ಟ್ರಕ್‌ಗೆ ಬಿತ್ತು ಬೆಂಕಿ: 20 ಟನ್ ಆಲೂಗಡ್ಡೆ ಚಿಪ್ಸ್ ಭಸ್ಮ

Published : Jul 13, 2022, 01:29 PM IST
 ಟ್ರಕ್‌ಗೆ ಬಿತ್ತು ಬೆಂಕಿ: 20 ಟನ್ ಆಲೂಗಡ್ಡೆ ಚಿಪ್ಸ್ ಭಸ್ಮ

ಸಾರಾಂಶ

ಆಲೂಗಡ್ಡೆ ಚಿಪ್ಸ್‌ನ್ನು ಸಾಗಿಸುತ್ತಿದ್ದ ಟ್ರಕ್‌ಗೆ ಬೆಂಕಿ ಬಿದ್ದು, ಸುಮಾರು  40,000 ಪೌಂಡ್‌ ಅಂದರೆ ಸುಮಾರು 20 ಟನ್ ಚಿಪ್ಸ್ ಬೆಂಕಿಗಾಹುತಿಯಾದ ಘಟನೆ ಫ್ಲೋರಿಡಾದ ಒಕಾಲಾದಲ್ಲಿ ನಡೆದಿದೆ. ಜುಲೈ 7, ಗುರುವಾರದಂದು ಈ ಘಟನೆ ನಡೆದಿದ್ದು, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

ಆಲೂಗಡ್ಡೆ ಚಿಪ್ಸ್‌ನ್ನು ಸಾಗಿಸುತ್ತಿದ್ದ ಟ್ರಕ್‌ಗೆ ಬೆಂಕಿ ಬಿದ್ದು, ಸುಮಾರು  40,000 ಪೌಂಡ್‌ ಅಂದರೆ ಸುಮಾರು 20 ಟನ್ ಚಿಪ್ಸ್ ಬೆಂಕಿಗಾಹುತಿಯಾದ ಘಟನೆ ಫ್ಲೋರಿಡಾದ ಒಕಾಲಾದಲ್ಲಿ ನಡೆದಿದೆ. ಜುಲೈ 7, ಗುರುವಾರದಂದು ಈ ಘಟನೆ ನಡೆದಿದ್ದು, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. 

ಇಂಟರ್‌ಸ್ಟೇಟ್ 75 ರ ಸಮೀಪದಲ್ಲಿರುವ ವೆಸ್ಟ್ ಸಿಲ್ವರ್ ಸ್ಪ್ರಿಂಗ್ಸ್ ಬೌಲೆವಾರ್ಡ್‌ನಲ್ಲಿರುವ ಔಟ್‌ಲಾ ಸ್ನಾಕ್ಸ್‌ನ ಉತ್ಪಾದನಾ ಸ್ಥಳದಲ್ಲಿ ಚಿಪ್ಸ್‌ ಪ್ಯಾಕೇಟ್‌ಗಳನ್ನು ತುಂಬಿ ಇಟ್ಟಿದ್ದ ಟ್ರಕ್‌ಗೆ ಬೆಂಕಿ ಬಿದ್ದಿದೆ ನಂತರ ಟ್ರಕ್‌ನಿಂದ ಟ್ರಾಲಿಯನ್ನು ಬೇರ್ಪಡಿಸಿ ನೀರು  ಹಾಕಿ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಹುಲ್ಲು ಹಾಸಿನ ಮೇಲೆ ಟ್ರಕ್ ಇದ್ದಿದ್ದರಿಂದ ಹೆಚ್ಚಿನ ಅನಾಹುತ ಸಂಭವಿಸಿಲ್ಲ ಎಂದು ಎಂದು ಒಕಾಲಾ ಫೈರ್ ರೆಸ್ಕ್ಯೂ ವರದಿ ಮಾಡಿದೆ. ಟ್ರಕ್‌ಗೆ ಹತ್ತಿಕೊಂಡ ಬೆಂಕಿಯನ್ನು ಅಗ್ನಿಶಾಮಕ ಸಿಬ್ಬಂದಿ ನಂದಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

