ಕೂದಲು ನೀಡಿದ ಸುಳಿವು: ವೇಶ್ಯೆಯ 140 ಬಾರಿ ಇರಿದು ಕೊಂದ ಭಾರತೀಯನಿಗೆ 30 ವರ್ಷದ ಬಳಿಕ ಜೈಲು

By Anusha Kb  |  First Published Feb 21, 2024, 1:21 PM IST

ಸೆಕ್ಸ್ ವರ್ಕರ್ ಅಥವಾ ಲೈಂಗಿಕ ಕಾರ್ಯಕರ್ತೆಯನ್ನು  140 ಬಾರಿ ಇರಿದು ಕೊಂದ ಭಾರತೀಯ ಮೂಲದ ವ್ಯಕ್ತಿಗೆ ಘಟನೆ ನಡೆದು 30 ವರ್ಷಗಳ ನಂತರ ಜೀವಾವಧಿ ಶಿಕ್ಷೆಯಾಗಿದೆ.  ಆರೋಪಿ 51 ವರ್ಷದ ಸಂದೀಪ್ ಪಟೇಲ್ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಲಂಡನ್ ಕೋರ್ಟ್ ಜೀವಾವಧಿ ಶಿಕ್ಷೆ ಪ್ರಕಟಿಸಿದೆ


ಲಂಡನ್: ಸೆಕ್ಸ್ ವರ್ಕರ್ ಅಥವಾ ಲೈಂಗಿಕ ಕಾರ್ಯಕರ್ತೆಯನ್ನು  140 ಬಾರಿ ಇರಿದು ಕೊಂದ ಭಾರತೀಯ ಮೂಲದ ವ್ಯಕ್ತಿಗೆ ಘಟನೆ ನಡೆದು 30 ವರ್ಷಗಳ ನಂತರ ಜೀವಾವಧಿ ಶಿಕ್ಷೆಯಾಗಿದೆ.  ಆರೋಪಿ 51 ವರ್ಷದ ಸಂದೀಪ್ ಪಟೇಲ್ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಲಂಡನ್ ಕೋರ್ಟ್ ಜೀವಾವಧಿ ಶಿಕ್ಷೆ ಪ್ರಕಟಿಸಿದೆ. ಘಟನೆ ನಡೆದ ಸ್ಥಳದಲ್ಲಿ ಪತ್ತೆಯಾದ ಸಂದೀಪ್ ಪಟೇಲ್ ಬಿದ್ದಿದ್ದ ಆತನ ಒಂದು ತಲೆಕೂದಲಿನ ಎಳೆಯಿಂದಾಗಿ ಈ ಪ್ರಕರಣದಲ್ಲಿ ಈತನ ಕೈವಾಡವಿರುವುದು ಪತ್ತೆಯಾಗಿದೆ.

ವೇಶ್ಯೆಯಾಗಿ ಕೆಲಸ ಮಾಡುತ್ತಿದ್ದ ಮರೀನಾ ಕೊಪ್ಪೆಲ್ ಎಂಬಾಕೆಯನ್ನು ಈ ಸಂದೀಪ್ ಪಟೇಲ್ ಬರೋಬ್ಬರಿ 140 ಬಾರಿ ಇರಿದು ಭಯಾನಕವಾಗಿ ಹತ್ಯೆ ಮಾಡಿದ್ದ. ಲಂಡನ್‌ನ ವೆಸ್ಟ್‌ಮಿನಿಸ್ಟರ್‌ ಪ್ರದೇಶದಲ್ಲಿದ್ದ,  ಮರೀನಾ ಕೊಪ್ಪೆಲ್ ಫ್ಲಾಟ್‌ನಲ್ಲಿಯೇ ಈ ಕೊಲೆ ನಡೆದಿತ್ತು. 1994ರಲ್ಲಿ ನಡೆದ ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓಲ್ಡ್ ಬೈಲೇ ನ್ಯಾಯಾಲಯ ಈ ತೀರ್ಪು ನೀಡಿದೆ. 

Latest Videos

undefined

ಹೀರಾಮಂಡಿ: ಇದು ಅವಿಭಜಿತ ಭಾರತದ ಅತ್ಯಂತ ಪುರಾತನ ವೇಶ್ಯಾಗೃಹ

ಮರೀನಾ ಕೊಪ್ಪೆಲ್ ಧರಿಸಿದ್ದ ಉಂಗುರದಲ್ಲಿದ್ದ ಆರೋಪಿಯ ತಲೆಕೂದಲಿನ ಎಳೆಯೊಂದರ ಮೇಲೆ ಫೊರೆನ್ಸಿಕ್ಸ್ ತಂಡವು ನಡೆಸಿದ ವಿನೂತನ  ಪರೀಕ್ಷೆಗಳಿಂದಾಗಿ ಅಂತಿಮವಾಗಿ ಸಂದೀಪ್ ಪಟೇಲ್ ಅಪರಾಧಿ ಎಂದು ಸಾಬೀತುಪಡಿಸಿ ಶಿಕ್ಷೆ ನೀಡಲು ಇಷ್ಟು ವರ್ಷಗಳು ಹಿಡಿದವು ಎಂದು ಮೆಟ್ರೋಪಾಲಿಟನ್ ಪೊಲೀಸರು ಹೇಳಿದ್ದಾರೆ.

