
ಕಾಶ್ಮೀರ(ಮಾ.07): ಉಡುಪಿಯಿಂದ ಆರಂಭಗೊಂಡ ಹಿಜಾಬ್ ವಿವಾದ, ಕರ್ನಾಟಕ, ಭಾರತ ಹಾಗೂ ವಿದೇಶಗಳಲ್ಲೂ ಭಾರಿ ಸದ್ದು ಮಾಡಿತ್ತು. ವಿವಾದ, ಪ್ರತಿಭಟನೆ, ಕಾನೂನು ಹೋರಾಟ ಸೇರಿದಂತೆ ಹಲವು ಹೋರಾಟಗಳು ನಡೆದಿದೆ. ಇದೀಗ ಹಿಜಾಬ್ ಹೋರಾಟ ಪಾಕಿಸ್ತಾನ ಆಕ್ರಮಿ ಕಾಶ್ಮೀರದಲ್ಲಿ ಆರಂಭಗೊಂಡಿದೆ. ಪಾಕ್ ಆಕ್ರಮಿತ ಕಾಶ್ಮೀರದ ಸ್ಥಳೀಯ ಆಡಳಿತ ಮಹತ್ವದ ಆದೇಶ ನೀಡಿದೆ. ವಿದ್ಯಾರ್ಥಿನಿಯರು, ಶಿಕ್ಷಕಿಯರು ಕಡ್ಡಾಯವಾಗಿ ಹಿಜಾಬ್ ಧರಿಸಬೇಕು ಎಂದು ಸುತ್ತೋಲೆ ನೀಡಿದೆ. ಇಷ್ಟೇ ಅಲ್ಲ ಹಿಜಾಬ್ ನಿಯಮ ಉಲ್ಲಂಘಿಸಿದರೆ ಶಾಲಾ ಆಡಳಿ ಮಂಡಳಿ ವಿರುದ್ಧವೂ ಕ್ರಮ ಕೈಗೊಳ್ಳುವುದಾಗಿ ಸ್ಥಳೀಯ ಆಡಳಿತ ಸುತ್ತೋಲೆಯಲ್ಲಿ ಹೇಳಿದೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಸ್ಥಳೀಯ ಆಡಳಿತದ ವಿರುದ್ಧ ಇದೀಗ ಆಕ್ರೋಶಗಳು ವ್ಯಕ್ತವಾಗಿದೆ. ಹಲವು ವಿದ್ಯಾರ್ಥಿನಿಯರು ಹಿಜಾಬ್ ವಿರೋಧಿಸಿದ್ದಾರೆ. ಇತ್ತ ಸ್ಥಳೀಯ ಮಾಧ್ಯಮಗಳು ಈ ನಿರ್ಧಾರವನ್ನು ವಿರೋಧಿಸಿದೆ. ಇದು ತಾಲಿಬಾನ್ ಆಡಳಿತ ಎಂದು ಮಾಧ್ಯಮಗಳು ಆಕ್ರೋಶ ವ್ಯಕ್ತಪಡಿಸಿದೆ. ಹಿಜಾಬ್ ಕಡ್ಡಾಯ ಉಚಿತವಲ್ಲ, ವಿದ್ಯಾರ್ಥಿನಿಯರನ್ನು ವಿದ್ಯಾಭ್ಯಾಸದಿಂದ ವಂಚಿತರನ್ನಾಗಿ ಮಾಡಬೇಡಿ ಎಂದು ಸೂಚನೆ ನೀಡಿದೆ.
ಸುಪ್ರೀಂ ಕೋರ್ಟ್‌ನಲ್ಲಿ ಹೋಳಿ ಹಬ್ಬದ ನಂತರ ಹಿಜಾಬ್ ಪ್ರಕರಣ ವಿಚಾರಣೆ!
