ಸುದ್ದಿ ನೀಡುವುದರಲ್ಲಿ ಸದಾ ಮುಂದಿರುವ ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್, ಈ ಬಾರಿ ಐತಿಹಾಸಿಕ ಹೆಜ್ಜೆ ಗುರುತನ್ನು ದೂರದ ಮಲೇಷ್ಯಾ ರಾಜಧಾನಿ ಕೌಲಾಲಂಪುರದಲ್ಲಿ ಮೂಡಿಸಿತು.
ಸುದ್ದಿ ನೀಡುವುದರಲ್ಲಿ ಸದಾ ಮುಂದಿರುವ ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್, ಈ ಬಾರಿ ಐತಿಹಾಸಿಕ ಹೆಜ್ಜೆ ಗುರುತನ್ನು ದೂರದ ಮಲೇಷ್ಯಾ ರಾಜಧಾನಿ ಕೌಲಾಲಂಪುರದಲ್ಲಿ ಮೂಡಿಸಿತು. ನಮ್ಮ ಮಾಧ್ಯಮ ಸಂಸ್ಥೆಯ ಮೂರನೇ ಅಂತಾರಾಷ್ಟ್ರೀಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆದದ್ದು ಕೌಲಾಲಂಪುರದ ಶೆರಟಾನ್ ಇಂಪೀರಿಯಲ್ ಸಭಾಂಗಣದಲ್ಲಿ, ಬಹರೇನ್ ಮತ್ತು ದುಬೈನಲ್ಲಿ ಕಾರ್ಯಕ್ರಮ ಸಂಘಟಿಸಿ ಯಶಸ್ವಿಯಾಗಿದ್ದ ನಮ್ಮ ತಂಡ ಈ ಬಾರಿ ಮಲೇಷ್ಯಾ ಇಂಡಿಯಾ ಐಕಾನಿಕ್ ಅವಾರ್ಡ್‌ನಲ್ಲೂ ಮತ್ತೆ ಅದೇ ಯಶಸ್ಸು, ಮೆಚ್ಚುಗೆ ಪಡೆದುಕೊಂಡಿತು. ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಪತ್ತೆ ಮಾಡಿ ಜಗತ್ತಿಗೆ ಪರಿಚಯಗೊಂಡ ಅನೇಕ ಸಾಧಕರು ರಾಜ್ಯ ಹಾಗೂ ರಾಷ್ಟ್ರಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಈ ಬಾರಿ ಮಲೇಷ್ಯಾದಲ್ಲೂ 25 ಅರ್ಹ ಸಾಧಕರಿಗೆ ಮಲೇಷ್ಯಾ ಇಂಡಿಯಾ ಐಕಾನಿಕ್ ಅವಾರ್ಡ್ಸ್ ನೀಡಲಾಯ್ತು. ಇದನ್ನು ಸಂಘಟಿಸಲು ನಮ್ಮೊಂದಿಗೆ ಸಾಯಿ ಶುಭ್ ಟೂರ್ಸ್ ಸಂಸ್ಥೆ ಜೊತೆಯಾಗಿ ನಿಂತು ಕೆಲಸ ಮಾಡಿತು. ಮಲೇಷ್ಯಾ ಹೆಲ್ ವಿಶ್ವವಿದ್ಯಾಲಯದ ಅಧ್ಯಕ್ಷರಾದ ಡಾಟುಕ್ ಡಾ. ಪಾಲ್ ಚಾನ್, ಆಸ್ಕರ್‌ಹಾಲಿಡೇಸ್ ನ ಜಾನ್ಸನ್ ಫ್ರಾನ್ಸಿಸ್, ಟೆಲಿಪೋರ್ಟೆಕ್‌ನ ಸಿಇಓ ಚಂದ್ರಕುಮಾರನ್ ಆರ್ಮುಗಂ ಅವರು ಪ್ರಶಸ್ತಿ ಪ್ರದಾನ ನೆರವೇರಿಸಿದರು. ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಪ್ರಧಾನ ಸಂಪಾದಕರಾದ ರವಿ ಹೆಗಡೆ, ಏಷ್ಯಾನೆಟ್ ಸುವರ್ಣ ನ್ಯೂಸ್ ಸಂಪಾದಕ ಅಜಿತ್ ಹನಮಕ್ಕನವರ್ ಜೊತೆಯಾಗಿದ್ದರು. ಶಿಕ್ಷಣ, ರಾಜಕೀಯ, ವೈದ್ಯಕೀಯ, ಅಧಿಕಾರಿಗಳು, ಉದ್ಯಮಿಗಳು ಹೀಗೆ ವಿವಿಧ ಕ್ಷೇತ್ರ ವೈವಿಧ್ಯ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
undefined
ತಮಿಳುನಾಡಿನ ಎಲಗಿರಿ ಮಾದರಿಯಲ್ಲಿ ಬೆಂಗಳೂರು, ಬೀದರಲ್ಲಿ ತಲೆಯೆತ್ತಲಿವೆ ಹೊಸ ಪಕ್ಷಿಧಾಮ: ಸಚಿವ ಖಂಡ್ರೆ
ಕಾರ್ಯಕ್ರಮದ ಮಧ್ಯದಲ್ಲಿ ಮಲೇಷ್ಯಾದ ಸಾಂಸ್ಕೃತಿಕ ನೃತ್ಯ ಪ್ರದರ್ಶನ ಎಲ್ಲರಿಂದ ಚಪ್ಪಾಳೆ ಗಿಟ್ಟಿಸಿಕೊಂಡಿತು. ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ ಸರಳ, ಸಜ್ಜನ ಎಂದೇ ಗುರುತಿಸಿಕೊಂಡಿರುವ ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ಇದ್ದದ್ದು ಪ್ರಶಸ್ತಿಯ ತೂಕ ಹೆಚ್ಚಿಸಿತ್ತು. ಕಿಮ್ಮನೆ ರತ್ನಾಕರ್‌ಅವರ ಸರಳವಾಗಿ ಎಲ್ಲರೊಂದಿಗೆ ಬೆರತು ಎಲ್ಲರನ್ನ ಹುರಿದುಂಬಿಸಿ ಓಡಾಡಿದ್ದು ವಿಶೇಷವಾಗಿತ್ತು. ಮಲೇಷ್ಯಾ ಕನ್ನಡಿಗರು ದೊಡ್ಡ ಸಂಖ್ಯೆಯಲ್ಲಿ ಹಾಜರಾಗಿ ಪುರಸ್ಕೃತರನ್ನ ಹುರುದುಂಬಿಸಿದರು. ತಪ್ಪು ತಿದ್ದುವುದು ಮಾತ್ರವಲ್ಲ, ಸರಿದಾರಿಯಲ್ಲಿ ಸಾಧಿಸುವವರನ್ನ ಗುರುತಿಸಿ, ಗೌರವಿಸಿ ದೊಡ್ಡ ದನಿಯಲ್ಲಿ ಈ ಜಗತ್ತಿಗೆ ಅವರನ್ನ ಪರಿಚಯಿಸುವುದು ಕೂಡ ಮಾಧ್ಯಮಗಳ ಜವಾಬ್ದಾರಿಯೇ. ಜವಾಬ್ದಾರಿಯನ್ನು ಕನ್ನಡ ಮಾಧ್ಯಮ ಲೋಕದಲ್ಲಿ ಮೊದಲು ನಿರ್ವಹಿಸಿ ತೋರಿಸಿ, ನಿರಂತರವಾಗಿ ಮುಂದುವರೆಸಿಕೊಂಡು ಬಂದಿದೆ ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್.
