
ಅಮೆರಿಕ(ಜು.27): ವಾಲ್‌ಮಾರ್ಟ್ ಹಾಗೂ ಇತರ ರಿಟೇಲ್ ಸ್ಟೋರ್‌ಗಳಲ್ಲಿ ಕೊರೋನಾ ವೈರಸ್ ನಿಯಂತ್ರಣಕ್ಕೆ ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಆದರೆ ಒಂದೇ ವಾರದಲ್ಲಿ ರಿಟೇಲ್ ಸ್ಟೋರ್ ಇದೀಗ ಉಲ್ಟಾ ಹೊಡೆಯತ್ತಿದೆ. ಅಮೆರಿಕದ ವಾಲ್ಮಾರ್ಟ್, ಹೋಮ್ ಡಿಪೋ, ಲೋವೆಸ್, ವಾಲ್ಸಿನ್ಸ್ ಸಿವಿಎಸ್ ಮತ್ತು ಇತರರು ಅಂಗಡಿಗಳಲ್ಲಿ ಶಾಪಿಂಗ್ ಮಾಡಲು ಮಾಸ್ಕ್ ಕಡ್ಡಾಯ ಮಾಡಲಾಗಿತ್ತು. ಇದೀಗ ಮಾಸ್ಕ್ ಧರಿಸಿದ ಗ್ರಾಹಕರಲ್ಲೂ ಈ ರಿಟೇಲ್ ಸ್ಟೋರ್‌ಗಳು ವ್ಯವಹಾರ ನಡೆಸುತ್ತಿದೆ.
ವಾಲ್‌ಮಾರ್ಟ್ ಇಂಡಿಯಾ ಖರೀದಿಸಿದ ಇ ಕಾಮರ್ಸ್ ದಿಗ್ಗಜ ಫ್ಲಿಪ್‌ಕಾರ್ಟ್!.
ಹಲವು ಗ್ರಾಹಕರು ಮಾಸ್ಕ್ ಧರಿಸಿ ಖರೀದಗಿ ಆಗಮಿಸತ್ತಾರೆ. ಆದರೆ ಕೆಲವರು ಮಾಸ್ಕ್ ಧರಿಸಲು ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಮಾಸ್ಕ್ ಧಾರಣೆ ಆಯ್ಕೆ ಗ್ರಾಹಕರದ್ದು ಎಂದು ರಿಟೇಲ್ ಸ್ಟೋರ್ ನಿರ್ಧರಿಸಿದೆ. ಇಷ್ಟೇ ಅಲ್ಲ ರಿಟೇಲ್ ಸ್ಟೋರ್ ಉದ್ಯೋಗಿಗಳು ಹಾಗೂ ಗ್ರಾಹಕರನ್ನು ನಿಭಾಯಿಸುವುದೇ ಇದೀಗ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಅಮೆರಿಕದಲ್ಲಿ ಕೊರೋನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇತ್ತ ಮಾಸ್ಕ್ ಧರಿಸದೇ ರಿಟೇಲ್ ಸ್ಟೋರ್‌ಗೆ ಆಗಮಿಸುವ ಗ್ರಾಹಕರಿಗೆ ಉದ್ಯೋಗಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ಉದ್ಯೋಗಿಗಳು ಹಾಗೂ ಗ್ರಾಹಕರ ನಡುವೆ ಸಮನ್ವಯ ಸಾಧಿಸುವುದೇ ಬಹುದೊಡ್ಡ ಸಮಸ್ಯೆಯಾಗಿದೆ ಎಂದು ವಾಲ್‌ಮಾರ್ಟ್ ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