ಇದೊಂದು ಟೀಮ್ ವರ್ಕ್‌ನ ಫಲವಾಗಿದ್ದು, ಆರೋಪ ಸಾಬೀತುಪಡಿಸುವಲ್ಲಿ  ಫೋರೆನ್ಸಿಕ್ ವಿಜ್ಞಾನಿಗಳು, ಫಿಂಗರ್‌ಪ್ರಿಂಟ್ ತಜ್ಞರು, ಫೊರೆನ್ಸಿಕ್ ಮ್ಯಾನೇಜರ್ ಮತ್ತು ತನಿಖಾ ತಂಡ ಜಂಟಿಯಾಗಿ ತುಂಬಾ ಸೂಕ್ಷ್ಮವಾಗಿ ಕೆಲಸ ಮಾಡಿತ್ತು, ಇದೊಂದು ಉತ್ತಮ ಪ್ರಯತ್ನ ಎಂದು  ಆಪರೇಷನಲ್ ಫೋರೆನ್ಸಿಕ್ ಮ್ಯಾನೇಜರ್ ಮತ್ತು ಕೋಲ್ಡ್ ಕೇಸ್ ನರಹತ್ಯೆ ತನಿಖೆಯ ಮೆಟ್ ಪೋಲೀಸ್ ಫೋರೆನ್ಸಿಕ್ ಮುಖ್ಯಸ್ಥ ಡಾನ್ ಚೆಸ್ಟರ್ ಹೇಳಿದ್ದಾರೆ. 

ಕರೀನಾರಿಂದ ಆಲಿಯಾವರೆಗೆ ವೇಶ್ಯೆ ಪಾತ್ರದಲ್ಲಿ ಟಾಪ್‌ ನಟಿಯರು!

ಕೊಲೆಯಾದ ಸಮಯದಲ್ಲಿ ಮರೀನಾಗೆ 39 ವರ್ಷ ವಯಸ್ಸಾಗಿತ್ತು. ಸೆಕ್ಸ್ ವರ್ಕರ್ ಅಥವಾ ವೇಶ್ಯೆಯಾಗಿ ಕೆಲಸ ಮಾಡುತ್ತಿದ್ದ ಮರೀನಾ ಮಸಾಜ್ ಸೇವೆ ನೀಡುತ್ತಿದ್ದಳು. ವಾರಾಂತ್ಯದಲ್ಲಿ ತನ್ನ ಪತಿ ಜೊತೆ  ನಾರ್ಥಾಂಪ್ಟನ್‌ನಲ್ಲಿ ಕಾಲ ಕಳೆಯುತ್ತಿದ್ದಳು. ಲೈಂಗಿಕ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದರಿಂದ ಇದು ಅಸಾಂಪ್ರದಾಯಿಕ ಸಂಬಂಧವಾಗಿತ್ತಾದರೂ ಇಬ್ಬರೂ ಸಂತೋಷದಿಂದ ಮದುವೆಯಾಗಿದ್ದರು ಎಂದು ನ್ಯಾಯಾಲಯವು ಕೇಳಿದೆ. ತನ್ನ ದುಡಿಮೆಯಿಂದ ಆಕೆ ಕೊಲಂಬಿಯಾದಲ್ಲಿದ್ದ ತನ್ನ ಇಬ್ಬರು ಮಕ್ಕಳಿರುವ ಕುಟುಂಬವನ್ನು ಸಲಹುತ್ತಿದ್ದಳು ಎಂದು ನ್ಯಾಯಾಲಯ ಹೇಳಿದೆ.

ಫೇಮಸ್‌ ಸಿನೆಮಾ ರೈಟರ್‌ ಆಗೋಕು ಮುಂಚೆ ವೇಶ್ಯೆ, ಬಾರ್ ಡ್ಯಾನ್ಸರ್ ಆಗಿದ್ದ ಈಕೆಯ ಕಥೆಯೇ ಸಿನೆಮಾವಾಗಿ ಹಿಟ್ ಆಯ್ತು!