ಹರೇಕಳ ಹಾಜಬ್ಬರಿಂದ ಶುರುವಾದ ಗೌರವ ಸಮ್ಮಾನ: 2006ರಲ್ಲಿ ಕಿತ್ತಲೆ ಹಣ್ಣು ಮಾರಿ ಶಾಲೆ ಕಟ್ಟಿಸಿದ್ದ ಹಾಜಬ್ಬ ಕನ್ನಡಪ್ರಭ ವರ್ಷದ ವ್ಯಕ್ತಿಯಾಗಿ ಆಯ್ಕೆ ಮಾಡುವ ಮೂಲಕ ಶುರುವಾದ ಸಾಮಾಜಿಕ ಜವಾಬ್ದಾರಿ ನಿರ್ವಹಣೆ ಇಂದು ಹತ್ತಕ್ಕೂ ಹೆಚ್ಚು ಪ್ರಶಸ್ತಿ, ಅಭಿಯಾನಗಳಿಗೆ ದಾರಿಯಾಗಿದೆ. ರೈತ ರತ್ನ, ಅಸಾಮಾನ್ಯ ಕನ್ನಡಿಗ, ಮಹಿಳಾ ಸಾಧಕಿ, ಕರ್ನಾಟಕ ಬ್ಯೂಸಿನೆಸ್ ಅವಾರ್ಡ್ಸ್, ಸುವರ್ಣ ಕನ್ನಡಿಗ ಪ್ರಶಸ್ತಿ, ಹೆಲ್ತ್ ಎಕ್ಸಲೆನ್ಸ್ ಪ್ರಶಸ್ತಿ, ಎಮಿನೆಂಟ್ ಇಂಜಿನಿಯರ್‌ಅವಾರ್ಡ್ಸ್, ಕಿರಿಯ ಸಂಪಾದಕ, ವನ್ಯಜೀವಿ ಸಂರಕ್ಷಣಾ ಅಭಿಯಾನ, ಸೆವೆನ್ ವಂಡರ್ಸ್ ಆಫ್ ಕರ್ನಾಟಕ ಅಭಿಯಾನವು ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್‌ನ ಹೆಮ್ಮೆಯ ಯೋಜನೆಗಳಾಗಿವೆ. ಬಹರೇನ್ ಇಂಡಿಯಾ ಇಂಟರ್‌ನ್ಯಾಷನಲ್ ಅವಾರ್ಡ್ಸ್ ಮೂಲಕ ಶುರುವಾದ ಅಂತಾರಾಷ್ಟ್ರೀಯ ಯಾನವು ದುಬೈ ಇಂಡಿಯಾ ಇಂಟರ್‌ನ್ಯಾಷನಲ್ ಅವಾರ್ಡ್ಸ್ ನಡೆಸುವಂತೆ ಆಗಿತ್ತು. ಇದೀಗ ಮೂರನೇ ಅಂತಾರಾಷ್ಟ್ರೀಯ ಕಾರ್ಯಕ್ರಮವು ಮಲೇಷ್ಯಾದಲ್ಲಿ ಯಶಸ್ವಿಯಾಗಿ ನೆರವೇರಿದೆ. ಸಾಧಕರು ಮತ್ತು ಸಂಘಟಕರಿಗೂ ಇದು ಹೊಸ ಬಗೆಯ ಕಾರ್ಯಕ್ರಮಕ್ಕೆ ಪ್ರೇರಣೆ ಒದಗಿಸಿದೆ.
ಹೊಸ ಹೊಸ ಮಾದರಿಗಳನ್ನು ಜಗತ್ತಿಗೆ ತೋರಿಸುವುದೇ ನಮ್ಮ ಗುರಿ: ತೆರೆ ಮರೆಯಲ್ಲೇ ನಡೆಯುವ ಹೊಸ ಸಾಧನೆ, ಹೊಸತನ, ಹೊಸ ಮಾದರಿಗಳನ್ನು ತೆರೆ ಮೇಲೆ ತರುವುದೇ ಮಾಧ್ಯಮಗಳ ಪ್ರಮುಖ ಉದ್ದೇಶ. ಕ್ಲೀಷೆಗಳನ್ನು ತೊಡೆದು ಹಾಕಿ ಹೊಸ ಮಾದರಿಗಳನ್ನು ಜಗತ್ತಿಗೆ ತೋರಿಸುವುದೇನಮ್ಮ ಗುರಿ ಎಂದು ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್‌ನ ಪ್ರಧಾನ ಸಂಪಾದಕ ರವಿ ಹೆಗಡೆ ಹೇಳಿದರು. ಮಲೇಷ್ಯಾ ರಾಜಧಾನಿ ಕೌಲಾಲಂಪುರದಲ್ಲಿ ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಸಾಯಿ ಶುಭ್ ಟೂರ್ಸ್ ಸಹಯೋಗದಲ್ಲಿ ನಡೆದ ಮಲೇಷ್ಯಾ ಇಂಡಿಯಾ ಐಕಾನಿಕ್ ಅವಾರ್ಡ್ ಪ್ರದಾನ ಸಮಾರಂಭದಲ್ಲಿ ಅವರು ಪ್ರಸ್ತಾವಿಕ ಮಾತುಗಳನ್ನಾಡಿದರು.
