ಶಿಫ್ಟ್ ಮುಗಿತೆಂದು ವಿಮಾನ ಪ್ರಯಾಣ ಮುಂದುವರೆಸಲು ನಿರಾಕರಿಸಿದ ಪಾಕ್‌ ಪೈಲಟ್‌

By Suvarna News  |  First Published Jan 21, 2022, 9:24 PM IST
  • ಶಿಫ್ಟ್‌ ಮುಗಿಯಿತು ಎಂದು ವಿಮಾನ ಚಲಾಯಿಸಲು ನಿರಾಕರಿಸಿದ ಪೈಲಟ್‌
  • ದಮ್ಮಮ್‌ನಲ್ಲಿ ತುರ್ತು ಲ್ಯಾಂಡಿಂಗ್‌ ಆದ ವಿಮಾನ
  • ಸೌದಿಯಿಂದ ಪಾಕಿಸ್ತಾನಕ್ಕೆ ಬರುತ್ತಿದ್ದ ವಿಮಾನ

ಕರಾಚಿ: ಪಾಕಿಸ್ತಾನದ ಪೈಲಟ್‌ ಒಬ್ಬರು ತಮ್ಮ ಶಿಫ್ಟ್‌ ಮುಗಿಯಿತು ಎಂದು ವಿಮಾನ ಚಲಾಯಿಸಲು ನಿರಾಕರಿಸಿದ ಘಟನೆ ನಡೆದಿದೆ. ವಿಮಾನವೂ ತುರ್ತು ಲ್ಯಾಂಡಿಂಗ್‌ ಆದ ಪರಿಣಾಮ ನಿಗದಿತ ಸಮಯಕ್ಕೆ ಪಾಕಿಸ್ತಾನವನ್ನೂ ತಲುಪದೇ ಮಧ್ಯದಲ್ಲೇ ಲ್ಯಾಂಡ್‌ ಆಗಿದೆ. ಆದರೆ ಇದಾದ ಬಳಿಕ ಪ್ರಯಾಣ ಮುಂದುವರಿಸಲು ಪೈಲಟ್‌ ನಿರಾಕರಿಸಿದ್ದು, ತನ್ನ ಶಿಫ್ಟ್‌ ಮುಗಿದಿರುವುದಾಗಿ ಆತ ಹೇಳಿದ್ದಾನೆ. 

ಶಿಫ್ಟ್‌ ಮುಗಿದ ನಂತರ ನಾವೂ ನೀವು ಎಲ್ಲರೂ ಕೆಲಸ ಮಾಡುವುದಕ್ಕೆ ಇಷ್ಟಪಡುವುದಿಲ್ಲ. ಆದರೆ ಕೆಲವು ಸಂದರ್ಭಗಳಲ್ಲಿ ಶಿಫ್ಟ್‌ ಮುಗಿದ ನಂತರವೂ ಕೆಲಸ ಮಾಡುವುದು ಅನಿವಾರ್ಯವಾಗಿರುತ್ತದೆ. ಅದರಲ್ಲೂ ಜನರ ರಕ್ಷಣೆಯ ವಿಚಾರದಲ್ಲಿ ಅದು ಜವಾಬ್ದಾರಿಯೂ ಆಗಿರುತ್ತದೆ. ಅದಾಗ್ಯೂ ಪಾಕಿಸ್ತಾನದ ಪೈಲಟ್‌ ಒಬ್ಬರು ಶಿಫ್ಟ್‌  ಮುಗಿಯಿತು ಎಂದು ವಿಮಾನ ಓಡಿಸಲು ನಿರಾಕರಿಸಿದ ಘಟನೆ ನಡೆದಿದೆ. 

Latest Videos

undefined

ವಿಮಾನದಲ್ಲಿ ಏಕಾಂಗಿಯಾಗಿ ಇಡೀ ಪ್ರಪಂಚ ಸುತ್ತಿದ್ದ 19ರ ಮಹಿಳಾ ಪೈಲಟ್‌

ಗಲ್ಫ್‌ ನ್ಯೂಸ್‌ ವರದಿ ಪ್ರಕಾರ, ಪಾಕಿಸ್ತಾನ್‌ ಇಂಟರ್‌ನ್ಯಾಷನಲ್‌ ಏರ್‌ಲೈನ್ಸ್‌ಗೆ ಸೇರಿದ ವಿಮಾನವೂ ಭಾನುವಾರ ಸೌದಿ ಅರೇಬಿಯಾದ (Saudi Arabia) ರಿಯಾದ್‌ನಿಂದ (Riyadh)ನಿಂದ ಪಾಕಿಸ್ತಾನದ (Pakistan) ರಾಜಧಾನಿ ಇಸ್ಲಾಮಾಬಾದ್‌ ( Islamabad) ಗೆ ಪ್ರಯಾಣಿಸಬೇಕಿತ್ತು. ಆದರೆ ಪ್ರಯಾಣದ ಮಧ್ಯೆ PK-9754 ಸಂಖ್ಯೆಯ ವಿಮಾನ ಪ್ರತಿಕೂಲ ಹವಾಮಾನದ ಕಾರಣಕ್ಕೆ ಸೌದಿ ಅರೇಬಿಯಾದ ದಮ್ಮಮ್‌ (Dammam) ನಲ್ಲಿ ತುರ್ತು ಭೂ ಸ್ಪರ್ಶ ಮಾಡಬೇಕಾಯಿತು. ಆದರೆ ಈ ವಿಮಾನ ಮತ್ತೆ ಟೇಕಾಫ್‌ ಮಾಡುವ ಸಮಯ ಬಂದಾಗ ಪೈಲಟ್‌ ತನ್ನ ಕೆಲಸದ ಅವಧಿ ಮುಗಿದ ಕಾರಣ ತಾನು ಈ ವಿಮಾನವನ್ನು ಚಲಾಯಿಸಲಾಗದು ಎಂದು ಖಡಕ್‌ ಆಗಿ ಹೇಳಿದ್ದಾರೆ. 

