Russia Ukraine Crisis: ಜವಾಬ್ದಾರಿಯುತ ದೇಶವಾಗಿ ವರ್ತಿಸಿ, ಪಾಕಿಸ್ತಾನಕ್ಕೆ ಅಮೆರಿಕ ಪ್ರತಿಕ್ರಿಯೆ

By Suvarna News  |  First Published Feb 24, 2022, 5:43 PM IST

ಉಕ್ರೇನ್ ಮೇಲೆ ರಷ್ಯಾದ ಆಕ್ರಮಣ
ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ರಷ್ಯಾ ಭೇಟಿ
ಜವಾಬ್ದಾರಿಯುತ ದೇಶಗಳ ಜವಾಬ್ದಾರಿಯನ್ನು ಈ ವೇಳೆ ಪ್ರದರ್ಶಿಸಿ ಎಂದ ಅಮೆರಿಕ


ವಾಷಿಂಗ್ಟನ್ (ಫೆ.24): ಪಾಕಿಸ್ತಾನ ಪ್ರಧಾನಿ (Pakistan Prime Minister) ಇಮ್ರಾನ್ ಖಾನ್ (Imran Khan) ಅವರ ಮಾಸ್ಕೋ ಭೇಟಿಗೆ ಪ್ರತಿಕ್ರಿಯಿಸಿರುವ ಅಮೆರಿಕ (United States), ಉಕ್ರೇನ್‌ನಲ್ಲಿ (Ukraine) ರಷ್ಯಾದ ಕ್ರಮಗಳಿಗೆ ಆಕ್ಷೇಪಣೆಯನ್ನು ವ್ಯಕ್ತಪಡಿಸುವುದು ಪ್ರತಿ "ಜವಾಬ್ದಾರಿ" ದೇಶದ ಜವಾಬ್ದಾರಿಯಾಗಿದೆ ಎಂದು ಹೇಳಿದೆ. ಉಕ್ರೇನ್‌ನಲ್ಲಿನ ಪರಿಸ್ಥಿತಿಯ ಬಗ್ಗೆ ತನ್ನ ನಿಲುವಿನ ಬಗ್ಗೆ ಅಮೆರಿಕವು ಪಾಕಿಸ್ತಾನಕ್ಕೆ ತಿಳಿಸಿದೆ ಎಂದು ಯುಎಸ್ ಸ್ಟೇಟ್ ಡಿಪಾರ್ಟ್‌ಮೆಂಟ್ ವಕ್ತಾರ ನೆಡ್ ಪ್ರೈಸ್ (Ned Price) ಬುಧವಾರ ಹೇಳಿದ್ದಾರೆ.

"ಉಕ್ರೇನ್‌ನ ಮೇಲೆ ರಶ್ಯಾದ ಮತ್ತಷ್ಟು ಹೊಸ ಆಕ್ರಮಣದ ಕುರಿತು ನಾವು ಪಾಕಿಸ್ತಾನಕ್ಕೆ ನಮ್ಮ ನಿಲುವನ್ನು ತಿಳಿಸಿದ್ದೇವೆ ಮತ್ತು ಯುದ್ಧದ ಮೇಲೆ ರಾಜತಾಂತ್ರಿಕತೆಯನ್ನು ಮುಂದುವರಿಸುವ ನಮ್ಮ ಪ್ರಯತ್ನಗಳ ಬಗ್ಗೆ ನಾವು ಅವರಿಗೆ ತಿಳಿಸಿದ್ದೇವೆ" ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರು ಮಾಸ್ಕೋದಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅವರನ್ನು ಭೇಟಿ ಮಾಡಿ ಸಭೆ ನಡೆಸಲಿರುವ ಕಾರ್ಯಕ್ರಮದ ಬಗ್ಗೆ ಪ್ರೈಸ್ ತಮ್ಮ ಅಭಿಪ್ರಾಯ ತಿಳಿಸಿದರು.

