ಅಮೆರಿಕದಲ್ಲಿ ಸುಖಾಸುಮ್ಮನೆ ಗುಂಡಿನ ದಾಳಿಗೆ ಬಲಿಯಾದ ಡ್ಯಾನ್ಸರ್ ಅಮರನಾಥ್ ಘೋಷ್ ಯಾರು?

By Suvarna News  |  First Published Mar 3, 2024, 12:17 PM IST

ಅಮೇರಿಕಾದಲ್ಲಿ ಕಳೆದ ವಾರ ಮತ್ತೊಬ್ಬ ಭಾರತೀಯ ಗುಂಡೇಟಿಗೆ ಬಲಿಯಾಗಿದ್ದು, ಮೃತ ಅಮರನಾಥ ಘೋಷ್ ಯಾರು?


ಇತ್ತೀಚಿನ ತಿಂಗಳುಗಳಲ್ಲಿ US ನಲ್ಲಿ ಭಾರತೀಯ-ಅಮೆರಿಕನ್ನರ ಮೇಲೆ ಒಂದಾದ ಮೇಲೊಂದು ದಾಳಿಯಾಗಿ ಕೊಲೆಗಳು ನಡೆಯುತ್ತಿವೆ. ಈ ರೀತಿ ಕಳೆದ ವಾರ ತನ್ನ ಪಾಡಿಗೆ ತಾನು ನಡೆವಾಗ ಗುಂಡೇಟಿಗೆ ಬಲಿಯಾಗಿದ್ದು ಭಾರತೀಯ ಅಮರನಾಥ ಘೋಷ್. ಇಷ್ಟಕ್ಕೂ ಈ ಘೋಷ್ ಯಾರು, ಅವರು ಅಮೆರಿಕದಲ್ಲಿ ಏನು ಮಾಡುತ್ತಿದ್ದರು?

ಅಮರನಾಥ ಘೋಷ್
ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯ ಸೂರಿ ಪಟ್ಟಣದಿಂದ ಬಂದ ಘೋಷ್ ಅವರು 2007 ರಿಂದ 2011ರವರೆಗೆ ಲಲಿತಕಲೆಗಳ ಅಧ್ಯಯನ ಮತ್ತು ಪ್ರದರ್ಶನಕ್ಕೆ ಪ್ರಮುಖ ಕೇಂದ್ರವಾಗಿರುವ ಚೆನ್ನೈನ ಪ್ರತಿಷ್ಠಿತ ಸಂಸ್ಥೆಯಾದ ಕಲಾಕ್ಷೇತ್ರದ ಹಳೆಯ ವಿದ್ಯಾರ್ಥಿಯಾಗಿದ್ದರು. ಅವರು ಭರತನಾಟ್ಯ, ಕೂಚಿಪುಡಿ, ಮಣಿಪುರಿ ಮತ್ತು ಕಥಕ್ ಎಂಬ ನಾಲ್ಕು ನೃತ್ಯ ಶೈಲಿಗಳಲ್ಲಿ ಚೆನ್ನಾಗಿ ಪಾರಂಗತರಾಗಿದ್ದರು. ಶಾಂತಿನಿಕೇತನ ಶೈಲಿಯಲ್ಲಿ ರವೀಂದ್ರ ನೃತ್ಯ ಮತ್ತು ರವೀಂದ್ರ ಸಂಗೀತವನ್ನು ಸಹ ಕಲಿತಿದ್ದಾರೆ. ಅವರು ಸಂಸ್ಕೃತಿ ಸಚಿವಾಲಯದಿಂದ ಕೂಚಿಪುಡಿಗಾಗಿ ರಾಷ್ಟ್ರೀಯ ವಿದ್ಯಾರ್ಥಿವೇತನವನ್ನು ಸಹ ಪಡೆದಿದ್ದಾರೆ ಮತ್ತು ನವದೆಹಲಿಯಲ್ಲಿ ನಡೆದ ಅಂತರರಾಷ್ಟ್ರೀಯ ನೃತ್ಯ ಮತ್ತು ಸಂಗೀತ ಉತ್ಸವದಲ್ಲಿ ನೃತ್ಯ ಕನಕ ಮಣಿ ಸಮಾನ್ ಅನ್ನು ಸಹ ಪಡೆದಿದ್ದಾರೆ.

