ಇಸ್ರೇಲ್ ಏರ್‌ಸ್ಟ್ರೈಕ್‌ನಿಂದ 100 ಮಂದಿ ಸಾವು, 400ಕ್ಕೂ ಹೆಚ್ಚು ಗಾಯಾಳು; ಕಣ್ಣೀರಿಟ್ಟ ಲೆಬೆನಾನ್!

By Chethan KumarFirst Published Sep 23, 2024, 5:55 PM IST
Highlights

ಹೆಜ್ಬೊಲ್ಲಾ ಉಗ್ರರ ಹೆಡೆಮುರಿ ಕಟ್ಟಲು ಇಸ್ರೇಲ್ ದಾಳಿ ತೀವ್ರಗೊಳಿಸಿದೆ. ಇದರ ಪರಿಣಾಮ ಲೆಬೆನಾನ್ ಮೇಲೂ ಇಸ್ರೇಲ್ ದಾಳಿ ನಡೆಸಿದೆ. ಇದೀಗ ಇಸ್ರೇಲ್ ಏರ್‌ಸ್ಟ್ರೈಕ್‌ನಿಂದ ಲೆಬೆನಾನ್‌ನಲ್ಲಿ 100 ಮಂದಿ ಸಾವನ್ನಪ್ಪಿದ್ದರೆ, 400ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಲೆಬೆನಾನ್ ಆರೋಗ್ಯ ಸಚಿವರು ಹೇಳಿದ್ದಾರೆ.

ಜೆರುಸಲೇಮ್(ಸೆ.23) ಇಸ್ರೇಲ್ ಪ್ರತೀಕಾರದ ದಾಳಿ ತೀವ್ರಗೊಂಡಿದೆ. ಪ್ಯಾಲೆಸ್ತಿನ್ ಜೊತೆ ಲೆಬೆನಾನ್ ಹಾಗೂ ಲೆಬೆನಾನ್‌ ಹೆಜ್ಬೊಲ್ಲಾ ಉಗ್ರ ಪಡೆ ಇಸ್ರೇಲ್ ಮೇಲಿನ ದಾಳಿಗೆ ಪ್ರತೀಕಾರವಾಗಿ ಇಸ್ರೇಲ್ ಏರ್‌ಸ್ಟ್ರೈಕ್ ದಾಳಿ ನಡೆಸುತ್ತಿದೆ. ಇಂದು ಹೆಜ್ಬೊಲ್ಲಾ ಉಗ್ರರ ಕ್ಯಾಂಪ್‌ ಮೇಲೆ ಇಸ್ರೇಲ್ ಸೇನೆ ವಾಯು ದಾಳಿ ನಡೆಸಿದೆ. ಇಸ್ರೇಲ್ 300 ಹೆಜ್ಬೊಲ್ಲಾ ಕ್ಯಾಂಪ್ ಮೇಲೆ ದಾಳಿ ಮಾಡಿದೆ ಎಂದಿದೆ. ಇದೀಗ ಲೆಬೆನಾನ್ ಆರೋಗ್ಯ ಸಚಿವರು ಘಟನೆ ಕುರಿತು ಪ್ರತಿಕ್ರಿಯಿಸಿದ್ದಾರೆ. ಇಸ್ರೇಲ್ ಏರ್‌ಸ್ಟ್ರೈಕ್‌ನಿಂದ ಲೆಬೆನಾನ್‌ನಲ್ಲಿ 100 ಮಂದಿ ಮೃತಪಟ್ಟಿದ್ದರೆ, 400ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದಿದ್ದಾರೆ.