HAL HJT: ಗಿರಿಗಿಟ್ಲೆ ಪರೀಕ್ಷೆಯಲ್ಲಿ ಎಚ್‌ಎಎಲ್‌ ನಿರ್ಮಿತ ಐಜೆಟಿ ವಿಮಾನ ಪಾಸ್‌!

ಇನ್ನು ಈ ವಿಚಾರ ತಿಳಿದ ವಿಮಾನ ಪ್ರಯಾಣಿಕರು ಆಕ್ರೋಶಗೊಂಡಿದ್ದು, ಸಿಟ್ಟಿಗೆದ್ದ ಪ್ರಯಾಣಿಕರು ವಿಮಾನದಿಂದ ಕೆಳಗಿಯಲು ನಿರಾಕರಿಸಿ  ಅಲ್ಲೇ ಪ್ರತಿಭಟನೆಗೆ ಮುಂದಾಗಿದ್ದಾರೆ. ಆದರೆ ಪರಿಸ್ಥಿತಿ ಕೈ ಮೀರುವ ಹಂತ ತಲುಪಿದಾಗ  ವಿಮಾನ ಪ್ರಾಧಿಕಾರದ ಅಧಿಕಾರಿಗಳು  ವಿಮಾನನಿಲ್ದಾಣದ ಭದ್ರತಾ ಪಡೆಯನ್ನು ಸ್ಥಳಕ್ಕೆ ಕರೆಸಿ ಪರಿಸ್ಥಿತಿಯನ್ನು ತಹಬದಿಗೆ ತರಲು ಮುಂದಾಗಿದ್ದಾರೆ. ನಂತರದಲ್ಲಿ ವಿಮಾನದ ಪ್ರಯಾಣಿಕರಿಗೆ  ಹೊಟೇಲೊಂದರಲ್ಲಿ ಉಳಿಯುವ ವ್ಯವಸ್ಥೆಯನ್ನು ಮಾಡಲಾಯಿತು. 

ಇತ್ತ ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ  ಪಾಕಿಸ್ತಾನ ಇಂಟರ್‌ನ್ಯಾಷನಲ್‌ ಏರ್‌ಪೋರ್ಟ್‌ನ  ವಕ್ತಾರರು, ಪೈಲಟ್‌ಗಳು ಸರಿಯಾದ ವಿಶ್ರಾಂತಿ ತೆಗೆದುಕೊಳ್ಳುವುದು ಅಗತ್ಯವಾಗಿದೆ. ವಿಮಾನದ ಸುರಕ್ಷತೆಗಾಗಿ ಹಾರಾಟ ಮಾಡುವ ಮೊದಲು ಪೈಲಟ್‌ಗಳು ಸರಿಯಾದ ವಿಶ್ರಾಂತಿ ತೆಗೆದುಕೊಳ್ಳಬೇಕು ಆದ್ದರಿಂದ ಈ ನಿಟ್ಟಿನಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ. 

ಕೆಲ ದಿನಗಳ ಹಿಂದೆ ಮುಂಬೈನಿಂದ (Mumbai) ಮಂಗಳೂರಿಗೆ ಪ್ರಯಾಣಿಸುವ ಇಂಡಿಗೋ ವಿಮಾನದಲ್ಲಿ (Flight) ವಿಮಾನ ಮುಂಬೈ ವಿಮಾನ (Plane) ನಿಲ್ದಾಣದಿಂದ ಹೊರಡುವ ವೇಳೆಗೆ ವಿಮಾನದ ಪೈಲಟ್‌ ‘ಮಾತೆರೆಗ್ಲಾ ಸೊಲ್ಮೆಲು’ ಎಂದು ತುಳು (Tulu) ಭಾಷೆಯಲ್ಲಿ ಅನೌನ್ಸ್‌ ಮೆಂಟ್‌ ಮಾಡುವ ಮೂಲಕ ಪ್ರಾದೇಶಿಕ ಭಾಷಾ ಪ್ರೇಮ ಮೆರೆದ ಘಟನೆ ನಡೆದಿತ್ತು. ಮುಂಬೈನಿಂದ (Mumbai) ಮಂಗಳೂರಿಗೆ ಸಂಚರಿಸಿದ ಇಂಡಿಗೋ (Indigo) ವಿಮಾನದ ಉಡುಪಿ (Udupi) ಮೂಲದ ಪೈಲಟ್‌ ಪ್ರದೀಪ್‌ ಪದ್ಮಶಾಲಿ ಅನೌನ್ಸ್‌ಮೆಂಟ್‌ ಮೂಲಕ ತುಳು ಭಾಷೆಗೆ ಗೌರವ ಸಲ್ಲಿಸಿದ್ದಾರೆ.

click me!