ತಾನೇ ಸಾಕಿದ ಸಿಂಹಕ್ಕೆ ಆಹಾರವಾದ ಝೂ ಕೀಪರ್‌: ಸಿಂಹಕ್ಕೆ ದಯಾಮರಣ ನೀಡಿದ ಝೂ

By Anusha KbFirst Published Feb 21, 2024, 2:34 PM IST
Highlights

ಹುಟ್ಟಿದಾಗಿನಿಂದಲೂ ತನ್ನ ಸಾಕಿ ಸಲಹಿದ ಮೃಗಾಲಯ ಸಿಬ್ಬಂದಿಯೋರ್ವನನ್ನು ಸಿಂಹವೊಂದು ಕೊಂದು ಹಾಕಿದೆ. ಸಿಂಹದ ದಾಳಿಯಿಂದಲೇ ಸಾವಿಗೀಡಾದ ಮೃಗಾಲಯ ಸಿಬ್ಬಂದಿಯನ್ನು  ಒಲಬೊಡೆ ಒಲವುಯಿ ಎಂದು ಗುರುತಿಸಲಾಗಿದೆ.

ನೈಜೀರಿಯಾ:  ಹುಟ್ಟಿದಾಗಿನಿಂದಲೂ ತನ್ನ ಸಾಕಿ ಸಲಹಿದ ಮೃಗಾಲಯ ಸಿಬ್ಬಂದಿಯೋರ್ವನನ್ನು ಸಿಂಹವೊಂದು ಕೊಂದು ಹಾಕಿದೆ. ಸಿಂಹದ ದಾಳಿಯಿಂದಲೇ ಸಾವಿಗೀಡಾದ ಮೃಗಾಲಯ ಸಿಬ್ಬಂದಿಯನ್ನು  ಒಲಬೊಡೆ ಒಲವುಯಿ ಎಂದು ಗುರುತಿಸಲಾಗಿದೆ. ಈತನನ್ನು ಹತ್ಯೆ ಮಾಡಿದ ಸಿಂಹ 9 ವರ್ಷದ ಹಿಂದೆ ಜನಿಸಿತ್ತು. ಇದು ಹುಟ್ಟಿದಾಗಿನಿಂದಲೂ ಒಲಬೊಡೆ ಒಲವುಯಿ ಈ ಸಿಂಹದ ಮರಿಯ ಲಾಲನೆ ಪಾಲನೆ ಮಾಡುತ್ತಿದ್ದ. ನೈಜೀರಿಯಾದ ಒಬಾಫೆಮಿ ಅವೊಲೊವೊ ವಿಶ್ವವಿದ್ಯಾಲಯದ ಆವರಣದಲ್ಲಿರುವ ಝೂನಲ್ಲಿ ಈ ಘಟನೆ ನಡೆದಿದೆ.  ಒಬಾಫೆಮಿ ಅವೊಲೊವೊ ವಿಶ್ವವಿದ್ಯಾಲಯವೂ ದಕ್ಷಿಣ ನೈಜೀರಿಯಾದಲ್ಲಿದೆ.  ಸಿಂಹ ಹೀಗೆ ತನ್ನ ಸಾಕಿದವನ ಮೇಲೆಯೇ ದಾಳಿ ನಡೆಸಿ ಕೊಲಲ್ಲು ಕಾರಣ ಏನಿರಬಹುದು ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದು  ಒಬಾಫೆಮಿ ಅವೊಲೊವೊ ವಿಶ್ವವಿದ್ಯಾಲಯ ತನ್ನ ಪ್ರಕಟಣೆಯಲ್ಲಿ ಹೇಳಿದೆ. 

ಘಟನೆ ನಡೆಯುವ ವೇಳೆ  ಒಲಬೊಡೆ ಒಲವುಯಿ  ಸಿಂಹಕ್ಕೆ ಆಹಾರ ನೀಡುತ್ತಿದ್ದ ಎಂದು ತಿಳಿದು ಬಂದಿದೆ. ಇದೇ ವೇಳೆ ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೃಗಾಲಯದ ಇನ್ನೊಬ್ಬರು ಸಿಬ್ಬಂದಿ ಕೂಡ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ. ಒಲಬೊಡೆ ಒಲವುಯಿ ಅವರನ್ನು ಸಿಂಹದ ದಾಳಿಯಿಂದ ಉಳಿಸಲು ಅವರ ಸಹೋದ್ಯೋಗಿಗಳು ಯತ್ನಿಸಿದ್ದರಾದು ಅಷ್ಟರಲ್ಲಾಗಲೇ  ಅವರು ಗಂಭೀರವಾಗಿ ಗಾಯಗೊಂಡಿದ್ದರು ಎಂದು ಒಎಯು ಸಿಬ್ಬಂದಿ ಹೇಳಿಕೆ ಆಧರಿಸಿ ಮಾಧ್ಯಮವೊಂದು ವರದಿ ಮಾಡಿದೆ.  ಹೀಗೆ ಮೃಗಾಲಯದ ಸಿಬ್ಬಂದಿ ಮೇಲೆಯೇ ದಾಳಿ ಮಾಡಿದ ಸಿಂಹಕ್ಕೆ ದಯಾಮರಣ ನೀಡಲಾಗಿದೆ ಎಂದು ವಿಶ್ವವಿದ್ಯಾಲಯ ಹೇಳಿದೆ. 

ಬಂಗಾಳದ ಸಫಾರಿ ಪಾರ್ಕ್‌ನಲ್ಲಿ ಸಿಂಹಿಣಿ 'ಸೀತಾ' ಜೊತೆ 'ಅಕ್ಬರ್‌' ಸಿಂಹ, ಕೋರ್ಟ್‌ ಮೆಟ್ಟಿಲೇರಿದ ವಿಎಚ್‌ಪಿ!

ಆದರೆ ಖಚಿತವಲ್ಲದ ಕೆಲ ಮೂಲಗಳು ಹೇಳುವಂತೆ ಒಲಬೊಡೆ ಅವರು ಸಿಂಹಕ್ಕೆ ಆಹಾರ ನೀಡುವುದಕ್ಕಾಗಿ ಅದು ಇದ್ದ ಬೋನಿನೊಳಗೆ  ನೇರವಾಗಿ ತೆರಳಿದ್ದರು ಎಂದು ತಿಳಿದು ಬಂದಿದೆ. ಒಲಬೊಡೆ ಅವರು ಈ ಸಿಂಹವನ್ನು ಕಳೆದ 9 ವರ್ಷಗಳಿಂದ ತಾವೇ ನೋಡಿಕೊಳ್ಳುತ್ತಿದ್ದರು ಎಂದು ತಿಳಿದು ಬಂದಿದೆ.

ತಿರುಪತಿ ಮೃಗಾಲಯದಲ್ಲಿ ಸಿಂಹದ ಜೊತೆ ಸೆಲ್ಫಿ ಸಾಹಸ, ತಿಂದು ತೇಗಿದ ಕಾಡಿನ ರಾಜ!

click me!