ಪಾಕ್ ನೂತನ ಪ್ರಧಾನಿಯಾಗಿ ಶಹಬಾಜ್ ಷರೀಫ್ ಆಯ್ಕೆ, ಜನರಿಂದ ಚೋರ್ ಆಯಾ ಘೋಷಣೆ!

By Suvarna NewsFirst Published Mar 3, 2024, 4:18 PM IST
Highlights

ಫಲಿತಾಂಶ ಹೊರಬಿದ್ದ ಬಳಿಕವೂ ಹಲವು ನಾಟಕೀಯ ಬೆಳವಣಿಗೆಗೆ ಸಾಕ್ಷಿಯಾಗಿದ್ದ ಪಾಕಿಸ್ತಾನ ಚುನಾವಣೆ ಕುತೂಹಲ ಅಂತ್ಯಗೊಂಡಿದೆ. ಇದೀಗ ಪಾಕಿಸ್ತಾನ ನೂತನ ಪ್ರಧಾನಿಯಾಗಿ ಶಹಬಾಜ್ ಷರೀಫ್ ಆಯ್ಕೆಯಾಗಿದ್ದಾರೆ. ಆದರೆ ಶಹಬಾಜ್ ಷರೀಫ್ ಪಾಕ್ ಪ್ರಧಾನಿಯಾಗಿ ಆಯ್ಕೆಯಾಗುತ್ತಿದ್ದಂತೆ ಚೋರ್ ಆಯಾ, ಚೋರ್ ಆಯಾ ಎಂದು ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ.

ಇಸ್ಲಾಮಾಬಾದ್(ಮಾ.03) ಪ್ರತಿಭಟನೆ, ಹಿಂಸಾಚಾರ, ಆರ್ಥಿಕ ಬಿಕ್ಕಟ್ಟು, ಭ್ರಷ್ಟಾಚಾರ, ರಾಜಕೀಯ ಅಸ್ಥಿರತೆ ಸೇರಿದಂತೆ ಹಲವು ಸಂಕಷ್ಟಗಳ ನಡುವೆ ಪಾಕಿಸ್ತಾನ ಚುನಾವಣೆ ನಡೆದಿತ್ತು. ಬಳಿಕ ಫಲಿತಾಂಶ ಘೋಷಣೆಯಾದರೂ ಪ್ರಧಾನಿ ಯಾರು ಅನ್ನೋ ಕುತೂಹಲಕ್ಕೆ ಮತ್ತಷ್ಟು ಹೆಚ್ಚಾಗಿತ್ತು. ಇದೀಗ ಅಧಿಕೃತವಾಗಿ ಪಾಕಿಸ್ತಾನ ನೂತನ ಪ್ರಧಾನಿಯಾಗಿ ಶಹಬಾಜ್ ಷರೀಫ್ ಆಯ್ಕೆಯಾಗಿದ್ದಾರೆ. ಆದರೆ ಅದಿಕೃತ ಘೋಷಣೆಯಾಗುತ್ತಿದ್ದಂತೆ, ವಿಪಕ್ಷಗಳು ಚೋರ್ ಆಯಾ, ಚೋರ್ ಆಯಾ(ಕಳ್ಳ ಬಂದ , ಕಳ್ಳ ಬಂದ) ಎಂದು ಘೋಷಣೆ ಕೂಗಿದ್ದಾರೆ.

ನವಾಜ್ ಷರೀಪ್ 2ನೇ ಬಾರಿ ಪಾಕಿಸ್ತಾನ ಪ್ರಧಾನಿಯಾಗಿದ್ದಾರೆ. ಇಂದು ಪಾಕಿಸ್ತಾನ ಸಂಸತ್ತಿನಲ್ಲಿ ಪಿಎಂಎಲ್‌ ಎನ್‌ ಹಾಗೂ ಮಾಜಿ ಸಚಿವ ಬಿಲಾವಲ್‌ ಭುಟ್ಟೋ ಅವರು ಪಿಪಿಪಿ ಪಕ್ಷದ ಮೈತ್ರಿಕೂಟದಿಂದ ಪ್ರಧಾನಿಯಾಗಿ  ಶಹಬಾಜ್ ಷರೀಫ್ ಆಯ್ಕೆಯಾಗಿದ್ದಾರೆ. 336 ಮತಗಳ ಪೈಕಿ 201 ಮತಗಳನ್ನು ಪಡೆಯುವ ಮೂಲಕ ನವಾಜ್ ಷರೀಫ್ ಪಾಕಿಸ್ತಾನದ 33ನೇ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.

ಪಾಕ್ ಚುನಾವಣೆ ಫಲಿತಾಂಶ ಸಂಭ್ರಮದಲ್ಲಿ ಬಲೂನ್ ಬದಲು ಕಾಂಡೋಮ್ ಬಳಕೆ, ವಿಡಿಯೋ ವೈರಲ್!

