ಆಕಾಶದಿಂದ ಮೀನಿನ ಮಳೆ... ಅಪರೂಪದ ವಿದ್ಯಾಮಾನಕ್ಕೆ ಸಾಕ್ಷಿಯಾದ ಟೆಕ್ಸಾಸ್‌

By Suvarna NewsFirst Published Jan 3, 2022, 12:25 PM IST
Highlights
  • ಆಕಾಶದಿಂದ ಸುರಿಯಿತು ಮೀನಿನ ಮಳೆ
  • ಅಪರೂಪದ ವಿದ್ಯಾಮಾನಕ್ಕೆ ಸಾಕ್ಷಿಯಾದ ಟೆಕ್ಸಾಸ್‌ ನಗರ

ನ್ಯೂಯಾರ್ಕ್‌(ಜ.3): ಅಮೆರಿಕಾದ ಟೆಕ್ಸಾಸ್‌ ಅಪರೂಪದ ಪ್ರಾಕೃತ್ರಿಕ ವೈಚಿತ್ರ್ಯಕ್ಕೆ ಸಾಕ್ಷಿಯಾಗಿದೆ. ಇಲ್ಲಿನ ಆಗಸದಲ್ಲಿ ಮೀನಿನ ಮಳೆ ಸುರಿದಿದ್ದು, ಜನ  ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದಕ್ಕೂ ಮೊದಲು ಕೂಡ ಕ್ಯಾಲಿಫೋರ್ನಿಯಾ (California) ಹಾಗೂ ವಾಯುವ್ಯ ಸರ್ಬೀಯಾ (northwestern Serbia) ದಲ್ಲಿಯೂ ಈ ಹಿಂದೆ ಮೀನಿನ ಮಳೆ ಸುರಿದಿತ್ತು. 

ಈ ಮೀನಿನ ಮಳೆಯನ್ನು ಪ್ರಾಣಿಗಳ ಮಳೆ ಎಂಬುದಾಗಿಯೂ ಕರೆಯುತ್ತಾರೆ. ಟೆಕ್ಸಾಸ್‌ನ  ಟೆಕ್ಸರ್ಕಾನಾದಲ್ಲಿ ಮೀನಿನ ಮಳೆ ಸುರಿದಿದ್ದು, ಅನೇಕ ಟೆಕ್ಸರ್ಕಾನಾ ನಿವಾಸಿಗಳು ಮಳೆಯೊಂದಿಗೆ ಆಕಾಶದಿಂದ ಬೀಳುವ ಮೀನುಗಳನ್ನು ನೋಡಿ ಆಶ್ಚರ್ಯಚಕಿತರಾದರು. ಈ ವಿಲಕ್ಷಣ ಪ್ರಾಕೃತಿಕ ವಿದ್ಯಮಾನದ ಬಗ್ಗೆ ಟೆಕ್ಸಾಸ್‌ನ ದಿ ಸಿಟಿ ಆಫ್ ಟೆಕ್ಸರ್ಕಾನಾದ ಅಧಿಕೃತ ಫೇಸ್‌ಬುಕ್ (Facebook) ಪುಟದಲ್ಲಿ ಪೋಸ್ಟ್‌  ಮಾಡಲಾಗಿದೆ. 2021ನೇ ಇಸವಿಯೂ ಟೆಕ್ಸರ್ಕಾನಾದಲ್ಲಿ ಇಂದು ಸುರಿದ ಮೀನುಗಳ ಮಳೆ ಸೇರಿದಂತೆ ಎಲ್ಲಾ ಟ್ರಿಕ್ಸ್‌ಗಳನ್ನು  ಹೊರತೆಗೆಯುತ್ತಿದೆ ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದೆ. 

