ದುಬೈನಲ್ಲಿ 45 ಕೋಟಿ ರು. ಮೊತ್ತದ ಬಂಪರ್‌ ಲಾಟರಿ ಗೆದ್ದ ಭಾರತೀಯ ಸಚಿನ್‌

Published : Aug 03, 2023, 07:23 AM ISTUpdated : Aug 03, 2023, 09:05 AM IST
ದುಬೈನಲ್ಲಿ 45 ಕೋಟಿ ರು. ಮೊತ್ತದ ಬಂಪರ್‌ ಲಾಟರಿ ಗೆದ್ದ ಭಾರತೀಯ ಸಚಿನ್‌

ಸಾರಾಂಶ

ಯುಎಇನಲ್ಲಿರುವ ಮುಂಬೈ ಮೂಲದ ಸಚಿನ್‌ (47) ಎಂಬುವವರು ಸ್ಥಳೀಯವಾಗಿ ಆಯೋಜಿಸುವ ಲಾಟರಿಯಲ್ಲಿ ಭರ್ಜರಿ 45 ಕೋಟಿ ರು. ಬಹುಮಾನ ಗೆದ್ದಿದ್ದಾರೆ.

ದುಬೈ: ಯುಎಇನಲ್ಲಿರುವ ಮುಂಬೈ ಮೂಲದ ಸಚಿನ್‌ (47) ಎಂಬುವವರು ಸ್ಥಳೀಯವಾಗಿ ಆಯೋಜಿಸುವ ಲಾಟರಿಯಲ್ಲಿ ಭರ್ಜರಿ 45 ಕೋಟಿ ರು. ಬಹುಮಾನ ಗೆದ್ದಿದ್ದಾರೆ. 25 ವರ್ಷದಿಂದ ದುಬೈನಲ್ಲಿ ನೆಲೆಸಿರುವ ಸಚಿನ್‌ ಸಿಎಡಿ ತಂತ್ರಜ್ಞರಾಗಿದ್ದು ಶನಿವಾರ 139ನೇ ಮಾಜೂಜ್‌ ಡ್ರಾ ಬಹುಮಾನ ಗೆದ್ದಿದ್ದಾರೆ. ‘ಪ್ರತಿ ವಾರ ಮಜೂಜ್‌ನಲ್ಲಿ ಭಾಗವಹಿಸುತ್ತಿದ್ದೆ. ಒಂದು ದಿನ ಗೆಲುವಿನ ನಿರೀಕ್ಷೆ ಇತ್ತು. ಈ ಗೆಲುವು ನನ್ನ ಕುಟುಂಬ ಮತ್ತು ಜೀವನವನ್ನು ಬದಲಾಯಿಸುತ್ತದೆ’ ಎಂದು ಸಚಿನ್‌ ಹೇಳಿದ್ದಾರೆ. ಮುಂಬೈ ಮೂಲದ ವರು ಪತ್ನಿ ಮತ್ತು ಮೂವರು ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ. ಈ ನಡುವೆ ಇನ್ನೊಬ್ಬ ಭಾರತೀಯ ಗೌತಮ್‌ (27) ಎಂಬುವವರು ಇದೇ ಸ್ಪರ್ಧೆಯಲ್ಲಿ 2.25 ಕೋಟಿ ರು. ಬಹುಮಾನ ಗೆದ್ದಿದ್ದಾರೆ. ಕಳೆದ ವಾರವಷ್ಟೇ ಉತ್ತರ ಪ್ರದೇಶ ಮೂಲದ ವಾಸ್ತುಶಿಲ್ಪಿ ಆದಿಲ್‌ ಖಾನ್‌ ಎಂಬುವವರು ಮುಂದಿನ 25 ವರ್ಷಗಳ ಕಾಲ ಸತತವಾಗಿ ಪ್ರತಿ ತಿಂಗಳು 5.5 ಲಕ್ಷ ರು. ಬಹುಮಾನ ಸಿಗುವಂತಹ ಭರ್ಜರಿ ಲಾಟರಿ ಗೆದ್ದಿದ್ದರು.

