ಚಲಿಸುತ್ತಿದ್ದ ಪೊಲೀಸ್ ವಾಹನದಿಂದ ಹಾರಿ ತಪ್ಪಿಸಿಕೊಂಡ ಕೈದಿ
ಠಾಣೆಗೆ ಬಂದ ಬಳಿಕವೇ ಪೊಲೀಸರಿಗೆ ತಿಳಿತು ವಿಚಾರ
ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
ಬ್ರೆಜಿಲ್(ಜ.9): ಚಲಿಸುತ್ತಿದ್ದ ಪೊಲೀಸ್ ವಾಹನದಿಂದ ಹಾರಿ ಕೈ ಕೋಳ ಹಾಕಿದ್ದ ಕೈದಿಯೊಬ್ಬ ಪರಾರಿಯಾದ ಘಟನೆ ಬ್ರೆಜಿಲ್‌ನಲ್ಲಿ ನಡೆದಿದ್ದು, ಅದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೈ ಕೋಳ ತೊಟ್ಟಿದ್ದರೂ ಕೈದಿ ಪೊಲೀಸರ ಕಣ್ಣಿನ ಕೆಳಗೆ ಅವರಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ಕೈದಿಯ ಈ ಸಾಹಸ ಸ್ಥಳೀಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ಯೂಟ್ಯೂಬ್‌ನ ವೈರಲ್‌ಹಗ್‌ನಲ್ಲಿ ಈ ವಿಡಿಯೋವನ್ನು ಶೇರ್ ಮಾಡಲಾಗಿದ್ದು, ಈ ಘಟನೆ ಕಳೆದ ಡಿಸೆಂಬರ್ 28 ರಂದು ಬ್ರೆಜಿಲ್‌ನ ( Brazil) ಪರಿಬಾ (Paraiba)ದ ಅಲಗೋವಾ ನೋವಾದಲ್ಲಿ (Alagoa Nova) ನಡೆದಿದೆ. ಚಲಿಸುವ ಪೊಲೀಸ್ ವಾಹನದಿಂದ ಕೈದಿ ಎಸ್ಕೇಪ್ ಎಂದು ಈ ವಿಡಿಯೋಗೆ ಕ್ಯಾಪ್ಷನ್ ನೀಡಲಾಗಿದೆ. 1.80 ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ.
ಸ್ಥಳೀಯ ಮಾಧ್ಯಮಗಳ ವರದಿಯ ಪ್ರಕಾರ, ಈ ಕೈದಿ ಪೊಲೀಸ್ ವಾಹನದ ಹಿಂಬದಿ ಡೋರ್‌ನ್ನು ತೆಗೆಯಲು ಯಶಸ್ವಿಯಾಗಿದ್ದು, ನಂತರ ಬೀದಿಯೊಂದರ ರಸ್ತೆ ಮಧ್ಯ ವಾಹನ ಚಲಿಸುತ್ತಿದ್ದಾಗಲೇ ಕೆಳಗೆ ಧುಮುಕಿದ್ದಾನೆ. ನಂತರ ಎಷ್ಟು ಸಾಧ್ಯವೋ ಅಷ್ಟು ವೇಗವಾಗಿ ಅಲ್ಲಿಂದ ಓಡಿ ಪರಾರಿಯಾಗಿದ್ದಾನೆ. ಆದರೆ ಆತ ಪರಾರಿಯಾಗಿದ್ದು ಪೊಲೀಸರಿಗೆ ತಿಳಿದಿಲ್ಲ. ವಾಹನದ ಕನ್ನಡಿಯಲ್ಲಾದರೂ ಆತ ಪರಾರಿಯಾಗಿದ್ದನ್ನು ಪೊಲೀಸರು ಗಮನಿಸಿಲ್ಲ. ಹೀಗಾಗಿ ಕೈದಿ ಇಲ್ಲದೆಯೇ ಪೊಲೀಸ್ ವಾಹನ ಮುಂದೆ ಹೋಗಿದ್ದು, ಠಾಣೆ ತಲುಪಿದ ಬಳಿಕವಷ್ಟೇ ಪೊಲೀಸರಿಗೆ ಕೈದಿ ತಪ್ಪಿಸಿಕೊಂಡಿರುವುದು ಅರಿವಾಗಿದೆ.
