ಪಾಕ್‌ನಲ್ಲಿ ಒತ್ತುವರಿ ತೆರವಿಗೆ ಜನರ ವಿರೋಧ: ಹಿಟಾಚಿ ಡ್ರೈವರ್ ಮಾಡಿದ ಈ ಕೆಲ್ಸಕ್ಕೆ ಇಡೀ ಜಾಗ ಕ್ಷಣದಲ್ಲಿ ಖಾಲಿ !

By Anusha Kb  |  First Published Sep 24, 2024, 7:43 PM IST

ಒತ್ತುವರಿ ತೆರವಿಗೆ ಬಂದ ಹಿಟಾಚಿ ಚಾಲಕನೊಬ್ಬ ಪ್ರತಿಭಟನಾಕಾರರ ಗುಂಪನ್ನು ಚದುರಿಸಲು ಚಾಣಾಕ್ಷತನದಿಂದ ಹಿಟಾಚಿಯನ್ನು ಬಳಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಚಾಲಕನ ಸಮಯಪ್ರಜ್ಞೆಗೆ ಮೆಚ್ಚುಗೆ ವ್ಯಕ್ತವಾಗಿದೆ.


ಎಲ್ಲೇ ಆಗಲಿ ಸರ್ಕಾರ ಅಥವಾ ಸ್ಥಳೀಯಾಡಳಿತ ಒತ್ತುವರಿ ತೆರವು ಮಾಡ್ತಿದೆ ಎಂಬುದು ಗೊತ್ತಾಗ್ತಿದ್ದಂಗೆ ಅಲ್ಲಿ ಒತ್ತುವರಿ ಮಾಡಿದ್ದ ಜನರೆಲ್ಲರೂ ಸೇರಿ ಪ್ರತಿಭಟನೆ ಮಾಡೋದು ಸಾಮಾನ್ಯ. ಇದರಿಂದ ಒತ್ತುವರಿ ತೆರವು ಮಾಡುವವರಿಗೂ ಒತ್ತುವರಿದಾರರಿಗೂ ದೊಡ್ಡ ಹೋರಾಟವೇ ನಡೆಯುತ್ತದೆ. ಕೆಲವರು ಒತ್ತುವರಿಗೆ ಬಂದ ಅಧಿಕಾರಿಗಳ ಮೇಲೆಯೂ ದಾಳಿ ಮಾಡುತ್ತಾರೆ. ಪೊಲೀಸ್ ಭದ್ರತೆಯಲ್ಲಿ ಒತ್ತುವರಿ ತೆರವು ಮಾಡಬೇಕಾಗುತ್ತದೆ. ಅದೇ ರೀತಿ ಪಾಕಿಸ್ತಾನದಲ್ಲೂ ಒತ್ತುವರಿ ಮಾಡಿಕೊಂಡಿದ್ದ ಜಾಗವೊಂದರ ತೆರವಿಗೆ ಆಡಳಿತ ಮುಂದಾಗಿದೆ. ಅದರಂತೆ ಸ್ಥಳಕ್ಕೆ ಒತ್ತುವರಿ ಜಾಗವನ್ನು ಸಮಗೊಳಿಸಲು ಬೊಲ್ಡೋಜರ್‌ ಹಾಗೂ ಹಿಟಾಚಿ ವಾಹನಗಳು ಬಂದಿವೆ. ಆದರೆ ಜನ ಅಲ್ಲೂ ಕೂಡ ಒತ್ತುವರಿ ಖಂಡಿಸಿ ಪ್ರತಿಭಟನೆ ಮಾಡಿದ್ದಾರೆ. ಆದರೆ ಹಿಟಾಚಿ ಚಾಲಕ ಮಾಡಿದ ಅದೊಂದು ಕೆಲಸದಿಂದ ಅಲ್ಲಿ ಸೇರಿದ ಜನ ದಿಕ್ಕುಪಾಲಾಗಿ ಓಡಿದ್ದಾರೆ. ಹಾಗಿದ್ರೆ ಹಿಟಾಚಿ ಚಾಲಕ ಮಾಡಿದ್ದೇನು ಇಲ್ಲಿದೆ ಡಿಟೇಲ್ ಸ್ಟೋರಿ.

