ಪಾಕಿಸ್ತಾನದಲ್ಲಿ ಬಡಜನಕ್ಕೆ ತಿನ್ನಲು ಅನ್ನವಿಲ್ಲ, ಹಾಗಂತ ಅಲ್ಲಿ ಉಳ್ಳವರ ಆಟಕ್ಕೇನೂ ಕಡಿಮೆ ಇಲ್ಲ, ಅಲ್ಲಿನ ಸೋಶೀಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಒಬ್ಬರು ತಮ್ಮ ಹುಟ್ಟುಹಬ್ಬಕಾಗಿ ಕ್ರೇನ್ ಬಳಸಿ ಫೋಟೋಶೂಟ್ ಮಾಡಿಸಿಕೊಂಡಿದ್ದು, ಆ ವೀಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪಾಕಿಸ್ತಾನದಲ್ಲಿ ಬಡಜನಕ್ಕೆ ತಿನ್ನಲು ಅನ್ನವಿಲ್ಲ, ಹಾಗಂತ ಅಲ್ಲಿ ಉಳ್ಳವರ ಆಟಕ್ಕೇನೂ ಕಡಿಮೆ ಇಲ್ಲ, ಅಲ್ಲಿನ ಸೋಶೀಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಒಬ್ಬರು ತಮ್ಮ ಹುಟ್ಟುಹಬ್ಬಕಾಗಿ ಕ್ರೇನ್ ಬಳಸಿ ಫೋಟೋಶೂಟ್ ಮಾಡಿಸಿಕೊಂಡಿದ್ದು, ಆ ವೀಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪಾಕಿಸ್ತಾನದ ಸೋಶೀಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಒಬ್ಬರು ಮಿಡ್ ಏರ್‌ನಲ್ಲಿ ಕ್ರೇನ್ ಬಳಸಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ. ರೆಬೀಕಾ ಖಾನ್ ಎಂಬುವವರೇ ಹೀಗೆ ತಮ್ಮ ಹುಟ್ಟುಹಬ್ಬಕ್ಕಾಗಿ ಆಕಾಶದಲ್ಲಿ ಫೋಟೋಶೂಟ್ ಮಾಡಿಸಿಕೊಂಡವರು. ಅದು ಈಗ ಇನ್ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿದ್ದು, ಜನ ಸಖತ್ ಕಾಮೆಂಟ್ ಮಾಡಿದ್ದಾರೆ.
undefined
ವೈರಲ್ ಆದ ವೀಡಿಯೋದಲ್ಲಿ ರೆಬೀಕಾ ಕಣ್ಣು ಕೊರೈಸುವ ಆದರೆ ಅಷ್ಟೇ ಆಕರ್ಷಕವಾದ ಕೇಸರಿ ಕಲರ್‌ನ ಗವನ್ ಧರಿಸಿದ್ದು, ಬೆನ್ನಿಗೆ ಬಲೂನಿನ ರಾಶಿಯೊಂದನ್ನು ಕಟ್ಟಿ ಹಸಿರು ನೆಲದ ಮೇಲೆ ನಡೆಯಲಾರಂಭಿಸುತ್ತಾರೆ. ಇದಾಗಿ ಕೆಲ ಕ್ಷಣಗಳಲ್ಲಿ ಆಕೆ ಆಕಾಶದಲ್ಲಿ ಹಾರುತ್ತಿದ್ದಾಳೆ. ಕ್ರೇನ್ ಸಹಾಯದಿಂದ ರೆಬೀಕಾ ಖಾನ್ ಈ ಸಾಹಸ ಮಾಡಿದ್ದು, ವೀಡಿಯೋ ಕಾಣದಿರುವಂತೆ ವೀಡಿಯೋವನ್ನು ಎಡಿಟ್ ಮಾಡಿದ್ದಾರೆ. ಲಾಹೋರ್ ಮೂಲದ ಈ ರೀಲ್ಸ್ ರಾಣಿ ರಾಜಕುಮಾರಿಯಂತೆ ಕಂಗೊಳಿಸುತ್ತಿದ್ದು, ವೀಡಿಯೋ ಜೊತೆಗೆ ಆಕೆ ಫೋಟೋಗಳನ್ನು ಕೂಡ ಅಪ್‌ಲೋಡ್ ಮಾಡಿದ್ದು, ಒಂದಕ್ಕಿಂತ ಒಂದು ಫೋಟೋಗಳು ವೈರಲ್ ಆಗಿವೆ. ಈ ವೀಡಿಯೋ ಫೋಟೋ ನೋಡಿ ಆಕೆಯ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.
