ವಿಮಾನದಲ್ಲಿ ಅಳುತ್ತಿದ್ದ ಮಗುವಿಗೆ ಬುದ್ಧಿ ಕಲಿಸಲು ಟಾಯ್ಲೆಟ್‌ಗೆ ಹಾಕಿ ಲಾಕ್ ಮಾಡಿದ ಮಹಿಳೆ

By Anusha Kb  |  First Published Sep 2, 2024, 1:01 PM IST

ವಿಮಾನವೊಂದರಲ್ಲಿ ತನ್ನ ಪೋಷಕರೊಂದಿಗೆ ಬಂದು ಜೋರಾಗಿ ಅತ್ತು ಕರೆದು ವಿಮಾನದಲ್ಲಿ ಕೋಲಾಹಲವೆಬ್ಬಿಸಿದ ಮಗುವೊಂದನ್ನು ವಿಮಾನದಲ್ಲಿದ್ದ ಇತರ ಇಬ್ಬರು ಮಹಿಳೆಯರು ಎತ್ತಿಕೊಂಡು ಹೋಗಿ ವಿಮಾನದ ಟಾಯ್ಲೆಟ್‌ ರೂಮ್‌ ಒಳಗೆ ಹಾಕಿ ಬಂದ್ ಮಾಡಿದಂತಹ ಆಘಾತಕಾರಿ ನಡೆದಿದೆ.


ಪುಟ್ಟ ಮಕ್ಕಳು ಬಸ್‌ನಲ್ಲಿ ಅಳುವುದು ಸಾಮಾನ್ಯ. ಅದು ಬಸ್ ಆದರೂ ಸರಿಯೇ ವಿಮಾನ ರೈಲಾದರು ಸರಿಯೇ ಮಕ್ಕಳ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ. ಅದೇ ರೀತಿ ವಿಮಾನವೊಂದರಲ್ಲಿ ತನ್ನ ಪೋಷಕರೊಂದಿಗೆ ಬಂದು ಜೋರಾಗಿ ಅತ್ತು ಕರೆದು ವಿಮಾನದಲ್ಲಿ ಕೋಲಾಹಲವೆಬ್ಬಿಸಿದ ಮಗುವೊಂದನ್ನು ವಿಮಾನದಲ್ಲಿದ್ದ ಇತರ ಇಬ್ಬರು ಮಹಿಳೆಯರು ಎತ್ತಿಕೊಂಡು ಹೋಗಿ ವಿಮಾನದ ಟಾಯ್ಲೆಟ್‌ ರೂಮ್‌ ಒಳಗೆ ಹಾಕಿ ಬಂದ್ ಮಾಡಿದಂತಹ ಆಘಾತಕಾರಿ ನಡೆದಿದೆ. ಮಗುವಿನ ಅಜ್ಜಿಯ ಸಹಕಾರದಿಂದಲೇ ಈ ಘಟನೆ ನಡೆದಿದೆ ಎಂದು ಸೋಶಿಯಲ್ ಮೀಡಿಯಾಗಳಲ್ಲಿ ವರದಿ ಆಗಿವೆ.  ಅಂದಹಾಗೆ ಚೀನಾದಲ್ಲಿ ಈ ವಿಚಿತ್ರ ಘಟನೆ ನಡೆದಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಸೋಶಿಯಲ್ ಮೀಡಿಯಾಗಳಲ್ಲಿ ಈ ಕೃತ್ಯವೆಸಗಿದ ಮಹಿಳೆಯರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. 

ಗೌ ಟಿಂಗ್‌ಟಿಂಗ್ ಎಂಬ ಮಹಿಳೆ ಈ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದು, ತಾವು ಅಳುತ್ತಿರುವ ಮಗುವಿನ ತಾಯಿಗೆ ಸಹಾಯ ಮಾಡಲು ಮುಂದಾಗಿದ್ದಾಗಿ ಹೇಳಿದ್ದಾರೆ. ಆದರೆ ಅವರ ಈ ಸಹಾಯ ಈಗ ವ್ಯಾಪಕ ಟೀಕೆಗೆ ಕಾರಣವಾಗಿದೆ. ಈ ಘಟನೆ ನಡೆದ ಚೀನಾದ ಏರ್‌ಲೈನ್ಸ್‌ ವರದಿಯ ಪ್ರಕಾರ, ಅಳುತ್ತಿದ್ದ ಒಂದೂವರೆ ವರ್ಷದ ಮಗುವಿನ ಅಜ್ಜಿ, ಈ ಮಹಿಳೆಯರಿಗೆ ಈ ಅಳುವ ಮಗುವಿಗೆ ಬುದ್ದಿ ಕಲಿಸಲು ಅನುಮತಿ ನೀಡಿದ್ದರು ಎನ್ನಲಾಗಿದೆ. 