 

ವಿಡಿಯೋದಲ್ಲಿ ಅಗ್ನಿಶಾಮಕ ಸಿಬ್ಬಂದಿ ಪೈಪ್‌ನಲ್ಲಿ ನೀರು ಬಿಡುತ್ತಾ ಟ್ರಾಲಿಯನ್ನು ಆನ್‌ಲೋಡಿಂಗ್ ಮಾಡುತ್ತಿದ್ದು, ಟ್ರಾಲಿಯಿಂದ ಕಲರ್‌ಫುಲ್‌ ಪ್ಯಾಕೇಟ್‌ಗಳು ಕೆಳಗೆ ಬೀಳುತ್ತಿರುವುದು ಕಾಣುತ್ತಿದೆ. ಘಟನೆಯಲ್ಲಿ ಯಾರಿಗೂ ಯಾವುದೇ ಹಾನಿಯಾಗಿಲ್ಲ. ಈ ಘಟನೆಯ ವಿಡಿಯೋಗಳನ್ನು ಒಕಾಲೋ ಫೈರ್ ರೆಸ್ಕ್ಯೂ ತಂಡ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ಘಟನೆಯ ಬಗ್ಗೆ ಬರೆದುಕೊಂಡಿದೆ. 

ಪಟಾಕಿ ಸಾಗಿಸುತ್ತಿದ್ದ ಟ್ರಕ್‌ಗೆ ಬೆಂಕಿ

ಕೆಲ ದಿನಗಳ ಹಿಂದೆ ಅಮೆರಿಕಾದಲ್ಲಿ ಅಪಘಾತವೊಂದು ಆಕಾಶವನ್ನೇ ಬೆಳಗುವಂತೆ ಮಾಡಿತ್ತು. 4,500 ಕೆ.ಜಿ ಪಟಾಕಿಯನ್ನು ಸಾಗಿಸುತ್ತಿದ್ದ ಟ್ರಕ್ಕೊಂದರಲ್ಲಿ ರಸ್ತೆ ಮಧ್ಯೆ ಚಲಿಸುತ್ತಿದ್ದಾಗಲೇ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮ ಇದ್ದಕ್ಕಿದ್ದಂತೆ ಪಟಾಕಿಗಳು ಟ್ರಕ್‌ನಿಂದ ಮೇಲೆ ಹಾರಿ ಸಿಡಿಯಲು ಆರಂಭಿಸಿದ್ದು, ಇಡೀ ಆಕಾಶದಲ್ಲಿ ಬೆಳಕಿನ ಚಿತ್ತಾರ ಮೂಡಿಸಿದವು. ಅಮೆರಿಕಾದ ನ್ಯೂಜೆರ್ಸಿಯಲ್ಲಿ ಭಾನುವಾರ (ಜೂನ್ 26) ಈ ಘಟನೆ ನಡೆದಿದೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಟ್ರಕ್‌ನ ಹಿಂದೆ ಸಿಲುಕಿದ್ದ ವಾಹನಗಳ ಚಾಲಕರು ಟ್ರಾಫಿಕ್ ತೆರವಿಗೆ ಕಾಯುತ್ತಿರುವಾಗ ರಾತ್ರಿಯ ಆಕಾಶದಲ್ಲಿ ಸಾವಿರಾರು ಕೆಜಿ ಪಟಾಕಿಗಳು ಮೇಲೇರಿ ಬೆಳಗುವ ಸುಂದರ ದೃಶ್ಯವನ್ನು ಚಿತ್ರೀಕರಿಸಿದ್ದಾರೆ.