ಕಳೆದ 7 ದಿನದಲ್ಲಿ 150 ಮಂದಿ ಇಸ್ರೇಲ್ ದಾಳಿಯಿಂದ ಮೃತಪಟ್ಟಿದ್ದಾರೆ. ಪೇಜರ್ ಸ್ಫೋಟ ದಾಳಿಗೂ ಮೊದಲು ಅಂದರೆ ಕಳೆದ ವರ್ಷ ಅಕ್ಟೋಬರ್‌ನಿಂದ 2024ರ ಸೆಪ್ಟೆಂಬರ್ 15ರ ವರೆಗೆ  ಲೆಬೆನಾನ್‌ನಲ್ಲಿ ಇಸ್ರೇಲ್ ದಾಳಿಯಿಂದ 600 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ 100 ಮಂದಿ ನಾಗರೀಕರಾಗಿದ್ದರೆ, ಸುಮಾರು 500ಕ್ಕೂ ಹೆಚ್ಚು ಮಂದಿ ಉಗ್ರರರಾಗಿದ್ದಾರೆ. ಹೆಜ್ಬೊಲ್ಲಾ ಉಗ್ರರ ಸಂಪೂರ್ಣ ಸರ್ವನಾಶಮಾಡಲು ಪಣತೊಟ್ಟಿರುವ ಇಸ್ರೇಲ್ ಸತತ ದಾಳಿ ನಡೆಸುತ್ತಿದೆ.

Latest Videos

ಲೆಬನಾನ್ ಪೇಜರ್ ಸ್ಫೋಟ ಹಿಂದೆ ಭಾರತದ ಟೆಕ್ಕಿ , ತವರಿನಲ್ಲಿರುವ ಕುಟುಂಬದ ಮೇಲೆ ದಾಳಿ ಭೀತಿ!

ಇಸ್ರೇಲ್ ಸೇನಾ ನೆಲೆ ಗ್ಯಾಲಿ ಮೇಲೆ ಹೆಜ್ಬೊಲ್ಲಾ ಉಗ್ರರು ಮಿಸೈಲ್ ದಾಳಿ ಸಂಘಟಿಸಿತ್ತು.ಇಸ್ರೇಲ್ ಮೇಲೆ ಹೆಜ್ಬೊಲ್ಲಾ ಉಗ್ರರು ದಾಳಿಯಿಂದ ಇಸ್ರೇಲ್ ಕೆರಳಿದೆ. ಈ ಕುರಿತು ಇಸ್ರೇಲ್ ಸೇನಾ ಕಮಾಂಡರ್ ಲೆ.ಜ. ಹರ್ಜಿ ಹಲೆವಿ ಎಚ್ಚರಿಕೆ ನೀಡಿದ್ದರು. ಈ ದಾಳಿಗೆ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದ್ದರು. ಬಳಿಕ ಇಸ್ರೇಲ್ ಸತತ ದಾಳಿ ಆರಂಭಿಸಿದೆ. 

ಉತ್ತರ ಇಸ್ರೇಲ್ ಮೇಲೆ ಲೆಬೆನಾನ್ ದಾಳಿ ನಡೆಸಿದೆ. ಈ ಕುರಿತು ಸೈರನ್ ಅಲರ್ಟ್ ಮೊಳಗಿದೆ. ಇಸ್ರೇಲ್ ದಾಳಿ ಆರಂಭಿಸುವ ಮುನ್ನ ದಕ್ಷಿಣ ಲೆಬೆನಾನ್‌ನಲ್ಲಿರುವ ಇಸ್ರೇಲ್ ನಾಗರೀಕರು ಪ್ರದೇಶ ತೊರೆಯುವಂತೆ ಸೂಚನೆ ನೀಡಿತ್ತು. ಹೆಜ್ಬೊಲ್ಲಾ ಉಗ್ರರು ಭಾರಿ ಪ್ರಮಾಣದ ಶಸ್ತ್ರಾಸ್ತ್ರವನ್ನು ದಕ್ಷಿಣ ಲೆಬೆನಾನ್‌ನಲ್ಲಿ ಅಡಗಿಡಿಸಲಾಗಿದೆ. ಹೀಗಾಗಿ ಹೆಜ್ಬೊಲ್ಲಾ ಕ್ಯಾಂಪ್ ಮೇಲೆ ದಾಳಿ ಮಾಡುವುದಾಗಿ ಸೂಚನೆ ನೀಡಿತ್ತು. ಇದರಂತೆ ಇಂದು ಇಸ್ರೇಲ್ ಭೀಕರ ದಾಳಿ ನಡೆಸಿದೆ.

