
ಈಕ್ವೆಡಾರ್(ಫೆ.21) ಅಮೆಜಾನ್ ಮಳೆ ಕಾಡು ವಿಶ್ವದ ಅತೀ ದೊಡ್ಡ ಸಸ್ಯ ಸಂಕಲು ಹಾಗೂ ಪ್ರಾಣಿಸಂಕುಲದ ಆಗರ. ಅಧ್ಯಯನ, ಸಂಶೋಧನೆ ನಡೆಸಿದಷ್ಟು ಹೊಸ ಹೊಸ ಮಾಹಿತಿಗಳು ಬೆಳಕಿಗೆ ಬರುತ್ತಿದೆ. ಇದೀಗ ಇದೇ ಅಮೆಜಾನ್ ಕಾಡಿನಲ್ಲಿ ದೈತ್ಯ ಗಾತ್ರದ ಹಾವು ಪತ್ತೆಯಾಗಿದೆ. ಅನಕೊಂಡ ಹಾವಿನ ಪ್ರಬೇಧಕ್ಕೆ ಸೇರಿದ ಈ ಹಾವುಗಳು ಇದೇ ಮೊದಲ ಬಾರಿಗೆ ಪತ್ತೆಯಾಗಿದೆ. ಆದರೆ ಗಾತ್ರದಲ್ಲಿ ಅನಕೊಂಡ ಹಾವಿನ ದುಪ್ಪಟ್ಟ ಗಾತ್ರ ಹೊಂದಿದ್ದು, ಇದು ವಿಶ್ವದಲ್ಲೇ ಇದುವರೆಗೆ ಪತ್ತೆಯಾಗಿರುವ ದೈತ್ಯ ಗಾತ್ರದ ಹಾವು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.
ದಕ್ಷಿಣ ಹಸಿರು ಅನಕೊಂಡ ಹಾವಿನ ಮೇಲೆ ಅನಕೊಂಡ ಚಲನಚಿತ್ರ ಕೂಡ ಭಾರಿ ಸಂಚಲನ ಸೃಷ್ಟಿಸಿದೆ. ಇದೀಗ ಪತ್ತೆಯಾಗಿರುವುದು ಗ್ರೀನ್ ಅನಕೊಂಡ. ನ್ಯಾಷನಲ್ ಜಿಯೋಗ್ರಫಿ ವಾಹನಿ ಅಮೆಜಾನ್ ಕಾಡಿನಲ್ಲಿ ನಡೆಸುತ್ತಿದ್ದ ವಿಡಿಯೋ ಚಿತ್ರೀಕರಣದ ವೇಳೆ ದೈತ್ಯ ಹಾವು ಪತ್ತೆಯಾಗಿದೆ. ಶೂಟಿಂಗ್ ವೇಳೆ ಅಮೆಜಾನ್ ಕಾರಿನ ನದಿಯ ತಳಬಾಗದಲ್ಲಿ ಅತೀ ಉದ್ದನೆಯ ಈ ಅನಕೊಂಡ ಗ್ರೀನ್ ಹಾವು ಪತ್ತೆಯಾಗಿದೆ.
ಅಬ್ಬಬ್ಬಾ... ಅನಕೊಂಡ ಹಾವನ್ನು ಭುಜದ ಮೇಲೆ ಹೊರೋದಾ? ಈತನ ಸಾಹಸ ಎಂಥದ್ದು?
ಹಿಂಬಾಗದಿಂದ ಹಾವಿನ ತಲೆವರೆಗಿನ ವಿಡಿಯೋ ಲಭ್ಯವಿದೆ. ಅತೀ ದೊಡ್ಡ ಗಾತ್ರದ ಈ ಹಾವು ನೀರಿನ ಪ್ರದೇಶದಲ್ಲೇ ಹಚ್ಚಾಗಿ ವಾಸವಿರುತ್ತದೆ. ನೀರಿನಲ್ಲಿ ಚಲಿಸುವುದು, ಆಹಾರ ಹುಡುಕುವುದು ಸುಲಭವಾಗಿದೆ. ಬೂ ಪ್ರದೇಶದಲ್ಲಿ ಹಾವಿನ ಮೇಲೆ ಇತರ ದೈತ್ಯ ಪ್ರಾಣಿಗಳಿಂದ ದಾಳಿಯಾಗುವ ಸಾಧ್ಯತೆ ಹೆಚ್ಚು.
ಈ ಹಾವಿನ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಅತೀ ಉದ್ದನೆಯ ಹಾವು ಇದಾಗಿದ್ದು, 500 ಕೆಜಿಗೂ ಹೆಚ್ಚಿನ ತೂಕವಿದೆ ಎಂದು ಅಂದಾಜಿಸಲಾಗಿದೆ. 26ಅಡಿಗೂ ಹೆಚ್ಚ ಉದ್ದ ಹೊಂದಿದೆ. ಇಷ್ಟು ದೊಡ್ಡ ಗಾತ್ರದ ಹಾವು ಇದುವರೆಗೂ ಪತ್ತೆಯಾಗಿಲ್ಲ. ಒಂದೇ ಹಾವು ಪತ್ತೆಯಾಗಿದೆ. ಹೀಗಾಗಿ ಇದು ಅತೀ ವಿರಳ ಹಾವಿನ ಪ್ರಬೇಧ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಎಲ್ಲಿ ನೋಡಿದ್ರೂ ಬುಸ್ ಬುಸ್ ಅನ್ನುತ್ತೆ ನಾಗ, ಹೋದವರಿಗೆ ಜೀವ ಉಳಿಯುತ್ತೋ ಇಲ್ವೋ ಗೊತ್ತಾಗೋಲ್ಲ!
ಇದಕ್ಕೂ ಮೊದಲು ಪತ್ತೆಯಾಗಿರುವ ದಕ್ಷಿಣ ಗ್ರೀನ್ ಅನಕೊಂಡ ಹಾವುಗಳು ಅಮೆಜಾನ್ ಮಳೆ ಕಾಡಿನ ಬ್ರೆಜಿಲ್ ಬಾಗ, ಪೆರು, ಬೊಲಿವಿಯಾ, ಫ್ರೆಂಚ್ ಗೈನಾಗಳಲ್ಲಿ ಕಾಣಿಸಿಕೊಂಡಿದೆ. ಇನ್ನು ಉತ್ತರ ಭಾಗಗಳಾದ ಈಕ್ವೆಡಾರ್, ಕೊಲಂಬಿಯಾ ವೆನಿಜುವೆಲಾ, ಗಯಾನ ಭಾಗದಲ್ಲೂ ಕಾಣಿಸಿಕೊಂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