ಭಾರತ ಎಂದರೆ ತಾಜ್ ಮಹಲ್, ಕರ್ನಾಟಕ ಎಂದರೆ ಹಂಪಿಯ ಕಲ್ಲಿನ ರಥ, ಉದ್ಯಮಿ ಅಂದ್ರೆ ಅಜೀಂ ಪ್ರೇಮ್‌ಜಿ ಎಂಬ ಸಿದ್ಧ ಉತ್ತರಗಳನ್ನು ನಾವು ನೀಡಿ ನೀಡಿ ಅವು ಕ್ಲೀಷೆ ಎನಿಸಿಬಿಟ್ಟಿವೆ. ಅವರಷ್ಟೇ ಇನ್ನಷ್ಟು ಉತ್ತಮ ಮಾದರಿ, ವ್ಯಕ್ತಿ ವ್ಯಕ್ತಿತ್ವಗಳು ನಮ್ಮ ನಡುವೆ ಇದ್ದಾರೆ. ಅಂತಹ ತೆರೆಮರೆಯ ಸಾಧಕರನ್ನು ಜಗತ್ತಿಗೆ ಪರಿಚಯಿಸುವುದು ಮಾಧ್ಯಮಗಳ ಕೆಲಸ. ಸುದ್ದಿ ಪ್ರಸಾರ ಮಾಡುವುದು ನಮ್ಮ ವೃತ್ತಿ ಮತ್ತು ಕರ್ತವ್ಯ. ಅದರ ಜೊತೆಗೆ ಸಾಮಾಜಿ ಜವಾಬ್ದಾರಿ ನಿರ್ವಹಣೆಯು ಮುಖ್ಯ. ಇದನ್ನು ಕನ್ನಡ ಮಾಧ್ಯಮದಲ್ಲಿ ಮೊಟ್ಟಮೊದಲಿಗೆ ಆರಂಭಿಸಿದ್ದು ಕೂಡ ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್. ನೈಸರ್ಗಿಕ ಸಂಪತ್ತಿನ ರಕ್ಷಣೆಯೂ ನಮ್ಮ ಹೊಣೆ. ಅಭಿವೃದ್ಧಿಗೆ ಪೂರಕವಾಗಿ ನಡೆದುಕೊಳ್ಳುವುದು ನಮ್ಮ ಜವಾಬ್ದಾರಿಯೂ ಆಗಿದೆ.
