ಉಮ್ರಾ ಮತ್ತು ಹಜ್ ಯಾತ್ರೆಗಳ ವೀಸಾದ ಮೇಲೆ ಸೌದಿ ಅರೇಬಿಯಾಕ್ಕೆ ಬಂದು ಭಿಕ್ಷಾಟನೆ ಮಾಡುತ್ತಿರುವ ಪಾಕಿಸ್ತಾನಿಗಳ ಸಂಖ್ಯೆ ಹೆಚ್ಚುತ್ತಿದೆ. ಈ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಸೌದಿ, ಪಾಕಿಸ್ತಾನ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಉಮ್ರಾ ಕಾಯ್ದೆಯನ್ನು ಜಾರಿಗೆ ತರಲು ಪಾಕಿಸ್ತಾನ ಮುಂದಾಗಿದೆ.
ಇಸ್ಲಾಮಾಬಾದ್: ಧಾರ್ಮಿಕ ಯಾತ್ರೆಗಳಾದ ಉಮ್ರಾ ಮತ್ತು ಹಜ್ ಯಾತ್ರೆಗಳ ಹೆಸರಿನಲ್ಲಿ ವೀಸಾ ಪಡೆದು ಸೌದಿಗೆ ಬರುವ ಕೆಲ ಪಾಕಿಸ್ತಾನಿಗಳು ಅಲ್ಲೇ ಭಿಕ್ಷಾಟನೆಯಲ್ಲಿ ತೊಡಗಿಕೊಂಡು ಅಲ್ಲೇ ಖಾಯಂ ಆಗಿ ಉಳಿಯುತ್ತಿದ್ದಾರೆ. ಪಾಕಿಸ್ತಾನದ ಈ ಭಿಕ್ಷುಕರ ಹಾವಳಿ ಗಲ್ಫ್ ದೇಶ, ಸೌದಿ ಅರೇಬಿಯಾಗೆ ದೊಡ್ಡ ತಲೆನೋವಾಗಿದೆ. ಈ ಹಿನ್ನೆಲೆಯಲ್ಲಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಸೌದಿ ಅರೇಬಿಯಾ ಸರ್ಕಾರ ಉಮ್ರಾ ಹಾಗೂ ಹಜ್ ವೀಸಾ ನೀಡಿ ಭಿಕ್ಷುಕರನ್ನು ತನ್ನ ದೇಶಕ್ಕೆ ಕಳುಹಿಸದಂತೆ ಸ್ಟ್ರಿಕ್ಟ್ ಆಗಿ ಎಚ್ಚರಿಕೆ ನೀಡಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಧಾರ್ಮಿಕ ವೀಸಾದ ಹೆಸರಿನಲ್ಲಿ ಪಾಕಿಸ್ತಾನದಿಂದ ಅರಬ್ ದೇಶಕ್ಕೆ ಪ್ರವಾಹದಂತೆ ಭಿಕ್ಷುಕರು ಬರುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸೌದಿ ರಾಷ್ಟ್ರ ಈ ಬಗ್ಗೆ ಪಾಕಿಸ್ತಾನದ ಧಾರ್ಮಿಕ ವ್ಯವಹಾರಗಳ ಸಚಿವಾಲಯಕ್ಕೆ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದೆ ಎಂದು ಅಂಗ್ಲ ಮಾಧ್ಯಮವೊಂದು ವರದಿ ಮಾಡಿದೆ. ಒಂದು ವೇಳೆ ಇಂತಹವರ ವಿರುದ್ಧ ಸರಿಯಾದ ಕ್ರಮ ಕೈಗೊಳ್ಳದೇ ಹೋದಲ್ಲಿ, ಪಾಕಿಸ್ತಾನದಿಂದ ಉಮ್ರ್ ಹಾಗೂ ಹಜ್ ಯಾತ್ರೆಗೆ ಬರುವ ಯಾತ್ರಿಗಳ ಮೇಲೆ ಇದು ನಕರಾತ್ಮಕ ಪರಿಣಾಮ ಬೀರಲಿದೆ ಎಂದು ಸೌದಿ ಅರೇಬಿಯಾ ಎಚ್ಚರಿಸಿದೆ.
undefined
ಪಾಕ್‌ನಲ್ಲಿ ಒತ್ತುವರಿ ತೆರವಿಗೆ ಜನರ ವಿರೋಧ: ಹಿಟಾಚಿ ಡ್ರೈವರ್ ಮಾಡಿದ ಈ ಕೆಲ್ಸಕ್ಕೆ ಇಡೀ ಜಾಗ ಕ್ಷಣದಲ್ಲಿ ಖಾಲಿ !
ಸೌದಿ ಅರೇಬಿಯಾದ ಈ ಎಚ್ಚರಿಕೆಗೆ ಪ್ರತಿಯಾಗಿ ಪಾಕಿಸ್ತಾನದ ಧಾರ್ಮಿಕ ವ್ಯವಹಾರಗಳ ಸಚಿವಾಲಯ ಈ ಸಮಸ್ಯೆಯನ್ನು ಪರಿಹರಿಸಲು ಹೊಸದಾಗಿ ಉಮ್ರಾ ಕಾಯ್ದೆಯನ್ನು ಜಾರಿಗೆ ತರಲು ಮುಂದಾಗಿದೆ. ಇದು ಉಮ್ರಾ ಪ್ರವಾಸಗಳನ್ನು ಸುಗಮಗೊಳಿಸುವ ಟ್ರಾವೆಲ್ ಏಜೆನ್ಸಿಗಳನ್ನು ನಿಯಂತ್ರಿಸುವ ಗುರಿಯನ್ನು ಹೊಂದಿದ್ದು, ಅವುಗಳನ್ನು ಕಾನೂನು ಸುಪರ್ದಿಗೆ ಒಳಪಡಿಸುತ್ತದೆ ಎಂದು ತಿಳಿದು ಬಂದಿದೆ.