ಸರ್ಕಾರ ತಾಲಿಬಾನ್ ಆಡಳಿತ ಜಾರಿಗೆ ಮಾಡುತ್ತಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಮುಸ್ಲಿಮರು ಮಾತ್ರವಲ್ಲ, ಇತರ ಧರ್ಮದವರು ನೆಲೆಸಿದ್ದಾರೆ.ಇದೀಗ ಹಿಜಾಬ್ ಕಡ್ಡಾಯ ಮಾಡುವುದು ಸೂಕ್ತ ನಿರ್ಧಾರವಲ್ಲ ಎಂದು ಹಲವು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನದಲ್ಲಿ ಆಹಾರ, ಔಷಧಿಗೆ ಹಾಹಾಕಾರ ಇದೆ. ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಈ ವಿಚಾರಗಳು ಚರ್ಚೆಯಾಗಬೇಕು. ಇದಕ್ಕೆ ಪರಿಹಾರ ಹುಡುಕಬೇಕು. ಇದರ ಬದಲಾಗಿ ಹಿಜಾಬ್ ವಿಚಾರ ಹಿಡಿದು ವಿದ್ಯಾರ್ಥಿನಿಯರ ಮೇಲೆ ಒತ್ತಡ ಹೇರುವ ಪ್ರಯತ್ನ ಸರಿಯಲ್ಲ ಎಂದು ಸ್ಥಳೀಯರು ಹೇಳಿದ್ದಾರೆ. ಇತಿಹಾಸದಲ್ಲೇ ಅತ್ಯಂತ ಕಠಿಣ ಆರ್ಥಿಕ ದುಸ್ಥಿತಿಗೆ ತಲುಪಿರುವ ಪಾಕಿಸ್ತಾನಕ್ಕೆ ಇದೀಗ ವೈದ್ಯಕೀಯ ಕ್ಷೇತ್ರದಲ್ಲೂ ಸಮಸ್ಯೆ ಆರಂಭವಾಗಿದೆ. ಅಗತ್ಯ ಔಷಧಗಳ ಲಭ್ಯತೆ ಪ್ರಮಾಣ ಅತ್ಯಂತ ಕನಿಷ್ಠ ಪ್ರಮಾಣಕ್ಕೆ ಕುಸಿದಿದೆ. ಆಸ್ಪತ್ರೆಗಳಲ್ಲಿ ದಾಖಲಾಗಿರುವ ರೋಗಿಗಳು ಸರಿಯಾದ ಚಿಕಿತ್ಸೆ ಸಿಗದೇ ಪರದಾಡುವಂತಾಗಿದೆ. ವೈದ್ಯಕೀಯ ಉತ್ಪನ್ನಗಳ ಅಭಾವದಿಂದ ರೋಗಿಗಳ ಶಸ್ತ್ರಚಿಕಿತ್ಸೆಗೆ ಮುಂದಾಗದಂತೆ ವೈದ್ಯರಿಗೆ ಸೂಚನೆಗಳನ್ನು ನೀಡಲಾಗುತ್ತಿದೆ ಎಂದು ಬೆಳಕಿಗೆ ಬಂದಿದೆ.
ಹಣ, ಖ್ಯಾತಿ, ಹೆಸರು ಬಿಟ್ಟು ಹಿಜಾಬ್ ಆಯ್ಕೆಯ ಕಾರಣ ಬಿಚ್ಚಿಟ್ಟು ಕಣ್ಣೀರಾಕಿದ ನಟಿ ಸನಾ ಖಾನ್
‘ಪಾಕಿಸ್ತಾನ ಔಷಧಗಳಿಗೆ ಬಹುತೇಕ ಹೊರದೇಶಗಳನ್ನೇ ನೆಚ್ಚಿಕೊಂಡಿದ್ದು, ಇದೀಗ ವಿದೇಶಿ ವಿನಿಮಯ ಪ್ರಮಾಣ ಕುಸಿದಿರುವುದರಿಂದ ಔಷಧಗಳನ್ನು ಆಮದು ಮಾಡಿಕೊಳ್ಳುವುದು ಸವಾಲಾಗಿ ಪರಿಣಮಿಸಿದೆ. ಒಂದೆಡೆ ಆಮದು ಮಾಡಿಕೊಳ್ಳಲು ವಿದೇಶಿ ವಿನಿಮಯದ ಕೊರತೆ ಇದ್ದರೆ, ಮತ್ತೊಂದೆಡೆ ಅತಿಯಾದ ಬೆಲೆ ಏರಿಕೆಯಿಂದ ದೇಶೀಯವಾಗಿಯೂ ಔಷಧಗಳನ್ನು ತಯಾರಿಸುವುದು ಸಾಧ್ಯವಾಗುತ್ತಿಲ್ಲ. ಹಾಗಾಗಿ ಸ್ಥಳೀಯ ವೈದ್ಯಕೀಯ ಕಂಪನಿಗಳು ಉತ್ಪಾದನೆಯನ್ನು ನಿಲ್ಲಿಸಿದ್ದು, ರೋಗಿಗಳ ಕಷ್ಟವನ್ನು ಮತ್ತಷ್ಟುಹೆಚ್ಚು ಮಾಡಿದೆ. ಔಷಧಗಳ ಆಮದಿಗೆ ಬೇಕಾದ ಹಣ ನೀಡಲು ಬ್ಯಾಂಕುಗಳು ನಿರಾಕರಿಸಿವೆ ಎಂದು ಔಷಧ ಉತ್ಪಾದಕ ಕಂಪನಿಗಳು ದೂರಿವೆ’ ಎಂದು ಪಾಕ್ ಮಾಧ್ಯಮವೊಂದು ವರದಿ ಮಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