ಭಾನುವಾರ(ಸೆ.22) ಹೆಜ್ಬೊಲ್ಲಾ ಉಗ್ರರು ಉತ್ತರ ಇಸ್ರೇಲ್ ಮೇಲೆ 150ಕ್ಕೂ ಹೆಚ್ಚು ಮಿಸೈಲ್ ದಾಳಿ ನಡೆಸಿತ್ತು. ಡ್ರೋನ್ ದಾಳಿ ಮೂಲಕವೂ ಇಸ್ರೇಲ್ ಮೇಲೆರಗಿತ್ತು. ಲೆಬೆನಾನ್ ಉಗ್ರರು ನಡೆಸಿದ ಮಿಸೈಲ್ ಹಾಗೂ ಡ್ರೋನ್ ದಾಳಿಯನ್ನು ಇಸ್ರೇಲ್ ಯಶಸ್ವಿಯಾಗಿ ಹೊಡೆದುರುಳಿಸಿತ್ತು. ಆದರೆ ಈ ದಾಳಿಗೆ ಪ್ರತಿಯಾಗಿ ಇಂದು ಏರ್‌ಸ್ಟ್ರೈಕ್ ನಡೆಸಿ ಲೆಬೆನಾನ್ ಹಲವು ಪ್ರದೇಶಗಳನ್ನು ನೆಲೆಸಮ ಮಾಡಿದೆ. ಈ ದಾಳಿಯಲ್ಲಿ ಉಗ್ರರ ಕಮಾಂಡರ್ಸ್ ಮೃತಪಟ್ಟಿರುವುದಾಗಿ ಇಸ್ರೇಲ್ ಹೇಳಿದೆ.

ಪೇಜರ್‌ ಬಳಿಕ ಇಸ್ರೇಲ್‌ನಿಂದ ಲೆಬನಾನಲ್ಲಿ ಕುರಿಗಳ ಸ್ಫೋಟ..!

ಕಳೆದ ವರ್ಷ ಅಕ್ಟೋಬರ್ 7 ರಂದು ಹಮಾಸ್ ಉಗ್ರರು ಇಸ್ರೇಲ್ ಮೇಲೆ ದಾಳಿ ನಡೆಸಿತ್ತು. ಮಕ್ಕಳು, ಮಹಿಳೆಯರು, ವೃದ್ಧರು ಸೇರಿದಂತೆ ಸಿಕ್ಕ ಸಿಕ್ಕವರ ಮೇಲೆ ಉಗ್ರರು ದಾಳಿ ನಡೆಸಿದ್ದರು. ಇದು ಇಸ್ರೇಲ್ ಕಂಡ ಅತ್ಯಂತ ಭೀಕರ ದಾಳಿಯಲ್ಲೊಂದಾಗಿತ್ತು. ಇದಕ್ಕೆ ಪ್ರತಿಯಾಗಿ ಇಸ್ರೇಲ್ ಹಮಾಸ್ ಉಗ್ರರ ಮೇಲೆ ದಾಳಿ ಆರಂಭಿಸಿತ್ತು. ಗಾಜಾ ಪಟ್ಟಿ,ವೆಸ್ಟ್‌ಬ್ಯಾಂಕ್ ಪ್ರದೇಶದ ಮೇಲೆ ತೀವ್ರ ದಾಳಿ ನಡೆಸಿ ಪ್ಯಾಲೆಸ್ತಿನ್ ಉಗ್ರ ಪಡೆ ಹಮಾಸ್ ಮೇಲೆ ಸೇಡು ತೀರಿಸಿಕೊಲ್ಳಲು ಆರಂಭಿಸಿತ್ತು. ಪ್ಯಾಲೆಸ್ತಿನ್ ಪರವಾಗಿ ಇತ್ತ ಲೆಬೆನಾನ್ ಉಗ್ರ ಸಂಘಟನೆ ಹೆಜ್ಬೊಲ್ಲಾ ಇಸ್ರೇಲ್ ಮೇಲೆ ದಾಳಿ ನಡೆಸುತ್ತಿದೆ. ಇದೀಗ ಇಸ್ರೇಲ್ ಹಮಾಸ್ ಮಾತ್ರವಲ್ಲ, ಹೆಜ್ಬೊಲ್ಲಾ ಸೇರಿದಂತೆ ಉಗ್ರರ ವಿರುದ್ದ ತೀವ್ರ ದಾಳಿ ನಡೆಸುತ್ತಿದೆ.
 

click me!