Russia Ukraine Crisis: 40ಕ್ಕೂ ಅಧಿಕ ಸೈನಿಕರು, ಪ್ರಜೆಗಳ ಸಾವು ಎಂದ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ

By Suvarna News  |  First Published Feb 24, 2022, 4:14 PM IST

ಉಕ್ರೇನ್ ನ ಮೇಲೆ ರಷ್ಯಾ ಆಕ್ರಮಣ
ಉಕ್ರೇನ್ ನ ಅಧ್ಯಕ್ಷ ಕಚೇರಿಯಿಂದ ಮಾಹಿತಿ
ಮೊದಲ ಒಂದು ಗಂಟೆಯಲ್ಲಿಯೇ ಸಾಕಷ್ಟು ಸಾವುನೋವು


ಕೈವ್ (ಫೆ.24): ಉಕ್ರೇನ್‌ನ (Ukraine) ಮೇಲೆ ರಷ್ಯಾದ (Russia) ಆಕ್ರಮಣದ ಮೊದಲ ಗಂಟೆಗಳಲ್ಲಿ 40 ಕ್ಕೂ ಹೆಚ್ಚು ಉಕ್ರೇನ್ ಸೈನಿಕರು ಮತ್ತು ಸುಮಾರು 10 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯ ಸಹಾಯಕ ಗುರುವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ. "40 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ನನಗೆ ತಿಳಿದಿದೆ. ಸುಮಾರು 10 ನಾಗರಿಕರ ಸಾವಾಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ" ಎಂದು ಅಧ್ಯಕ್ಷೀಯ ಆಡಳಿತದ ಸಹಾಯಕ ಒಲೆಕ್ಸಿ ಅರೆಸ್ಟೋವಿಚ್ (Oleksiy Arestovych) ಸುದ್ದಿಗಾರರಿಗೆ ತಿಳಿಸಿದರು.

ಇದರ ನಡುವೆಯೇ ಪಾಶ್ಚಿಮಾತ್ಯ ಬೆಂಬಲಿತ ನೆರೆಯ ರಷ್ಯಾದ ಆಕ್ರಮಣಕ್ಕೆ ಪ್ರತಿಕ್ರಿಯೆಯಾಗಿ ಉಕ್ರೇನ್  ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Volodymyr Zelensky) ಮಾಸ್ಕೋದೊಂದಿಗೆ ಕೈವ್ ನ (Kyiv) ಎಲ್ಲಾ ರಾಜತಾಂತ್ರಿಕ ಸಂಬಂಧಗಳನ್ನು (diplomatic relations) ಮುರಿದುಕೊಂಡಿರುವುದಾಗಿ ತಿಳಿಸಿದರು. 1991 ರಲ್ಲಿ ಸೋವಿಯತ್ ಒಕ್ಕೂಟದ ಪತನದ (Soviet Union's collapse in 1991) ನಂತರ ರಷ್ಯಾ ಮತ್ತು ಉಕ್ರೇನ್ ಸ್ವತಂತ್ರ ರಾಷ್ಟ್ರಗಳಾದ ನಂತರ ಉಭಯ ದೇಶಗಳ ನಡುವೆ ರಾಜತಾಂತ್ರಿಕ ಸಂಬಂಧ ಮುರಿದುಬಿದ್ದಿರುವುದು ಇದೇ ಮೊದಲ ಬಾರಿ ಎಂದು ಝೆಲೆನ್ಸ್ಕಿ ತಿಳಿಸಿದ್ದಾರೆ.

More than 40 Ukraine soldiers, around 10 civilians killed: presidency pic.twitter.com/8zjT8arc1A

— AFP News Agency (@AFP)


"ನಾವು ರಷ್ಯಾದೊಂದಿಗಿನ ರಾಜತಾಂತ್ರಿಕ ಸಂಬಂಧಗಳನ್ನು ಮುರಿದುಕೊಂಡಿದ್ದೇವೆ" ಎಂದು ಝೆಲೆನ್ಸ್ಕಿ ವೀಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ. ಸಂಕೀರ್ಣ ಸಂದರ್ಭಗಳ ನಡುವೆಯೂ ರಷ್ಯಾ ಹಾಗೂ ಉಕ್ರೇನ್ ದೇಶಗಳು ತಮ್ಮ ಸಂಬಂಧವನ್ನು ಉಳಿಸಿಕೊಂಡಿದ್ದರು. ಕ್ರೆಮ್ಲಿನ್ ವಿಚಾರದಲ್ಲಿ 2004 ಹಾಗೂ 2014ರಲ್ಲಿ ಎರಡೂ ದೇಶಗಳ ನಡುವಿನ ಬಿಕ್ಕಟ್ಟಿನ ನಡುವೆಯೂ ರಾಜತಾಂತ್ರಿಕ ಸಂಬಂಧ ಉಳಿದುಕೊಂಡಿದ್ದವು.

Russia Ukraine Crisis: ರಷ್ಯಾದ ಐದು ವಿಮಾನಗಳು, ಹೆಲಿಕಾಪ್ಟರ್‌ ನೆಲಸಮ: ಉಕ್ರೇನ್ ಸೇನೆ!
ರಷ್ಯಾದಲ್ಲಿ ವಾಸಿಸುವ ಸುಮಾರು ಮೂರು ಮಿಲಿಯನ್ ಉಕ್ರೇನ್ ಪ್ರಜೆಗಳಿಗೆ ಕಾನ್ಸುಲರ್ ಮತ್ತು ಇತರ ಸಹಾಯವನ್ನು ಒದಗಿಸುವ ಅಗತ್ಯವಿರುವುದರಿಂದ ಮಾಸ್ಕೋದೊಂದಿಗೆ ರಾಜತಾಂತ್ರಿಕ ಚಾನೆಲ್ ಗಳನ್ನು ಮುಕ್ತವಾಗಿಡಲು ಉಕ್ರೇನ್ ಉತ್ಸುಕವಾಗಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.