ವೀಡಿಯೋದಲ್ಲಿ ಕಾಣಿಸುವಂತೆ ಒತ್ತುವರಿಗೆ ಬಂದ ಹಿಟಾಚಿಯನ್ನು ನೋಡಿ ಜನ ಅಲ್ಲಿ ಸೇರಿದ್ದು, ಕೆಲವರು ಹಿಟಾಚಿಯ ಚಾಲಕ ಇದ್ದಲ್ಲಿಗೆ ಏರಿ ಆತನನ್ನು ಬೆದರಿಸಲು ನೋಡಿದ್ದಾರೆ. ಆದರೆ ಆ ಕ್ಷಣದಲ್ಲಿ ಗುಂಪು ಸೇರಿದ್ದ ಜನರಿಂದ ಪಾರಾಗುವುದಕ್ಕಾಗಿ ಹಿಟಾಚಿ ಚಾಲಕ ಒಮ್ಮಿಂದೊಮ್ಮೆಲೆ ಹಿಟಾಚಿಯ ಕೊಕ್ಕೆಯನ್ನು ಸುತ್ತಲೂ ತಿರುಗಿಸಿದ್ದಾನೆ. ಕಬ್ಬಿಣದ ಈ ಕೊಕ್ಕೆಗೆ ಅಡ್ಡ ಸಿಕ್ಕರೆ ಕತೆ ಮುಗಿದಂತೆ ಹೀಗಾಗಿ ನಿರೀಕ್ಷೆ ಮಾಡದ ಈ ಸ್ಥಿತಿಯಿಂದ ತಪ್ಪಿಸಿಕೊಳ್ಳಲು ದಿಕ್ಕುಪಾಲಾಗಿ ಓಡಿದ್ದಾರೆ.  ಇದಾದ ನಂತರ ಹಿಟಾಚಿ ಚಾಲಕ  ಹಿಟಾಚಿಯನ್ನು ಟರ್ನ್ ಮಾಡಿ ಆ ಸ್ಥಳದಿಂದ ದೂರ ಹೋಗಿದ್ದಾನೆ. ಚಾಲಕ ತುಂಬಾ ಚಾಣಾಕ್ಷತನದಿಂದ ಆ ಸ್ಥಳದಲ್ಲಿದ್ದ ಜನರು ಹೊರಟು ಹೋಗುವಂತೆ ಮಾಡಿದ್ದು, ಯಾರೊಬ್ಬರಿಗೂ ಈ ಘಟನೆಯಲ್ಲಿ ಹಾನಿಯಾಗಿಲ್ಲ,

Latest Videos

ಆಕಾಶದಲ್ಲಿ ಬರ್ತ್‌ಡೇಯಂತೆ! ಯೂಟ್ಯೂಬಲ್ಲಿ ವ್ಯೂಸ್ ಬರೋಕೆ ಏನೇನು ಮಾಡ್ತಾರೆ ನೋಡಿ!

ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಟ್ವಿಟ್ಟರ್‌ನಲ್ಲಿ @gharkekalesh ಎಂಬ ಟ್ವಿಟ್ಟರ್‌ ಪೇಜ್‌ನಿಂದ ಈ ವೀಡಿಯೋ ಪೋಸ್ಟ್ ಆಗಿದೆ. ವೀಡಿಯೋ ಪೋಸ್ಟ್ ಆದ ಕೆಲ ಗಂಟೆಗಳಲ್ಲಿ ಲಕ್ಷಕ್ಕೂ ಹೆಚ್ಚು ಜನ ಈ ವೀಡಿಯೋವನ್ನು ವೀಕ್ಷಿಸಿದ್ದಾರೆ. ಪಾಕಿಸ್ತಾನದಲ್ಲಿ ಮಣ್ಣು ಅಗೆಯುವ ಕಲೇಶ್ ಎಂದು ಬರೆದು 35 ಸೆಕೆಂಡ್‌ಗಳ ವೀಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ಜನರು ಕೂಡ ವೀಡಿಯೋವನ್ನು ನೋಡಿ ಹಲವು ಕಾಮೆಂಟ್ ಮಾಡಿದ್ದಾರೆ.

ಚಾಲಕನ ಈ ಚಾಣಾಕ್ಷತನಕ್ಕೆ ಮೆಚ್ಚಲೇಬೇಕು ಆತ ಯಾರಿಗೂ ಹಾನಿಯಾಗದಂತೆ ಕೆಲ ಸೆಕೆಂಡ್‌ಗಳಲ್ಲಿ  ಜಾಗವನ್ನು ಸಂಪೂರ್ಣವಾಗಿ ಖಾಲಿ ಮಾಡಿದ್ದಾನೆ ಎಂದು ವೀಡಿಯೋ ನೋಡಿದ ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈ ವೀಡಿಯೋವನ್ನು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ನೋಡಿದರೆ ಆತನನ್ನು ಯುಪಿಗೆ ಕರೆತರುವಂತೆ ಕೇಳಬಹುದು ಎಂದು ಕೆಲವರು ಹಾಸ್ಯ ಮಾಡಿದ್ದಾರೆ. ಮತ್ತೆ ಕೆಲವರು ಈ ವಿವಾದಕ್ಕೆ ಕಾರಣವೇನು ಎಂದು ಪ್ರಶ್ನೆ ಮಾಡಿದ್ದಾರೆ.  ಒಟ್ಟಿನಲ್ಲಿ ಈ ವೀಡಿಯೋ ಇಂಟರ್‌ನೆಟ್‌ನಲ್ಲಿ ಸಖತ್ ವೈರಲ್ ಆಗಿದೆ. 

ಪಾಕಿಸ್ತಾನದ ಮೇಲೆ 27 ಲಕ್ಷ ಕೋಟಿ ರೂ. ಸಾಲದ ಬರೆ! 4 ವರ್ಷದೊಳಗೆ ತೀರಿಸದಿದ್ರೆ ಮುಂದೇನು?

click me!