ಪಾಕ್‌ನಲ್ಲಿ ಹೋಳಿಗೂ ಅವಕಾಶವಿಲ್ವಾ..? ಓಕುಳಿ ಆಡಿದ ಹಿಂದೂ ವಿದ್ಯಾರ್ಥಿಗಳ ಮೇಲೆ ಹಲ್ಲೆ: ಕನಿಷ್ಠ 15 ಜನರಿಗೆ ಗಾಯ

By BK AshwinFirst Published Mar 7, 2023, 3:31 PM IST
Highlights

ಸೋಮವಾರ ಪಂಜಾಬ್ ವಿಶ್ವವಿದ್ಯಾಲಯದ ಕಾನೂನು ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, ಸುಮಾರು 30 ಹಿಂದೂ ವಿದ್ಯಾರ್ಥಿಗಳು ಹೋಳಿ ಆಚರಿಸಲು ಜಮಾಯಿಸಿದ್ದ ವೇಳೆ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

ಲಾಹೋರ್ (ಮಾರ್ಚ್‌ 7, 2023): ಪಾಕಿಸ್ತಾನದ ಲಾಹೋರ್‌ನ ಪಂಜಾಬ್‌ ವಿಶ್ವವಿದ್ಯಾನಿಲಯ ಆವರಣದಲ್ಲಿ ಇಸ್ಲಾಮಿಕ್ ವಿದ್ಯಾರ್ಥಿ ಸಂಘಟನೆಯ ಸದಸ್ಯರು ಹೋಳಿ ಆಚರಿಸದಂತೆ ತಡೆದ ಕಾರಣ ಸೋಮವಾರ ಪಾಕಿಸ್ತಾನದ ಅಲ್ಪಸಂಖ್ಯಾತ ಹಿಂದೂ ಸಮುದಾಯದ ಕನಿಷ್ಠ 15 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.ಬಣ್ಣಗಳ ಹಬ್ಬವಾದ ಹೋಳಿಯನ್ನು ವಸಂತಕಾಲದ ಆರಂಭವನ್ನು ಗುರುತಿಸಲು ಆಚರಿಸಲಾಗುತ್ತದೆ. ಸೋಮವಾರ ಪಂಜಾಬ್ ವಿಶ್ವವಿದ್ಯಾಲಯದ ಕಾನೂನು ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, ಸುಮಾರು 30 ಹಿಂದೂ ವಿದ್ಯಾರ್ಥಿಗಳು ಹೋಳಿ ಆಚರಿಸಲು ಜಮಾಯಿಸಿದ್ದ ವೇಳೆ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

ಕಾನೂನು ಕಾಲೇಜಿನ (Law College) ಹುಲ್ಲುಹಾಸಿನ (Lawn) ಮೇಲೆ ವಿದ್ಯಾರ್ಥಿಗಳು (Students) ಜಮಾಯಿಸಿದಾಗ, ಇಸ್ಲಾಮಿ ಜಮಿಯತ್ ತುಲ್ಬಾ (Islami Jamiat Tulba) (ಐಜೆಟಿ) (IJT) ಕಾರ್ಯಕರ್ತರು ಹೋಳಿ ಆಚರಿಸದಂತೆ ಅವರನ್ನು ಬಲವಂತವಾಗಿ ತಡೆದರು. ಈ ವೇಳೆ ಘರ್ಷಣೆಗೆ ಕಾರಣವಾಗಿದ್ದು, 15 ಹಿಂದೂ (Hindu) ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ’’ ಎಂದು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಮತ್ತು ಪ್ರತ್ಯಕ್ಷದರ್ಶಿ ಕಾಶಿಫ್ ಬ್ರೋಹಿ ಪಿಟಿಐಗೆ ತಿಳಿಸಿದರು. ಅಲ್ಲದೆ, ತಾವು ವಿಶ್ವವಿದ್ಯಾಲಯದ ಆಡಳಿತದಿಂದ (University Administration) ಪೂರ್ವಾನುಮತಿ ಪಡೆದಿದ್ದೆವು ಎಂದು ಕಾಶಿಫ್ ಬ್ರೋಹಿ ಹೇಳಿದ್ದಾರೆ.

