Russia Ukraine Crisis: ಪ್ರಧಾನಿ ಮೋದಿ ಮಧ್ಯಪ್ರವೇಶಕ್ಕೆ ಉಕ್ರೇನ್ ರಾಯಭಾರಿ ಇಗೊರ್ ಪೋಲಿಖಾ ಮನವಿ!

By Suvarna News  |  First Published Feb 24, 2022, 2:29 PM IST

ರಷ್ಯಾ-ಉಕ್ರೇನ್ ನಡುವಣ ಬಿಕ್ಕಟ್ಟು  ಮಿಲಿಟರಿ ಕಾರ್ಯಾಚರಣೆಯಲ್ಲಿ ಮಧ್ಯೆ ಪ್ರವೇಶಿಸಿದವರ ವಿರುದ್ಧ ಪ್ರತೀಕಾರ ಕ್ರಮ ಕೈಗೊಳ್ಳುವುದಾಗಿ  ವ್ಲಾಡಿಮಿರ್ ಪುಟಿನ್ ಎಚ್ಚರಿಕೆ ನೀಡಿದ್ದಾರೆ


ನವದೆಹಲಿ (ಫೆ. 24):  ಉಕ್ರೇನ್‌ ಮೇಲೆ ಆಕ್ರಮಣ ಮಾಡಲು ರಷ್ಯಾ ತನ್ನ ಸೇನೆಯನ್ನು ಜಮಾವಣೆ ಮಾಡುತ್ತಿರುವ ಬೆನ್ನಲ್ಲೇ ಸಭೆ ನಡೆಸಿರುವ ಉಕ್ರೇನ್‌ ದೇಶದಲ್ಲಿ 30 ದಿನಗಳ ಕಾಲ ತುರ್ತು ಪರಿಸ್ಥಿತಿ ವಿಧಿಸಲು ನಿರ್ಧರಿಸಿತ್ತು. ಆದರೆ ಇತ್ತ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್‌ನಲ್ಲಿ ಮಿಲಿಟರಿ ಕಾರ್ಯಾಚರಣೆಯನ್ನು ಘೋಷಿಸಿದ್ದಾರೆ. ತನ್ನ ಶಸ್ತ್ರಾಸ್ತ್ರಗಳನ್ನು ತ್ಯಜಿಸುವಂತೆ ಅವರು ಉಕ್ರೇನ್  ಮಿಲಿಟರಿಗೆ ಪುಟಿನ್ ಕರೆ ನೀಡಿದ್ದಾರೆ. ‌ಈಗಾಗಗಲೇ ಉಕ್ರೇನ್‌ನಲ್ಲಿ ರಷ್ಯಾ ದಾಳಿಯಿಂದಾಗಿ 7ಕ್ಕೂ ಹೆಚ್ಚು ಜನ ಮೃತಟಿದ್ದು ನೂರಾರು ಜನ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. 

ಈ ಮಧ್ಯೆ ಭಾರತಕ್ಕೆ ಉಕ್ರೇನ್ ರಾಯಭಾರಿ ಇಗೊರ್ ಪೋಲಿಖಾ ಉಕ್ರೇನ್‌-ರಷ್ಯಾ ಸಮರದ ಮಧ್ಯೆ ಪ್ರಧಾನಿ ಮೋದಿ ಮಧ್ಯಸ್ಥಿಕೆ ವಹಿಸುವಂತೆ ಆಗ್ರಹಿಸಿದ್ದಾರೆ. "ಭಾರತವು ರಷ್ಯಾದೊಂದಿಗೆ ವಿಶೇಷ ಸಂಬಂಧವನ್ನು ಹೊಂದಿದೆ ಮತ್ತು ಹೊಸ ದೆಹಲಿಯು ಪರಿಸ್ಥಿತಿಯನ್ನು (ರಷ್ಯಾ-ಉಕ್ರೇನ್ ಬಿಕ್ಕಟ್ಟು) ನಿಯಂತ್ರಿಸುವಲ್ಲಿ ಹೆಚ್ಚು ಸಕ್ರಿಯ ಪಾತ್ರವನ್ನು ವಹಿಸುತ್ತದೆ. ನಾವು ಪ್ರಧಾನಿ ನರೇಂದ್ರ ಮೋದಿ ಅವರನ್ನು ತಕ್ಷಣವೇ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ನಮ್ಮ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯನ್ನು ಸಂಪರ್ಕಿಸಲು ಒತ್ತಾಯಿಸುತ್ತೇವೆ" ಎಂದು ಉಕ್ರೇನ್ ರಾಯಭಾರಿ ಇಗೊರ್ ಪೋಲಿಖಾ ಹೇಳಿದ್ದಾರೆ.