 

ಪ್ರಾಣಿಗಳ ಮಳೆಯು ಒಂದು ವಿರಳ ವಿದ್ಯಮಾನವಾಗಿದ್ದು, ಸಣ್ಣ ನೀರಿನ ಪ್ರಾಣಿಗಳಾದ ಕಪ್ಪೆಗಳು, ಏಡಿಗಳು ಮತ್ತು ಸಣ್ಣ ಮೀನುಗಳು ಭೂಮಿಯ ಮೇಲ್ಮೈಯಲ್ಲಿ ಸಂಭವಿಸುವ ಪ್ರವಾಹದಿಂದ ದೂಡಲ್ಪಟ್ಟಾಗ ಸಂಭವಿಸುವ ಒಂದು ವಿದ್ಯಮಾನವಾಗಿದೆ. ನಂತರ ಅವುಗಳು ಮಳೆಯ ಸಮಯದಲ್ಲಿ ಮಳೆಯೊಂದಿಗೆ ಸುರಿಯಲು ಪ್ರಾರಂಭವಾಗುತ್ತವೆ. ಇದು ಕೇಳಲು ವಿಚಿತ್ರವೆನಿಸಿದರು. ಇದು ಸಂಭವಿಸುತ್ತದೆ, ಇಂದು ಟೆಕ್ಸರ್ಕಾನಾದ ಹಲವು ಸ್ಥಳಗಳು ಈ ವಿಚಿತ್ರಕ್ಕೆ ಸಾಕ್ಷಿಯಾಗಿದೆ. ಈ ಫೇಸ್‌ಬುಕ್ ಪೋಸ್ಟ್ ಅನ್ನು ಸಾವಿರಾರು ಜನ ಶೇರ್‌ ಮಾಡಿದ್ದು ನೂರಾರು ಕಾಮೆಂಟ್‌ಗಳ ಜೊತೆ ಫುಲ್‌ ವೈರಲ್‌ ಆಗಿದೆ.

ಮೀನುಗಾರನಿಗೆ ಎದುರಾದ ಶಾರ್ಕ್‌... ಎದೆ ಝಲ್‌ ಎನಿಸುವ ವಿಡಿಯೋ

ಅನೇಕ ಟೆಕ್ಸರ್ಕಾನಾ (Texarkana) ನಿವಾಸಿಗಳು ರಸ್ತೆಗಳಲ್ಲಿ ಮತ್ತು ತಮ್ಮ ಹಿತ್ತಲಿನಲ್ಲಿ ಬಿದ್ದಿರುವ ಸತ್ತ ಮೀನುಗಳನ್ನು ಫೋಟೋಗಳನ್ನು ತೆಗೆದು ಈ ವಿಚಿತ್ರವನ್ನು ದಾಖಲಿಸಲು ಸಾಮಾಜಿಕ ಮಾಧ್ಯಮವನ್ನು ಬಳಸಿಕೊಂಡರು. ಕೆಲವರು ಖುಷಿಪಟ್ಟರು. 20 ವರ್ಷಗಳ ಹಿಂದೆ ನನ್ನ ಹಾಗ್ ಫಾರ್ಮ್‌ನಲ್ಲಿ ಕಪ್ಪೆಗಳ ಮಳೆಯಾಗಿದೆ ಎಂದು ಹೇಳಿದಾಗ ಜನರು ನನ್ನನ್ನು ಹುಚ್ಚನೆಂದು ಭಾವಿಸಿದ್ದರು. ನನ್ನ ಕಾಂಕ್ರೀಟ್ ವಾಕ್‌ವೇಗಳು ಕಪ್ಪೆಗಳು ರಾಶಿ ಬಿದ್ದ ಪರಿಣಾಮ ಮುಚ್ಚಿಹೋಗಿರುವುದನ್ನು ನೋಡುತ್ತಾ ನಾನು ಮೂಕವಿಸ್ಮಿತನಾಗಿ ನಿಂತಿದ್ದೆ. ಜಗತ್ತು ಕೊನೆಗೊಳ್ಳುತ್ತಿದೆಯೇ ಎಂದು ನಾನು ಆಶ್ಚರ್ಯ ಪಡುತ್ತಿದ್ದೆ ಎಂದು ಒಬ್ಬರು ಪೇಸ್‌ಬುಕ್‌ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. 