ಇದನ್ನು ಓದಿ: ಬನಾರಸ್‌ ಹಿಂದೂ ವಿವಿ ಜಿಹಾದಿ ಪರವಾಗಿದ್ಯಾ..? ಹೋಳಿ ಆಚರಣೆ ನಿಷೇಧ ಆದೇಶಕ್ಕೆ ವಿಎಚ್‌ಪಿ ಪ್ರಶ್ನೆ

ಇಸ್ಲಾಮಿ ಜಮಿಯತ್ ತುಲ್ಬಾ ಸದಸ್ಯರ ನಡವಳಿಕೆ ವಿರುದ್ಧ ಪ್ರತಿಭಟಿಸಿ ಉಪಕುಲಪತಿ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಿದಾಗ ವಿಶ್ವವಿದ್ಯಾನಿಲಯದ ಸಿಬ್ಬಂದಿ ತಮ್ಮ ಮೇಲೆ ಥಳಿಸಿದ್ದಾರೆ ಎಂದು ಕೈ ಗಾಯ ಮಾಡಿಕೊಂಡಿರುವ ಖೇತ್ ಕುಮಾರ್ ಹೇಳಿದ್ದಾರೆ. "ನಮ್ಮನ್ನು ಥಳಿಸಿ ಚಿತ್ರಹಿಂಸೆ ನೀಡಿದ ಐಜೆಟಿ ಮತ್ತು ಭದ್ರತಾ ಸಿಬ್ಬಂದಿ ವಿರುದ್ಧ ನಾವು ಪೊಲೀಸರಿಗೆ ದೂರು ಸಲ್ಲಿಸಿದ್ದೇವೆ, ಆದರೆ ಇನ್ನೂ ಎಫ್‌ಐಆರ್ ದಾಖಲಾಗಿಲ್ಲ" ಎಂದೂ ಖೇತ್ ಕುಮಾರ್ ಹೇಳಿದರು.

ಆದರೆ, ತಮ್ಮ ವಿದ್ಯಾರ್ಥಿಗಳು ಯಾವುದೇ ಗಲಾಟೆಯಲ್ಲಿ ಭಾಗಿಯಾಗಿಲ್ಲ, ನಮ್ಮ ವಿದ್ಯಾರ್ಥಿಗಳ ಪಾತ್ರ ಇಲ್ಲ ಎಂದು ಐಜೆಟಿ ವಕ್ತಾರ ಇಬ್ರಾಹಿಂ ಶಾಹಿದ್ ಪಿಟಿಐಗೆ ಮಾಹಿತಿ ನೀಡಿದ್ದಾರೆ. "ಹಿಂದೂ ವಿದ್ಯಾರ್ಥಿಗಳೊಂದಿಗೆ ಜಗಳದಲ್ಲಿ ತೊಡಗಿರುವ ಯಾವುದೇ ವಿದ್ಯಾರ್ಥಿಗಳು ಐಜೆಟಿಗೆ ಸೇರಿದವರಲ್ಲ" ಎಂದು ಅವರು ಹೇಳಿದರು ಮತ್ತು ಕಾನೂನು ಕಾಲೇಜಿನಲ್ಲಿ ಐಜೆಟಿ ಕುರಾನ್‌ ಓದುವ ಈವೆಂಟ್‌ ಅನ್ನು ಆಯೋಜಿಸಿತ್ತು ಎಂದೂ ಹೇಳಿದರು.

ಇದನ್ನೂ ಓದಿ: ತವರಿಗೆ ಕರ್ಕೊಂಡೋಗಿಲ್ಲ ಅಂತ ಹೆಂಡ್ತಿ ಸಿಟ್ಟಾಗಿದ್ದಾಳೆ; ಹೋಳಿ ಹಬ್ಬಕ್ಕೆ 10 ದಿನ ರಜೆ ಕೇಳಿದ ಪೊಲೀಸಪ್ಪ..!

ಅಲ್ಲದೆ, ಕಾನೂನು ಕಾಲೇಜಿನ ಹುಲ್ಲುಹಾಸಿನಲ್ಲಿ ಹೋಳಿ ಆಚರಣೆಗೆ ವಿಶ್ವವಿದ್ಯಾಲಯದ ಆಡಳಿತವು ಅನುಮತಿ ನೀಡಿಲ್ಲ ಎಂದು ಪಂಜಾಬ್ ವಿಶ್ವವಿದ್ಯಾನಿಲಯದ ವಕ್ತಾರ ಖುರ್ರಂ ಶಹಜಾದ್ ಪಿಟಿಐಗೆ ಹೇಳಿದರು. ಹಾಗೂ, ಉಪ ಕುಲಪತಿ ಈ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ ಎಂದೂ ಖುರ್ರಂ ಶಹಜಾದ್ ಹೇಳಿದರು.

ಇದನ್ನೂ ಓದಿ: ಬನಾರಸ್ ನಲ್ಲಿ ಬಣ್ಣಗಳ ಬದಲು ಚಿತಾ ಭಸ್ಮದಿಂದ ಆಚರಿಸ್ತಾರಂತೆ ಹೋಳಿ ಹಬ್ಬ

click me!