Tap to resize

Latest Videos

ನಿಂಬು ಶರಬತ್ತು ಮಾಡೋ ಕಾಲ ಬಂದಿದೆ.. ಪರ್ಫೆಕ್ಟ್ ಲೆಮನೇಡ್ ಮಾಡೋದು ಹೀಗ ...

ಅಮರನಾಥ ಘೋಷ್ ಅವರು ವಾಷಿಂಗ್ಟನ್ ವಿಶ್ವವಿದ್ಯಾಲಯದ ಪ್ರದರ್ಶನ ಕಲೆ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದರು. 34 ವರ್ಷ ವಯಸ್ಸಿನ ಘೋಷ್ ತರಬೇತಿ ಪಡೆದ ಭಾರತೀಯ ಶಾಸ್ತ್ರೀಯ ನೃತ್ಯಗಾರ. ಅವರು ಮಿಸೌರಿಯ ಸೇಂಟ್ ಲೂಯಿಸ್‌ನಲ್ಲಿ ಗುಂಡಿಕ್ಕಿ ಕೊಲ್ಲಲ್ಪಟ್ಟರು.

ಶಿಕಾಗೋದಲ್ಲಿರುವ ಭಾರತೀಯ ರಾಯಭಾರ ಕಚೇರಿಯು 'ಖಂಡನೀಯ ಗುಂಡಿನ ದಾಳಿ' ಕುರಿತು ತನಿಖೆ ನಡೆಸಲು ಪೊಲೀಸರು ಮತ್ತು ಅಧಿಕಾರಿಗಳೊಂದಿಗೆ ವಿಷಯವನ್ನು ತೆಗೆದುಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.

ಲ್ಯಾಂಬೋರ್ಗಿನಿ, ಫೆರಾರಿ, ಕೋಟಿ ಕೋಟಿ ಹಣ.. ಐಟಿ ದಾಳಿ ಎದುರಿಸುತ್ತಿರು ...
 

'ಮೃತ ಅಮರನಾಥ್ ಘೋಷ್ ಅವರ ಸಂಬಂಧಿಕರಿಗೆ ಕಾನ್ಸುಲೇಟ್ ಎಲ್ಲಾ ಸಹಾಯವನ್ನು ನೀಡುತ್ತಿದೆ. ಖಂಡನೀಯ ಗುಂಡಿನ ದಾಳಿಯ ತನಿಖೆಗಾಗಿ ಸೇಂಟ್ ಲೂಯಿಸ್ ಪೋಲಿಸ್ ಮತ್ತು ವಿಶ್ವವಿದ್ಯಾಲಯದೊಂದಿಗೆ ಪ್ರಕರಣವನ್ನು ಬಲವಾಗಿ ತೆಗೆದುಕೊಳ್ಳಲಾಗಿದೆ' ಎಂದು ರಾಯಭಾರ ಕಚೇರಿಯು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ತಿಳಿಸಿದೆ.

ಅಮರನಾಥೇಂದ್ರ ಡಾಟ್ ಕಾಮ್ ಪ್ರಕಾರ, ಅಮರನಾಥ ಘೋಷ್ ತಮಿಳುನಾಡಿನ ಚೆನ್ನೈ ಮೂಲದ ಪ್ರದರ್ಶಕ ಕಲಾವಿದ, ನೃತ್ಯ ಸಂಯೋಜಕ ಮತ್ತು ಕಲಾ ಶಿಕ್ಷಣತಜ್ಞರಾಗಿದ್ದರು. ಅವರು ತಂದೆ, ತಾಯಿ ಇಬ್ಬರನ್ನೂ ಕಳೆದುಕೊಂಡಿದ್ದರು. 

click me!