ಕೇವಲ ಪ್ರಶಸ್ತಿ ಪ್ರದಾನ, ಪ್ರೇರಣೆ ನೀಡುವುದು ಮಾತ್ರವಲ್ಲ ವನ್ಯಜೀವಿ ಸಂರಕ್ಷಣಾ ಅಭಿಯಾನವನ್ನೂ ನಾವು ನಿರಂತರವಾಗಿ ನಡೆಸುತ್ತಿದ್ದೇವೆ ಎಂದು ವಿವರಿಸಿದರು. ತೆರೆ ಮರೆಯ ಸಾಧಕರನ್ನು ಹುಡುಕುವ ಕೆಲಸ ಸುಮಾರು 15 ವರ್ಷಗಳ ಹಿಂದೆ ಕನ್ನಡಪ್ರಭ ವರ್ಷದ ವ್ಯಕ್ತಿ ಹೆಸರಲ್ಲಿ ಆರಂಭಿಸಿದೆವು. ಮಂಗಳೂರಲ್ಲಿ ಕಿತ್ತಲೆ ಹಣ್ಣು ಮಾರುತ್ತಿದ್ದ ಹಾಜಬ್ಬ ಎಂಬ ವ್ಯಕ್ತಿ, ಕಿತ್ತಲೆ ಮಾರಿ ಬಂದ ಹಣದಲ್ಲಿ ಶಾಲೆ ಕಟ್ಟಿಸಿದ್ದ. ಈತನ ಕಾಳಜಿ ಹಾಗೂ ಸಾಧನೆಯನ್ನು ದೊಡ್ಡ ಮಟ್ಟದಲ್ಲಿ ನಾವು ಗುರುತಿಸಿದೆವು. ಆನಂತರ ಹಾಜಬ್ಬರಿಗೆ ರಾಜ್ಯ ಪ್ರಶಸ್ತಿ ಹಾಗು ಪದ್ಮಶ್ರೀ ಪ್ರಶಸ್ತಿಯೂ ಬಂತು. ಆದರೂ, ಅವರು ಎಲ್ಲರಿಗೂ ಕನ್ನಡಪ್ರಭ ವರ್ಷದ ವ್ಯಕ್ತಿ ಎಂದೇ ಹೇಳಿಕೊಳ್ಳುತ್ತಾರೆ. ಅವರಂತೆಯೇ ಅನೇಕರು ನಮ್ಮ ಮಾಧ್ಯಮದ ಪ್ರಶಸ್ತಿ ಪಡೆದ ನಂತರ ರಾಜ್ಯೋತ್ಸವ, ಪದ್ಮ ಪ್ರಶಸ್ತಿಗಳನ್ನು ಪಡೆದು ಕೊಂಡಿದ್ದಾರೆ. ಇಲ್ಲಿ ಪ್ರಶಸ್ತಿ ಸ್ವೀಕರಿಸುತ್ತಿರುವವರಿಗೂ ಆ ದೊಡ್ಡ ದೊಡ ಗೌರವಗಳು ಸಿಗಲಿ ಎಂದು ರವಿ ಹಗಡೆ ಹಾರೈಸಿದರು.
ಮುಂದಿನ ಪೀಳಿಗೆಯ ಪ್ರೇರಣೆಗಾಗಿ ಪುಸ್ತಕ ಬರೆಯಿರಿ, ಬರೆಯಿಸಿ: ಹಿಂದೆ ನಮ್ಮ ಸಮಾಜದಲ್ಲಿ ಅವಕಾಶಗಳು, ಹಣದ ತೀವ್ರ ಕೊರತೆ ಇತ್ತು. ಈಗ ಸಮಾಜದಲ್ಲಿ ಪ್ರೇರಣೆಯ ಕೊರತೆ ಕಾಡುತ್ತಿದೆ. ಸಾಮಾನ್ಯ ಕುಟುಂಬದಿಂದ ಬಂದು ಅಸಾಮಾನ್ಯ ಸಾಧನೆ ಮಾಡಿದವರು ತಮ್ಮ ಸಾಧನೆ ಸಾರಿಕೊಳ್ಳಬೇಕು. ಅದಕ್ಕಾಗಿ ನೀವೆ ನಿಮ್ಮ ಸಾಧನೆಯ ಪುಸ್ತಕವನ್ನು ಬರೆಯಿರಿ. ಬರೆಯಲು ಬರದಿದ್ದರೆ ಮತ್ತೊಬ್ಬರಿಂದಾದರೂ ಬರೆಯಿಸಿ ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್ ಸಂಪಾದಕ ಅಜಿತ್ ಹನಮಕ್ಕನವರ್ ಹೇಳಿದರು. ನಾನು ಓದುವ ಕಾಲಕ್ಕೆ ಹುಬ್ಬಳ್ಳಿಯಲ್ಲಿ ಪತ್ರಿಕೋದ್ಯಮ ಕಲಿಸುವ ಒಂದೇ ಒಂದು ಕಾಲೇಜಿತ್ತು. ಆದರೆ ಇಂದು ಹತ್ತಾರು ಕಾಲೇಜುಗಳು ಪತ್ರಿಕೋದ್ಯಮ ಕಲಿಸುತ್ತಿವೆ. ಜ್ಞಾನ ಸಂಪಾದನೆಗಾಗಿ ಎಲ್ಲೆಲ್ಲೋ ತಿರುಗಬೇಕಿತ್ತು. ಆದರೀಗ ಜ್ಞಾನ ಎಂಬುದು ಬೆರಳ ತುದಿಗೆ ಬಂದು ಕುಳಿತಿದೆ. ಜನರಲ್ಲಿ ಅಷ್ಟೋ ಇಷ್ಟೋ ದುಡ್ಡು ಕೂಡ ಸೇರಿದೆ.