ಅಮೆರಿಕದಲ್ಲೇ ಅತಿದೊಡ್ಡ 16.5 ಸಾವಿರ ಕೋಟಿಯ ಲಾಟರಿ ಗೆದ್ದ ವ್ಯಕ್ತಿ

ಕಳೆದ ಫೆಬ್ರವರಿಯಲ್ಲಿ ಅಮೆರಿಕದ ಪ್ರಮುಖ ಲಾಟರಿಯಾದ ಪವರ್‌ಬಾಲ್‌ ಜಾಕ್‌ಪಾಟ್‌ನಲ್ಲಿ ವ್ಯಕ್ತಿಯೊಬ್ಬ ಬರೋಬ್ಬರಿ 16.5 ಸಾವಿರ ಕೋಟಿ ರು. ಗೆದ್ದಿದ್ದ. ಇದು ಅಮೆರಿಕದ ಲಾಟರಿ ಇತಿಹಾಸದಲ್ಲೇ ಅತಿ ದೊಡ್ಡ ಮೊತ್ತ ಎನಿಸಿಕೊಂಡಿದೆ. ಆದರೆ ಲಾಟರಿಯಲ್ಲಿ ಗೆದ್ದಿರುವ ಎಡ್ವಿನ್‌ ಕ್ಯಾಸ್ಟ್ರೊ ತಕ್ಷಣವೇ ಒಂದೇ ಸಲಕ್ಕೆ ಹಣ ಬೇಕು ಎಂದು ಕೇಳಿರುವುದರಿಂದ ಕಂಪನಿಯ ನಿಯಮದಂತೆ ಅರ್ಧದಷ್ಟು ಹಣ ಅಂದರೆ 8 ಸಾವಿರ ಕೋಟಿ ರು. ಮಾತ್ರ ಪಡೆದುಕೊಳ್ಳಲಿದ್ದಾನೆ. ಗೆದ್ದ ಪೂರ್ತಿ ಹಣವನ್ನು ಪಡೆದುಕೊಳ್ಳಬೇಕಾದರೆ ಕಂಪನಿಯ ನಿಯಮದಂತೆ 30 ವರ್ಷಗಳ ಕಾಲ ಹಂತಹಂತವಾಗಿ ಹಣವನ್ನು ಪಡೆದುಕೊಳ್ಳಬೇಕಿತ್ತು.

ಕೇರಳದಲ್ಲಿ 75 ಲಕ್ಷ ಲಾಟರಿ ಗೆದ್ದ ಕಾರ್ಮಿಕ: ರಕ್ಷಣೆ ಕೋರಿ ಪೊಲೀಸ್ ಠಾಣೆಗೆ ಓಡಿದ

160 ರೂ. ಕೊಟ್ಟು ಕಳೆದ ನವೆಂಬರ್‌ನಲ್ಲಿ ಎಡ್ವಿನ್‌ ಈ ಲಾಟರಿಯನ್ನು ಖರೀದಿಸಿದ್ದ. ಎಡ್ವಿನ್‌ ಕೊಂಡಿದ್ದ 6 ಅಂಕಿ ಲಾಟರಿಗೂ ಡ್ರಾ ಆದ ಸಂಖ್ಯೆಗೂ ಮ್ಯಾಚ್‌ ಆಗಿ ಆತ ಜಾಕ್‌ಪಾಟ್‌ ಹೊಡೆದಿದ್ದಾನೆ. ಗೆದ್ದ ಬಳಿಕ ಪ್ರತಿಕ್ರಿಯಿಸಿರುವ ಎಡ್ವಿನ್‌ ಇಷ್ಟೊಂದು ಹಣ ಗೆದ್ದಿರುವಕ್ಕೆ ಆಘಾತಕ್ಕೊಳಗಾಗಿದ್ದೇನೆ ಎಂದು ಹೇಳಿದ್ದಾನೆ. ಆದರೆ, ಸಾರ್ವಜನಿಕವಾಗಿ ಹಣ ಸ್ವೀಕರಿಸಲು ನಿರಾಕರಿದ್ದಾನೆ. ಅಮೆರಿಕದ 45 ರಾಜ್ಯಗಳಲ್ಲಿ ಕಾರ‍್ಯನಿರ್ವಹಿಸುವ ಈ ಲಾಟರಿ ಕಂಪನಿ ಗೆದ್ದಿರುವ ವ್ಯಕ್ತಿ ಹೆಸರನ್ನಷ್ಟೇ ಘೋಷಿಸಿದ್ದು, ಇತರ ವಿವರ ನೀಡುವುದಿಲ್ಲ.