ಇನ್ನು ತಮ್ಮ ಈ ಡಿಫರೆಂಟಾದ ಫೋಟೋ ಶೂಟ್ ತುಂಬಾ ಕಷ್ಟಕರವಾಗಿತ್ತು. ಆದರೆ ಹೀಗೊಂದು ವೀಡಿಯೋ ಮಾಡಲೇಬೇಕು ಎಂದು ನಿರ್ಧಾರ ಮಾಡಾಗಿತ್ತು ರೇಬಿಕಾ ಖಾನ್, ಈ ಬಗ್ಗೆ ಅವರೇ ಹೇಳಿಕೊಂಡಿದ್ದಾರೆ. ಈ ಶೂಟ್ ಮಾಡುವುದರ ಹಿಂದೆ ಸಾಕಷ್ಟು ಶ್ರಮ ಇದೆ. ಈ ಶೂಟ್‌ಗಾಗಿ ಕ್ರೇನ್ ಅನ್ನು ಒಂದೆಡೆ ನಿಲ್ಲಿಸುವುದು ಕಷ್ಟವಾಗಿತ್ತು. ಇಲ್ಲಿ ಕಾಣಿಸುವ ಕಷ್ಟ ನಿಜವಾದುದು. ನಾನು ಎಷ್ಟು ಕಷ್ಟ ಎಂದು ವಿವರಿಸುವುದು ಕೂಡ ಕಷ್ಟ. ಆದರೆ ಅದನ್ನು ನಾನು ಮಾಡಿದೆ. ಯಾಕೆಂದರೆ ನಾನು ಅದನ್ನು ಇಷ್ಟಪಡುತ್ತೇನೆ. ನೀವು ನಿಮ್ಮ ಮೇಲೆ ನಂಬಿಕೆ ಹಾಗೂ ವಿಶ್ವಾಸವನ್ನಿಟ್ಟು ನಿಮ್ಮಿಷ್ಟದ ಕೆಲಸ ಮಾಡಿ. ಆಗ ನೋಡಿ ಅದರ ಫಲಿತಾಂಶ ಹೇಗೆ ಬರುತ್ತದೆ ಎಂದು ಹಾಗೂ ನೀವು ಹೇಗೆ ಯಶಸ್ವಿಯಾಗುತ್ತೀರಿ ಎಂದು, ಅಲಹ್‌ನಲ್ಲಿ ನಂಬಿಕೆ ಇಡಿ, ನಿಮ್ಮ ಪ್ರತಿ ಗುರಿಯನ್ನು ಸುಲಭವಾಗಿ ತಲುಪುತ್ತಿರಿ ಎಂದು ಅವರು ಬರೆದುಕೊಂಡಿದ್ದಾರೆ.
ಅಲ್ಲದೇ ಅವರು ಈ ಸುಂದರ ಫೋಟೋಗಳಿಗೆ ಗುಡ್ಬಾಯ್ ಟೀನ್ ಹೆಲೋ ಟ್ವೆಂಟಿ, ಸಾಹಸ ಆರಂಭ ಮಾಡೋಣ ಎಂದು ಕ್ಯಾಪ್ಷನ್ ನೀಡಿದ್ದಾರೆ. ಒಟ್ಟಿನಲ್ಲಿ ಈಕೆಯ ಈ ಸಾಹಸದ ವೀಡಿಯೋ ಇಂಟರ್‌ನೆಟ್‌ನಲ್ಲಿ ಸಂಚಲನ ಸೃಷ್ಟಿಸಿರೋದಂತು ಸತ್ಯ.
ರೀಚಾ ಚಡ್ಡಾ ಪ್ರಗ್ನೆನ್ಸಿ ಫೋಟೋ ಶೂಟ್ ವೈರಲ್ : ಹೊಟ್ಟೆ ತೋರಿಸಿದ್ದಕ್ಕೆ ನೆಟ್ಟಿಗರ ಸಿಟ್ಟು