ಬೆಡ್‌ರೂಮ್‌ ಕ್ಯಾಮೆರಾದಲ್ಲಿತ್ತು ನೂರಾರು ನಗ್ನ ವಿಡಿಯೋಗಳು; ಸಂತ್ರಸ್ತೆಗೆ 23 ಕೋಟಿ ಪರಿಹಾರ, ಇದು ಸಾಕಾಗಲ್ಲ ಎಂದ ಮಹಿಳೆ

Published : Sep 24, 2024, 04:45 PM IST
ಬೆಡ್‌ರೂಮ್‌ ಕ್ಯಾಮೆರಾದಲ್ಲಿತ್ತು ನೂರಾರು ನಗ್ನ ವಿಡಿಯೋಗಳು; ಸಂತ್ರಸ್ತೆಗೆ 23 ಕೋಟಿ ಪರಿಹಾರ, ಇದು ಸಾಕಾಗಲ್ಲ ಎಂದ ಮಹಿಳೆ

ಸಾರಾಂಶ

ಮನೆಗೆಲಸದವಳ ಬೆಡ್‌ರೂಮ್‌ನಲ್ಲಿ ಹಿಡನ್ ಕ್ಯಾಮೆರಾ ಇಟ್ಟು ಸಿಕ್ಕಿಬಿದ್ದ ಮಾಲೀಕನಿಗೆ ದಂಡ ವಿಧಿಸಿದ ನ್ಯಾಯಾಲಯ ಆ ಮೊತ್ತವನ್ನು ಮಹಿಳೆಗೆ ನೀಡುವಂತೆ ಆದೇಶಿಸಿದೆ. ಆದ್ರೆ 23 ಕೋಟಿ ಪರಿಹಾರ ಸಾಲಲ್ಲ ಎಂದ ಮಹಿಳೆ ಹೇಳಿದ್ದಾರೆ.

ಕೋಲಂಬಿಯಾ: ಮನೆಯಲ್ಲಿ ಮಕ್ಕಳನ್ನು ನೋಡಿಕೊಳ್ಳುವ ಕೆಲಸ ಮಾಡುತ್ತಿದ್ದ 25 ವರ್ಷದ ಮಹಿಳೆ ತನ್ನ ಮಾಲೀಕ ಆಕೆಯ ಕೋಣೆಯಲ್ಲಿ ರಹಸ್ಯವಾಗಿರಿಸಿದ್ದ ಕ್ಯಾಮೆರಾ ಪತ್ತೆ ಮಾಡಿದ್ದಕ್ಕೆ 2.78 ಕೋಟಿ ಡಾಲರ್ (ಅಂದಾಜು 23 ಕೋಟಿ ರೂ) ಬಹುಮಾನ ಪಡೆದುಕೊಂಡಿದ್ದಾರೆ. ಕೋಟ್ಯಧಿಪತಿ ಮೈಕಲ್ ಎಸ್ಪೊಸಿಟೋ ತನ್ನ ಮನೆಯಲ್ಲಿ ಮಕ್ಕಳನ್ನು ನೋಡಿಕೊಳ್ಳುತ್ತಿದ್ದ ಮಹಿಳೆಯ ಫೋಟೋಗಳನ್ನು ರಹಸ್ಯವಾಗಿ ಸೆರೆ ಹಿಡಿಯುತ್ತಿದ್ದನು. 25 ವರ್ಷದ ಆಂಡ್ರೆಡ್ ಮೂಲತಃ ಕೋಲಂಬಿಯಾದ ನಿವಾಸಿಯಾಗಿದ್ದು, ಕೆಲಸಕ್ಕಾಗಿ ನ್ಯೂಯಾರ್ಕ್‌ಗೆ ಬಂದಿದ್ದರು. 