ಸುಮಾರು 10,000 ಪೌಂಡ್ ತೂಕದ (4535 ಕೆಜಿ) ಪಟಾಕಿಗಳು ಒಮ್ಮಿಂದೊಮ್ಮೆಲೆ ಸಿಡಿಯಲು ಆರಂಭಿಸಿವೆ. ಜುಲೈ 4 ರಂದು ನಡೆಯಲಿರುವ ಅಮೆರಿಕಾ ಸ್ವಾತಂತ್ರ್ಯ ದಿನಾಚರಣೆ ನಡೆಯಲಿದ್ದು, ಅದಕ್ಕೂ ಕೆಲವೇ ದಿನಗಳ ಮೊದಲು ರಸ್ತೆಯಲ್ಲಿ ವಾಹನ ಸವಾರರಿಗೆ ಇದರ ಆಚರಣೆಯನ್ನು ನೋಡುವ ಅವಕಾಶ ಸಿಕ್ಕಂತಾಗಿದೆ. 

Sri Lanka Crisis ಹಿಂಸಾಚಾರಕ್ಕೆ ತಿರುಗಿದ ಶ್ರೀಲಂಕನ್ನರ ಪ್ರತಿಭಟನೆ, ಸೇನಾ ವಾಹನಕ್ಕೆ ಬೆಂಕಿ!

ಪಟಾಕಿಯಿಂದ ಉಂಟಾದ ಬೆಂಕಿಯಿಂದಾಗಿ ಹೆದ್ದಾರಿಯನ್ನು ಮುಚ್ಚಲಾಗಿತ್ತು. ಪರಿಣಾಮ ರಸ್ತೆಯಲ್ಲಿ ಸೋಮವಾರ ಬೆಳಗಿನ ಜಾವದವರೆಗೂ  ಮೈಲುಗಟ್ಟಲೆ ವಾಹನಗಳ ಸರತಿ ಸಾಲುಗಳು ಕಂಡು ಬಂದವು ಎಂದು ವರದಿಯಾಗಿದೆ. ಪೊಲೀಸರ ಪ್ರಕಾರ, ಟ್ರಕ್‌ನ ಚಾಲಕ ಭಾನುವಾರ ರಾತ್ರಿ 10:30ಕ್ಕೆ ಡೋಲಿ ಟೈರ್ ಸುಡುವುದನ್ನು ಗಮನಿಸಿ ಟ್ರಕ್‌ ಅನ್ನು ನಿಲ್ಲಿಸಿ ಟ್ರಕ್‌ನಿಂದ ಹೊರ ಬಂದಿದ್ದು, ಅವರ ತೋಳಿಗೆ ಸುಟ್ಟ ಗಾಯಗಳಾಗಿವೆ. ಆದರೆ ಬೆಂಕಿಗೆ ಕಾರಣ ಇನ್ನೂ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಅಪರಿಚಿತ ವ್ಯಕ್ತಿಯೊಬ್ಬರು ದೊಡ್ಡ ಪಟಾಕಿಯನ್ನು ಟ್ರಕ್‌ಗೆ ಎಸೆದ ಪರಿಣಾಮ ಈ ಭಯಾನಕ ಘಟನೆಗೆ ನಡೆಯಿತು ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

ಜಮೀನು ವಿವಾದ: ಬುಡಕಟ್ಟು ಮಹಿಳೆಗೆ ಬೆಂಕಿ ಹಚ್ಚಿ ಚಿತ್ರೀಕರಿಸಿದ ದುರುಳರು: ವಿಡಿಯೋ ವೈರಲ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮದ್ಯಪ್ರಿಯರಿಗೆ ಶಾಕ್.. ಮಧ್ಯಾಹ್ನ 2 ರಿಂದ 5 ರವರೆಗೆ ಮದ್ಯ ಮಾರಾಟ ಬಂದ್: ಏನಿದು ಥಾಯ್‌ ವಿಚಿತ್ರ ನಿಯಮ!
ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