
ಭಾರತ ಮತ್ತು ಪಾಕಿಸ್ತಾನ ಸದಾ ಶತ್ರು ರಾಷ್ಟ್ರ ಎಂದೇ ಬಿಂಬಿತವಾಗುತ್ತ ಬಂದಿದೆ. ಉಗ್ರರಿಗೆ ನೆಲೆ ನೀಡುತ್ತಿರುವ ಪಾಕಿಸ್ತಾನದಿಂದ ಭಾರತೀಯರಿಗೆ ಆಗಿರುವ, ಆಗುತ್ತಿರುವ ನಷ್ಟವಂತೂ ಅಷ್ಟಿಷ್ಟಲ್ಲ. ಅದರಲ್ಲಿಯೂ ಇದೀಗ ಕಾಶ್ಮೀರಕದ ಪೆಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿ, ಹಿಂದೂಗಳನ್ನು ಗುರಿಯಾಗಿಸಿಕೊಂಡು ನಡೆಸಿದ ನರಮೇಧ, ಅದಕ್ಕೆ ಪ್ರತಿಕಾರವಾಗಿ ಭಾರತೀಯ ಸೇನೆಯ ಆಪರೇಷನ್ ಸಿಂದೂರ... ಇವೆಲ್ಲವುಗಳ ನಡುವೆ ಈ ಎರಡು ದೇಶಗಳ ನಡುವೆ ಉದ್ವಿಗ್ನತೆ ಇನ್ನಷ್ಟು ಹೆಚ್ಚಿದೆ. ಪಾಕಿಸ್ತಾನ ಎಂದರೆ ನಿಜವಾದ ಭಾರತೀಯರು ಉರಿದು ಬೀಳುತ್ತಿದ್ದಾರೆ. ಆದರೆ, ಉಗ್ರರನ್ನು ಮಟ್ಟ ಹಾಕಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಇದಾಗಲೇ ಭಾರಿ ಸ್ಕೆಚ್ ಕೂಡ ಹಾಕಲಾಗಿದ್ದು, ಅದರ ಟ್ರೇಲರ್ ಅನ್ನು ಇದಾಗಲೇ ತೋರಿಸಿ ಆಗಿದೆ.
ಪರಿಸ್ಥಿತಿ ಹೀಗಿರುವಾಗ, ಭಾರತದಲ್ಲಿ ಪಾಕಿಸ್ತಾನ ಪ್ರೇಮಿಗಳಿಗೇನೂ ಕೊರತೆ ಇಲ್ಲ. ಅದನ್ನು ಹಲವರು ಇದಾಗಲೇ ಸಾಬೀತು ಕೂಡ ಮಾಡಿದ್ದಾರೆ. ಕೆಲವರು ತೋರಿಕೆಗಾಗಿ ಭಾರತೀಯರಂತೆ ಇದ್ದು, ಒಳಗೆ ಪಾಕಿಸ್ತಾನಕ್ಕೆ ಸಹಾಯ ಮಾಡುವವರು, ಭಾರತದ ನೆಲದಲ್ಲಿಯೇ ಇದ್ದು, ಹಿಂದೂಗಳ ಮೇಲೆ ಕಿಡಿ ಕಾರುತ್ತಿರುವವರು ಇಲ್ಲವೆಂದೇನಲ್ಲ. ಆದರೆ ಇದೇ ಮನಸ್ಥಿತಿ ಪಾಕಿಸ್ತಾನದಲ್ಲಿ ಇದೆ ಎಂದರೆ ನಂಬುವುದು ಬಲು ಕಷ್ಟ. ಆದರೆ ಪಾಕಿಸ್ತಾನದಲ್ಲಿರುವ ಭಾರತದ ಪರ ಕೆಲವು ಯೂಟ್ಯೂಬರ್ಗಳು ಇದಾಗಲೇ ಭಾರತವನ್ನು ಹಾಡಿ ಹೊಗಳುತ್ತಲೇ ಬಂದಿದ್ದಾರೆ. ಅವರಿಗೆ ಪಾಕಿಸ್ತಾನದ ಪ್ರಜೆಗಳು ಕೂಡ ಬೆಂಬಲ ಸೂಚಿಸುತ್ತಿರುವುದನ್ನು ನೋಡಬಹುದಾಗಿದೆ.
ಪಾಕ್ನಲ್ಲಿ ವಿಕಿರಣ ಸೋರಿಕೆ- ವೈದ್ಯಕೀಯ ಎಮರ್ಜೆನ್ಸಿ? ಕದನ ವಿರಾಮದ ಘನಘೋರ ಸತ್ಯ ಬಯಲು?