3 ತಿಂಗಳಲ್ಲಿ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರ: ಇದರ ವಿಶೇಷತೆಗಳೇನು ಗೊತ್ತಾ?
ಆದರೆ ಪ್ರೇರಣೆಯ ಕೊರತೆ ಕಾಡುತ್ತಿದೆ ಎಂದರು. ಮಲೇಷ್ಯಾ ರಾಜಧಾನಿ ಕೌಲಾಲಂಪುರದಲ್ಲಿ ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಸಾಯಿ ಶುಭ್ ಟೂರ್ಸ್ ಸಹಯೋಗದಲ್ಲಿ ನಡೆದ ಮಲೇಷ್ಯಾ ಇಂಡಿಯಾ ಐಕಾನಿಕ್ ಅವಾರ್ಡ್ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಸೆಕ್ಯೂರಿಟಿಗಾರ್ಡ್ ಆಗಿದ್ದವರೊಬ್ಬರುಹೆಂಡತಿಯ ಚಿನ್ನ ಅಡವಿಟ್ಟರು. ನಂತರದಲ್ಲಿ ತಾವೇ ಚಿನ್ನ ಕೊಳ್ಳುವ ಉದ್ಯಮ ಆರಂಭಿಸಿ ಬೆಳೆದು ನಿಂತವರು ಇಂದು ನಮ್ಮ ಪ್ರಶಸ್ತಿ ಸ್ವೀಕರಿಸಿದರು. ಸೈನ್ಯದಿಂದ ನಿವೃತ್ತಿ ಆದ ಮೇಲೆ ಪತ್ನಿ ಜೊತೆ ಸೇರಿ ಸ್ಪರ್ಶ್ ಮಸಾಲ ಎಂಬ ಸಾಮ್ರಾಜ್ಯ ಕಟ್ಟಿದ್ದಾರೆ. ಇಂತಹವರೆಲ್ಲ ನಮ್ಮ ಪ್ರೇರಣೆಯಾಗಬೇಕು. ಪ್ರೇರಣೆಗಾಗಿಯೇ ನಾವು ಇಂತಹ ಕಾರ್ಯಕ್ರಮ ಸಂಘಟಿಸುತ್ತಿದ್ದೇವೆ. ಇಲ್ಲಿ ಅನೇಕ ಮಲೇಷ್ಯಾ ಕನ್ನಡಿಗರು ಬಂದಿದ್ದಾರೆ. ಮಲೇಷ್ಯಾ ಅಭಿವೃದ್ಧಿಗೆ ಅವರ ಕೊಡುಗೆ ಇದೆ. ನಮ್ಮವರು ಹೋದ ದೇಶಕ್ಕಾಗಿ, ಅಲ್ಲಿನ ಸಂಸ್ಕೃತಿಗಾಗಿ ದುಡಿಯುತ್ತಾರೆ. ಸಮರ್ಪಿಸಿಕೊಳ್ಳುತ್ತಾರೆ. ಹಾಗಾಗಿ ಯೇಹೆಚ್ಚೆಚ್ಚು ಗೌರವ ಸಂಪಾದಿಸಿದ್ದಾರೆ ಎಂದು ಸೇರಿದ್ದ ಮಲೇಷ್ಯಾ ಕನ್ನಡಿಗರೆಲ್ಲರಿಗೂ ಅಜಿತ್ ವಂದಿಸಿದರು.