ಸತ್ತ ಜಿರಳೆಗೆ ಜೀವ ನೀಡಿದ ಫಿಲಿಫೈನ್ಸ್‌ನ ಕಲೆಗಾತಿ

By Suvarna NewsFirst Published Jan 9, 2022, 10:30 PM IST
Highlights
  • ಆತ್ಮವಿಲ್ಲದ ದೇಹದ ಮೇಲೆ ಮನಮೋಹಕ ಸೌಂದರ್ಯ ಲಹರಿ
  • ಫಿಲಿಫೈನ್ಸ್‌ ಕಲಾವಿದೆಯ ಕಲೆಗಾರಿಕೆ
  • ಸತ್ತ ಜಿರಳೆಗೆ ಜೀವ ನೀಡಿದ ಬ್ರೆಂಡಾ ಡೆಲ್ಗಾಡೊ

ಮನಿಲಾ(ಜ. 9) ನಮ್ಮಲ್ಲನೇಕರು ಸತ್ತ ಜಿರಳೆ ಬಿಡಿ ಜೀವ ಇದ್ದ ಜಿರಳೆ ಕಂಡರೆ ಮಾರು  ದೂರ ಓಡುತ್ತಾರೆ. ಅಂತಹದಲ್ಲಿ ಇಲ್ಲೊಬ್ಬರು ಕಲಾವಿದರು. ಸತ್ತ ಜಿರಳೆಯ ದೇಹಕ್ಕೆ ಕಲೆಯ ಮೂಲಕ ಜೀವ ತುಂಬಿದ್ದಾರೆ. ಹೌದು ಫಿಲಿಫೈನ್ಸ್‌ನ ಮನಿಲಾದ ಕಲಾವಿದೆಯೊಬ್ಬರು ಸತ್ತ ಜಿರಳೆಗಳ ಮೇಲೆ ಮೂಡಿಸಿದ ಕಲೆ ನೋಡಿದರೆ ಎಲ್ಲರೂ ಹೀಗೂ ಸಾಧ್ಯನಾ ಎಂದು ಮೂ ಗಿನ ಮೇಲೆ ಬೆರಳಿಡುವುದು ಗ್ಯಾರಂಟಿ.  ಇವರ ಹೆಸರು ಬ್ರೆಂಡಾ ಡೆಲ್ಗಾಡೋ ಯಾವುದೇ ಗುರುಗಳಿಲ್ಲದೇ ತಾವೇ ಸ್ವಯಂ ಪೈಂಟಿಂಗ್‌ ಕಲೆಯನ್ನು ಕಲಿತುಕೊಂಡ ಕಲಾವಿದರಲ್ಲಿ ಬ್ರೆಂಡಾ ಡೆಲ್ಗಾಡೊ (Brenda Delgado) ಕೂಡ ಒಬ್ಬರು, ಏಕೆಂದರೆ ಅವರು ಸತ್ತ ಜಿರಳೆಗಳಿಗೆ ಬಣ್ಣ ಬಳಿದು ಅವುಗಳನ್ನು ಕಲಾತ್ಮಕವಾಗಿಸುವ ಮೂಲಕ ಜೀವ ನೀಡಿದ್ದಾರೆ.

ಪ್ರಪಂಚದಾದ್ಯಂತದ ಕಲಾವಿದರು ಯಾವಾಗಲೂ  ಹಳೇ ಸಂಪ್ರದಾಯಗಳನ್ನು ಮುರಿಯಲು ಮತ್ತು ಅಸಾಂಪ್ರದಾಯಿಕವಾದ ಅಭಿವ್ಯಕ್ತಿ ಮಾಧ್ಯಮಗಳನ್ನು ಹುಡುಕಲು ಪ್ರಯತ್ನಿಸುತ್ತಾರೆ ಹಾಗೆಯೇ  ಬ್ರೆಂಡಾ ಡೆಲ್ಗಾಡೋ ಕೂಡ ಸತ್ತ ಜಿರಳೆಯ ಮೇಲೆ ಕಲೆಯನ್ನು ಅರಳಿಸುವ ಮೂಲಕ ಹೊಸತನ ಮೆರೆದಿದ್ದಾರೆ. ಮನಿಲಾ (Manila) ದ ಕ್ಯಾಲೂಕನ್ ಸಿಟಿ (Caloocan City)ಯ 30 ವರ್ಷದ ನಿವಾಸಿಯಾಗಿರುವ ಬ್ರೆಂಡಾ ಡೆಲ್ಗಾಡೋ ತನ್ನ ಕೆಲಸದ ಸ್ಥಳದಲ್ಲಿದ್ದ ಸತ್ತ ಜಿರಳೆಗಳನ್ನು ಗುಡಿಸಿ ಹೊರ ಹಾಕುತ್ತಿದ್ದಾಗ ಆಕೆಗೆ ಈ ವಿಲಕ್ಷಣ ಕಲ್ಪನೆ ಹೊಳೆದಿದೆ. 