ಆದರೆ, ಇದೀಗ ಪಾಕಿಸ್ತಾನದ ಯುಟ್ಯೂಬ್ಗಳು ಬ್ಯಾನ್ ಆಗಿವೆ. ಇದರ ನಡುವೆಯೂ, ಪಾಕಿಸ್ತಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜೈಜೈಕಾರ ಹಾಕಿರುವ ವಿಡಿಯೋ ಒಂದು ವೈರಲ್ ಆಗುತ್ತಿದೆ. ಇದರಲ್ಲಿ ಯುಟ್ಯೂಬರ್ ಭಾರತದ ಬಗ್ಗೆ ಕೇಳುತ್ತಿದ್ದಾಗ ವೃದ್ಧರೊಬ್ಬರು, ಮೋದಿ ಜಿಂದಾಬಾದ್, ಮೋದಿ ಜಿಂದಾಬಾದ್ ಎಂದಿದ್ದಾರೆ. ಅದಕ್ಕೆ ಯುಟ್ಯೂಬರ್ ನೀವು ಪಾಕಿಸ್ತಾನದಲ್ಲಿ ಇದ್ದುಕೊಂಡು ಭಾರತದ ಪ್ರಧಾನಿನ್ನು ಹೊಗಳುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಆ ವೃದ್ಧರು ಹೌದು. ಒಂದು ವೇಳೆ ಮೋದಿ ಏನಾದ್ರೂ ಮೋದಿ ಖಾನ್ ಎಂದು ಇಟ್ಟುಕೊಂಡರೆ, ನಾವೆಲ್ಲವೂ ಅವರಿಗೇ ಸಪೋರ್ಟ್ ಮಾಡೋದು ಎಂದೂ ಹೇಳಿದ್ದಾರೆ.
ಆಮೇಲೆ ಕಾಶ್ಮೀರದ ವಿಷಯಕ್ಕೆ ಬಂದಾಗ, ಬಿಡಿ ಕಾಶ್ಮೀರ ನಮ್ಮ ಕೈಬಿಟ್ಟು ಹೋಗಿದೆ ಎಂದಿದ್ದಾರೆ. ಆಗ ಅಲ್ಲಿಯೇ ಇದ್ದ ಇನ್ನೊಬ್ಬ ವ್ಯಕ್ತಿ, ಕಾಶ್ಮೀರ ಅಷ್ಟೇ ಏಕೆ, ಈಗ ಬಲೂಚಿಸ್ತಾನವೂ ನಮ್ಮ ಕೈಬಿಟ್ಟು ಹೋಗುತ್ತಿದೆ ಎಂದು ಅಷ್ಟೇ ಖುಷಿಯಲ್ಲಿ ಹೇಳಿದ್ದಾರೆ. ಇದರ ವಿಡಿಯೋ ವೈರಲ್ ಆಗುತ್ತಿದೆ. ನಿಲುಮೆ ಫೇಸ್ಬುಕ್ ಖಾತೆಯಲ್ಲಿ ಈ ವಿಡಿಯೋ ತುಣುಕನ್ನು ಶಿಲ್ಪಾ ಮಂಜುನಾಥ್ ಎನ್ನುವವರು ಶೇರ್ ಮಾಡಿದ್ದಾರೆ. ಇದಕ್ಕೆ ಥಹರೇವಾರಿ ಕಮೆಂಟ್ಸ್ ಸುರಿಮಳೆಯಾಗುತ್ತಿದೆ. ಪಾಕಿಸ್ತಾನವೊಂದೇ ಪ್ರಧಾನಿ ನರೇಂದ್ರ ಮೋದಿಯನ್ನು ಹೊಗಳುವುದು ಬಾಕಿ ಇತ್ತು. ಈಗ ಅದೂ ಆಯಿತು ಬಿಡಿ, ಇನ್ನೇನು ಬೇಕು ಎಂದು ಹಲವರು ಪ್ರಶ್ನಿಸುತ್ತಿದ್ದಾರೆ.
ಪಾಕಿಗಳ ಮೇಲೆ ಪ್ರಕೃತಿಗೂ ಮುನಿಸು! ಉಗ್ರರ ನೆಲೆ ಛಿದ್ರಗೊಳ್ತಿದ್ದಂತೆಯೇ ಹಲವೆಡೆ ಭೂಕಂಪ...
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