2021ರಲ್ಲಿ ಈ ಘಟನೆ ನಡೆದಿದ್ದು, ಆಂಡ್ರೆಡ್ ತಮ್ಮ ಬೆಡ್‌ರೂಮ್‌ನಲ್ಲಿ ಸ್ಮೋಕ್ ಡಿಟೆಕ್ಟರ್ ಮಾದರಿಯ ವಿಚಿತ್ರವಾದ ವಸ್ತು ಗಮನಿಸಿದ್ದರು. ನ್ಯೂಯಾರ್ಕ್ ಪೋಸ್ಟ್ ವರದಿ ಪ್ರಕಾರ, ಮಾಲೀಕ ಮೈಕಲ್ ಎಸ್ಪೊಸಿಟೋ ಪದೇ ಪದೇ ಸ್ಮೋಕ್ ಡಿಟೆಕ್ಟರ್‌ನ್ನು ಅಡ್ಜಸ್ಟ್ ಮಾಡುತ್ತಿರೋದು ಮಹಿಳೆಯ ಗಮನಕ್ಕೆ ಬಂದಿದೆ. ಬೇರೊಂದು ಜಾಗದಲ್ಲಿದ್ದ ಸ್ಮೋಕ್ ಡಿಟೆಕ್ಟರ್ ನ್ನು ಬೇರೆ ಕಡೆ ಅಳವಡಿಕೆ ಮಾಡಲಾಗುತ್ತಿತ್ತು. ಅನುಮಾನಗೊಂಡ ಮಹಿಳೆ ಸ್ಮೋಕ್ ಡಿಟೆಕ್ಟರ್‌ನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅದರೊಳಗೆ ಕ್ಯಾಮೆರಾ ಇರೋದು ಕಾಣಿಸಿದೆ. ಈ ಕ್ಯಾಮೆರಾದಲ್ಲಿ ನೂರಾರು ವಿಡಿಯೋ ಸ್ಟೋರ್ ಆಗಿರುವ ಮೆಮೊರಿ ಕಾರ್ಡ್ ಮಹಿಳೆಗೆ ಸಿಕ್ಕಿದೆ.

ಈ ಮೆಮೊರಿ ಕಾರ್ಡ್‌ನಲ್ಲಿ ತನ್ನದೇ ವಿಡಿಯೋಗಳನ್ನು ಕಂಡು ಆಂಡ್ರೆಡ್ ಶಾಕ್ ಆಗಿದ್ದರು. ಇದರಲ್ಲಿ ಬಟ್ಟೆ ಬದಲಿಸುತ್ತಿರುವ ಮತ್ತು ಸಂಪೂರ್ಣ ನಗ್ನ ವಿಡಿಯೋಗಳು ಮೆಮೊರಿ ಕಾರ್ಡ್‌ನಲ್ಲಿದ್ದವು. ಅಂದಿನ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಆಂಡ್ರೆಡ್, ಅವನು ಮನೆಗೆ ಬಂದಾಗ ನಾನು ಗಾಬರಿಯಾದೆ. ಭಯಗೊಂಡಿದ್ದರಿಂದ ಏನು ಮಾಡಬೇಕು ಅನ್ನೋದು ತೋಚಲಿಲ್ಲ. ಮಾಲೀಕ ಹೊರಗಿನಿಂದ ಬಾಗಿಲು ತಟ್ಟುತ್ತಿದ್ದನು. ನನ್ನನ್ನು ಹೇಗೆ ರಕ್ಷಿಸಿಕೊಳ್ಳಬೇಕು ಎಂಬ ಆತಂಕ ಶುರುವಾಗಿತ್ತು. ಕೂಡಲೇ ನಾನು ಕಿಟಕಿಯಿಂದ ಅಲ್ಲಿಂದ ಹೊರಗೆ ಬಂದೆ ಎಂದು ಆಂಡ್ರೆಡ್ ಹೇಳುತ್ತಾರೆ.

"ಮದುವೆ ಮುರಿಯಬೇಕಾ? ನಾನು ಬರ್ತಿನಿ" ವಿಚಿತ್ರ ವೃತ್ತಿ ಆಯ್ದುಕೊಂಡ ಯುವಕನೀಗ ಫುಲ್ ಬ್ಯುಸಿ!