ಧಾರ್ಮಿಕ ತೀರ್ಥಯಾತ್ರೆಯ ನೆಪದಲ್ಲಿ ಸೌದಿ ಅರೇಬಿಯಾಕ್ಕೆ ಭಿಕ್ಷುಕರು ಪ್ರಯಾಣಿಸುವುದನ್ನು ತಡೆಯುವ ಮಾರ್ಗಗಳನ್ನು ಕಂಡುಕೊಳ್ಳುವಂತೆ ಸಚಿವಾಲಯವು ಪಾಕಿಸ್ತಾನಿ ಸರ್ಕಾರವನ್ನು ಕೇಳಿದೆ. ಇದಕ್ಕೂ ಮುನ್ನ ಸೌದಿ ರಾಯಭಾರಿ ನವಾಫ್ ಬಿನ್ ಸೈದ್ ಅಹ್ಮದ್ ಅಲ್-ಮಲ್ಕಿ ಅವರನ್ನು ಭೇಟಿ ಮಾಡಿದ ಪಾಕ್‌ನ ಆಂತರಿಕ ಸಚಿವ ಮೊಹ್ಸಿನ್ ನಖ್ವಿ ಅವರು ಸೌದಿ ಅರೇಬಿಯಾಕ್ಕೆ ಭಿಕ್ಷುಕರನ್ನು ಕಳುಹಿಸುವ ಮಾಫಿಯಾ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಅಲ್ಲದೇ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿಗೆ (ಎಫ್‌ಐಎ) ಈ ಜಾಲವನ್ನು ಭೇದಿಸುವ ಜವಾಬ್ದಾರಿಯನ್ನು ವಹಿಸಲಾಗಿದೆ, ಇದು ಪಾಕಿಸ್ತಾನದ ಇಮೇಜ್‌ಗೆ ಧಕ್ಕೆ ತರುತ್ತಿದೆ ಎಂದು ಸಚಿವ ಮೊಹ್ಸಿನ್ ಹೇಳಿದ್ದಾರೆ.
ಆಕಾಶದಲ್ಲಿ ಬರ್ತ್‌ಡೇಯಂತೆ! ಯೂಟ್ಯೂಬಲ್ಲಿ ವ್ಯೂಸ್ ಬರೋಕೆ ಏನೇನು ಮಾಡ್ತಾರೆ ನೋಡಿ!
ಪಾಕಿಸ್ತಾನದ ಭಿಕ್ಷುಕರು ಜಿಯಾರತ್ (ತೀರ್ಥಯಾತ್ರೆ) ನೆಪದಲ್ಲಿ ಮಧ್ಯಪ್ರಾಚ್ಯಕ್ಕೆ ಪ್ರಯಾಣಿಸುತ್ತಾರೆ. ಹೆಚ್ಚಿನ ಜನರು ಉಮ್ರಾ ವೀಸಾದಲ್ಲಿ ಸೌದಿ ಅರೇಬಿಯಾಕ್ಕೆ ಭೇಟಿ ನೀಡುತ್ತಾರೆ ಮತ್ತು ನಂತರ ಅಲ್ಲೇ ಭಿಕ್ಷಾಟನೆ-ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗುತ್ತಾರೆ ಎಂದು ಸಾಗರೋತ್ತರ ಪಾಕಿಸ್ತಾನಿಗಳ ಕಾರ್ಯದರ್ಶಿ ಜೀಶಾನ್ ಖಂಜಾದಾ ಕಳೆದ ವರ್ಷ ಹೇಳಿದರು.
ಹಾಗೆಯೇ ಸಾಗರೋತ್ತರ ಪಾಕಿಸ್ತಾನಿಗಳ ಕಾರ್ಯದರ್ಶಿ ಅರ್ಷದ್ ಮಹಮೂದ್ ಮಾತನಾಡಿ, ಕಳೆದ ವರ್ಷ ಹಲವಾರು ಗಲ್ಫ್ ರಾಷ್ಟ್ರಗಳು ಸಾಗರೋತ್ತರ ಪಾಕಿಸ್ತಾನಿಗಳ ನಡವಳಿಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿವೆ. ವಿಶೇಷವಾಗಿ ಕೆಲಸದ ನೀತಿಗಳು, ವರ್ತನೆಗಳು ಮತ್ತು ಅಪರಾಧ ಚಟುವಟಿಕೆಗಳಲ್ಲಿ ಅವರು ತೊಡಗಿಸಿಕೊಂಡಿವೆ. ಸಾಗರೋತ್ತರ ಪಾಕಿಸ್ತಾನಿಗಳು ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಪ್ರಕಾರ, ಸೌದಿಯಲ್ಲಿ ಸೆರೆಹಿಡಿಯಲ್ಪಟ್ಟ 90 ಪ್ರತಿಶತದಷ್ಟು ಭಿಕ್ಷುಕರು ಪಾಕಿಸ್ತಾನಕ್ಕೆ ಸೇರಿದವರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾಕ್ಕೆ ಭಿಕ್ಷುಕರನ್ನು ಕಳುಹಿಸುವ ಮಾಫಿಯಾಗಳಿಗೆ ಕಡಿವಾಣ ಹಾಕುವಂತೆ ಎಫ್‌ಐಎಗೆ ಸೂಚಿಸಲಾಗಿದೆ.