undefined
ಆದರೆ ಈ ವಿಡಿಯೋ ನೋಡಿದ ವೀಕ್ಷಕರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಇದು ಹೇಗೆ ಸಾಧ್ಯ? ಆತ ಬುದ್ಧಿವಂತ ಅದು ಹೇಗೆ ಕೆಳಗೆ ಹಾರಿದ, ಅವರು ನಿಜವಾಗಿಯೂ ಅವನನ್ನು ವ್ಯಾನ್‌ನ ಹಿಂಭಾಗಕ್ಕೆ ಕೈಕೋಳ ಹಾಕಿ ಕಟ್ಟಿದ್ದರೆ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.
Robbery: ಪತ್ನಿ ನೋಡಿಕೊಳ್ಳಲು ನೇಮಿಸಿದ ನರ್ಸ್..ರಾತ್ರೋ ರಾತ್ರಿ ಆಭರಣಗಳೊಂದಿಗೆ ಎಸ್ಕೇಪ್!
ಕೈದಿ ಆತ್ಮಹತ್ಯೆ
ಪತ್ನಿ ಆತ್ಮಹತ್ಯೆ ಪ್ರಕರಣ ಸಂಬಂಧ ಬಂಧಿತನಾಗಿದ್ದ ಕಾರ್ಪೆಂಟರ್‌ವೊಬ್ಬ ಸೋಮವಾರ ಬೆಳಗ್ಗೆ ಪೊಲೀಸ್ ಠಾಣೆಯಿಂದ (Police Station) ಸಿನಿಮೀಯ ಶೈಲಿಯಲ್ಲಿ ತಪ್ಪಿಸಿಕೊಂಡು 30 ಅಡಿ ಎತ್ತರದ ಸ್ಕೈವಾಕ್‌ನಿಂದ (Sky walk) ಜಿಗಿದು ಆತ್ಮಹತ್ಯೆಗೆ (Suicide) ಶರಣಾಗಿರುವ ಘಟನೆ ಕೆ.ಆರ್.ಪುರದಲ್ಲಿ ನಡೆದಿದೆ. ಆನಂದಪುರದ ನಿವಾಸಿ ಶಕ್ತಿವೇಲು (32) ಮೃತ ದುರ್ದೈವಿ. ಒಂದೂವರೆ ವರ್ಷದ ಹಿಂದೆ ತಮಿಳುನಾಡು (Tamilnadu) ಮೂಲದ ಶಕ್ತಿವೇಲು ಹಾಗೂ ಸಂಗೀತಾ ಪ್ರೇಮ ವಿವಾಹವಾಗಿದ್ದರು.