ನಾನು ಅಲ್ಲಿಂದ ಬಂದ ನಂತರ ಖಾಸಗಿ ವಿಡಿಯೋಗಳನ್ನು ಸೆರೆ ಹಿಡಿದಿದ್ದಕ್ಕೆ ಮಾಲೀಕ ಮೈಕಲ್ ಎಸ್ಪೊಸಿಟೋನನ್ನು ಬಂಧಿಸಲಾಯ್ತು. ಆರೋಪ ಸಾಬೀತಾದ ಹಿನ್ನೆಲ ಮೈಕಲ್ ಎಸ್ಪೊಸಿಟೋಗೆ ನಾಲ್ಕು ವರ್ಷ ಜೈಲು ಶಿಕ್ಷೆ ಆಯ್ತು. ಆದ್ರೆ ಕೆಲವು ಕಾರಣಗಳಿಂದ ಮೈಕಲ್ ಎಸ್ಪೊಸಿಟೋಗೆ ಎರಡು ವರ್ಷ ಶಿಕ್ಷೆ ಕಡಿಮೆ ಆಯ್ತು. ಈ ಕುರಿತ ಕಾನೂನು ಮುಕ್ತಾಯಗೊಂಡಿಲ್ಲ ಮುಂದುವರಿದಿದೆ ಎಂದು ಮಹಿಳೆ ಅಂಡ್ರೆಡ್ ಹೇಳುತ್ತಾರೆ.

ಈ ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಲಯ, ಅಪರಾಧಿ ಮೈಕಲ್ ಎಸ್ಪೊಸಿಟೋ ಮತ್ತು ಆತನ ಪತ್ನಿ ಡೇನಿಯಲ್‌ ಇಬ್ಬರಿಗೂ ದಂಡ ವಿಧಿಸಲಾಗಿದೆ. ಮನೆಯಲ್ಲಿ ಕೆಲಸಕ್ಕಿದ್ದ ಮಹಿಳೆಗೆ ಮಾನಸಿಕವಾಗಿ ಹಿಂಸೆ ಮತ್ತು ಭಾವನೆಗಳಿಗೆ ಧಕ್ಕೆಯುಂಟು ಮಾಡಿದ್ದಕ್ಕೆ ನ್ಯಾಯಾಲಯ ಅಂಡ್ರೆಡ್ ಗೆ $780,000 ಪರಿಹಾರ ನೀಡಬೇಕೆಂದು ಆದೇಶಿಸಿತ್ತು. ಇತ್ತ ಮೈಕಲ್ ಎಸ್ಪೊಸಿಟೋಗೆ $2 ಮಿಲಿಯನ್ ದಂಡ ವಿಧಿಸಿ ಆ ಮೊತ್ತವನ್ನು ಸಹ ಅಂಡ್ರೆಡ್‌ಗೆ ನೀಡಬೇಕೆಂದು ನ್ಯಾಯಾಲಯ ಆದೇಶಿಸಿದೆ. ಪರಿಹಾರದ ಮೊತ್ತಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಅಂಡ್ರೆಡ್, ಮೂರು ವರ್ಷ ನಾನು ಅನುಭವಿಸಿದ ನೋವಿಗೆ ಇದು ಸಾಕಾಗುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಸಂಗಾತಿ ಸಮ್ಮತಿ ಇಲ್ಲದೇ ಲೈಂಗಿಕ ಕ್ರಿಯೆಯಲ್ಲಿ ಕಾಂಡೋಮ್ ತೆಗೆದ ಪೊಲೀಸ್ ಪೇದೆಗೆ ಜೈಲು ಶಿಕ್ಷೆ ಪ್ರಕಟ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಟ್ರಂಪ್‌ ತೆರಿಗೆ ಶಾಕ್‌ಗೆ ಚೀನಾ ದಾಖಲೆಯ ತಿರುಗೇಟು
ಮೋದಿ ರೀತಿ ರೈತರಿಗೆ ಟ್ರಂಪ್‌ ಹಣ ವರ್ಗಾವಣೆ