Tap to resize

Latest Videos

undefined

Russia Ukraine Crisis:ಭಾರತದ ಅಡುಗೆಮನೆ ಮೇಲೂ ಪರಿಣಾಮ ಬೀರಲಿದೆ ಈ ಸಂಘರ್ಷ! ಯಾವೆಲ್ಲ ಕ್ಷೇತ್ರಕ್ಕಿದೆ ಈ ರಾಷ್ಟ್ರಗಳ ನಂಟು?
ಉಕ್ರೇನ್‌ನ ಉತ್ತರ ಮತ್ತು ದಕ್ಷಿಣದ ಗಡಿಗಳಲ್ಲಿ ವಾಯುದಾಳಿ ಮತ್ತು ಭೂಸೇನೆಯ ಆಕ್ರಮಣಗಳನ್ನು ಒಳಗೊಂಡಂತೆ ರಷ್ಯಾ ಸಂಪೂರ್ಣ ಆಕ್ರಮಣವನ್ನು ಪ್ರಾರಂಭಿಸಿದ ಕೆಲವೇ ಗಂಟೆಗಳಲ್ಲಿಝೆಲೆನ್ಸ್ಕಿಯ ಈ ನಿರ್ಧಾರ ಮಾಡಿದ್ದಾರೆ. ರಷ್ಯಾದ ಭೂಸೇನಾ ಪಡೆಗಳು ಗುರುವಾರ ಹಲವಾರು ದಿಕ್ಕುಗಳಿಂದ ಉಕ್ರೇನ್‌ಗೆ ದಾಟಿವೆ ಎಂದು ಉಕ್ರೇನ್‌ನ ಗಡಿ ಕಾವಲು ಸೇವೆಯು, ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಯುದ್ಧ ಪ್ರಾರಂಭ ಮಾಡುವುದಾಗಿ ಘೋಷಿಸಿದ ಕೆಲವೇ ಗಂಟೆಗಳ ನಂತರ ಹೇಳಿದೆ. ರಷ್ಯಾದ ಟ್ಯಾಂಕ್‌ಗಳು ಮತ್ತು ಇತರ ಭಾರೀ ಉಪಕರಣಗಳು ಉತ್ತರದ ಹಲವಾರು ಪ್ರದೇಶಗಳಲ್ಲಿ ಉಕ್ರೇನ್ ನ ಗಡಿ ದಾಟಿವೆ. 

ಪ್ರತ್ಯೇಕತಾವಾದಿ ಪೂರ್ವದಲ್ಲಿ ರಷ್ಯಾದ ಬೆಂಬಲಿತ ಬಂಡುಕೋರರೊಂದಿಗಿನ ಎಂಟು ವರ್ಷಗಳ ಸಂಘರ್ಷದಲ್ಲಿ ಉಕ್ರೇನ್ ಭಾರೀ ಸಾವುನೋವುಗಳನ್ನು ಅನುಭವಿಸಿದೆ, ಆದರೆ ಕೆಲವು ವರ್ಷಗಳಿಂದ ಕ್ರೈಮಿಯಾದ ದಕ್ಷಿಣದ ಗಡಿಯಲ್ಲಿ ಯಾವುದೇ ಸಾವುನೋವುಗಳನ್ನು ವರದಿ ಮಾಡಿಲ್ಲ.  ವಾರಗಳ ಕಾಲ ನಡೆದ ತೀವ್ರ ರಾಜತಾಂತ್ರಿಕತೆ ಮತ್ತು ರಷ್ಯಾದ ಮೇಲೆ ಪಾಶ್ಚಿಮಾತ್ಯ ನಿರ್ಬಂಧಗಳ ಹೇರುವಿಕೆಯು ನಂತರವೂ ಪುಟಿನ್ ಅವರನ್ನು ತಡೆಯಲು ವಿಫಲವಾಯಿತು. ಉಕ್ರೇನ್ ಗಡಿಯಲ್ಲಿ ರಷ್ಯಾ 150,000 ಮತ್ತು 200,000 ಸೈನಿಕರನ್ನು ಒಟ್ಟುಗೂಡಿಸಲು ಯಶಸ್ವಿಯಾಗಿತ್ತು. "ನಾನು ಮಿಲಿಟರಿ ಕಾರ್ಯಾಚರಣೆಯ ನಿರ್ಧಾರವನ್ನು ಮಾಡಿದ್ದೇನೆ" ಎಂದು ಪುಟಿನ್ ಟಿವಿ ಪ್ರಕಟಣೆಯಲ್ಲಿ ಹೇಳಿದರು. ಇದರ ಬೆನ್ನಲ್ಲಿಯೇ ಯುಎಸ್ ಅಧ್ಯಕ್ಷ ಜೋ ಬಿಡೆನ್ ಮತ್ತು ಇತರ ಪಾಶ್ಚಿಮಾತ್ಯ ನಾಯಕರು ದೊಡ್ಡ ಮಟ್ಟದ ಖಂಡನೆ ವ್ಯಕ್ತಪಡಿಸಿದ್ದು ಮಾತ್ರವಲ್ಲದೆ, ಜಾಗತಿಕ ಷೇರು ಮಾರುಕಟ್ಟೆಯ ಕುಸಿತಕ್ಕೆ ಕಾರಣವಾಯಿತು.

click me!