ಉಕ್ರೇನ್ ನ ಜೊತೆಗೆ ಅಮೆರಿಕದ ಪಾಲುದಾರಿಕೆಯು ಅಮೆರಿಕದ ಹಿತಾಸಕ್ತಿಗಳಿಗೆ ನಿರ್ಣಾಯಕ ಎಂದು ನಾವು ಪರಿಗಣಿಸುತ್ತೇವೆ ಎಂದು ಪ್ರೈಸ್ ಹೇಳಿದ್ದಾರೆ. ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿ ಮಾಡಲು ಮತ್ತು ಆರ್ಥಿಕ ಸಹಕಾರ ಸೇರಿದಂತೆ ವಿಷಯಗಳ ಕುರಿತು ಚರ್ಚಿಸಲು ಪಾಕಿಸ್ತಾನದ ಪ್ರಧಾನಿ ಬುಧವಾರ ಮಾಸ್ಕೋಗೆ ತೆರಳಿದ್ದಾರೆ. ಅಮೆರಿಕ ಸೇರಿದಂತೆ ಹಲವು ಪಾಶ್ಚಿಮಾತ್ಯ ರಾಷ್ಟ್ರಗಳು ಉಕ್ರೇನ್ ನ ಕೆಲವು ಭಾಗಗಳಲ್ಲಿ ಸೇನೆಯನ್ನು ನಿಯೋಜನೆ ಮಾಡಿದ್ದ ಕಾರಣಕ್ಕಾಗಿ ರಷ್ಯಾ ದೇಶದ ವಿರುದ್ಧ ಹೊಸ ನಿರ್ಬಂಧಗಳನ್ನು ಹೇರಿದ ಬೆನ್ನಲ್ಲಿಯೇ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ರಷ್ಯಾದ ಭೇಟಿ ಮಾಡಿದ್ದಾರೆ. ಅಜೆಂಡಾದಲ್ಲಿ ಎರಡು ದೇಶಗಳು ಮತ್ತು ತಾಲಿಬಾನ್-ನಿಯಂತ್ರಿತ ಅಫ್ಘಾನಿಸ್ತಾನದಲ್ಲಿ ಅವರ ಪರಸ್ಪರ ಕಾಳಜಿ ಮತ್ತು ಪ್ರಾದೇಶಿಕ ಭದ್ರತಾ ಸಹಕಾರ ಕುರಿತಾಗಿ ಚರ್ಚಿಸಲಿವೆ.

Ukraine Russia War: ರಷ್ಯಾ ಜತೆ ಭಾರತ ಮಾತನಾಡುವಂತೆ ಉಕ್ರೇನ್ ಮನವಿ
ರಷ್ಯಾ ಮತ್ತು ಪಶ್ಚಿಮದ ನಡುವೆ ಉಲ್ಬಣಗೊಳ್ಳುತ್ತಿರುವ ಬಿಕ್ಕಟ್ಟಿನ ಮಧ್ಯೆ ಪೂರ್ವ ಉಕ್ರೇನ್‌ನ ಪ್ರತ್ಯೇಕತಾವಾದಿ ಪ್ರದೇಶಗಳಿಗೆ ರಷ್ಯಾದ ಪಡೆಗಳು ಪ್ರವೇಶಿಸಿದ ನಂತರ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾದ ಮೊದಲ ವಿದೇಶಿ ನಾಯಕ ಇಮ್ರಾನ್ ಖಾನ್. ಪಾಕ್ ಪ್ರಧಾನಿ ಅವರ ಮಾಸ್ಕೋ ಭೇಟಿ  ಕಳೆದ 23 ವರ್ಷಗಳಲ್ಲಿ ಪಾಕಿಸ್ತಾನದ ಪ್ರಧಾನ ಮಂತ್ರಿಯ ಮೊದಲ ಭೇಟಿ ಎನಿಸಿದೆ. ಇದಕ್ಕೂ ಮುನ್ನ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ರಷ್ಯಾದ ನಾರ್ಡ್ ಸ್ಟ್ರೀಮ್ 2 ಗ್ಯಾಸ್ ಪೈಪ್‌ಲೈನ್ ಅನ್ನು ನಿರ್ಮಿಸುವ ಜವಾಬ್ದಾರಿಯುತ ಕಂಪನಿಯ ಮೇಲೆ ನಿರ್ಬಂಧಗಳನ್ನು ವಿಧಿಸುವ ತೀರ್ಮಾನ ಮಾಡಿದ್ದಾರೆ. ಕಳೆದ ವರ್ಷ ರಾಷ್ಟ್ರೀಯ ಭದ್ರತಾ ಕ್ರಮ ಎಂದುಕೊಂಡು ಬಳಸಿಕೊಂಡು ಈ ಯೋಜನೆಯನ್ನು ನಿರ್ಬಂಧಿಸಲಾಗಿತ್ತು.