ಆದರೆ 1994 ರ ಆಗಸ್ಟ್  8 ರಂದು ಮರೀನಾ ಸಂವಹನಕ್ಕೂ ಸಿಗದ ಹಿನ್ನೆಲೆಯಲ್ಲಿ ಚಿಂತಿತನಾಗಿದ್ದ ಆಕೆಯ ಪತಿ  ಆಕೆ ವಾಸ ಮಾಡುತ್ತಿದ್ದ ಫ್ಲಾಟ್‌ಗೆ ಹೋಗಿ ನೋಡಿದಾಗ ಅಲ್ಲಿ ರಕ್ತದ ಮಡುವಿನಲ್ಲಿ ನಿರ್ಜೀವವಾಗಿ ಬಿದ್ದಿದ್ದ ಮರೀನಾರನ್ನು ನೋಡಿದ್ದರು. ನಂತರ ಅವರು ಪೊಲೀಸರಿಗೆ ದೂರು ನೀಡಿದ್ದರು.  ಅಪರಾಧ ನಡೆದ ಸ್ಥಳದಲ್ಲಿ ಮರೀನಾ ಕೈನಲ್ಲಿದ್ದ ಉಂಗುರದಲ್ಲಿದ್ದ ಸಣ್ಣ ಕೂದಲಿನ ಎಳೆಯೊಂದು ಕೊಲೆ ಆರೋಪಿಯನ್ನು ಪತ್ತೆ ಮಾಡುವಲ್ಲಿ ಪೊಲೀಸರಿಗೆ ಮಹತ್ವದ ಸುಳಿವು ನೀಡಿತ್ತು.  ಅಲ್ಲದೇ ಅಲ್ಲಿದ್ದ ಪ್ಲಾಸ್ಟಿಕ್ ಶಾಪಿಂಗ್ ಬ್ಯಾಗ್‌ನಲ್ಲಿ ಸಂದೀಪ್ ಪಟೇಲ್ ಬೆರಳುಗಳ ಗುರುತುಗಳಿದ್ದವು.

ಆ ಸಮಯದಲ್ಲಿ ಪಟೇಲ್‌ಗೆ 21 ವರ್ಷವಾಗಿದ್ದು, ಆತ ಕೆಲಸ ಮಾಡುತ್ತಿದ್ದ ಸ್ಥಳದಿಂದ ಬಂದಂತಹ ಬ್ಯಾಗ್ ಆದಾದ ಕಾರಣ ಅದರಲ್ಲಿ ಆತನ ಫಿಂಗರ್ ಪ್ರಿಂಟ್ ಸಾಮಾನ್ಯ ಎಂದು ಈ ಬ್ಯಾಗ್‌ನ ಸಾಕ್ಷ್ಯ ಅಷ್ಟೊಂದು ಮಹತ್ವ ಪಡೆದಿರಲಿಲ್ಲ, ಹೀಗಾಗಿ ಹಲವು ವರ್ಷಗಳ ಕಾಲ ಆರೋಪಿಯ ಸುಳಿವಿಲ್ಲದೇ ಕೇಸ ಪರಿಹಾರ ಕಾಣದೇ ಉಳಿದಿತ್ತು. 

ಆದರೆ 2008ರಲ್ಲಿ ಮರೀನಾ ಅವರ ಕೈನಲ್ಲಿದ್ದ ಉಂಗುರದಲ್ಲಿ ಸಿಲುಕಿದ್ದ ಕೂದಲೆಳೆಯನ್ನು ಪರೀಕ್ಷೆಗೊಳಪಡಿಸಲಾಗಿತ್ತು. ಆದರೂ 2022ರಲ್ಲಷ್ಟೇ ಈ ಕೂದಲಿನ ಡಿಎನ್‌ಎ ಪರೀಕ್ಷೆಗೆ ಅನುಮತಿ ಸಿಕ್ಕಿತ್ತು.  ಈ ಸಮಯದಲ್ಲಿ ಈ ಕೂದಲು ಸಂದೀಪ್ ಪಟೇಲ್‌ಗೆ ಸಂಬಂಧಿಸಿದ್ದಾಗಿತ್ತು. ಇದಾದ ನಂತರ  ಕಳೆದ ವರ್ಷ ಜನವರಿಯಲ್ಲಿ ಪಟೇಲ್‌ನನ್ನು ಪೊಲೀಸರು ಬಂಧಿಸಿದ್ದರು.  ಈಗ ನ್ಯಾಯಾಲಯ ಈ ಪ್ರಕರಣದ ತೀರ್ಪು ನೀಡಿದ್ದು, ಘಟನೆ ನಡೆದ ಬರೋಬ್ಬರಿ 30 ವರ್ಷಗಳ ನಂತರ ಆರೋಪಿಗೆ ಶಿಕ್ಷೆಯಾಗಿದೆ.

click me!