 
 
 
 
 
 
 
 
 
 
 
 
 
 
 

A post shared by Bren (@brnddlgd)

 

ಜಿರಳೆಯ ರೆಕ್ಕೆಗಳು ಎಷ್ಟು ಹೊಳಪಾಗಿದೆ ಮತ್ತು ಮೃದುವಾಗಿದೆ ಎಂಬುದನ್ನು  ಗಮನಿಸಿದಾಗ ಅವಳು ಒಂದು ಕ್ಷಣ ಹಾಗೆಯೇ ಯೋಚಿಸುತ್ತಾ ನಿಂತಳಂತೆ. ಅಲ್ಲದೇ ಆ ಕ್ಷಣದಲ್ಲಿ, ಸತ್ತ ಜಿರಳೆಗಳನ್ನು ಕ್ಯಾನ್ವಾಸ್ ಆಗಿ ಹೇಗೆ ಬಳಸಬಹುದೆಂದು ಯೋಚಿಸಿದ ಆಕೆ ಆ ಆಲೋಚನೆಯನ್ನೇ ಕಾರ್ಯ ರೂಪಕ್ಕೆ ಇಳಿಸಲು ಮುಂದಾಗಿದ್ದಾಳೆ. ಅದಾಗ್ಯೂ ಕೀಟಗಳ ಮೇಲೆ ಚಿತ್ರಿಸಿದ ಮೊದಲ ವ್ಯಕ್ತಿ ಡೆಲ್ಗಾಡೊ ಅಲ್ಲ. ಮೆಕ್ಸಿಕನ್ (Mexican) ಕಲಾವಿದರಾದ ಕ್ರಿಶ್ಚಿಯನ್ ರಾಮೋಸ್ (Christian Ramos) ಜಿರಳೆಗಳ ಮೇಲೆ ಪ್ರತಿಭಟನಾ ವರ್ಣಚಿತ್ರಗಳನ್ನು ಮಾಡಿದ್ದರು.

This artist paints works of art on the bodies of dead cockroaches—including a replica of Van Gogh’s ‘Starry Night.’

‘To my fellow artists, don’t be afraid to explore your talents and challenge yourselves to do the things you think are impossible,’ said Brenda Delgado. pic.twitter.com/GEPEbxSCCT

— NowThis (@nowthisnews)

ಸತ್ತ ಕೀಟಗಳ ಮೇಲೆ ವಿನ್ಸೆಂಟ್ ವ್ಯಾನ್ ಗಾಗ್ (Vincent Van Gog) ಅವರ 'ಸ್ಟಾರಿ ನೈಟ್'( ನಕ್ಷತ್ರ ರಾತ್ರಿ) ಸೇರಿದಂತೆ ಸುಂದರವಾದ ದೃಶ್ಯಗಳನ್ನು ಚಿತ್ರಿಸಲು ಡೆಲ್ಗಾಡೊ ತೈಲ ವರ್ಣವನ್ನು ಬಳಸುತ್ತಾರೆ. ಜನರು ಆಕೆಯ ಕೆಲಸದಿಂದ ಆಕರ್ಷಿತರಾದ ಕಾರಣ ಅವರ ರಚನೆಗಳು ಈಗ ಆನ್‌ಲೈನ್‌ನಲ್ಲಿ ಹೆಚ್ಚು  ಜನರ ಆಕರ್ಷಣೆಗೆ ಪಾತ್ರವಾಗಿದೆ. 

ಹೆಂಡ್ತಿಗೆ ಜಿರಳೆ ಭಯ: 3 ವರ್ಷದಲ್ಲಿ 18 ಸಲ ಮನೆ ಚೇಂಜ್ ಮಾಡಿದ

ಇತ್ತೀಚಿನ ವರ್ಷಗಳಲ್ಲಿ, ವಿನ್ಸೆಂಟ್ ವ್ಯಾನ್ ಗಾಗ್ ಅವರ ನಕ್ಷತ್ರದ ರಾತ್ರಿ ಕಲೆಯೂ ಪಾಪ್ ಸಂಸ್ಕೃತಿಯಲ್ಲಿ ಅನೇಕ ಮನೋರಂಜನೆಗಳನ್ನು ಕಂಡಿದೆ. ಕಲಾವಿದರು 1889 ರ ಮೇರು ಕೃತಿಯನ್ನು ವಸ್ತ್ರಗಳು, ಅಕ್ಕಿ ಧಾನ್ಯಗಳು, ವ್ಯಾಪಾರದವರೆಗೆ ಎಲ್ಲವನ್ನೂ ಚಿತ್ರಿಸಿದ್ದಾರೆ. 2016 ರಲ್ಲಿ, ಟರ್ಕಿಯ ಸಾಂಪ್ರದಾಯಿಕ ಚಿತ್ರಕಲೆ ಕಲಾ ಪ್ರಕಾರವಾದ ಎಬ್ರುವನ್ನು ಬಳಸಿಕೊಂಡು ಪೇಂಟಿಂಗ್ ಅನ್ನು ನೀರಿನ ಮೇಲೆ ಮರುಸೃಷ್ಟಿಸಲಾಯಿತು.

ಸ್ವಿಗ್ಗಿ ಊಟದಲ್ಲಿ ನಟಿ ನಿವೇತಾಗೆ ಸಿಕ್ತು ಜಿರಳೆ..!

click me!