Russia Ukraine Crisis: 40ಕ್ಕೂ ಅಧಿಕ ಸೈನಿಕರು, ಪ್ರಜೆಗಳ ಸಾವು ಎಂದ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ
"ಇಂದು, ನಾನು ನಾರ್ಡ್ ಸ್ಟ್ರೀಮ್ 2 ಎಜಿ ಮತ್ತು ಅದರ ಕಾರ್ಪೊರೇಟ್ ಅಧಿಕಾರಿಗಳ ಮೇಲೆ ನಿರ್ಬಂಧಗಳನ್ನು ವಿಧಿಸಲು ನನ್ನ ಆಡಳಿತಕ್ಕೆ ನಿರ್ದೇಶಿಸಿದ್ದೇನೆ. ಈ ಕ್ರಮಗಳು ಉಕ್ರೇನ್‌ನಲ್ಲಿ ರಷ್ಯಾದ ಕ್ರಮಗಳಿಗೆ ಪ್ರತಿಕ್ರಿಯೆಯಾಗಿ ನಮ್ಮ ಆರಂಭಿಕ ನಿರ್ಬಂಧಗಳ ಮತ್ತೊಂದು ಭಾಗವಾಗಿದೆ. ನಾನು ಸ್ಪಷ್ಟಪಡಿಸಿರುವಂತೆ, ಉಕ್ರೇನ್ ನಲ್ಲಿ ರಷ್ಯಾ ತನ್ನ ಆಕ್ರಮಣವನ್ನು ಮುಂದುವರಿಸಿದರೆ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಲು ನಾವು ಹಿಂಜರಿಯುವುದಿಲ್ಲ' ಎಂದು ಬಿಡೆನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. . ಪೂರ್ವ ಉಕ್ರೇನ್‌ನಲ್ಲಿ ಪ್ರತ್ಯೇಕತಾವಾದಿ ಪ್ರದೇಶಗಳನ್ನು ಸ್ವತಂತ್ರವೆಂದು ಪುಟಿನ್ ಗುರುತಿಸಿದ್ದಕ್ಕೆ ಪ್ರತಿಕ್ರಿಯೆಯಾಗಿ ಈ ವಾರ ಯುಎಸ್ ಮತ್ತು ಅದರ ಮಿತ್ರರಾಷ್ಟ್ರಗಳು ರಷ್ಯಾದ ಮೇಲೆ ವಿಧಿಸಿದ ದಂಡಗಳ ಸರಣಿಯ ಭಾಗವಾಗಿದೆ. ಕಳೆದ ಸೋಮವಾರ ಉಕ್ರೇನ್ ನ ಭಾಗವಾಗಿದ್ದ ಡೊನೆಟ್ಸಕ್ ಹಾಗೂ ಲುಹಾನ್ಸ್ಕ್ ಪ್ರದೇಶಗಳನ್ನು ಸ್ವತಂತ್ರ ಎಂದು ರಷ್ಯಾ ಅಧ್ಯಕ್ಷ ಪುಟಿನ್ ಘೋಷಣೆ ಮಾಡಿದ್ದರು. ಇದರಬ ಬೆನ್ನಲ್ಲಿಯೇ ಅಮೆರಿಕವು, ಉಕ್ರೇನ್ ಗೆ ಬೆಂಬಲ ನೀಡುವ ಭಾಗವಾಗಿ ರಷ್ಯಾ ವಿರುದ್ಧ ಮೊದಲ ಹಂತದ ನಿರ್ಬಂಧಗಳನ್ನು ಹೇರಿತ್ತು.

Tap to resize

Latest Videos

click me!