Latest Videos

ಮೂರೇ ತಾಸಲ್ಲಿ ಅತ್ಯಾಚಾರಿ ಸಿಕ್ಕಿಬಿದ್ದ, ಗುಂಡೇಟಿಗೆ ಸತ್ತ! ಅಂಥದ್ದು ಮತ್ತೆ ನಡೆಯದಂತೆ ಮಾಡಿದ ಘಟನೆ!

ಆಗಸ್ಟ್ 24 ರಂದು ಜುನೆಯೋ ಏರ್‌ಲೈನ್ಸ್‌ನ ವಿಮಾನದಲ್ಲಿ ಈ ಘಟನೆ ನಡೆದಿದೆ. ಈ ವಿಮಾನವೂ ಗುಯಂಗ್‌ನಿಂದ ಶಂಘೈಗೆ  ತೆರಳುತ್ತಿತ್ತು. ಈ ವೇಳೆ ವಿಮಾನದಲ್ಲಿ ಮಗು ಅಳಲು ಶುರು ಮಾಡಿದೆ. ಈ ವೇಳೆ ಮಗುವಿನ ಅಜ್ಜಿ ಈ ಮಹಿಳೆಯರಿಗೆ ಮಗುವನ್ನು ವಿಮಾನದ ಟಾಯ್ಲೆಟ್ ರೂಮ್‌ಗೆ ಕರೆದೊಯ್ಯಲು ಅನುಮತಿ ನೀಡಿದ್ದಾರೆ. 

ವೈರಲ್ ಆದ ವೀಡಿಯೋದಲ್ಲಿ ಮಹಿಳೆ ಮಗುವಿಗೆ ಅಳುವುದನ್ನು ನಿಲ್ಲಿಸಿದರೆ ಮಾತ್ರ ಇಲ್ಲಿಂದ ಹೊರಗೆ ಕರೆದೊಯ್ಯುವುದಾಗಿ ಹೇಳುತ್ತಾಳೆ. ಈ ವೀಡಿಯೋ ಚೀನಾದ ಸೋಶಿಯಲ್ ಮೀಡಿಯಾ ವಿಬೋ ಹಾಗೂ ಟಿಕ್ ಟಾಕ್‌ನಲ್ಲಿ ವೈರಲ್ ಆಗಿದೆ. ಅಲ್ಲದೇ ಮಹಿಳೆಯರ ಕರುಣೆ ಇಲ್ಲದ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. 

ನಾಪತ್ತೆಯಾಗಿದ್ದ ಎಂಟು ವರ್ಷದ ಬಾಲಕಿ ಎಟಿಎಂ ಸಹಾಯದಿಂದ ಮನೆ ತಲುಪಿದ್ದು ಹೇಗೆ ನೋಡಿ

ಆದರೆ ತನ್ನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರ ಟೀಕೆಗಳು ಕೇಳಿ ಬರುತ್ತಿದ್ದಂತೆ ಪ್ರತಿಕ್ರಿಯಿಸಿದ ಮಹಿಳೆ ನಾನು ಯಾವಾಗಲೂ ಪ್ರೇಕ್ಷಕಳಾಗಿ ಇರುವುದಕ್ಕಿಂತ ಕಾರ್ಯನಿರ್ವಹಿಸುವುದನ್ನು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ. ಅಲ್ಲದೇ ನಾನು ಮಗುವನ್ನು ಶಾಂತಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾರೆ. ವಿಮಾನದಲ್ಲಿ  ಮಗುವಿನ ಅರಚಾಟ ಕೇಳಲಾರದೆ ಕೆಲವು ಹಿಂದಿನ ಸೀಟುಗಳಿಗೆ ಹೋಗಲು ಆರಂಭಿಸಿದರು. ಮತ್ತೆ ಕೆಲವರು ತಮ್ಮ ಕಿವಿಗಳಿಗೆ ಪೇಪರ್ ಟಿಶ್ಯುಗಳನ್ನು ತುಂಬಿಸಿಕೊಳ್ಳುತ್ತಿದ್ದರು ಹೀಗಾಗಿ ಎಲ್ಲರೂ ಆರಾಮವಾಗಿರಬೇಕೆಂದು ತಾನು ಈ ರೀತಿ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. 
 

click me!