Tap to resize

Latest Videos

"ಪ್ರಸ್ತುತ ಕ್ಷಣದಲ್ಲಿ ಭಾರತದ ಬೆಂಬಲಕ್ಕಾಗಿ ಮನವಿ ಮಾಡುತ್ತಿದ್ದೇವೆ. ಪ್ರಜಾಸತ್ತಾತ್ಮಕ ರಾಜ್ಯದ ವಿರುದ್ಧ ನಿರಂಕುಶ ಆಡಳಿತದ ಆಕ್ರಮಣದ ಸಂದರ್ಭದಲ್ಲಿ, ಭಾರತವು ತನ್ನ ಜಾಗತಿಕ ಪಾತ್ರವನ್ನು ಸಂಪೂರ್ಣವಾಗಿ ವಹಿಸಿಕೊಳ್ಳಬೇಕು. ಮೋದಿಜಿ ವಿಶ್ವದ ಅತ್ಯಂತ ಶಕ್ತಿಶಾಲಿ ಮತ್ತು ಗೌರವಾನ್ವಿತ ನಾಯಕರಲ್ಲಿ ಒಬ್ಬರು" ಎಂದು ಅವರು ಹೇಳಿದ್ದಾರೆ.
 

At the present moment, we're asking, pleading for support of India. In case of aggression of totalitarian regime against democratic state, India should fully assume its global role. Modi ji is one of the most powerful&respected leaders in the world: Ambassador of Ukraine to India pic.twitter.com/uB1mhOiKjA

— ANI (@ANI)

 

"ಪುಟಿನ್ ಎಷ್ಟು ವಿಶ್ವ ನಾಯಕರ ಮಾತನ್ನು ಕೇಳುತ್ತಾರೆ ಎಂದು ನನಗೆ ತಿಳಿದಿಲ್ಲ ಆದರೆ ಮೋದಿ ಜಿ ಬಲವಾದ ನಿಲುವು ತೆಗೆದುಕೊಂಡರೆ, ಪುಟಿನ್ ಕನಿಷ್ಠ ಯೋಚಿಸುತ್ತಾರೆ ಎಂದು ನನಗೆ ಭರವಸೆ ಇದೆ. ಭಾರತ ಸರ್ಕಾರದ ಹೆಚ್ಚು ಅನುಕೂಲಕರ ವರ್ತನೆಗಾಗಿ ನಾವು ನಿರೀಕ್ಷಿಸುತ್ತಿದ್ದೇವೆ" ಎಂದು ಡಾ ಇಗೊರ್ ಪೋಲಿಖಾ ಹೇಳಿದ್ದಾರೆ. 

"ಬೆಳಗಿನ ಜಾವ 5 ಗಂಟೆಗೆ ಆರಂಭವಾದ ಅಬ್ಬರದ ಆಕ್ರಂದನ ಪ್ರಕರಣ ಇದಾಗಿದೆ. ಬಹಳಷ್ಟು ಉಕ್ರೇನಿಯನ್ ಏರೋಡ್ರೋಮ್‌ಗಳು, ಮಿಲಿಟರಿ ವಿಮಾನ ನಿಲ್ದಾಣಗಳು, ಮಿಲಿಟರಿ ಸ್ಥಾಪನೆಗಳು ಬಾಂಬ್‌ಗಳು ಮತ್ತು ಕ್ಷಿಪಣಿ ದಾಳಿಗಳಿಂದ ದಾಳಿಗೊಳಗಾದ ಮಾಹಿತಿಯನ್ನು ನಾವು ದೃಢಪಡಿಸಿದ್ದೇವೆ. ರಾಜಧಾನಿಯ ಹೊರವಲಯದಲ್ಲಿ ಕೆಲವು ದಾಳಿಗಳು ನಡೆದಿವೆ. ಕೆಲವು ದಾಳಿಗಳು ಉಕ್ರೇನ್ ಪ್ರದೇಶದ ಆಳದಲ್ಲಿ ಸಂಭವಿಸಿವೆ. ನಮ್ಮ ಸೈನಿಕರಲ್ಲಿ ಮತ್ತು ನಾಗರಿಕರಲ್ಲಿನ ಸಾವುನೋವುಗಳ ಬಗ್ಗೆ ನಾವು ಮೊದಲ ಮಾಹಿತಿಯನ್ನು ಪಡೆಯುತ್ತಿದ್ದೇವೆ" ಎಂದು ಭಾರತಕ್ಕೆ ಉಕ್ರೇನ್ ರಾಯಭಾರಿ ಡಾ ಇಗೊರ್ ಪೋಲಿಖಾ ಹೇಳಿದ್ದಾರೆ