Endangered Species: ಅಪರೂಪದ ನಡೆದಾಡುವ ಪಿಂಕ್‌ ಹ್ಯಾಂಡ್‌ಫಿಶ್‌ ಪತ್ತೆ

ಆದಾಗ್ಯೂ, ಹೀಗೆ ಬಿದ್ದಿರುವ ಮೀನುಗಳ ತೆರವು ಕಾರ್ಯಾಚರಣೆಯನ್ನು ಸಮಯಕ್ಕೆ ಸರಿಯಾಗಿ ಮಾಡದಿದ್ದರೆ ಸತ್ತ ಜಲಚರಗಳು ಉಂಟುಮಾಡುವ ಆರೋಗ್ಯ ಮತ್ತು ನೈರ್ಮಲ್ಯ ಸಮಸ್ಯೆಗಳ ಬಗ್ಗೆ ಕೆಲವರು ಚಿಂತಿತರಾಗಿದ್ದಾರೆ. ಕ್ಯಾಲಿಫೋರ್ನಿಯಾ ಮತ್ತು ವಾಯುವ್ಯ ಸರ್ಬಿಯಾದಂತಹ ಸ್ಥಳಗಳಲ್ಲಿ ಪ್ರಾಣಿ ಮಳೆ ಈ ಹಿಂದೆಯೂ ವರದಿಯಾಗಿತ್ತು. 

ಮೀನು ಮತ್ತು ಕಪ್ಪೆಗಳ ಮಳೆ ಇದು ಕ್ರಿ.ಶ 200 ರ ಹಿಂದಿನಿಂದಲೂ ಕಂಡು ಬಂದಿದ್ದಂತಹ ಒಂದು ವಿದ್ಯಮಾನವಾಗಿದೆ. ಇದು ಹೇಗೆ ಏಕೆ ಸಂಭವಿಸುತ್ತದೆ ಎಂಬ ಬಗ್ಗೆ ನಿಖರ ಮಾಹಿತಿ ಇಲ್ಲ. ನ್ಯಾಷನಲ್​ ಜಿಯೋಗ್ರಫಿಯ ಪ್ರಕಾರ ಭಾರೀ ಪ್ರವಾಹದ ವೇಳೆ ಪುಟ್ಟ ಜೀವಿಗಳು ಮುಳುಗಿ ಹೋಗುತ್ತವೆ. ನಂತರ  ಬಲವಾದ ಗಾಳಿ ಬೀಸಿ ಮಳೆ ಬಂದಾಗ ಆಳದಲ್ಲಿರುವ ಜೀವಿಗಳು ಮೇಲೆ ಬಂದು ಮಳೆಯಂತೆ ಬೀಳುತ್ತವೆ ಎಂದು ಹೇಳಲಾಗಿದೆ. 

ಮೀನುಗಳ ಮಳೆ ಬೀಳುತ್ತಿರುವುದು ಇದೇ ಮೊದಲೇನಲ್ಲ 2017ರಲ್ಲಿ ಕ್ಯಾಲಿಪೋರ್ನಿಯಾದಲ್ಲಿ  ಪ್ರಾಥಮಿಕ ಶಾಲೆಯೊಂದರ  ಮೇಲೆ ನೂರಾರು ಮೀನುಗಳು ಮಳೆಯಂತೆ ಬಿದ್ದ ಘಟನೆ ವರದಿಯಾಗಿತ್ತು.  ಅಲ್ಲದೆ ಕಪ್ಪೆಗಳ ಮಳೆ ಬಿದ್ದಿದ್ದರ ಬಗ್ಗೆಯೂ ಈ ಹಿಂದೆ ವರದಿಯಾಗಿತ್ತು. ಇದೀಗ ಮೀನಿನ ಮಳೆ ಟೆಕ್ಸಾಸ್​ ಜನತೆಯನ್ನು ಅಚ್ಚರಿಗೊಳಿಸಿದೆ.  4ರಿಂದ 5 ಇಂಚಿನ ಬಿಳಿ ಬಣ್ಣದ ಮೀನುಗಳು ದಾರಿಯ ಮಧ್ಯೆ ಅಲ್ಲಲ್ಲಿ ಬಿದ್ದಿರುವುದನ್ನು  ಕಾಣಬಹುದು. ಇದರ ವೀಡಿಯೋ ಈಗ ಜಗತ್ತಿನಾದ್ಯಂತ ವೈರಲ್​ ಆಗಿದೆ.

click me!