ಅದೃಷ್ಟ ಅಂದ್ರೆ ಇದು: ಆನ್‌ಲೈನ್ ಗೇಮಿಂಗ್ ಆ್ಯಪ್‌ನಿಂದ ರಾತ್ರೋರಾತ್ರಿ 1.5 ಕೋಟಿ ಗೆದ್ದ ಚಾಲಕ..! 

ಒಂದೇ ದಿನದಲ್ಲಿ 16 ಕೋಟಿ ರೂಪಾಯಿ ಜಾಕ್‌ಪಾಟ್!

ಮತ್ತೊಂದೆಡೆ ಕಳೆದ ಮಾರ್ಚ್‌ನಲ್ಲಿ ಆಸ್ಟೇಲಿಯಾದಲ್ಲಿ ವ್ಯಕ್ತಿಯೊಬ್ಬನಿಗೆ 16 ಕೋಟಿ ರೂಪಾಯಿ ಜಾಕ್‌ಪಾಟ್ ಹೊಡೆದಿತ್ತು.  ಮನೆಯಲ್ಲಿ ಗಂಡ ಹೆಂಡತಿಗೆ ಜಗಳ ಆಗಿದೆ. ಒಂದೆರೆಡು ದಿನ ಪತ್ನಿ ಮಾತು ಬಿಟ್ಟಿದ್ದಾಳೆ. ಸಮಾಧಾನ ಪಡಿಸಲು ಪತಿ ನಂತರ ಕೆಲಸದ ನಿಮಿತ್ತ ಮನೆಯಿಂದ ಹೊರಹೋಗಿದ್ದು, ವಾಪಸ್ ಬರುವಾಗ  ಎರಡು ಲಾಟರಿ ಟಿಕೆಟ್ ಖರೀದಿಸಿದ್ದಾನೆ.  ಅದೃಷ್ಟ ಎಂಬಂತೆ ಈತ ಖರೀದಿಸಿದ 2 ಲಾಟರಿ ಟಿಕೆಟ್‌ಗೆ ಜಾಕ್‌ಪಾಟ್ ಹೊಡೆದಿತ್ತು. ಬರೋಬ್ಬರಿ 16 ಕೋಟಿ ರೂಪಾಯಿ ಗೆದ್ದ ಖುಷಿಯಲ್ಲಿ ಇದೀಗ ದಂಪತಿ ಪ್ಲಾನ್ ಮೇಲೆ ಪ್ಲಾನ್ ಮಾಡುತ್ತಿದ್ದಾರೆ. ಈ ಲಾಟರಿ ಜಾಕ್‌ಪಾಟ್ ಘಟನೆ ನಡೆದಿದ್ದು, ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್‌ನಲ್ಲಿ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ತನ್ನ ವಾಯುಪ್ರದೇಶ ಹಠಾತ್ ಮುಚ್ಚಿದ ಇರಾನ್: ಭಾರತ ಅಮೆರಿಕಾಗೆ ನಡುವೆ ಸಂಚರಿಸುತ್ತಿದ್ದ ಹಲವು ವಿಮಾನಗಳ ಹಾರಾಟ ರದ್ದು
ಅಮೆರಿಕ ಬೆದರಿಕೆ ಬೆನ್ನಲ್ಲೇ ಇರಾನ್‌ ಸಮರಾಭ್ಯಾಸ