ಇನ್ನೂ ಉಕ್ರೇನ್ ರಕ್ಷಣಾ ಸಚಿವ ಒಲೆಕ್ಸಿ ರೆಜ್ನಿಕೋವ್ ಅವರು ಶಸ್ತ್ರಾಸ್ತ್ರವನ್ನು ಹಿಡಿದಿಟ್ಟುಕೊಳ್ಳಲು ಸಿದ್ಧರಾಗಿರುವ ಯಾರಾದರೂ ಪ್ರಾದೇಶಿಕ ರಕ್ಷಣಾ ಪಡೆಗಳ ಶ್ರೇಣಿಗೆ ಸೇರಬಹುದು ಎಂದು ಹೇಳಿದ್ದಾರೆ ಎಂದು ರಾಯಟರ್ಸ್‌ ವರದಿ ಮಾಡಿದೆ. 

ಇದನ್ನೂ ಓದಿ: ರಷ್ಯಾ -ಉಕ್ರೇನ್ ಯುದ್ಧ ಬೆನ್ನಲ್ಲೇ ಆರ್ಥಿಕತೆಯಲ್ಲಿ ಅಲ್ಲೋಲ ಕಲ್ಲೋಲ

ಮಧ್ಯೆ ಪ್ರವೇಶಿಸಿದವರ ವಿರುದ್ಧ ಪ್ರತೀಕಾರ: ಆದರೆ ರಷ್ಯಾ-ಉಕ್ರೇನ್ ನಡುವಣ ಬಿಕ್ಕಟ್ಟು  ಮಿಲಿಟರಿ ಕಾರ್ಯಾಚರಣೆಯಲ್ಲಿ ಮಧ್ಯೆ ಪ್ರವೇಶಿಸಿದವರ ವಿರುದ್ಧ ಪ್ರತೀಕಾರ ಕ್ರಮ ಕೈಗೊಳ್ಳುವುದಾಗಿ  ವ್ಲಾಡಿಮಿರ್ ಪುಟಿನ್ ಎಚ್ಚರಿಕೆ ನೀಡಿದ್ದಾರೆ.  ಆಕ್ರಮಣಕ್ಕೆ ಮುಂಚಿತವಾಗಿ ರಾಷ್ಟ್ರೀಯ ದೂರದರ್ಶನದ ಭಾಷಣದಲ್ಲಿ ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಲು ಮತ್ತು ಮನೆಗೆ ಹೋಗುವಂತೆ ಪುಟಿನ್ ಉಕ್ರೇನಿಯನ್ ಸೈನಿಕರಿಗೆ ಪುಟಿನ್ ಮನವಿ ಮಾಡಿದ್ದರು.

