕವಾಗಿ ನೊಂದಿದ್ದೇನೆ ಎಂದು ಮೈಕಲ್ ಹೇಳಿಕೊಂಡಿದ್ದಾರೆ. ಆ ಭಾಗದಲ್ಲಿ ಚೇಳು ಕಚ್ಚಿದ್ದರಿಂದ ನಮ್ಮ ಸಾಂಸರಿಕ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ ಎಂದು ಮೈಕಲ್ ಪತ್ನಿ ಹೇಳಿದ್ದಾರೆ.
undefined
ಇನ್ನು ವಕೀಲ ಬ್ರಯಾನ್ ವಿರಾಗ್, ಚೇಳು ಕಚ್ಚಿದ್ದರಿಂದ ಮೈಕಲ್ ಲೈಂಗಿಕ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಯಾವುದೇ ಗ್ರಾಹಕರಿಗೆ ಕೋಣೆಯನ್ನು ನೀಡುವಾಗ ಹೋಟೆಲ್ ಸಿಬ್ಬಂದಿ ರೂಮ್ ಕ್ಲೀನ್ ಮಾಡಿ ನೀಡುವುದು ಅವರ ಕರ್ತವ್ಯವಾಗಿರುತ್ತದೆ. ಆದ್ರೆ ಹೋಟೆಲ್ ಸಿಬ್ಬಂದಿ ತನ್ನ ಕರ್ತವ್ಯ ನಿರ್ವಹಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಹೇಳಿದ್ದಾರೆ.
ಈಗ ವಾಸ್ತವವಾಗಿ ಚೇಳು ಅಲ್ಲಿಗೆ ಹೇಗೆ ಬಂತು ಎಂಬುವುದು ಮುಖ್ಯವಲ್ಲ. ಅಲ್ಲಿ ಅಪಾಯಕಾರಿ ಕೀಟಗಳು ಹಾಗೂ ವಿಷಕಾರಿ ಚೇಳುಗಳಿರೋದು ಹೋಟೆಲ್ ಸಿಬ್ಬಂದಿಗೆ ಮೊದಲೇ ತಿಳಿದಿತ್ತು ಎಂಬುವುದು ನನ್ನ ಅಭಿಪ್ರಾಯವಾಗಿದೆ. ನನ್ನ ಕಕ್ಷಿದಾರರಿಗ ಹೋಟೆಲ್ ಕೋಣೆಯಲ್ಲಿ ಚೇಳು ಕಚ್ಚಿದ್ದು ನಿಜ. ಘಟನೆ ನಡೆದಾಗ ಹೋಟೆಲ್‌ನಲ್ಲಿ ನಿರ್ಮಾಣ ಕಾರ್ಯ ನಡೆಯುತ್ತಿತ್ತು ಎಂಬ ಅಂಶವನ್ನು ವಕೀಲ ವಿರಾಗ್ ತಮ್ಮ ವಾದದಲ್ಲಿ ಉಲ್ಲೇಖಿಸಿದ್ದಾರೆ.
ಪಾತಾಳಲೋಕ ನೋಡಲು ಹೋದವರಿಗಾಯ್ತು ಕೆಲವೇ ಕ್ಷಣದಲ್ಲಾಯ್ತು ಪಶ್ಚಾತ್ತಾಪ: ಹೊರಬಂತು ಭಯಾನಕ ವಿಡಿಯೋ!
ತಮ್ಮ ಪ್ರೈವೇಟ್ ಪಾರ್ಟ್‌ಗೆ ಚೇಳು ಕಚ್ಚಿದೆ ಅಂತ ಹೇಳಿದ್ರೆ ಹೋಟೆಲ್ ಸಿಬ್ಬಂದಿ ಹಾಸ್ಯ ಮಾಡಿದ್ದಾರೆ. ನಂತರ ಸಮೀಪದ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಯುಸಿಎಲ್ಎ ಆರೋಗ್ಯ ಕೇಂದ್ರದಲ್ಲಿ ಮೈಕೆಲ್ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಚೇಳು ಕಚ್ಚಿದ್ದರಿಂದ ಖಾಸಗಿ ಭಾಗಗಳಲ್ಲಿ ಗಾಯ ಮತ್ತು ನಿಮಿರುವಿಕೆ ಸಮಸ್ಯೆಯುಂಟಾಗಿದೆ ಎಂದು ವಕೀಲರು ಹೇಳಿದ್ದಾರೆ.
ಈ ಘಟನೆಯು ನನ್ನ ಕುಟುಂಬ, ನನ್ನ ಕೆಲಸ, ಎಲ್ಲದರ ಮೇಲೆ ಹೆಚ್ಚು ಪರಿಣಾಮ ಬೀರಿದೆ. ನನಗೆ ಭವಿಷ್ಯದಲ್ಲಿ ಚಿಕಿತ್ಸೆಯ ಅಗತ್ಯವಿದ್ದು, ಹಣಕಾಸಿನ ನೆರವು ಬೇಕಿದೆ. ಘಟನೆ ಬಳಿಕ ಮಾನಸಿಕ ಒತ್ತಡದಿಂದ ಬಳಲುತ್ತಿರೋದಾಗಿನ ಮೈಕಲ್ ಹೇಳಿಕೊಂಡಿದ್ದಾರೆ. ಮುಂದಿನ ಜೀವನಕ್ಕಾಗಿ ಪರಿಹಾರಕ್ಕೆ ನ್ಯಾಯಾಲಯದ ಮೊರೆ ಹೋಗಿದ್ದು, ಅರ್ಜಿಯ ವಿಚಾರಣೆ ನಡೆಯುತ್ತಿದೆ ಎಂದು ಮೈಕಲ್ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.
ಹಣದುಬ್ಬರದಿಂದ ದಿವಾಳಿಯಾದ ಪಾಕ್‌ನಲ್ಲಿ 50 ರೂ ಮಾಲ್ ಓಪನ್; ಕ್ಷಣಾರ್ಧದಲ್ಲಿಯೇ ಹಣ ಕೊಡದೇ ಲೂಟಿಗೈದ ಪಾಕಿಸ್ತಾನಿಗಳು