ಪೆಹ್ಲಾ ನಶಾ.. ಲಂಡನ್‌ ಬೀದಿಯಲ್ಲಿ ಭಾರತೀಯ ಸಂಗೀತಾದ ಘಮಲು: ವೈರಲ್ ವೀಡಿಯೋ

By Anusha KbFirst Published Aug 3, 2023, 4:12 PM IST
Highlights

ಈಗ ಲಂಡನ್‌ನ  ಪ್ರಮುಖ ಬೀದಿಯಲ್ಲಿ ಬಾಲಿವುಡ್ ಸಿನಿಮಾದ ಸಂಗೀತಾದ ಘಮಲು ಕೇಳಿ ಬರುತ್ತಿದ್ದು, ಅನೇಕರು ಈ ಹಾಡಿಗೆ ಮನಸೋತಿದ್ದಾರೆ.

ಕಲೆ ಹಾಗೂ ಸಂಗೀತಾಕ್ಕೆ ದೇಶ ಭಾಷೆಯ ಗಡಿಗಳಿಲ್ಲ, ಜಾತಿ ಧರ್ಮದ ಹಂಗಿಲ್ಲ, ಗಡಿಗಳನ್ನು ಮೀರಿ ಅವುಗಳು ಕೋಟ್ಯಾಂತರ ಜನರನ್ನು ಸೆಳೆಯುತ್ತವೆ. ಬಾಲಿವುಡ್‌ನ ಸಿನಿಮಾ ಹಾಡುಗಳಿಗೆ ಜಗತ್ತಿನಾದ್ಯಂತ ಕೋಟ್ಯಾಂತರ ಜನ ಅಭಿಮಾನಿಗಳಿದ್ದಾರೆ. ಸಿನಿಮಾಗಳು ಸಂಸ್ಕತಿಯನ್ನು ಪಸರಿಸುವ ಮಾಧ್ಯಮಗಳು ಎಂದರೆ ತಪ್ಪಾಗಲಾರದು. ಸಾಮಾಜಿಕ ಜಾಲತಾಣದಲ್ಲಿ ವಿದೇಶಿಯರು ನಮ್ಮ ದೇಶದ ಹಾಡುಗಳನ್ನು ಹಾಡಿ ರೀಲ್ಸ್ ಮಾಡಿರುವುದನ್ನು ನೀವು ನೋಡಿರಬಹುದು. ಇಂಟರ್ನೆಟ್‌ನಿಂದಾಗಿ ಜಗತ್ತು ಪುಟ್ಟ ಕುಟುಂಬವಾಗಿದ್ದು, ಎಲ್ಲೋ ಇರುವವರು ಇನ್ನೆಲ್ಲಿಯದೋ ಸಂಗಿತಾ ಆಚಾರ ಸಂಸ್ಕೃತಿ ಕಲೆಗಳಿಗೆ ಮನಸೋಲುತ್ತಾರೆ. ಭಾರತೀಯ ಹಾಡುಗಳನ್ನು ಹಾಡಿ ಫೇಮಸ್ ಆದ ಹಲವು ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳನ್ನು ನೀವು ನೋಡಿರಬಹುದು. ಅದೇ ರೀತಿ ಈಗ ಲಂಡನ್‌ನ ಪ್ರಮುಖ ಬೀದಿಯಲ್ಲಿ ಬಾಲಿವುಡ್ ಸಿನಿಮಾದ ಸಂಗೀತಾದ ಘಮಲು ಕೇಳಿ ಬರುತ್ತಿದ್ದು, ಅನೇಕರು ಈ ಹಾಡಿಗೆ ಮನಸೋತಿದ್ದಾರೆ.

ಪಪರಾಜಿ ಇನ್ಸ್ಟಾಗ್ರಾಮ್ ಪೇಜ್ ವೈರಲ್ ಭಯಾನಿಯಿಂದ ಈ ವೀಡಿಯೋ ಪೋಸ್ಟ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಲಂಡನ್‌ನ ಅಕ್ಸ್‌ಫರ್ಡ್ ಸ್ಟ್ರೀಟ್‌ನಲ್ಲಿ ಹುಡುಗನೋರ್ವ ಬಹಳ ಸೊಗಸಾಗಿ ಹಿಂದಿ ಚಿತ್ರಗೀತೆಗಳನ್ನು ಹಾಡುತ್ತಿದ್ದು, ಈತನ ಹಾಡು ಕೇಳಿ ಬೀದಿಯಲ್ಲಿ ಹೋಗುವವರು ಕೂಡ ನಿಂತು ನೋಡುತ್ತಾ ಎಂಜಾಯ್ ಮಾಡುತ್ತಿದ್ದಾರೆ. ಅಂದಹಾಗೆ ಈ ಹುಡುಗ 1991ರಲ್ಲಿ ಬಿಡುಗಡೆಯಾದ ಜೀ ಜೀತಾ ವಹೀ ಸಿಕಂದರ್ ಎಂಬ ಸಿನಿಮಾದ ಪೆಹಲಾ ನಶಾ ಪೆಹಲಾ ಖುಮಾರ್ ಹಾಡನ್ನು ಹಾಡುತ್ತಿದ್ದು, ಇದಕ್ಕೆ ಬೀದಿಯಲ್ಲಿ ಹೋಗುವವರು ಕೂಡ ದನಿಗೂಡಿಸಿದ್ದಾರೆ. ಅನೇಕರು ಹಾಡನ್ನು ಎಂಜಾಯ್ ಮಾಡುತ್ತಿರುವುದರ ಜೊತೆ ಈ ಸುಂದರ ದೃಶ್ಯವನ್ನು ಎಂಜಾಯ್ ಮಾಡುವುದನ್ನು ಕೂಡ ವೀಡಿಯೋದಲ್ಲಿ ನೋಡಬಹುದಾಗಿದೆ. 