ರಷ್ಯಾ ತನ್ನ ದಕ್ಷಿಣದ ನೆರೆಹೊರೆಯ ದೇಶವಾದ ಉಕ್ರೇನನ್ನು "ಆಕ್ರಮಿಸಿಕೊಳ್ಳಲು" ಯೋಜಿಸುವುದಿಲ್ಲ ಎಂದು ಪುಟಿನ್ ಹೇಳಿದ್ದರು, ಆದರೆ ರಷ್ಯಾ "ಉಕ್ರೇನ್ ಒತ್ತೆಯಾಳುಗಳಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಬೇಕು"  ನ್ಯಾಟೋ ಮೈತ್ರಿಯನ್ನು ವಿಸ್ತರಿಸುವ ಮೂಲಕ ಯುಎಸ್ ಮತ್ತು ಅದರ ಮಿತ್ರರಾಷ್ಟ್ರಗಳು ರಷ್ಯಾದ "ಕೆಂಪು ಗೆರೆ" ದಾಟಿದೆ ಎಂದು ಆರೋಪಿಸಿದ್ದರು.

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ದೇಶಾದ್ಯಂತ ಸಮರ ತುರ್ತು ಪರಿಸ್ಥಿತಿ ವಿಧಿಸಿದ್ದಾರೆ. ರಷ್ಯಾದ ಪಡೆಗಳು ನಗರಗಳ ಮೇಲೆ ದಾಳಿ ಮತ್ತು ಕೈವ್ ಮೇಲಿನ ಕ್ಷಿಪಣಿ ದಾಳಿಯನ್ನು ತಪ್ಪಿಸಲು ನಾಗರಿಕರನ್ನು ಆಶ್ರಯದಲ್ಲಿ ಅಡಗಿಕೊಳ್ಳುವಂತೆ  ಉಕ್ರೇನ್‌ ಒತ್ತಾಯಿಸಿದೆ. ಈ ಮಧ್ಯೆ ಉಕ್ರೇನ್ ಅಧ್ಯಕ್ಷ, ಜೋ ಬಿಡೆನ್ ಅವರೊಂದಿಗೆ ಮಾತನಾಡಿದ್ದು "ಯುಎಸ್ ಅಂತರರಾಷ್ಟ್ರೀಯ ಬೆಂಬಲವನ್ನು ಸಿದ್ಧಪಡಿಸಲು ಪ್ರಾರಂಭಿಸಿದೆ" ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Russia Ukraine Crisis: ಭಾರತೀಯರನ್ನು ಕರೆತರಲು ಉಕ್ರೇನ್‌ಗೆ ಹೋಗಬೇಕಿದ್ದ ಏರ್ ಇಂಡಿಯಾ ವಿಮಾನ ದೆಹಲಿಗೆ ವಾಪಸ್!

"ರಷ್ಯಾ ನಮ್ಮ ಮಿಲಿಟರಿ ಮೂಲಸೌಕರ್ಯ ಮತ್ತು ನಮ್ಮ ಗಡಿ ಕಾವಲುಗಾರರ ಮೇಲೆ ದಾಳಿ ಮಾಡಿದೆ" ಎಂದು ಟೆಲಿಗ್ರಾಮ್ ಚಾನೆಲ್‌ನಲ್ಲಿ ವೀಡಿಯೊವೊಂದರಲ್ಲಿ ಝೆಲೆನ್ಸ್ಕಿ ಹೇಳಿದ್ದಾರೆ. ಜನರು ಶಾಂತವಾಗಿರಲು ಮತ್ತು ಸಾಧ್ಯವಾದರೆ ಮನೆಯಲ್ಲೇ ಇರಲು ಅವರು ಒತ್ತಾಯಿಸಿದ್ದು "ನಾವು ಕೆಲಸ ಮಾಡುತ್ತಿದ್ದೇವೆ, ಸೈನ್ಯವು ಕೆಲಸ ಮಾಡುತ್ತಿದೆವೆ ಎಂದು ಹೇಳಿದ್ದಾರೆ

ಸದ್ಯ ಸ್ಟ್ರೈಕ್‌ಗಳು ಉಕ್ರೇನಿಯನ್ ಮಿಲಿಟರಿ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡಿವೆ ಮತ್ತು ಜನಸಂಖ್ಯೆಗೆ ಅಪಾಯವನ್ನುಂಟು ಮಾಡಿಲ್ಲ ಎಂದು ರಷ್ಯಾದ ರಕ್ಷಣಾ ಸಚಿವರು ಹೇಳಿದ್ದಾರೆ ಎಂದು ಸರ್ಕಾರಿ ಸ್ವಾಮ್ಯದ TASS ವರದಿ ಮಾಡಿದೆ.

click me!