ವಿವಾಹದ (Marriage) ಬಳಿಕ ಸಣ್ಣಪುಟ್ಟವಿಚಾರಗಳಿಗೆ ಶಕ್ತಿವೇಲು ಮನೆಯಲ್ಲಿ ಗಲಾಟೆ ಮಾಡುತ್ತಿದ್ದ. ಶನಿವಾರವೂ ಸತಿ-ಪತಿ ಜಗಳವಾಡಿದ್ದರು. ಆಗ ಬೇಸರಗೊಂಡ ಸಂಗೀತಾ(30), ತನ್ನ ತಂದೆಗೆ ವಾಟ್ಸಾಪ್ ನಲ್ಲಿ ಮೆಸೇಜ್ ಕಳುಹಿಸಿ ನೇಣು ಬಿಗಿದುಕೊಂಡಿದ್ದಳು. ಸಂಗೀತಾಳ ತಂದೆ ದೂರು ಆಧರಿಸಿ ಕೆ.ಆರ್.ಪುರ ಠಾಣೆಯಲ್ಲಿ ಐಪಿಸಿ 306(ಆತ್ಮಹತ್ಯೆಗೆ ಪ್ರಚೋದನೆ) ಹಾಗೂ ಐಪಿಸಿ 498 (ವರದಕ್ಷಿಣೆ ಕಿರುಕುಳ) ಆರೋಪಡಿ ಪ್ರಕರಣ ದಾಖಲಿಸಿಕೊಳ್ಳಲಾಯಿತು. ಬಂಧನ ಭೀತಿಯಿಂದ ಪರಾರಿ ಆಗಿದ್ದ ಶಕ್ತಿವೇಲು ಭಾನುವಾರ ಪೊಲೀಸರಿಗೆ (Police) ಸಿಕ್ಕಿಬಿದ್ದಿದ್ದ.
Chamarajanagar News : 3 ವರ್ಷದಿಂದ ತಪ್ಪಿಸಿಕೊಂಡು ಪರೋಟ ಮಾರುತ್ತಿದ್ದ ಕೈದಿ ಅರೆಸ್ಟ್
ಲಾಕಪ್‌ನಲ್ಲಿದ್ದ ಶಕ್ತಿವೇಲು, ಶೌಚಕ್ಕೆ (Toulet) ಹೋಗಬೇಕೆಂದು ಮನವಿ ಮಾಡಿದ್ದ. ಆತನನ್ನು ಕಾನ್‌ಸ್ಟೇಬಲ್‌ವೊಬ್ಬರು, ಠಾಣೆ ಹಿಂಬದಿಯಲ್ಲಿದ್ದ ಶೌಚಾಲಯಕ್ಕೆ ಕರೆದೊಯ್ದಿದ್ದಾರೆ. ಆಗ ಕಾನ್‌ಸ್ಟೇಬಲ್‌ನನ್ನು ದೂಡಿ ಕಾಂಪೌಂಡ್ ಜಿಗಿದು ಕಾಲ್ಕಿತ್ತಿದ್ದಾನೆ. ಕೂಡಲೇ ಪೊಲೀಸರು (Police) ಆರೋಪಿಯ ಬೆನ್ನಟ್ಟಿದ್ದಾರೆ. ಠಾಣೆಯಿಂದ ಸ್ಪಲ್ಪ ದೂರ ಹೋದ ಬಳಿಕ ಆಟೋ ಹತ್ತಿ ದೂರವಾಣಿ ನಗರದ ಸ್ಕೈವಾಕ್ ಸಮೀಪ ತೆರಳಿದ್ದಾನೆ. 30 ಅಡಿಯ ಸ್ಕೈವಾಕ್ ಹತ್ತಿ ಕೆಳಗೆ ಜಿಗಿದ್ದಾನೆ. ಅದೇ ವೇಳೆಗೆ ಹೊಸಕೋಟೆ ಕಡೆಯಿಂದ ಬರುತ್ತಿದ್ದ ನಾಯಕ್ ಎಂಬುವವರ ಕಾರು ಸ್ಕೈವಾಕ್‌ನಿಂದ ದಿಢೀರ್ ರಸ್ತೆಗೆ ಬಿದ್ದವನ ಮೇಲೆ ಹರಿದಿದೆ. ಆಗ ತೀವ್ರ ಗಾಯಗೊಂಡು ಶಕ್ತಿವೇಲು ಮೃತಪಟ್ಟಿದ್ದಾನೆ. ಆರೋಪಿಯನ್ನು ಹಿಂಬಾಲಿಸಿ ಬಂದ ಪೊಲೀಸರು, ಸ್ಥಳಕ್ಕೆ ತೆರಳುವ ಮುನ್ನವೇ ಆತ ಮೃತಪಟ್ಟಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.