ಭಾರತದಲ್ಲಿ ಉಗ್ರ ಆತ್ಮಾಹುತಿ ದಾಳಿ: ಅಲ್‌ ಖೈದಾ ಬೆದರಿಕೆ

Published : Jun 09, 2022, 06:14 AM IST
ಭಾರತದಲ್ಲಿ ಉಗ್ರ ಆತ್ಮಾಹುತಿ ದಾಳಿ: ಅಲ್‌ ಖೈದಾ ಬೆದರಿಕೆ

ಸಾರಾಂಶ

* ದಿಲ್ಲಿ, ಗುಜರಾತ್‌, ಉ.ಪ್ರ., ಮುಂಬೈನಲ್ಲಿ ದಾಳಿ ಬೆದರಿಕೆ * ಪ್ರವಾದಿಗೆ ಆದ ಅವಮಾನಕ್ಕೆ ಸೇಡು ತೀರಿಸಿಕೊಳ್ತೇವೆ * ನಾವು, ನಮ್ಮ ಮಕ್ಕಳು ಬಾಂಬ್‌ ಕಟ್ಟಿಕೊಂಡು ಆತ್ಮಾಹುತಿ ದಾಳಿ ಮಾಡ್ತೇವೆ * ಕೇಸರಿ ಭಯೋತ್ಪಾದಕರು ತಮ್ಮ ಕೊನೆಯ ದಿನ ಎಣಿಸಲಿ

ನವದೆಹಲಿ(ಜೂ.09): ಪ್ರವಾದಿ ಮೊಹಮ್ಮದರಿಗೆ ಬಿಜೆಪಿ ಮಾಜಿ ವಕ್ತಾರೆ ನೂಪುರ್‌ ಶರ್ಮಾ ಅವಮಾನ ಮಾಡಿದ್ದಾರೆ ಎಂದು ಅರೋಪಿಸಿ ಅಲ್‌ ಖೈದಾ ಭಾರತೀಯ ಉಪಖಂಡ (ಎಕ್ಯುಎಎಸ್‌) ಉಗ್ರ ಸಂಘಟನೆಯು ಗುಜರಾತ್‌, ಉತ್ತರ ಪ್ರದೇಶ, ಮುಂಬೈ ಹಾಗೂ ದಿಲ್ಲಿಯಲ್ಲಿ ಭಯೋತ್ಪಾದಕ ಆತ್ಮಾಹುತಿ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಅಲ್‌ ಖೈದಾ ಸಂಘಟನೆ, ಬೆದರಿಕೆ ಪತ್ರವನ್ನು ಹಂಚಿಕೊಂಡಿದ್ದು, ‘ಪ್ರವಾದಿಯ ಗೌರವ ಉಳಿಸಲು ನಾವು ಹೋರಾಡುತ್ತೇವೆ. ದಿಲ್ಲಿ, ಮುಂಬೈ, ಉತ್ತರ ಪ್ರದೇಶ ಹಾಗೂ ಗುಜರಾತ್‌ನಲ್ಲಿನ ಕೇಸರಿ ಭಯೋತ್ಪಾದಕರು ತಮ್ಮ ಅಂತಿಮ ದಿನಗಳನ್ನು ಎಣಿಸಲಿ’ ಎಂದು ಎಚ್ಚರಿಕೆ ನೀಡಿದೆ.

‘ಭಾರತೀಯ ಟೀವಿ ಚಾನೆಲ್‌ನಲ್ಲಿ ಪ್ರವಾದಿ ಮೊಹಮ್ಮದರು ಹಾಗೂ ಅವರ ಧರ್ಮಪತ್ನಿಯನ್ನು ನಿಂದಿಸಿ ಅವಮಾನಿಸಲಾಗಿದೆ. ಇವರಿಗೆ (ಹಿಂದೂ ಸಂಘಟನೆಗಳಿಗೆ) ಅವರ ಮನೆಗಳಲ್ಲೂ ಆಶ್ರಯ ಸಿಗುವುದಿಲ್ಲ ಹಾಗೂ ಸೈನಿಕ ಭದ್ರಕೋಟೆಯಲ್ಲೂ ಸ್ಥಾನ ಸಿಗುವುದಿಲ್ಲ. ಪ್ರವಾದಿಗೆ ಆದ ಅವಮಾನದ ಸೇಡು ತೀರಿಸಿಕೊಳ್ಳದೇ ಹೋದರೆ ನಮ್ಮ ತಾಯಂದಿರು ದುಃಖ ಅನುಭವಿಸಬೇಕಾಗಬಹುದು’ ಎಂದು ಪತ್ರದಲ್ಲಿ ತಿಳಿಸಲಾಗಿದೆ.

‘ಪ್ರವಾದಿಗೆ ಅವಮಾನ ಮಾಡಿದವರನ್ನು ಸಾಯಿಸೋಣ. ನಮ್ಮ ಹಾಗೂ ನಮ್ಮ ಮಕ್ಕಳ ದೇಹಕ್ಕೆ ಬಾಂಬ್‌ಗಳನ್ನು ಕಟ್ಟಿಕೊಳ್ಳೋಣ. ಪೈಗಂಬರರಿಗೆ ಅವಮಾನ ಮಾಡಿದವರು ನಮ್ಮ ಮುಂದೆ ತಲೆಬಾಗಬೇಕು’ ಎಂದು ಅಲ್‌ ಖೈದಾ ಬೆದರಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!
ಭಾರಿ ಸದ್ದು ಮಾಡ್ತಿದೆ ಪುಟಿನ್​ ತಂದ ಸೂಟ್​ಕೇಟ್: ಅದರ ಹಿಂದಿದೆ ಊಹೆಗೆ ನಿಲುಕದ ವಿಚಿತ್ರ ಸ್ಟೋರಿ! ಏನಿದೆ ಅದರಲ್ಲಿ?