Latest Videos

ರೋಮಲ್ಲಿ ಸಾರಿ ಉಟ್ಟು ಭಾರತೀಯ ನಾರಿಯ ಸವಾರಿ: ನೋಡಿಯೇ ಬಾಕಿಯಾದ ಜನ

ಅಂದಹಾಗೆ ಈ ಬೀದಿ ಸಂಗೀತಾ ನಡೆದ ಸ್ಥಳವಾದ ಆಕ್ಸ್‌ಫರ್ಡ್ ಸ್ಟ್ರೀಟ್ ಲಂಡನ್‌ನ ವೆಸ್ಟ್ ಎಂಡ್‌ನಲ್ಲಿರುವ ವೆಸ್ಟ್‌ಮಿನಿಸ್ಟರ್ ನಗರದ ಪ್ರಮುಖ ರಸ್ತೆಯಾಗಿದ್ದು, ಟೊಟೆನ್‌ಹ್ಯಾಮ್ ಕೋರ್ಟ್ ರಸ್ತೆಯಿಂದ ಆಕ್ಸ್‌ಫರ್ಡ್ ಸರ್ಕಸ್ ಮೂಲಕ ಮಾರ್ಬಲ್ ಆರ್ಚ್‌ಗೆ ಸಾಗುತ್ತದೆ. ಇದು ಯುರೋಪಿನ ಅತ್ಯಂತ ಜನನಿಬಿಡ ಶಾಪಿಂಗ್ ರಸ್ತೆಯಾಗಿದ್ದು, ಇಲ್ಲಿ ದಿನವೂ 5 ಲಕ್ಷಕ್ಕೂ ಹೆಚ್ಚು  ಜನ ಭೇಟಿ ನೀಡುತ್ತಿರುತ್ತಾರೆ.   ಅದೇನೆ ಇರಲಿ ಇಂತಹ ರಸ್ತೆಯಲ್ಲಿ ಭಾರತೀಯನೋರ್ವ ಹಾಡುವ ಮೂಲಕ ಎಲ್ಲರನ್ನು ಮಂತ್ರ ಮುಗ್ಧರನ್ನಾಗಿಸಿರುವುದಂತು ಸುಳ್ಳಲ್ಲ.  ಅದೊಂದು ಕಾಲವಿತ್ತು, ವಿದೇಶಿಗರು ಭಾರತೀಯರನ್ನು ತುಚ್ಛವಾಗಿ ನೋಡುತ್ತಿದ್ದ ಕಾಲ. ಆದರೆ  ಈಗ ಅದೇ ಜನರು ಭಾರತೀಯರನ್ನು ವಿಶೇಷವೆಂಬಂತೆ ನೋಡುತ್ತಿದ್ದಾರೆ ಇದರ ಹಿಂದೆ ಬಾಲಿವುಡ್‌ ಸಿನಿಮಾ ಹಾಗೂ ಸಂಗೀತಾದ ಪಾಲು ಸಾಕಷ್ಟಿದೆ ಎಂದರೆ ತಪ್ಪಾಗಲಾರದೇನೋ. 

ಇನ್ನು ಈ ವೀಡಿಯೋ ನೋಡಿದ ಅನೇಕರು ವಾಹ್ ಸೂಪರ್, ಎಕ್ಸಲೆಂಟ್ ಎಂದೆಲ್ಲಾ ಕಾಮೆಂಟ್ ಮಾಡಿದ್ದು,  ಬೇರೆಡೆಯೂ ಇದೇ ರೀತಿಯ ಸಂಗೀತಾ ಕನ್ಸರ್ಟ್‌ನ್ನು ಆಯೋಜಿಸುವಂತೆ ಮನವಿ ಮಾಡಿದ್ದಾರೆ. 

ಇದು ಸ್ವದೇಶಿ ಅಲ್ಲ ಸಂಪೂರ್ಣ ವಿದೇಶಿ: ಲ್ಯಾಂಡ್ ರೋವರ್ ಡಿಫೆಂಡರಲ್ಲಿ ರಾಮ್‌ದೇವ್ ಸವಾರಿ

\

click me!