ಪ್ರಧಾನಿಯಾಗಿ ಆಯ್ಕೆಯಾಗಿರುವ ನವಾಜ್ ಷರೀಫ್ ಸೋಮವಾರ(ಮಾ.04) ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಪಾಕಿಸ್ತಾನ ರಾಷ್ಟ್ರಪತಿಗಳ ಐವಾನ್ ಇ ಸಾದ್ರ್ ಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಎಪ್ರಿಲ್ 2022ರಿಂದ ಆಗಸ್ಟ್ 2023ರ ವರೆಗೆ ಪಾಕಿಸ್ತಾನದ ಪ್ರಧಾನಿಯಾಗಿದ್ದ ನವಾಜ್ ಷರೀಫ್ ಮೇಲೆ ಹಲವು ಆರೋಪಗಳು ಕೇಳಿಬಂದಿತ್ತು. ಈ ಪೈಕಿ ಪಾಕಿಸ್ತಾನವನ್ನು ಮತ್ತಷ್ಟು ಅಧೋಗತಿಗೆ ತಳ್ಳಿದ ಗಂಭೀರ ಆರೋಪವೂ ಇತ್ತು. ಜೊತೆಗೆ ಸರ್ಕಾರದ ಯೋಜನೆಗಳ ಹಣ ಲೂಟಿ, ಭ್ರಷ್ಟಾಚಾರ ಸೇರಿದಂತೆ ಹಲವು ಆರೋಪಗಳು ಇವೆ. ಹೀಗಾಗಿ ಇಂದು ವಿಪಕ್ಷಗಳು ಚೋರ್ ಆಯಾ, ಚೋರ್ ಆಯಾ ಎಂದು ಘೋಷಣೆ ಕೂಗಿದೆ. 

 

دیکھو دیکھو کون آیا، چور آیا، چور آیا، تحریک انصاف کے ارکان کے نعرے pic.twitter.com/hSRtDH4Uqk

— PTI (@PTIofficial)

 

ಫೆ.8ರಂದು ಚುನಾವಣೆ ನಡೆದ ಬಳಿಕ ಪಾಕಿಸ್ತಾನ ಸೇನೆ ಆದೇಶದ ಮೇರೆಗೆ ಎರಡೂ ಪಕ್ಷಗಳು ಸರ್ಕಾರ ರಚನೆಗೆ ಹಲವು ಸುತ್ತಿನ ಮಾತುಕತೆ ನಡೆಸಿದವು. ಈ ಸಭೆಯಲ್ಲಿ ಮಾಜಿ ಪ್ರಧಾನಿ ನವಾಜ್‌ ಷರೀಫ್‌ 3 ವರ್ಷ, ಬಿಲಾವಲ್‌ ಭುಟ್ಟೋ 2 ವರ್ಷ ಪ್ರಧಾನಿ ಎಂಬ ಪ್ರಸ್ತಾಪ ಇತ್ತಾದರೂ ಇದಕ್ಕೆ ಒಮ್ಮತ ದೊರೆತಿರಲಿಲ್ಲ. ಮತ್ತೆ ಸಭೆ ನಡೆಸಿದ ಎರಡೂ ಪಕ್ಷಗಳು ಶಹಬಾಜ್‌ ಷರೀಫ್‌ರನ್ನು ಪ್ರಧಾನಿಯನ್ನಾಗಿ ಮಾಡಿ, ದೇಶದ ಮುಂದಿನ ರಾಷ್ಟ್ರಪತಿಯನ್ನಾಗಿ ಪಿಪಿಪಿ ಪಕ್ಷದ ಆಸಿಫ್‌ ಜರ್ದಾರಿಯನ್ನು ಮಾಡುವುದಕ್ಕೆ ಒಪ್ಪಂದ ಮಾಡಿಕೊಂಡಿತ್ತು. 

ಬಹುಮತವಿಲ್ಲದೆ ಚುನಾವಣೆಯಲ್ಲಿ ವಿಜಯ ಘೋಷಿಸಿದ ನವಾಜ್‌ ಷರೀಫ್‌!

ಚುನಾವಣೆಯಲ್ಲಿ ಶಹಬಾಜ್‌ ಷರೀಫ್ ಅವರ ಪಿಎಂಎಲ್‌ ಎನ್‌ 75 ಸೀಟುಗಳನ್ನು ಗಳಿಸಿತ್ತು. ಬಳಿಕ ಬಿಲಾವಲ್‌ ಭುಟ್ಟೊ ಅವರ ಪಿಪಿಪಿ ಹಾಗೂ ನಾಲ್ಕು ಪಕ್ಷಗಳ ಜೊತೆ ಹಲವು ಸುತ್ತಿನ ಮಾತುಕತೆ ಮೂಲಕ ಕೊನೆಗೆ ಶಹಬಾಜ್‌ ಷರೀಫ್‌ ಅವರನ್ನು ಪ್ರಧಾನಿಯನ್ನಾಗಿ ಆಯ್ಕೆ ಮಾಡಲಾಗಿತ್ತು.  

click me!